ಹಾಲಿವುಡ್ ಸಿನಿಮಾ ಡೈರೆಕ್ಟ್ ಮಾಡಲು ರಾಜಮೌಳಿ ರೆಡಿ: ಅಮೆರಿಕಾದ ಏಜೆನ್ಸಿಗೆ ಗ್ರೀನ್ ಸಿಗ್ನಲ್!

ಭಾರತದ ಮೂವಿ ಮಾಂತ್ರಿಕಾ ಎಸ್‌ ಎಸ್ ರಾಜಮೌಳಿ. ಚಿತ್ರರಂಗದಲ್ಲಿ ಸೋಲಿಲ್ಲದ ಸರದಾರ ಅಂತಲೇ ಖ್ಯಾತಿ ಗಳಿಸಿರುವ ನಿರ್ದೇಶಕ. ಸದ್ಯ ರಾಜಮೌಳಿ ಅಮೆರಿಕಾದಲ್ಲಿ RRR ಸಿನಿಮಾ ಪ್ರಚಾರ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಅಮೆರಿಕಾದಲ್ಲಿ ಈ ಸಿನಿಮಾಗೆ ಬಾರಿ ಮೆಚ್ಚುಗೆ ವ್ಯಕ್ತವಾಗುತ್ತಿರೋದ್ರಿಂದ ಜಕ್ಕಣ್ಣ ಸಿನಿಮಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

RRR ಸಿನಿಮಾದ ಪ್ರಚಾರದಲ್ಲಿರುವಾಗಲೇ ರಾಜಮೌಳಿ ಅಮೆರಿಕಾದ ಎಂಟರ್‌ಟೈನ್ಮೆಂಟ್ ಹಾಗೂ ಸ್ಪೋರ್ಟ್ಸ್ ಏಜೆನ್ಸಿ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದಾರೆ. ಅಮೆರಿಕಾದ ಕ್ರಿಯೇಟಿವ್ ಆರ್ಟಿಸ್ಟ್ ಏಜೆನ್ಸಿಗೆ ರಾಜಮೌಳಿ ಸಹಿ ಮಾಡಿದ್ದಾರೆ ಎಂದು ಡೆಡ್‌ಲೈನ್ ವರದಿ ಮಾಡಿದೆ.

ಕ್ರಿಯೇಟಿವ್ ಆರ್ಟಿಸ್ಟ್ ಏಜೆನ್ಸಿ ವಿಶ್ವದಲ್ಲಿರೋ ಸಿನಿಮಾ ಕ್ಷೇತ್ರದ ದಿಗ್ಗಜರೊಂದಿಗೆ ಒಡಂಬಡಿಕೆ ಮಾಡಿಕೊಳ್ಳುತ್ತೆ. ಪ್ರತಿಭೆಗಳನ್ನು ಹಾಲಿವುಡ್‌ ನಿರ್ಮಾಣ ಸಂಸ್ಥೆಗಳಿಗೆ ಲಿಂಕ್ ಮಾಡಿಕೊಡುತ್ತದೆ. ಹಾಲಿವುಡ್‌ ದಿಗ್ಗಜರು ಬ್ರಾಡ್ ಪಿಟ್, ಕೇಟ್ ವಿನ್ಸ್‌ಲೆಟ್, ಆಂಗ್ ಲೀ, ಆನಿ ಹ್ಯಾಥ್‌ವೇ ಸೇರಿದಂತೆ ಹಲವರು ಇದೇ ಕಂಪನಿಗೆ ಸಹಿ ಮಾಡಿದ್ದಾರೆ. ಈ ಆ ಸಾಲಿನಲ್ಲಿ ರಾಜಮೌಳಿ ಕೂಡ ಸಹಿ ಮಾಡಿದ್ದು, ಹಾಲಿವುಡ್ ಸಿನಿಮಾಗಳನ್ನು ನಿರ್ದೇಶನ ಮಾಡಲು ಗ್ರೀನ್ ಸಿಗ್ನಲ್ ನೀಡಿದಂತಾಗಿದೆ.

ಯುಎಸ್‌ನಲ್ಲಿ RRR ಅಬ್ಬರ

ಯುಎಸ್‌ನಲ್ಲಿ RRR ಅಬ್ಬರ

ಜೂ.ಎನ್‌ಟಿಆರ್ ಹಾಗೂ ರಾಮ್‌ ಚರಣ್‌ ಜೊತೆ ರಾಜಮೌಳಿ RRR ನಿರ್ದೇಶಿಸಿದ್ದರು. ಇದು ಬಾಕ್ಸಾಫೀಸ್‌ನಲ್ಲಿ ವಿಶ್ವದಾದ್ಯಂತ ಸುಮಾರು 1100 ಕೋಟಿ ರೂ.ಗೂ ಹೆಚ್ಚು ಕಲೆ ಹಾಕಿತ್ತು. ಆದರೂ, ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ರಿಲೀಸ್ ಆದ್ಮೇಲೆ ಈ ಸಿನಿಮಾ ಇಡೀ ವಿಶ್ವವೇ ಗುರುತಿಸುವಂತಾಗಿತ್ತು. ಹಾಲಿವುಡ್ ದಿಗ್ಗಜರು ಕೂಡ RRR ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಇಲ್ಲಿಂದ RRR ಕ್ರೇಜ್ ದುಪ್ಪಟ್ಟಾಗಿತ್ತು. ರಾಜಮೌಳಿ ನಿರ್ದೇಶನ ವಿಶ್ವದಾದ್ಯಂತ ಮೆಚ್ಚುಗೆ ಗಳಿಸುತ್ತಿದ್ದಂತೆ ಅಮೆರಿಕಾದ ಕ್ರಿಯೇಟಿವ್ ಆರ್ಟಿಸ್ಟ್ ಏಜೆನ್ಸಿಗೆ ಸಹಿ ಮಾಡಿಸಿಕೊಂಡಿದೆ.

