ಹೈದರಾಬಾದ್‌ನಲ್ಲಿ ರಕುಲ್ ಪ್ರೀತ್ ಸಿಂಗ್ ಹೊಸ ರೆಸ್ಟೋರೆಂಟ್: ಈ ನಟಿ ಹೆಸರಲ್ಲಿರೋ ಉದ್ಯಮಗಳ್ಯಾವುವು ಗೊತ್ತೇ?
ದಕ್ಷಿಣ ಭಾರತೀಯರಿಗೆ ರಕುಲ್ ಪ್ರೀತ್ ಸಿಂಗ್ ಪರಿಚಯ ಇದ್ದೇ ಇರುತ್ತೆ. ಅದರಲ್ಲೂ ತೆಲುಗು, ತಮಿಳು ಸಿನಿ ಪ್ರಿಯರಿಗೆ ರಕುಲ್ ಪ್ರೀತ್ ಸಿಂಗ್ ಒಂದು ಕಾಲ ಫೇವರಿಟ್ ನಟಿ. ಕೆಲವು ವರ್ಷಗಳಿಂದ ಬಾಲಿವುಡ್ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ನಟಿ, ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಿದ್ದು ತೀರಾ ವಿರಳ.
ಎಲ್ಲರಿಗೂ ರಕುಲ್ ಪ್ರೀತ್ ಸಿಂಗ್ ನಟಿಯಾಗಿ ಗೊತ್ತಷ್ಟೇ. ಆದರೆ, ಈಕೆ ಒಬ್ಬ ಸಕ್ಸಸ್‌ಫುಲ್ ಉದ್ಯಮಿ ಕೂಡ ಹೌದು. ಸಿನಿಮಾಗಳಲ್ಲಿ ನಟಿಸುತ್ತಿರುವಾಗಳೇ ಉದ್ಯಮದ ಕಡೆಗೂ ವಾಲಿದ್ದರು. ನಟನೆ ಜೊತೆಗೆ ಬ್ಯುಸಿನೆಸ್‌ನಲ್ಲಿಯೂ ರಕುಲ್ ಪ್ರೀತ್ ಸಿಂಗ್ ಹೆಚ್ಚು ಆಸಕ್ತಿ ಹೊಂದಿದ್ದರು. ಹೀಗಾಗಿ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಬ್ಯುಸಿಯಾಗಿರುವಾಗಲೇ ಉದ್ಯಮಕ್ಕೆ ಕ್ಷೇತ್ರಕ್ಕೆ ಕಾಲಿಟ್ಟಿದ್ದರು.

ಈಗ ವಿವಾಹದ ಬಳಿಕ ಹೈದರಾಬಾದ್‌ನಲ್ಲಿ ಹೊಟೇಲ್ ಉದ್ಯಮಕ್ಕೆ ಕಾಲಿಟ್ಟಿದ್ದಾರೆ. ರಕುಲ್ ಪ್ರೀತ್ ಸಿಂಗ್ ಹೈದರಾಬಾದ್‌ನಲ್ಲಿ ರೆಸ್ಟೋರೆಂಟ್ ಒಂದನ್ನು ಆರಂಭಿಸುತ್ತಿದ್ದಾರೆ. ಆ ರೆಸ್ಟೊರೆಂಟ್ ಹೆಸರೇ 'ಆರಂಭಂ'. ಇದೇ ಏಪ್ರಿಲ್ 16ರಂದು ಅದ್ಧೂರಿಯಾಗಿ ಈ ರೆಸ್ಟೋರೆಂಟ್ ಆರಂಭ ಆಗುತ್ತಿದೆ. ಅಷ್ಟಕ್ಕೂ ಈ ರೆಸ್ಟೋರೆಂಟ್‌ನಲ್ಲಿ ಏನೆಲ್ಲಾ ಸಿಗುತ್ತೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ರಕುಲ್ ಪ್ರೀತ್ ಸಿಂಗ್ ಕಡಿಮೆ ಸಮಯದಲ್ಲಿ ಸ್ಟಾರ್ ಹೀರೋಯಿನ್ ಪಟ್ಟಕ್ಕೇರಿದ್ದರು. ಕನ್ನಡದಿಂದ ನಟನಾ ವೃತ್ತಿಯನ್ನು ಆರಂಭಿಸಿದ್ದರೂ, ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಜನಪ್ರಿಯತೆ ಸಿಕ್ಕಿತ್ತು. ಮಹೇಶ್ ಬಾಬು, ಕಾರ್ತಿ, ನಾಗ ಚೈತನ್ಯ ಸೇರಿದಂತೆ ಸ್ಟಾರ್ ನಟರೊಂದಿಗೆ ನಾಯಕಿಯಾಗಿ ನಟಿಸಿದ್ದಾರೆ. ಸದ್ಯ ಬಾಲಿವುಡ್‌ನಲ್ಲಿ ಗುರುತಿಸಿಕೊಂಡಿದ್ದಾರೆ.
ಇತ್ತೀಚೆಗೆ ರಕುಲ್ ಪ್ರೀತ್ ಸಿಂಗ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಾಲಿವುಡ್ ನಟ ಹಾಗೂ ನಿರ್ಮಾಪಕ ಜಾಕಿ ಭಗ್ನಾನಿ ಜೊತೆ ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದ ನಟಿ, ಇತ್ತೀಚೆಗೆ ಸಪ್ತಪದಿ ತುಳಿದಿದ್ದಾರೆ. ಸದ್ಯ ಮದುವೆ ಮೂಡಿನಿಂದ ಹೊರಬಂದು ಹೈದರಾಬಾದ್‌ನಲ್ಲಿ 'ಆರಂಭಂ' ಅನ್ನುವ ರೆಸ್ಟೋರೆಂಟ್ ಅನ್ನು ಆರಂಭಿಸುತ್ತಿದ್ದಾರೆ.

