Rashmika Mandanna: ಮದುವೆ ಬಳಿಕ ದಿನಕ್ಕೆ 8 ಗಂಟೆ ಹ್ಯಾಂಡ್-ಟು-ಹ್ಯಾಂಡ್ ಕಂಬಾಟ್; 'ಮೈಸ'ಗಾಗಿ ಟ್ರೈನಿಂಗ್

ರಶ್ಮಿಕಾ ಮಂದಣ್ಣ ವೃತ್ತಿ ಬದುಕಿನಲ್ಲಿ ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿದ್ದಾರೆ. ಟಾಲಿವುಡ್, ಬಾಲಿವುಡ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತಮ್ಮ ಕರಿಯರ್‌ನ ಉತ್ತುಂಗದಲ್ಲಿ ಇರುವಾಗಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ವಿಜಯ್ ದೇವರಕೊಂಡ ಜೊತೆ ಸಪ್ತಪದಿ ತುಳಿದ ಬಳಿಕ ಒಂದಿಷ್ಟು ದಿನ ಬ್ರೇಕ್ ತೆಗೆದುಕೊಳ್ಳುತ್ತಾರೆಂದು ಅಂದುಕೊಂಡಿದ್ದರು. ಆದರೆ, ರಶ್ಮಿಕಾ ವಿವಾಹದ ಬಳಿಕ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.

ರಶ್ಮಿಕಾ ವಿವಾಹದ ಬಳಿಕ ವೃತ್ತಿ ಬದುಕಿನಲ್ಲಿ ಸಂಪೂರ್ಣವಾಗಿ ಬದಲಾಗಿದ್ದಾರೆ ಎನಿಸುತ್ತಿದೆ. ಈಗಾಗಲೇ ರೊಮ್ಯಾಂಟಿಕ್, ಫ್ಯಾಮಿಲಿ ಮತ್ತು ಕಮರ್ಷಿಯಲ್ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಆದರೆ, ಇದೀಗ ಆಕ್ಷನ್ ಅವತಾರದಲ್ಲಿ ಕಾಣಿಸಿಕೊಳ್ಳುವುದಕ್ಕೆ ಸಜ್ಜಾಗಿದ್ದಾರೆ. ಅದಕ್ಕಾಗಿ ಬ್ಯಾಂಕಾಕ್‌ನಲ್ಲಿ ಸಿಕ್ಕಾಪಟ್ಟೆ ಕಸರತ್ತು ಮಾಡುತ್ತಿದ್ದಾರೆ.

After marriage Rashmika Mandanna 8-hour-a-day Hand-to-hand combat training in Bangkok for Mysaa

ಹೌದು, ರಶ್ಮಿಕಾ ಮಂದಣ್ಣ 'ಮೈಸ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರವೀಂದ್ರ ಪುಲ್ಲೆ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಇದೊಂದು ಮಹಿಳಾ ಪ್ರಧಾನ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಪಾತ್ರಕ್ಕಾಗಿ ರಶ್ಮಿಕಾ ದೈಹಿಕವಾಗಿ ಹಾಗೂ ಮಾನಸಿಕವಾಗಿ ರೆಡಿಯಾಗುತ್ತಿದ್ದಾರೆ. ಹೀಗಾಗಿ ಬ್ಯಾಂಕಾಕ್‌ನಲ್ಲಿ ಕಠಿಣ ತರಬೇತಿ ಪಡೆಯುತ್ತಿದ್ದಾರೆ.

ರಶ್ಮಿಕಾ ದಿನಕ್ಕೆ ಬರೋಬ್ಬರಿ 8 ಗಂಟೆಗಳ ಕಾಲ ಕಸರತ್ತು ನಡೆಸುತ್ತಿದ್ದಾರೆ. ಈ ವಿಶೇಷ ತರಬೇತಿ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. ರಶ್ಮಿಕಾ ಬ್ಯಾಂಕಾಕ್‌ನಲ್ಲಿ ಬೀಡು ಬಿಟ್ಟಿದ್ದಾರೆ. ಪ್ರತಿದಿನ ಮಾರ್ಷಲ್ ಆರ್ಟ್ಸ್, ಸ್ಟಂಟ್‌ನ ಟೆಕ್ನಿಕ್ ಹಾಗೂ ಹ್ಯಾಂಡ್-ಟು-ಹ್ಯಾಂಡ್ ಕಾಂಬಾಟ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇವರಿಗೆ ಅಂತರರಾಷ್ಟ್ರೀಯ ಮಟ್ಟದ ಸ್ಟಂಟ್ ಕೊರಿಯೋಗ್ರಾಫರ್ ಆಂಡಿ ಲಾಂಗ್ ಹಾಗೂ ಪ್ರಖ್ಯಾತ ಜೈಕಾ ಸ್ಟಂಟ್ ಇವರಿಗೆ ತರಬೇತಿ ಪಡೆಯುತ್ತಿದ್ದಾರೆ.

Also Read
Raaka: ಅಲ್ಲು ಅರ್ಜುನ್‌ಗೆ ₹175 ಕೋಟಿ.. ದೀಪಿಕಾ ಪಡುಕೋಣೆ, ರಶ್ಮಿಕಾ ಮಂದಣ್ಣಗೆ ಎಷ್ಟು ಕೋಟಿ?
Raaka: ಅಲ್ಲು ಅರ್ಜುನ್‌ಗೆ ₹175 ಕೋಟಿ.. ದೀಪಿಕಾ ಪಡುಕೋಣೆ, ರಶ್ಮಿಕಾ ಮಂದಣ್ಣಗೆ ಎಷ್ಟು ಕೋಟಿ?

