Prashanth Neel: ಕರ್ನಾಟಕದಲ್ಲಿ 'ಉಗ್ರಂ', 'ಕೆಜಿಎಫ್'.. ತೆಲುಗು ರಾಜ್ಯಗಳಲ್ಲಿ 'ಸಲಾರ್'.. ವಿದೇಶದಲ್ಲಿ NTR 31?

ಪ್ರಶಾಂತ್ ನೀಲ್ ಸಿನಿಮಾಗಳನ್ನು ಕಣ್ಣು ಬಿಟ್ಟುಕೊಂಡು ಕಾದು ಕೂರುವಂತಹ ಸ್ಥಿತಿ ಇದೆ. 'ಕೆಜಿಎಫ್' ಸಿನಿಮಾ ಬಳಿಕ ಪ್ರಶಾಂತ್ ನೀಲ್ ಆ ಮಟ್ಟಿಗೆ ಸಿನಿಪ್ರಿಯರನ್ನು ಸೆಳೆದು ಬಿಟ್ಟಿದ್ದಾರೆ. ಹೀಗಾಗಿ 'ಸಲಾರ್' ಸಿನಿಮಾ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.

ಆದರೆ, 'ಸಲಾರ್' ಟೀಸರ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಕೊಂಚ ಆತಂಕಕ್ಕೆ ಎಡೆ ಮಾಡಿಕೊಟ್ಟಿರೋದು ಅಷ್ಟೇ ನಿಜ. 'ಆದಿಪುರುಷ್' ಹೀನಾಯಾ ಸೋಲಿನ ಬಳಿಕ 'ಸಲಾರ್' ಮೇಲೆ ಎಲ್ಲರ ನಿರೀಕ್ಷೆಯಿತ್ತು. ಆದ್ರೀಗ ಸ್ವಲ್ಪ ನಿರಾಸೆಗೆ ಒಳಗಾದವರಂತೆ ಇದ್ದಾರೆ.

After Salaar Prashanth Neel will shoot his first movie in abroad with Jr.Ntr

ಈ ಬಿಟ್ಟಿರೋದು 'ಸಲಾರ್' ಟೀಸರ್ ಅಷ್ಟೇ. ಇನ್ನು ಟ್ರೈಲರ್ ಹಾಗೂ ಹಾಡುಗಳು ರಿಲೀಸ್ ಆಗೋದು ಬಾಕಿಯಿದೆ. ಇದರಲ್ಲಿ ಸಿನಿಮಾದ ಕಥೆಯೇನು ಅನ್ನೋದು ಗೊತ್ತಾಗುತ್ತೆ. ಅದಕ್ಕೂ ಮುನ್ನ ಮತ್ತೊಂದು ಸುದ್ದಿ ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ. 'ಸಲಾರ್' ಬಳಿಕ ಇದೇ ಮೊದಲ ಬಾರಿಗೆ ವಿದೇಶದಲ್ಲಿ ಶೂಟಿಂಗ್ ಮಾಡುತ್ತಿದ್ದಾರಂತೆ. ಅಷ್ಟಕ್ಕೂ ಏನಿದು ಸುದ್ದಿ? ಅಂತ ತಿಳಿಯೋಕೆ ಮುಂದೆ ಓದಿ.

ಮೊದಲ ಬಾರಿಗೆ ವಿದೇಶದಲ್ಲಿ ಶೂಟಿಂಗ್?

ಪ್ರಶಾಂತ್ ನೀಲ್ ಸಿನಿಮಾ ವಿದೇಶದಲ್ಲೆಲ್ಲಾ ಸದ್ದು ಮಾಡಿವೆ. 'ಉಗ್ರಂ', 'ಕೆಜಿಎಫ್' ಅಂತಹ ಸಿನಿಮಾಗಳನ್ನು ದಕ್ಷಿಣ ಭಾರತದಲ್ಲಿಯೇ ಚಿತ್ರೀಕರಣ ಮಾಡಿದ್ದರು. ಅಷ್ಟೇ ಯಾಕೆ ಈಗ ಶೂಟಿಂಗ್ ಮಾಡುತ್ತಿರುವ 'ಸಲಾರ್' ಕೂಡ ಆಂಧ್ರ ಹಾಗೂ ತೆಲಂಗಾಣದಲ್ಲಿಯೇ ಚಿತ್ರೀಕರಣ ಮಾಡುತ್ತಿದ್ದಾರೆ.

After Salaar Prashanth Neel will shoot his first movie in abroad with Jr.Ntr

ಪ್ರಶಾಂತ್ ನೀಲ್ ಇದೂವರೆಗೂ ನಿರ್ದೇಶಿಸಿದ ಬಹುತೇಕ ಸಿನಿಮಾಗಳು ದೊಡ್ಡ ದೊಡ್ಡ ಸೆಟ್ಟಿನಲ್ಲಿಯೇ ಶೂಟಿಂಗ್ ಆಗಿದೆ. ಅದು ಬಿಟ್ಟು ರಗಡ್ ಬ್ಯಾಕ್‌ ಡ್ರಾಪ್‌ನಲ್ಲಿ ಶೂಟಿಂಗ್ ಮಾಡಿದ್ದೇ ಹೆಚ್ಚು. ಆದ್ರೀಗ ಇದೇ ಮೊದಲ ಬಾರಿಗೆ ಸಂಪೂರ್ಣ ಸಿನಿಮಾವನ್ನು ವಿದೇಶದಲ್ಲಿ ಚಿತ್ರೀಕರಣ ಮಾಡುವುದಕ್ಕೆ ಸಜ್ಜಾಗಿದ್ದಾರೆ ಅನ್ನೋ ಸುದ್ದಿಯಿದೆ.

