ಮದುವೆ ಬಳಿಕ ರಿಲೀಸ್ ಆಗಲಿರೋ ರಶ್ಮಿಕಾ-ವಿಜಯ್‌ ದೇವರಕೊಂಡ ಸಿನಿಮಾಗಳ್ಯಾವುವು ಗೊತ್ತೇ?

ಭಾರತೀಯ ಚಿತ್ರರಂಗದ ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತೆಲುಗು ಹಿಂದೂ ಸಂಪ್ರದಾಯದಂತೆ ಬೆಳಗ್ಗೆ ಮದುವೆ ಆಗಿದ್ದರೆ, ಸಂಜೆ ಕೊಡವ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ಈ ಜೋಡಿ ಎರಡೂ ಸಂಪ್ರದಾಯಗಳಿಗೆ ಗೌರವ ಕೊಟ್ಟು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬಸ್ಥರು ಹಾಗೂ ಆತ್ಮೀಯ ಸಮ್ಮುಖದಲ್ಲಿ ಈ ಜೋಡಿ ಅದ್ಧೂರಿಯಾಗಿ ಮದುವೆ ಆಗಿದ್ದಾರೆ.

ಕೆಲವೇ ಕೆಲವು ಕುಟುಂಬಸ್ಥರು, ಆತ್ಮೀಯರು ಹಾಗೂ ಚಿತ್ರರಂಗದ ಗಣ್ಯರಿಗೆ ಆಹ್ವಾನ ನೀಡಲಾಗಿತ್ತು. ಇವರ ಸಮ್ಮುಖದಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ. ರಾಜಸ್ಥಾನದ ಉದಯಪುರದಲ್ಲಿ ನಡೆದ ಅದ್ಧೂರಿ ಸೆಲೆಬ್ರೆಟಿ ಮದುವೆಗಳಲ್ಲಿ ಇದೂ ಒಂದಾಗಿದೆ. ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇಬ್ಬರೂ ಕನಸು ಕಂಡಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

After marriage these movies are lined up for Rashmika Mandanna and Vijay Deverakonda

ಒಂದಿಷ್ಟು ವರ್ಷ ಡೇಟಿಂಗ್ ಮಾಡುತ್ತಿದ್ದರೂ ಅದನ್ನು ಒಪ್ಪಿಕೊಳ್ಳದ ರಶ್ಮಿಕಾ-ವಿಜಯ್ ದೇವರಕೊಂಡು ಈಗ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಮದುವೆ ಏನೋ ಕನಸು ಕಂಡಂತೆ ಆಗಿದ್ದಾಗಿದೆ. ಮದುವೆ ಬಳಿಕ ಓಡಾಟ-ತಿರುಗಾಟ ಹನಿಮೂನ್ ಎಲ್ಲವೂ ಓಕೆ. ಆದರೆ, ಮದುವೆ ನಂತರ ಇಬ್ಬರ ಸಿನಿಮಾ ಕರಿಯರ್ ಹೇಗಿರುತ್ತೆ? ರಶ್ಮಿಕಾ ಮಂದಣ್ಣ ಸಿನಿಮಾದಲ್ಲಿ ನಟಿಸುವುದನ್ನು ಮುಂದುವರೆಸುತ್ತಾ? ಇಬ್ಬರ ಕೈಯಲ್ಲಿರುವ ಸಿನಿಮಾಗಳು ಯಾವುವು? ಇಲ್ಲಿದೆ ಡಿಟೈಲ್ಸ್,

ರಶ್ಮಿಕಾ ಮಂದಣ್ಣ ಕೈಯಲ್ಲಿರುವ ಸಿನಿಮಾಗಳು

ಮದುವೆ ಬಳಿಕ ನಟಿಯರು ಫ್ಯಾಮಿಲಿ ಕಡೆಗೆ ಮುಖ ಮಾಡುತ್ತಾರೆ. ಸಂಸಾರ, ಮಕ್ಕಳು ಅಂತ ಗಮನ ಹರಿಸುತ್ತಾರೆ. ಇನ್ನು ರಶ್ಮಿಕಾ ಮಂದಣ್ಣ ಕಥೆನೂ ಅದೇ ಆಗುತ್ತಾ? ಅನ್ನೋ ಪ್ರಶ್ನೆ ಮೂಡುವುದು ಸಹಜ. ಆದರೆ, ರಶ್ಮಿಕಾ ಮಂದಣ್ಣ ಮದುವೆ ಬಳಿಕವೂ ಸಿನಿಮಾದಲ್ಲಿ ನಟಿಸುವುದಕ್ಕೆ ಮುಂದುವರೆಸುತ್ತಾರೆ. ಯಾಕಂದ್ರೆ ಅವರ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ತಾನು ಒಪ್ಪಿಕೊಂಡಿರುವ ಪ್ರಾಜೆಕ್ಟ್‌ಗಳನ್ನು ಮುಗಿಸಿದ ಬಳಿಕ ಅವರ ನಿರ್ಧಾರಗಳೇನು ಅನ್ನೋದು ಗೊತ್ತಾಗುತ್ತೆ.