ಆಂಡಿ ಲಾಂಗ್ ಅವರು 'ಕಮಾಂಡೋ', 'ಕುಂಗ್ ಫೂ ವಾರಿಯರ್' ಮತ್ತು 'ಕಲ್ಕಿ'ಯಂತಹ ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ಇವರೀಗ ರಶ್ಮಿಕಾ ಮಂದಣ್ಣ ನಟನೆಯ 'ಮೈಸ' ತಂಡದ ಭಾಗವಾಗಿದ್ದಾರೆ. ನಾಯಕಿಯರು ಆಕ್ಷನ್ ದೃಶ್ಯಗಳಲ್ಲಿ ನಟಿಸುವಾಗ ಸಾಮಾನ್ಯವಾಗಿ ಡೂಪ್‌ಗಳನ್ನು ಬಳಸುತ್ತಾರೆ. ಆದರೆ, ರಶ್ಮಿಕಾ ಮಂದಣ್ಣ ಡ್ಯೂಪ್ ಬಳಸದೇ ಆಕ್ಷನ್ ಸೀನ್‌ಗಳಲ್ಲಿ ನಟಿಸುವುದಕ್ಕೆ ನಿರ್ಧರಿಸಿದ್ದಾರೆ.

After marriage Rashmika Mandanna 8-hour-a-day Hand-to-hand combat training in Bangkok for Mysaa

ಹೀಗಾಗಿ ತಮ್ಮ ದೇಹವನ್ನು ಸಂಪೂರ್ಣವಾಗಿ ಪಾತ್ರಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕಾಗಿ ಕಟ್ಟುನಿಟ್ಟಾದ ತರಬೇತಿಯನ್ನು ಮುಂದುವರೆಸಿದ್ದಾರೆಂದು ತೆಲುಗು ಮಾಧ್ಯಮಗಳು ವರದಿ ಮಾಡಿದ್ದಾರೆ. 'ಮೈಸ' ಮೊದಲ ಗ್ಲಿಂಪ್ಸ್‌ನಲ್ಲಿ ರಶ್ಮಿಕಾ ಮಂದಣ್ಣ ಗೋಂಡ್ ಬುಡಕಟ್ಟು ಜನಾಂಗದ ಮಹಿಳೆಯಾಗಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಹಿಂದೆಂದೂ ಕಾಣದಷ್ಟು ಉಗ್ರರೂಪದಲ್ಲಿ ದರ್ಶನಗೊಂಡಿದ್ದಾರೆ. ನಿರ್ದೇಶಕ ರವೀಂದ್ರ ಪುಲ್ಲೆ ಅವರು ತಮ್ಮ ಪಾತ್ರವನ್ನು "ಗಾಯಗಳಿಂದ ಬರೆದ ಯುದ್ಧ... ಆಕೆಯೆ ಆಯುಧ" ಎಂದು ಬಣ್ಣಿಸಿರೋದು ಸಿನಿಮಾ ತೀವ್ರತೆಯನ್ನು ತಿಳಿಸುತ್ತದೆ.

ರಶ್ಮಿಕಾ ಬ್ಯಾಂಕಾಕ್‌ನಿಂದ ಮರಳುತ್ತಿದ್ದಂತೆ ಚಿತ್ರತಂಡದೊಂದಿಗೆ ಶೆಡ್ಯೂಲ್‌ಗಾಗಿ ಕೇರಳಕ್ಕೆ ಪ್ರಯಾಣಿಸಲಿದ್ದಾರೆ. ಅಲ್ಲಿ 16 ದಿನಗಳ ಕಾಲ ದುಬಾರಿ ಆಕ್ಷನ್ ಎಪಿಸೋಡ್ ಚಿತ್ರೀಕರಿಸಲಾಗುತ್ತದೆ. ಈ ಶೆಡ್ಯೂಲ್ ಇಡೀ ಸಿನಿಮಾದ ಹೈಲೈಟ್ ಎಂದು ಹೇಳಲಾಗುತ್ತಿದೆ. ಶೆಯಾಸ್ ಪಿ. ಕೃಷ್ಣ ಕ್ಯಾಮರಾ ವರ್ಕ್ ಮಾಡುತ್ತಿದ್ದಾರೆ. ಜೇಕ್ಸ್ ಬೀಜೋಯ್ ಸಂಗೀತ ನೀಡುತ್ತಿದ್ದಾರೆ. ಇನ್ನು ರಶ್ಮಿಕಾ ಮಂದಣ್ಣ ಜೊತೆ ಈಶ್ವರಿ ರಾವ್, ಗುರು ಸೋಮಸುಂದರಂ ಮತ್ತು ರಾವ್ ರಮೇಶ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ಪುಷ್ಪ' ಮತ್ತು 'ಅನಿಮಲ್' ನಂತಹ ಬ್ಲಾಕ್‌ಬಸ್ಟರ್ ಸಿನಿಮಾ ನೀಡಿರುವ ರಶ್ಮಿಕಾ ಮಂದಣ್ಣ 'ಮೈಸ' ಮೂಲಕ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ.

English summary
After marriage Rashmika Mandanna 8-hour-a-day Hand-to-hand combat training in Bangkok for Mysaa.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X