ವಿಚ್ಛೇದನದ ಬಳಿಕ 2022 ಸ್ವಾಗತಿಸಲು ಗೋವಾಗೆ ತೆರಳಿದ ಸಮಂತಾ: ಬಿಕಿನಿ ಫೋಟೊ ವೈರಲ್

ನಾಗಚೈತನ್ಯದಿಂದ ದೂರವಾದ ಬಳಿಕ ನಟಿ ಸಮಂತಾ, ಹೊಸ ಬದುಕು ಕಂಡುಕೊಳ್ಳುತ್ತಿದ್ದಾರೆ. ತನ್ನ ಇಚ್ಛೆಯಂತೆ ಜೀವನ ನಡೆಸುವ ತೀರ್ಮಾನಕ್ಕೆ ಬಂದಿದ್ದಾರೆ. ಹೊಸ ವರ್ಷ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕಹಿ ಘಟನೆಯನ್ನು ಮರೆತು, ಹೊಸ ವರ್ಷದಲ್ಲಿ ಹೊಸ ಜೀವನ ಕಂಡುಕೊಳ್ಳಲು ಸಮಂತಾ ನಿರ್ಧಾರ ಮಾಡಿದಂತಿದೆ. ಹೀಗಾಗಿ ಪ್ರವಾಸಿಗರ ಸ್ವರ್ಗ ಗೋವಾಗೆ ತೆರಳಿದ್ದಾರೆ.

ಸಮಂತಾ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುತ್ತಾರೆ. ವಿಚ್ಛೇದನದ ಬಳಿಕ ನೂರೆಂಟು ಟೀಕೆಗಳಿಗೂ ಒಳಗಾಗುತ್ತಿದ್ದರೂ, ಸಮಂತಾ ಅದ್ಯಾವುದನ್ನೂ ಕೇರ್ ಮಾಡಲಿಲ್ಲ. ಟೀಕೆಗಳಿಗೆ ತಿರುಗೇಟು ನೀಡುತ್ತಲೇ ನೋವುಗಳನ್ನು ಮೆಟ್ಟಿ ನಿಂತ ಸಮಂತಾ, ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಬಿಗ್ ಬಜೆಟ್ ಸಿನಿಮಾಗಳಿಗೆ ಸಹಿ ಮಾಡಿದ್ದಾರೆ. ಹಾಲಿವುಡ್‌ಗೂ ಕಾಲಿಟ್ಟಿದ್ದಾರೆ. ಬ್ಯುಸಿಯಾಗಿದ್ದರೂ ಸಮಂತಾ ಸದ್ಯ ಗೋವಾದಲ್ಲಿ ನೆಲೆಸಿದ್ದು, ಬಿಕಿನಿ ಫೋಟೊ ವೈರಲ್ ಆಗಿದೆ.

ಗೋವಾದಲ್ಲಿ ಬಿಕಿನಿ ತೊಟ್ಟ ಸಮಂತಾ

ಸಮಂತಾ ಮೋಜು-ಮಸ್ತಿ ಮಾಡುವ ಮೂಡಿನಲ್ಲಿ ಇದ್ದಾರೆ. ಅದಕ್ಕಾಗಿ ಗೋವಾಗೆ ತೆರಳಿರುವ ಸಮಂತಾ ಸ್ನೇಹಿತೆಯರೊಂದಿಗೆ ಎಂಜಾಯ್ ಮಾಡುತ್ತಿದ್ದಾರೆ. ಗೋವಾದಲ್ಲಿ ಕಳೆದ ಕೆಲವು ದಿನಗಳನ್ನು ಸೆರೆ ಹಿಡಿದ ಪೋಟೊವನ್ನು ಇನ್‌ಸ್ಟಾಗ್ರಾಂನಲ್ಲಿ ಸಮಂತಾ ಪೋಸ್ಟ್ ಮಾಡಿದ್ದಾರೆ. ವಿಚ್ಛೇದನದ ಬಳಿಕ ಸಮಂತಾ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಫೋಟೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸಮಂತಾ ಗಟ್ಟಿ ನಿರ್ಧಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 ಸ್ನೇಹಿತರೊಂದಿಗೆ ಗೋವಾಗೆ ತೆರಳಿದ ಸಮಂತಾ