'ಆರಂಭಂ' ರೆಸ್ಟೋರೆಂಟ್‌ನಲ್ಲಿ ಮಿಲೆಟ್ ಆಧಾರಿತ ತಿನಿಸುಗಳನ್ನು ಗ್ರಾಹಕರಿಗೆ ನೀಡಲಾಗುತ್ತೆ. ಆರೋಗ್ಯಕರ ಆಹಾರದ ಕಾನ್ಸೆಪ್ಟ್ ಇಟ್ಟುಕೊಂಡು ಫುಡ್ ಮೆನ್ಯೂವನ್ನು ಸಿದ್ಧಪಡಿಸಲಾಗಿದ್ಯಂತೆ. ಈ ರೆಸ್ಟೋರೆಂಟ್‌ಗೆ ಬಂದವರಿಗೆ ದೇಹ ಮತ್ತು ಆತ್ಮಕ್ಕೆ ಖುಷಿ ನೀಡುವಂತಹ ಆಹಾರವನ್ನು ನೀಡುವುದನ್ನು ರಕುಲ್ ಮುಖ್ಯ ಉದ್ದೇಶವಾಗಿಟ್ಟುಕೊಂಡಿದ್ದಾರೆ.
ಹಾಗಂತ ರೆಸ್ಟೋರೆಂಟ್ ಅಷ್ಟೇ ಅಲ್ಲ. ರಕುಲ್ ಪ್ರೀತ್ ಸಿಂಗ್ ದಕ್ಷಿಣ ಭಾರತದ ಸಕ್ಸಸ್‌ಪುಲ್ ನಟಿಯಾಗಿರುವಾಗಲೇ ಜಿಮ್ ಉದ್ಯಮಕ್ಕೆ ಕಾಲಿಟ್ಟಿದ್ದರು. ಹೈದರಾಬಾದ್ ಹಾಗೂ ಬೆಂಗಳೂರಿನಲ್ಲಿ ಜಿಮ್ ಅನ್ನು ತೆರೆದಿದ್ದಾರೆ ಎನ್ನಲಾಗಿದೆ. ಈ ಮೂಲಕ ರಕುಲ್ ಪ್ರೀತ್ ಸಿಂಗ್ ಫಿಟ್ನೆಸ್ ಹಾಗೂ ಆರೋಗ್ಯ ಕ್ಷೇತ್ರದ ಉದ್ಯಮದ ಕಡೆ ಗಮನ ಹರಿಸಿದ್ದರು. ಈಗ ರೆಸ್ಟೋರೆಂಟ್ ಉದ್ಯಮಕ್ಕೆ ಕಾಲಿಟ್ಟಿದ್ದಾರೆ.


Click it and Unblock the Notifications