NTR 31 ವಿದೇಶದಲ್ಲೇ ಶೂಟಿಂಗ್?

'ಸಲಾರ್' ಮುಗಿಯುತ್ತಿದ್ದಂತೆ 'ಎನ್‌ಟಿಆರ್ 31' ಸಿನಿಮಾವನ್ನು ಕೈಗೆತ್ತಿಕೊಳ್ಳಲಿದ್ದಾರೆ. 2024ರಲ್ಲಿ 'NTR 31' ಆರಂಭ ಆಗಬೇಕಿತ್ತು. ಮೈತ್ರಿ ಮೂವಿ ಮೇಕರ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. 2024ರಲ್ಲಿ ಸೆಟ್ಟೇರಬೇಕಿದ್ದ ಸಿನಿಮಾ ಈಗ ಪೋಸ್ಟ್‌ಪೋನ್ ಆಗಿದೆ ಅನ್ನೋ ಮಾತು ಕೇಳಿ ಬರುತ್ತಿದೆ. ಈ ಮಧ್ಯೆ ಎನ್‌ಟಿಆರ್ ಅಭಿಮಾನಿಗಳನ್ನು ಥ್ರಿಲ್ಲಿಂಗ್ ಸುದ್ದಿಯೊಂದು ಸಿಕ್ಕಿದೆ.

'ಸಲಾರ್' ಸಿನಿಮಾ ಮುಗಿಯುತ್ತಿದ್ದಂತೆ ಪ್ರಶಾಂತ್ ನೀಲ್ 5 ತಿಂಗಳು ವಿದೇಶದಲ್ಲಿ ಕ್ಯಾಂಪ್ ಹಾಕಲಿದ್ದಾರೆ. ಎನ್‌ಟಿಆರ್ 31ಗೆ ಅಲ್ಲಿಂದಲೇ ಪ್ರಿ ಪ್ರೊಡಕ್ಷನ್ ಕೆಲಸ ನಡೆಯಲಿದೆ. ಅಲ್ಲದೆ ಇಡೀ ಸಿನಿಮಾವನ್ನು ವಿದೇಶದಲ್ಲಿಯೇ ಚಿತ್ರೀಕರಣ ಮಾಡುವ ಪ್ಲ್ಯಾನ್ ಪ್ರಶಾಂತ್ ನೀಲ್ ಬಳಿಯಿದೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಪ್ರಶಾಂತ್ ನೀಲ್ ಹಾಗೂ ನಿರ್ಮಾಣ ಸಂಸ್ಥೆ ಅಧಿಕೃತವಾಗಿ ಹೇಳಿಕೆ ಕೊಟ್ಟಿಲ್ಲ.

ಭಾರತ-ಪಾಕಿಸ್ತಾನ ಯುದ್ಧದ ಹಿನ್ನೆಲೆ

'ಎನ್‌ಟಿಆರ್ 31' ಸಿನಿಮಾದ ಬಗ್ಗೆನೂ ಇಂಟ್ರೆಸ್ಟಿಂಗ್ ಸುದ್ದಿಯೊಂದು ಓಡಾಡುತ್ತಿದೆ. ಟಾಲಿವುಡ್ ಮೂಲಗಳ ಪ್ರಕಾರ, ಈ ಕಥೆ ಭಾರತ ಹಾಗೂ ಪಾಕಿಸ್ತಾನದ ಯುದ್ಧಕ್ಕೆ ಸಂಬಂಧಿಸಿದ್ದು, ಎರಡು ದೇಶಗಳ ಗಡಿಗೆ ಸಂಬಂಧಿಸಿದ ಸಿನಿಮಾ ಆಗಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ.

ಈ ಸಿನಿಮಾ ಪ್ರಿಯಾಂಕಾ ಚೋಪ್ರಾ ಜೋನಸ್‌ರನ್ನು ಪ್ರಮುಖ ಪಾತ್ರಕ್ಕಾಗಿ ಕರೆದುಕೊಂಡು ಬರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಸದ್ಯ ಪ್ರಶಾಂತ್ ನೀಲ್ 'ಸಲಾರ್' ಸಿನಿಮಾದ ಬಿಡುಗಡೆ ಹಾಗೂ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ಹಿಂದೆನೇ 'ಸಲಾರ್ 2' ಶೂಟಿಂಗ್ ಬಿಡುಗಡೆ ಅಂತ ಕಳೆದು ಹೋಗುವ ಸಾಧ್ಯತೆಯಿದೆ. ಈ ಬೆನ್ನಲ್ಲೇ NTR 31 ಬಗ್ಗೆನೂ ಸುದ್ದಿಯಾಗುತ್ತಿದೆ.

More from Filmibeat

English summary
After Salaar Prashanth Neel will shoot his first movie in abroad with Jr.Ntr, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X