ಸ್ನೇಹಿತರೊಂದಿಗೆ ಗೋವಾಗೆ ತೆರಳಿದ ಸಮಂತಾ

ಗೋವಾದಲ್ಲಿ ಸಮಂತಾ ಸ್ನೇಹಿತರೊಂದಿಗೆ ತೆರಳಿದ್ದಾರೆ. ಹೀಗಾಗಿ ದಿನಕ್ಕೊಂದು ಫೋಟೊವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಇನ್‌ಸ್ಟ್ರಾಗಂ ಸ್ಟೋರಿಯಲ್ಲಿ ಫೋಟೊಗಳನ್ನು ವಿಡಿಯೋವನ್ನು ಶೇರ್ ಮಾಡುತ್ತಿದ್ದಾರೆ. ಸಮಂತಾ ಜೊತೆ ಇನ್ನಿಬ್ಬರು ಸ್ನೇಹಿತೆಯರು ಕೂಡ ತೆರಳಿದ್ದಾರೆ. ಮಾಡಲ್ ಕಮ್ ಲಾಯರ್ ವಾಸುಕಿ ಸುಂಕವಲ್ಲಿ ಹಾಗೂ ಫ್ಯಾಷನ್ ಡಿಸೈನರ್-ಉದ್ಯಮಿ ಶಿಲ್ಪ ರೆಡ್ಡಿ ಕೂಡ ಸಮಂತಾಗೆ ಸಾಥ್ ನೀಡಿದ್ದಾರೆ.

ಸಮಂತಾ 'ಹೀರೋಯಿನ್ ಆಫ್ ದಿ ಇಯರ್'

ಸಮಂತಾ 'ಹೀರೋಯಿನ್ ಆಫ್ ದಿ ಇಯರ್'

ಸಮಂತಾ 2021ರ 'ಹೀರೋಯಿನ್ ಆಫ್ ದಿ ಇಯರ್'. ಈ ವರ್ಷದ ಆರಂಭದಿಂದಲೇ ಸಮಂತಾ ಬೇಜಾನ್ ಸುದ್ದಿಯಲ್ಲಿದ್ದಾರೆ. 'ಫ್ಯಾಮಿಲಿ ಮ್ಯಾನ್ 2' ವೆಬ್ ಸಿರೀಸ್ ಮೂಲಕ ಸಮಂತಾ ಸುದ್ದಿಯಲ್ಲಿದ್ದರು. ರಾಜಿ ಪಾತ್ರದಲ್ಲಿ ಬೋಲ್ಡ್ ಆಗಿ ನಟಿಸಿದ್ದ ಸಮಂತಾ ಬಾಲಿವುಡ್ ಮಂದಿಯ ಗಮನ ಸೆಳೆದಿದ್ದರು. ಬಳಿಕ ವಿಚ್ಛೇದನದ ಮೂಲಕ ಸುದ್ದಿಯಾದರು. 'ಪುಷ್ಪ' ಐಟಂ ಸಾಂಗ್ ಸದ್ದು ಮಾಡಿತ್ತು. ಬಳಿಕ ಪ್ಯಾನ್ ಇಂಡಿಯಾ ಸಿನಿಮಾ ಹಾಗೂ ಹಾಲಿವುಡ್ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ.

ಹಕ್ಕಿಯಂತೆ ಹಾರುತ್ತಿದ್ದಾರೆ ಸಮಂತಾ

ಹಕ್ಕಿಯಂತೆ ಹಾರುತ್ತಿದ್ದಾರೆ ಸಮಂತಾ

'ಪುಷ್ಪ' ಚಿತ್ರಕ್ಕಾಗಿ ಹಾಟ್ ಅವತಾರವೆತ್ತಿದ್ದ ಸಮಂತಾ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದರು. 'ಹುಂ ಅಂಟಾವ ಮಾವ' ಅಂತ ವೈಯ್ಯಾರದ ನೋಟ ಬೀರಿದ ಮಾದಕ ನಟಿ ಪ್ರೇಕ್ಷಕರಿಂದ ಮೆಚ್ಚುಗೆಗೆ ಪಾತ್ರವಾಗಿದ್ದರು. ಸಮಂತಾ ಹಾಡಿಗೆ ಥಿಯೇಟರ್‌ನಲ್ಲಿಯೇ ಒನ್ಸ್ ಮೋರ್ ಅಂತ ಪ್ರೇಕ್ಷಕರು ಕೂಗು ಹಾಕುವಷ್ಟು ಸದ್ದು ಮಾಡಿದ್ದು ಸಮಂತಾ. ವಿಚ್ಛೇದನದ ಬಳಿಕ ಬಂಧನದ ಎಲ್ಲಾ ಗಡಿಗಳನ್ನು ದಾಟಿ ತನ್ನಿಷ್ಟದಂತೆ ಬದುಕುತ್ತಿದ್ದಾರೆ.

More from Filmibeat

English summary
Samantha vacation in Goa her Bikini photo goes viral. Samantha Ruth Prabhu is took break from work, enjoying in Goa as we inch towards 2022.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X