ಆಸ್ಕರ್ ಗೆಲ್ಲುವ ನೆಚ್ಚಿನ ಸಿನಿಮಾ RRR?

ಆಸ್ಕರ್ ಗೆಲ್ಲುವ ನೆಚ್ಚಿನ ಸಿನಿಮಾ RRR?

ಅಮೆರಿಕಾದಲ್ಲಿ RRR ಸಿನಿಮಾ ಜನಪ್ರಿಯವಾಗುತ್ತಿದ್ದಂತೆ ಆಸ್ಕರ್ ಪ್ರಶಸ್ತಿ ಗೆಲ್ಲುವ ನೆಚ್ಚಿನ ಲಿಸ್ಟ್‌ನಲ್ಲಿದೆ. ಹಾಲಿವುಡ್‌ ದಿಗ್ಗಜರೂ ಕೂಡ RRR ಆಸ್ಕರ್‌ಗೆ ಗೆಲ್ಲಬಹುದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. 2023ರಲ್ಲಿ ನಡೆಯುವ ಆಸ್ಕರ್ ಪ್ರಶಸ್ತಿ ಗೆಲ್ಲುವ ನೆಚ್ಚಿನ ಸಿನಿಮಾಗಳಲ್ಲಿ RRR ಇದೆ ಎಂದು ಹಾಲಿವುಡ್‌ ಮಂದಿನೇ ಹೇಳುತ್ತಿದ್ದಾರೆ. ಆದರೆ, ಭಾರತದಿಂದ ಆಸ್ಕರ್‌ಗೆ ಗುಜರಾತಿ ಸಿನಿಮಾ 'ಛೆಲ್ಲೋ ಶೋ' ಅಧಿಕೃತ ಎಂಟ್ರಿ ಕೊಟ್ಟಿದೆ.

ಆಸ್ಕರ್ ಬಂದರೂ ಸ್ಟೈಲ್ ಬದಲಾಗಲ್ಲ

ಆಸ್ಕರ್ ಬಂದರೂ ಸ್ಟೈಲ್ ಬದಲಾಗಲ್ಲ

ಅಮೆರಿಕಾದ ನ್ಯೂಯಾರ್ಕ್‌ನ ಐಎಫ್‌ಸಿ ಸೆಂಟರ್‌ನಲ್ಲಿ RRR ಸಿನಿಮಾ ಸ್ಕ್ರೀನಿಂಗ್ ಆಗಿತ್ತು. ಈ ವೇಳೆ ರಾಜಮೌಳಿ ನಿರ್ದೇಶನಕ್ಕೆ ಮೆಚ್ಚುಗೆಗಳ ಮಹಾಪೂರವೇ ಹರಿದು ಬಂದಿತ್ತು. ಆಗ ರಾಜಮೌಳಿ ಈ ಸಿನಿಮಾಗೆ ಆಸ್ಕರ್‌ ಪ್ರಶಸ್ತಿ ಬಂದರೂ, ನಾನು ಸಿನಿಮಾ ಮಾಡುವ ರೀತಿ ಮಾತ್ರ ಬದಲಾಗುವುದಿಲ್ಲ ಎಂದು ಹೇಳಿದ್ದರು. " RRR ಆಸ್ಕರ್ ಗೆಲ್ಲುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ನನ್ನ ಮುಂದಿನ ಸಿನಿಮಾದ ಪ್ಲ್ಯಾನ್ ಮಾತ್ರ ಬದಲಾಗುವುದಿಲ್ಲ. ಆಸ್ಕರ್ ಸಿನಿಮಾ ತಂಡ ಹಾಗೂ ದೇಶಕ್ಕೆ ನೈತಿಕ ಬೆಂಬಲ ನೀಡಲಿದೆ. ಆದರೆ, ಅದರಿಂದ ನನ್ನ ಕೆಲಸದ ಶೈಲಿ ಬದಲಾಗುವುದಿಲ್ಲ." ಎಂದು ಹೇಳಿದ್ದರು.

ಮಹೇಶ್ ಬಾಬು ಜೊತೆ ಸಿನಿಮಾ

ಮಹೇಶ್ ಬಾಬು ಜೊತೆ ಸಿನಿಮಾ

RRR ಬಳಿಕ ರಾಜಮೌಳಿ ಮುಂದಿನ ಸಿನಿಮಾ ಮಹೇಶ್ ಬಾಬುಗೆ ನಿರ್ದೇಶಿಸಲಿದ್ದಾರೆ. ಈ ಸಿನಿಮಾ ಹಾಲಿವುಡ್‌ ಲೆವೆಲ್‌ನಲ್ಲಿ ಇರುತ್ತೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಇದು ಭಾರತದ ಜೇಮ್ಸ್ ಬಾಂಡ್ ಸಿನಿಮಾ ಎಂದು ಸ್ವತ: ರಾಜಮೌಳಿಯೇ ಹೇಳಿರುವುದರಿಂದ ಸಹಜವಾಗಿಯೇ ಕುತೂಹಲ ಕೆರಳಿಸಿದೆ.

More from Filmibeat

English summary
After Pan India Movie RRR Success In USA Rajamouli signs with American Talent Agency, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X