ಹಾಡಿನಲ್ಲಿ ಟೀ ಗ್ಲಾಸ್ ಹಿಡಿದ 'ಪುಷ್ಪ': ಜನ ಸೇನಾ ಪಕ್ಷದ ಪರ ಪ್ರಚಾರ ಮಾಡಿದ್ರಾ ಅಲ್ಲು ಅರ್ಜುನ್?
ಕೆಲವೇ ದಿನಗಳ ಹಿಂದಷ್ಟೇ 'ಪುಷ್ಪ 2' ಮೊದಲ ಹಾಡಿನ ಪ್ರೋಮೊ ರಿಲೀಸ್ ಆಗಿತ್ತು. ಮೇ 1ಕ್ಕೆ ಇಡೀ ಸಾಂಗ್ ಅನ್ನು ರಿಲೀಸ್ ಮಾಡುವುದಾಗಿ ಆ ಹಾಡಿನಲ್ಲಿ ರಿವೀಲ್ ಮಾಡಲಾಗಿತ್ತು. ಮೊದಲೇ ತಿಳಿಸಿದಂತೆ ಅಲ್ಲು ಅರ್ಜುನ್ ನಟನೆಯ 'ಪುಷ್ಪ 2' ಸಿನಿಮಾದ ಮೊದಲ ಹಾಡನ್ನು ರಿಲೀಸ್ ಮಾಡಲಾಗಿದೆ. ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಈ ಹಾಡಿನ ಮೇಲೆ ಆರೋಪ ಹೊರಿಸಲಾಗಿದೆ.
'ಪುಷ್ಪ 2' ಸಿನಿಮಾಗೆ ದೇಶಾದ್ಯಂತ ಕ್ರೇಜ್ ಹೆಚ್ಚಿದೆ. ಅಲ್ಲು ಅರ್ಜನ್ ನೋಡುವುದಕ್ಕೆ ಸಿನಿಪ್ರಿಯರು ತುದಿಗಾಲಲ್ಲಿ ನಿಂತಿದ್ದಾರೆ. ಆಗಸ್ಟ್ 15ರಂದು ಸಿನಿಮಾ ರಿಲೀಸ್‌ಗೆ ರೆಡಿಯಾಗಿದ್ದರಿಂದ ಚಿತ್ರತಂಡ ಪ್ರಚಾರವನ್ನು ಆರಂಭ ಮಾಡಿದೆ. ಕಾರ್ಮಿಕರ ದಿನದಂದು (ಮೇ 1) ಮೊದಲ ಹಾಡಿನ ಲಿರಿಕಲ್ ಸಾಂಗ್ ಅನ್ನು ರಿಲೀಸ್ ಮಾಡಲಾಗಿದೆ.

