'ಲೈಗರ್' ಸೋಲಿನ ಬಳಿಕ ಪುರಿ ಜಗನ್ನಾಥ್‌ ಹೊಸ ಸಿನಿಮಾ ಶುರು: ರಾಮ್ ಪೋನಿನೇನಿಗೆ 'ಡಬಲ್ ಇಸ್ಮಾರ್ಟ್'

ಟಾಲಿವುಡ್‌ನ ಸ್ಟಾರ್ ನಿರ್ದೇಶಕ ಪುರಿ ಜಗನ್ನಾಥ್ 'ಲೈಗರ್' ಸಿನಿಮಾ ಹೀನಾಯವಾಗಿ ಸೋತಿತ್ತು. ಮೊದಲ ದಿನವೇ ಸಿನಿಮಾ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ವಿಜಯ್ ದೇವರಕೊಂಡ ಹಾಗೂ ಅನನ್ಯಾ ಪಾಂಡೆ ನಟಿಸಿದ್ದ ಈ ಸಿನಿಮಾ ಹೆವಿ ಟ್ರೋಲ್ ಆಗಿತ್ತು.

'ಲೈಗರ್' ಸೋಲಿನ ಬಳಿಕ ಪುರಿ ಜಗನ್ನಾಥ್ ಕಥೆ ಮುಗಿದೇ ಹೋಯ್ತು ಎಂದು ಹಲವರು ಭವಿಷ್ಯ ನುಡಿದಿದ್ದರು. ಇತ್ತ ಪುರಿ ಜಗನ್ನಾಥ್ ಕೂಡ ಮುಂದಿನ ಸಿನಿಮಾಗೆ ಹೀರೊ ಹುಡುಕಲು ಪರದಾಡಿದ್ದರು. ಪುರಿ ಡೇಟ್ ಕೊಡುವುದಕ್ಕೆ ಯಾರೂ ಮುಂದೆ ಬಂದಿರಲಿಲ್ಲ. ಕೊನೆ ಪುರಿ ಜಗನ್ನಾಥ್‌ಗೆ ಹೀರೊ ಸಿಕ್ಕಿದ್ದಾರೆ.

After Liger Failure Puri Jagannadh to direct Ram Pothineni for Double Ismart Movie

ಉಸ್ತಾದ್ ರಾಮ್ ಪೋತಿನೇನಿ ಹಾಗೂ ಸೆನ್ಸೇಷನಲ್ ಡೈರೆಕ್ಟರ್ ಪುರಿ ಜಗನ್ನಾಥ್ ಮತ್ತೆ ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ. ಈ ಹಿಂದೆ ಇದೇ ಜೋಡಿ 'ಇಸ್ಮಾರ್ಟ್ ಶಂಕರ್' ಅನ್ನೋ ಸಿನಿಮಾ ಮೂಲಕ ಬಾಕ್ಸಾಫೀಸ್‌ನಲ್ಲಿ ಗೆದ್ದಿದ್ದರು. ಈಗ ನಾಲ್ಕು ವರ್ಷಗಳ ಬಳಿಕ ಅದೇ ಸಿನಿಮಾದ ಸೀಕ್ವೆಲ್ ಮಾಡುವುದಕ್ಕೆ ಮುಂದಾಗಿದ್ದಾರೆ.

ಇಲ್ಲಿವರೆಗೂ ಪುರಿ ಜಗನ್ನಾಥ್ ಸಿನಿಮಾದ ಹೀರೊ ಯಾರು? ಅನ್ನೋ ಕುತೂಹಲವಿತ್ತು. ಅದಕ್ಕೆ ರಾಮ್ ಪೋತಿನೇನಿ ಹುಟ್ಟುಹಬ್ಬದ ಸಲುವಾಗಿಯೇ ಸಿನಿಮಾದ ಟೈಟಲ್ ಹಾಗೂ ರಿಲೀಸ್ ಡೇಟ್ ಅನ್ನೂ ಕೂಡ ಅನೌನ್ಸ್ ಮಾಡಲಾಗಿದೆ.

ನಾಳೆ (ಮೇ 15) ಟಾಲಿವುಡ್ ನಟ ರಾಮ್ ಪೋತಿನೇನಿ ಹುಟ್ಟುಹಬ್ಬ. ಆದರೂ, ಒಂದು ದಿನ ಮುಂಚಿತವಾಗಿ ಟೈಟಲ್ ಹಾಗೂ ರಿಲೀಸ್ ಡೇಟ್ ಅನ್ನು ಪುರಿ ಜಗನ್ನಾಥ್ ಅನೌನ್ಸ್ ಮಾಡಿದ್ದಾರೆ. ಅಂದ್ಹಾಗೆ, ರಾಮ್ ಪೋತಿನೇನಿ ಹಾಗೂ ಪುರಿ ಜಗನ್ನಾಥ್ ಸಿನಿಮಾದ ಟೈಟಲ್ 'ಡಬಲ್ ಇಸ್ಮಾರ್ಟ್'. ಹಾಗೇ ಈ ಸಿನಿಮಾ 2024 ಮಾರ್ಚ್ 8ರಂದು ಶಿವರಾತ್ರಿ ಹಬ್ಬಕ್ಕೆ ತೆರೆಕಾಣಲಿದೆ.

After Liger Failure Puri Jagannadh to direct Ram Pothineni for Double Ismart Movie

ಪುರಿ ಜಗನ್ನಾಥ್ ಅವರೇ ಕಥೆ ಬರೆದು ನಿರ್ದೇಶನ ಮಾಡುತ್ತಿದೆ. 'ಡಬಲ್ ಇಸ್ಮಾರ್ಟ್ ' ಸಿನಿಮಾವನ್ನು ಪುರಿ ಕನೆಕ್ಟ್ಸ್ ಬ್ಯಾನರ್‌ನಲ್ಲಿ ಚಾರ್ಮಿ ಕೌರ್ ಹಾಗೂ ಪುರಿ ಜಗನ್ನಾಥ್ ನಿರ್ಮಿಸುತ್ತಿದ್ದಾರೆ. ಅಂದ್ಹಾಗೆ 'ಲೈಗರ್' ಸಿನಿಮಾದಲ್ಲಿ ಖಳನಾಯಕನಾಗಿ ಘರ್ಜಿಸಿದ್ದ ವಿಷು ರೆಡ್ಡಿ ಪುರಿ ಕನೆಕ್ಟ್ ಸಿನಿಮಾದ ಸಿಇಒ ಆಗಿ ಕೆಲಸ ಮಾಡುತ್ತಿದ್ದಾರೆ. ದೊಡ್ಡ ಬಜೆಟ್‌ನಲ್ಲಿ ಈ ಸಿನಿಮಾ ತಯಾರಾಗುತ್ತಿದೆ.

'ಡಬಲ್ ಇಸ್ಮಾರ್ಟ್' ಪೋಸ್ಟರ್‌ನಲ್ಲಿ ರಾಮ್ ಪೋತಿನೇನಿ ತ್ರಿಶೂಲ್ ಹಿಡಿದು ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮುಂದಿನ ವರ್ಷದ ಶಿವರಾತ್ರಿ ಹಬ್ಬಕ್ಕೆ ಈ ಸಿನಿಮಾ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ಈ ಸಿನಿಮಾ ತೆಲುಗು, ತಮಿಳು, ಕನ್ನಡ, ಹಿಂದಿ ಹಾಗೂ‌ ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗಲಿದೆ.

More from Filmibeat

English summary
After Liger Failure Puri Jagannadh to direct Ram Pothineni for Double Ismart, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X