ಖಾಸಗಿ ವಿಡಿಯೋ ಪ್ರಕರಣದ ಬಳಿಕ ಪದ್ಮಶ್ರೀ ಪುರಸ್ಕೃತರಿಗೆ ಜ್ಯೋತಿ ರೈ ನೆರವು: "ಮನಸ್ಸು ನಿಮ್ಮಂತೆಯೇ ಸುಂದರ" ಎಂದ ನೆಟ್ಟಿಗರು
ಕನ್ನಡ ಹಾಗೂ ತೆಲುಗು ಕಿರುತೆರೆಯ ನಟಿ ಜ್ಯೋತಿ ರೈ ಇತ್ತೀಚೆಗೆ ಸಿಕ್ಕಾಪಟ್ಟೆ ಚರ್ಚೆಯಲ್ಲಿದ್ದಾರೆ. ಕಿಡಿಗೇಡಿಗಳು ಜ್ಯೋತಿ ರೈ ಅವರದ್ದೇ ಎನ್ನಲಾದ ಖಾಸಗಿ ವಿಡಿಯೋ ಹಾಗೂ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದರು. ಅಲ್ಲಿಂದ ಈ ನಟಿಯ ಸಿಕ್ಕಾಪಟ್ಟೆ ಚರ್ಚೆಯಲ್ಲಿದ್ದಾರೆ.
ಜ್ಯೋತಿ ರೈ ಕನ್ನಡ ಹಾಗೂ ತೆಲುಗು ಕಿರುತೆರೆ ಪ್ರಿಯರಿಗೆ ಹೊಸಬರೇನು ಅಲ್ಲ. ಎರಡೂ ಭಾಷೆಯ ಪ್ರೇಮಿಗಳಿಗೂ ಚಿರಪರಿಚಿತರು. ಕನ್ನಡದಲ್ಲೂ ಹಲವು ಕಿರುತೆರೆ ಹಾಗೂ ಸಿನಿಮಾಗಳಲ್ಲಿ ನಟಿಸಿರೋ ಜ್ಯೋತಿ ರೈ, ಈಗ ತನ್ನ ನಟನೆ ಹಾಗೂ ಸೌಂದರ್ಯದಿಂದ ತೆಲುಗು ಕಿರುತೆರೆ ಪ್ರೇಮಿಗಳಿಗೆ ಮನಸ್ಸು ಗೆದ್ದಿದ್ದಾರೆ. ಇದೇ ವೇಳೆ ಅವರದ್ದೇ ಎನ್ನಲಾದ ಖಾಸಗಿ ವಿಡಿಯೋ ಸಂಚಲನ ಸೃಷ್ಟಿಸಿತ್ತು.

ಜ್ಯೋತಿ ರೈ ಸಂಕಷ್ಟಕ್ಕೆ ಸಿಲುಕುತ್ತಿದ್ದಂತೆ ಆಕೆಯ ನೆರವಿಗೆ ಸ್ವತ: ನೆಟ್ಟಿಗರು ಹಾಗೂ ಅಭಿಮಾನಿಗಳು ಬಂದಿದ್ದರು. ಕಿಡಿಗೇಡಿಯನ್ನು ಬಂಧಿಸುವಂತೆ ಜ್ಯೋತಿ ರೈ ಫ್ಯಾನ್ಸ್ ದೂರನ್ನು ಕೂಡ ದಾಖಲಿಸಿದ್ದರು. ಈ ಬೆನ್ನಲ್ಲೇ ಜ್ಯೋತಿ ರೈ ಸಮಾಜಮುಖಿ ಕೆಲಸಗಳ ಮೂಲಕ ಕಾಣಿಸಿಕೊಂಡಿದ್ದಾರೆ. ಆ ಕೆಲಸಕ್ಕೆ ಜ್ಯೋತಿ ರೈಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.