ರಶ್ಮಿಕಾ ಮಂದಣ್ಣ ಕೈಯಲ್ಲಿ ಸದ್ಯ ಎರಡು ಸಿನಿಮಾಗಳಿವೆ. 'ಗೀತಾ ಗೋವಿಂದಂ', 'ಡಿಯರ್ ಕಾಮ್ರೆಡ್' ಬಳಿಕ ವಿಜಯ್ ದೇವರಕೊಂಡ ಜೊತೆ ನಟಿಸಿರಲಿಲ್ಲ. ಮದುವೆ ಮುನ್ನವೇ ಈ ಜೋಡಿಯ ಮೂರನೇ ಪ್ರಾಜೆಕ್ಟ್ 'ರಾಣಾಬಾಲಿ' ಅನೌನ್ಸ್ ಆಗಿದೆ. ಮದುವೆ ಬಳಿಕ ಈ ಸಿನಿಮಾ ರಿಲೀಸ್ ಆಗುತ್ತಿರೋದ್ರಿಂದ ಸಿನಿಮಾ ದೊಡ್ಡ ಅಡ್ವಾಂಟೆಜ್. ಇದೇ ವರ್ಷ ಅಂದರೆ, ಸೆಪ್ಟೆಂಬರ್ 11ರಂದು ಈ ಸಿನಿಮಾ ರಿಲೀಸ್ ಆಗುತ್ತಿದೆ. 'ಕಾಕ್‌ಟೇಲ್ 2' ಹಾಗೂ 'ಮೈಸಾ' ಎರಡು ಪ್ರಾಜೆಕ್ಟ್‌ಗಳು ಶೂಟಿಂಗ್ ಹಂತದಲ್ಲಿದ್ದು ಇವೂ ರಿಲೀಸ್ ಆಗಲಿವೆ.

After marriage these movies are lined up for Rashmika Mandanna and Vijay Deverakonda

ವಿಜಯ್ ದೇವರಕೊಂಡ ಕೈಯಲ್ಲಿರೋ ಸಿನಿಮಾಗಳು

ವಿಜಯ್ ದೇವರಕೊಂಡ ನಟಿಸಿದ 'ಕಿಂಗ್' ಸಿನಿಮಾ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಸತತ ಸೋಲುಗಳಿಂದ ಕಂಗೆಟ್ಟಿದ್ದ ವಿಜಯ್‌ ದೇವರಕೊಂಡಗೆ ಈ ಸಿನಿಮಾ ಮತ್ತೆ ಧೈರ್ಯ ತುಂಬಿತ್ತು. ಪವರ್‌ಫುಲ್ ಮಾಸ್ ಪಾತ್ರದಲ್ಲಿ ವಿಜಯ್ ದೇವರಕೊಂಡ ತೆಲುಗು ಮಂದಿಯ ಮನ ಗೆದ್ದಿದ್ದರು. ಈ ಸಿನಿಮಾ ಬಳಿಕ ಎರಡೆರಡು ಪ್ರಾಜೆಕ್ಟ್‌ಗಳಲ್ಲಿ ವಿಜಯ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಎರಡೂ ಸಿನಿಮಾಗಳು ಮದುವೆ ಬಳಿಕ ರಿಲೀಸ್ ಆಗಲಿವೆ.

ಸದ್ಯ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ನಟಿಸುತ್ತಿರುವ 'ರಾಣಾಬಾಲಿ' ಶೂಟಿಂಗ್ ಹಂತದಲ್ಲಿದೆ. ಇನ್ನೊಂದು 'ರೌಡಿ ಜನಾರ್ಧನ'. ಈ ಸಿನಿಮಾದಲ್ಲಿ ರೌಡಿ ಜನಾರ್ಧನ ಹೆಸರಿನಲ್ಲಿಯೇ ವಿಜಯ್ ದೇವರಕೊಂಡ ಕಾಣಿಸಿಕೊಳ್ಳುತ್ತಿದ್ದಾರೆ. ಈ ಎರಡೂ ಸಿನಿಮಾಗಳಲ್ಲಿ 'ರಾಣಾಬಾಲಿ' ಇದೇ ವರ್ಷ ರಿಲೀಸ್ ಆಗುತ್ತಿದೆ. ಹೀಗಾಗಿ ಮದುವೆ ಬಳಿಕ ಇಬ್ಬರೂ ಸಿನಿಮಾದ ಸೆಟ್ಟಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

More from Filmibeat

English summary
After marriage these movies are lined up for Rashmika Mandanna and Vijay Deverakonda.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X