ಅಪ್ಪು ಬಳಿಕ ಹೊಂಬಾಳೆಗೆ ಡಾರ್ಲಿಂಗ್ ಆದ ಪ್ರಭಾಸ್; ಬ್ಯಾಕ್ ಟು ಬ್ಯಾಕ್ 3 ಸಿನಿಮಾ ಘೋಷಣೆ

ಕನ್ನಡದ ಹೆಮ್ಮೆ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್. 'ಕೆಜಿಎಫ್', 'ಕಾಂತಾರ'ದಂತಹ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಹೊಂಬಾಳೆ ಈಗ ಮತ್ತೊಂದು ದೊಡ್ಡ ಸಾಹಸಕ್ಕೆ ಕೈ ಹಾಕಿದೆ. ಕನ್ನಡದ ಜೊತೆಗೆ ಪರಭಾಷೆಯ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದರು ಈ ಸಂಸ್ಥೆಯೀಗ ಮತ್ತೆ ಮೂರು ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಕೈ ಹಾಕಿದೆ.

ಇತ್ತ ಕನ್ನಡದಲ್ಲಿ ನಿರ್ಮಿಸಿದ 'ಬಘೀರ' ಸಿನಿಮಾ ಯಶಸ್ಸು ಕಂಡಿದೆ. ಪ್ರಶಾಂತ್ ನೀಲ್ ನೀಡಿದ್ದ ಸೂಪರ್‌ ಹೀರೋ ಕಥೆ ಮತ್ತೆ ವರ್ಕ್‌ಔಟ್ ಆಗಿದೆ. ರೋರಿಂಗ್ ಸ್ಟಾರ್ ಶ್ರೀಮುರಳಿ ಹಾಗೂ ಡಾ.ಸೂರಿ ಕಾಂಬಿನೇಷನ್ ಕ್ಲಿಕ್ ಆಗಿದೆ. ಇದೇ ಖುಷಿಯಲ್ಲಿಯೇ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಜೊತೆ ಹೊಂಬಾಳೆ ಫಿಲ್ಮ್ಸ್ ಒಡಂಬಡಿಕೆ ಮಾಡಿಕೊಂಡಿದೆ.

After Salaar Part 1 Hombale films collaborating three-picture with Prabhas

ಈಗಾಗಲೇ ಪ್ರಭಾಸ್ ಜೊತೆ 'ಸಲಾರ್; ಪಾರ್ಟ್ 1 ಸೀಸ್‌ಫೈರ್' ಸಿನಿಮಾವನ್ನು ನಿರ್ಮಾಣ ಮಾಡಿ ಯಶಸ್ಸು ಕಂಡಿದೆ. 'ಕೆಜಿಎಫ್' ಖ್ಯಾತಿಯ ಪ್ರಶಾಂತ್ ನೀಲ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಇದೇ ಬೆನ್ನಲ್ಲೇ ಮೂರು ವರ್ಷಕ್ಕೆ ಮೂರು ಸಿನಿಮಾಗಳನ್ನು ಪ್ರಭಾಸ್‌ಗಾಗಿ ಸಿನಿಮಾ ಮಾಡುವುದಾಗಿ ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ಅನೌನ್ಸ್ ಮಾಡಿದೆ. ಹಾಗಿದ್ದರೆ, ಆ ಮೂರು ಸಿನಿಮಾ ಯಾವುವು? ಪ್ರಭಾಸ್ ಅವರಲ್ಲಿ ಪುನೀತ್ ಕಾಣುತ್ತಿದೆಯಾ ಹೊಂಬಾಳೆ ಫಿಲ್ಮ್ಸ್? ತಿಳಿಯಲು ಮುಂದೆ ಓದಿ.

ಪ್ರಭಾಸ್ ಅವರಲ್ಲಿ ಪುನೀತ್ ಕಾಣುತ್ತಿದೆಯೇ?

ಕನ್ನಡದಲ್ಲಿ ಹೊಂಬಾಳೆ ಫಿಲ್ಮ್ಸ್ ಪುನೀತ್ ರಾಜ್‌ಕುಮಾರ್‌ಗೆ ಹೆಚ್ಚು ಸಿನಿಮಾಗಳನ್ನು ನಿರ್ಮಾಣ ಮಾಡಿದೆ. ಆರಂಭದಲ್ಲಿ ಅಪ್ಪು ಜೊತೆನೇ ಬ್ಯಾಕ್ ಟು ಬ್ಯಾಕ್ ಸಿನಿಮಾ ನಿರ್ಮಾಣ ಮಾಡಿದೆ. ಈಗ ಪುನೀತ್ ಅಗಲಿಕೆ ಬಳಿಕ ಪ್ರಭಾಸ್‌ ಒಂದರ ಹಿಂದೊಂದರಂತೆ ಮೂರು ಸಿನಿಮಾಗಳನ್ನು ಘೋಷಣೆ ಮಾಡಿದೆ. ಈ ಮೂಲಕ ಪುನೀತ್ ಅವರನ್ನು ಪ್ರಭಾಸ್‌ ಅವರಲ್ಲಿ ಕಾಣಲಾಗುತ್ತಿದೆ ಎಂದು ಅಂದಾಜಿಸಲಾಗುತ್ತಿದೆ. ಹೀಗಾಗಿ ಮೂರು ಸಿನಿಮಾಗಳನ್ನು ಅವರೊಂದಿಗೆ ಒಂದೇ ಏಟಿಗೆ ಘೋಷಣೆ ಮಾಡಲಾಗಿದೆ.