ಅಕ್ಷಯ ತೃತೀಯದಂತಹ ವಿಶೇಷ ದಿನವಾದ ಇಂದು ಜ್ಯೋತಿ ರೈ ಉತ್ತಮ ಕೆಲಸಕ್ಕೆ ಮಾಡಿ ಮೆಚ್ಚುಗೆ ಗಳಿಸಿದ್ದಾರೆ. ಜ್ಯೋತಿ ರೈ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತೆಲುಗಿನ ಕಲಾವಿದ ದರ್ಶನಂ ಮೊಗಿಲಯ್ಯ ಅವರಿಗೆ ಹಣ ಸಹಾಯ ಮಾಡಿದ್ದಾರೆ. ಈ ಮೂಲಕ ಸೌಂದರ್ಯ, ವಿವಾದ ಅಷ್ಟೇ ಅಲ್ಲ ಸಮಾಜಮುಖಿ ಕೆಲಸಗಳಲ್ಲಿಯೂ ಜ್ಯೋತಿ ರೈ ಮುಂದಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ.
ಇತ್ತೀಚೆಗೆ ಪದ್ಮಶ್ರೀ ಪುರಸ್ಕೃತ ತೆಲುಗಿನ ಕಲಾವಿದ ಮೊಗಿಲಯ್ಯ ಹೈದರಾಬಾದ್‌ನ ಕಟ್ಟಡ ನಿರ್ಮಾಣದಲ್ಲಿ ಕಾರ್ಮಿಕನಾಗಿ ಕೆಲಸ ಮಾಡಿದ್ದರು. ಆ ವಿಡಿಯೋ ಹಾಗೂ ಫೋಟೊಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದವು. ಈ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಈ ಹಿನ್ನಲೆಯಲ್ಲಿ ಜ್ಯೋತಿ ರೈ ಸಂಕಷ್ಟದಲ್ಲಿರೋ ಮೊಗಿಲಯ್ಯನವರಿಗೆ ಆರ್ಥಿಕ ಸಹಾಯಕ್ಕೆ ಮುಂದಾಗಿದ್ದಾರೆ.
ಪದ್ಮಶ್ರೀ ಪುರಸ್ಕೃತ ಮೊಗಿಲಯ್ಯನವರನ್ನು ತಮ್ಮ ತಂಡದ ನೆರವಿನಿಂದ ಭೇಟಿ ಮಾಡಿ ಅಕ್ಷಯ ತೃತೀಯ ದಿನದಂದು 50 ಸಾವಿರ ರೂಪಾಯಿ ಆರ್ಥಿಕ ನೆರವು ನೀಡಿದ್ದಾರೆ. ಈ ವೇಳೆ ತನಗೂ ಈಗ ಸಂಕಷ್ಟಗಳು ಎದುರಾಗಿವೆ. ಆದರೆ ನನ್ನ ಕಷ್ಟಗಳಿಗಿಂತ ಮೊಗಿಲಯ್ಯನವರ ಕಷ್ಟಗಳು ದೊಡ್ಡದು ಎಂದು ನಟಿ ಜ್ಯೋತಿ ರೈ ಹೇಳಿಕೊಂಡಿದ್ದಾರೆ. ಇಷ್ಟೇ ಅಲ್ಲದೆ, ಈ ಸಹಾಯ ದೊಡ್ಡದೇನು ಅಲ್ಲ. ಹೀಗಾಗಿ ಇವರ ಸಹಾಯಕ್ಕೆ ಬೇರೆಯವರು ಮುಂದೆ ಬರಬೇಕು ಎಂದು ಕೇಳಿಕೊಂಡಿದ್ದಾರೆ. ಈ ವೇಳೆ ಮೊಗಿಲಯ್ಯನವರ ಪಾದಕ್ಕೆ ನಮಸ್ಕರಿಸಿ ಆಶೀರ್ವಾದ ಪಡೆದಿದ್ದಾರೆ.


Click it and Unblock the Notifications