"ಪುಷ್ಪ.. ಪುಷ್ಪ.." ಅಂತ ಆರಂಭ ಆಗುವ ಈ ಹಾಡಿನಲ್ಲಿ ಅಲ್ಲು ಅರ್ಜುನ್ ಟೀ ಗ್ಲಾಸ್ ಅನ್ನು ಹಿಡಿದು ನಿಲ್ಲುತ್ತಾರೆ. ಅದೇ ಈಗ ಟಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಈ ಹಾಡಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲಾಗುತ್ತಿದೆ. ಅದಕ್ಕೆ ಕಾರಣವೇನು? ಟೀ ಗ್ಲಾಸ್ ಹಿಡಿದರೇ ಕಷ್ಟವೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ..
'ಪುಷ್ಪ 2' ಸಿನಿಮಾದ ಪುಷ್ಪ ಹಾಡು ಯೂಟ್ಯೂಬ್‌ನಲ್ಲಿ ದಾಖಲೆಯನ್ನು ಸೃಷ್ಟಿಸುವುದಕ್ಕೆ ಹೊರಟಿದೆ. ಕನ್ನಡವೂ ಸೇರಿದಂತೆ ಐದು ಭಾಷೆಗಳಲ್ಲಿ ಈ ಹಾಡನ್ನು ರಿಲೀಸ್ ಮಾಡಲಾಗಿದೆ. ಅಲ್ಲು ಅರ್ಜುನ್ ಸ್ಟೈಲ್, ಸುಕುಮಾರ್ ಮೇಕಿಂಗ್ ಝಲಕ್ ಬಗ್ಗೆ ಚಿಕ್ಕದೊಂದು ಸುಳಿವು ಸಿಕ್ಕಿದೆ. ಬಾಕ್ಸ್ ಆಫೀಸ್ ಸುನಾಮಿ ಎಬ್ಬಿಸಬೇಕಂತಲೇ ಹಾಡಿನ ಟ್ಯೂನ್ ಇದೆ. ಆದರೆ, ಈ ಹಾಡಿನಲ್ಲಿ ಅಲ್ಲು ಅರ್ಜುನ್ ಕೈಯಲ್ಲಿ ಟೀ ಗ್ಲಾಸ್ ಇಟ್ಟುಕೊಂಡಿದ್ದು ಕೆಲವರಿಗೆ ಸರಿಕಂಡಿಲ್ಲ. ಅದಕ್ಕೆ ಕಾರಣ ಹೀಗಿದೆ.
ಆಂಧ್ರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಕೂಡ ಜೋರಾಗಿಯೇ ನಡೆಯುತ್ತಿದೆ. ಈ ಸಮಯದಲ್ಲಿ ಅಲ್ಲು ಅರ್ಜುನ್ ಕೈಯಲ್ಲಿ ಟೀ ಗ್ಲಾಸ್ ಟೀಕಾಗಾರರ ಗಮನ ಸೆಳೆದಿದೆ. ಆಂಧ್ರ ಪ್ರದೇಶದಲ್ಲಿ ಟೀ ಗ್ಲಾಸ್‌ನ ಗುರುತು ವಿವಾದವನ್ನು ಸೃಷ್ಟಿಸಿದೆ. ಸ್ವತಂತ್ರ ಮತ್ತು ಬಂಡಾಯ ಅಭ್ಯರ್ಥಿಗಳಿಗೆ ಟೀ ಗ್ಲಾಸ್ ಚಿಹ್ನೆಯನ್ನು ನೀಡಬೇಕು ಅಂತ ಜನಸೇನ ನ್ಯಾಯಾಲಯದ ಮೊರೆ ಹೋಗಿದೆ ಎನ್ನಲಾಗಿದೆ.

ಇದೇ ಸಂದರ್ಭದಲ್ಲಿ 'ಪುಷ್ಪ 2' ಹಾಡಿನಲ್ಲಿ ಅಲ್ಲು ಅರ್ಜುನ್ ಡ್ಯಾನ್ಸ್ ಮಾಡುವ ವೇಳೆ ವ್ಯಕ್ತಿಯೊಬ್ಬ ಟೀ ಗ್ಲಾಸ್‌ಗಳನ್ನ ಹಿಡಿದು ಬರುತ್ತಾನೆ. ಅದನ್ನು ಅಲ್ಲಿ ಅರ್ಜುನ್ ಎತ್ತಿಕೊಳ್ಳುವ ದೃಶ್ಯವಿದೆ. ಹೀಗಾಗಿ ಅಲ್ಲು ಅರ್ಜುನ್ ಯಾವುದೋ ರೀತಿಯಲ್ಲಿ ಪವನ್ ಕಲ್ಯಾಣ್‌ರನ್ನು ಬೆಂಬಲಿಸುತ್ತಿದ್ದಾರೆ ಎಂಬ ಕಾಮೆಂಟ್‌ಗಳು ಪಾಸ್ ಆಗುತ್ತಿವೆ.
ಪುಷ್ಪ.. ಪುಷ್ಪ.. ಹಾಡಿನಲ್ಲಿ ಅಲ್ಲು ಅರ್ಜುನ್ ಟೀ ಗ್ಲಾಸ್ ಎತ್ತಿಕೊಂಡು ಅದನ್ನು ಕೈಯಲ್ಲಿ ತಿರುಗಿಸಿ ಪರಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅದನ್ನು ನೋಡಿ ಪವನ್ ಕಲ್ಯಾಣ್ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಹೀಗಾಗಿ "ಪುಷ್ಪ ಪುಷ್ಪಾ.. ಪುಷ್ಪ" ಹಾಡನ್ನು ಮೆಗಾ ಪವರ್‌ಸ್ಟಾರ್ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಶೇರ್ ಮಾಡುತ್ತಿದ್ದಾರೆ. ಹಾಡು ಈಗ ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿದೆ.


Click it and Unblock the Notifications