ಆ ಮೂರು ಸಿನಿಮಾ ಯಾವುವು?

ಹೊಂಬಾಳೆ ಅಧಿಕೃತವಾಗಿ ಮೂರು ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿರುವುದಾಗಿ ಘೋಷಣೆ ಮಾಡಿದೆ. ಹಾಗೇ ಆ ಸಿನಿಮಾಗಳು ಯಾವಾಗ ರಿಲೀಸ್ ಆಗುತ್ತವೆ ಅನ್ನೋದನ್ನು ಅನೌನ್ಸ್ ಮಾಡಿ, ಸಿನಿಮಾ ಪ್ರೇಮಿಗಳಿಗೆ ಅಚ್ಚರಿ ಮೂಡಿಸಿದೆ. ಈಗಾಗಲೇ 'ಸಲಾರ್ 2' ಶೂಟಿಂಗ್ ಆಗುತ್ತಿದೆ ಅನ್ನೋ ವಿಷಯ ಹರಿದಾಡುತ್ತಿದೆ. ಇದು 2026ಕ್ಕೆ ತೆರೆಕಾಣಲಿದೆ. ಹಾಗೇ ಎರಡನೇ ಸಿನಿಮಾ 2027, ಮೂರನೇ ಸಿನಿಮಾ 2028ಕ್ಕೆ ಬಿಡುಗಡೆಯಾಗುವುದಾಗಿ ಘೋಷಣೆಯಾಗಿದೆ.

'ಕಾಂತಾರ' ಪ್ರೀಕ್ವೆಲ್- 'ಕೆಜಿಎಫ್ 3'

'ಬಘೀರ' ಸಿನಿಮಾ ಈಗಾಗಲೇ ರಿಲೀಸ್ ಆಗಿ ಯಶಸ್ಸು ಕಂಡಿದೆ. ಇದರೊಂದಿಗೆ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ಬಹು ನಿರೀಕ್ಷಿತ ಸಿನಿಮಾ 'ಕಾಂತಾರ 2' ಚಿತ್ರೀಕರಣ ವೇಗವಾಗಿ ನಡೆಯುತ್ತಿದೆ. ಹಾಗೇ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಕೆಜಿಎಫ್ 3' ಕೂಡ ಲಿಸ್ಟ್‌ನಲ್ಲಿ ಇದ್ದು ಆ ಕೆಲಸಗಳು ಕೂಡ ಜೊತೆಯಲ್ಲಿಯೇ ನಡೆಯುತ್ತಿದೆ. 'ಸಲಾರ 2'ಗೂ ಮುನ್ನ 'ಕಾಂತಾರ' ಪ್ರೀಕ್ವೆಲ್ ಬಿಡುಗಡೆಯಾಗಲಿದೆ.

ಹೊಂಬಾಳೆ- ಪ್ರಭಾಸ್ ಡೀಲ್ ಏನು?

ಹೊಂಬಾಳೆ ಫಿಲ್ಮ್ಸ್ ಹಾಗೂ ಪ್ರಭಾಸ್ ಇಬ್ಬರೂ ನಡುವಿನ ಒಪ್ಪಂದ ಮೂರು ಸಿನಿಮಾ ಅನ್ನೋದು ಘೋಷಣೆಯಾಗಿದೆ ಅಷ್ಟೇ. ಆದರೆ, ಈ ಮೂರು ಸಿನಿಮಾಗಳಿಗೆ ಆದ ಒಡಂಬಡಿಕೆ ಏನು? ಅನ್ನೋದು ಮಾತ್ರ ಇನ್ನೂ ರಿವೀಲ್ ಆಗಿಲ್ಲ. ಪ್ರಭಾಸ್‌ಗೆ ಸಂಭಾವನೆ ರೂಪದಲ್ಲಿ ಹಣ ಕೊಡುತ್ತಿದ್ದಾರಾ? ಇಲ್ಲ ಪರ್ಸೆಂಟೇಜ್‌ ಲೆಕ್ಕದಲ್ಲಿ ಮಾತುಕತೆಯಾಗಿದೆಯೇ ಅನ್ನೋ ಗುಟ್ಟು ಇನ್ನೂ ರಟ್ಟಾಗಿಯೇ ಇದೆ.

More from Filmibeat

English summary
Big announcement: After Salaar Part 1 Hombale films collaborating three-picture with Prabhas
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X