ಶರತ್ ಬಾಬು ನಿಧನದ ಬಳಿಕ ಆಸ್ತಿ ವಿಚಾರಕ್ಕೆ ಕುಟುಂಬದ ನಡುವೆ ಬಿರುಕು? ಸಹೋದರಿ ಪ್ರತಿಕ್ರಿಯೆ ಏನು?

ಬಹುಭಾಷಾ ನಟ ಶರತ್ ಬಾಬು ಅವರದ್ದು ದೊಡ್ಡ ಕುಟುಂಬ. ಶ್ರೀಕಾಕುಳಂ ಜಿಲ್ಲೆಯವರಾದ ಶರತ್ ಬಾಬು ಅವರಿಗೆ ಏಳು ಸಹೋದರರು ಹಾಗೂ ಐದು ಸಹೋದರಿಯರು. ಇವರಲ್ಲಿ ಶರತ್ ಬಾಬು ನಾಲ್ಕನೆಯವರು.

ಶರತ್ ಸುಮಾರು 50 ವರ್ಷಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದರು. ಸುಮಾರು 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೆ ಶರತ್ ಬಾಬು ಸಿನಿಮಾ ರಂಗಕ್ಕೆ ಬರುವುದಕ್ಕೆ ಮುನ್ನವೇ ಸ್ಥಿತಿವಂತರಾಗಿದ್ದರು. ಹಾಗೇ ಸಿನಿಮಾದಲ್ಲಿ ನಟಿಸುವುದಕ್ಕೆ ಶುರು ಮಾಡಿದ ಬಳಿಕ ಶರತ್ ಬಾಬು ಆಸ್ತಿಯಲ್ಲಿ ಏರಿಕೆಯಾಗಿದೆ ಎಂದು ವರದಿಯಾಗಿದೆ.

After Sarath Babus death, his sister Saritha reacted to family disputes over property deeds

ಮೇ 22 ರಂದು ಇದೇ ಶರತ್ ಬಾಬು ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ. ಆದರೆ, ಅಷ್ಟರೊಳಗೆ ಕುಟುಂಬದಲ್ಲಿ ಆಸ್ತಿ ವಿಚಾರಕ್ಕೆ ಕಿತ್ತಾಟ ಶುರುವಾಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮಾಧ್ಯಮವೊಂದಕ್ಕೆ ಶರತ್ ಬಾಬು ಸಹೋದರಿ ಸರಿತಾ ಪ್ರತಿಕ್ರಿಯೆ ನೀಡಿದ್ದು, ಜೋರಾಗಿ ಚರ್ಚೆಯಾಗುತ್ತಿದೆ.

"ಶರತ್ ಬಾಬು ವೈಯಕ್ತಿಕ ಜೀವನ ಚೆನ್ನಾಗಿರಲಿಲ್ಲ"

ಶರತ್ ಬಾಬುಗೆ ವೃತ್ತಿ ಬದುಕಿನಲ್ಲಿ ದೊಡ್ಡ ಯಶಸ್ಸು ಸಿಕ್ಕಿತ್ತು. ತೆಲುಗು ಕನ್ನಡ ಹಾಗೂ ತಮಿಳು ಭಾಷೆಗಳಲ್ಲಿ ಇವರಿಗೆ ಅಪಾರ ಅಭಿಮಾನಿಗಳು ಇದ್ದಾರೆ. ಆದರೆ, ಇವರ ವೈಯಕ್ತಿಕ ಜೀವನ ಅಷ್ಟೊಂದು ಚೆನ್ನಾಗಿರಲಿಲ್ಲ. ವಯಸ್ಸಿನಲ್ಲಿ ತನಗಿಂತ ನಾಲ್ಕು ವರ್ಷ ದೊಡ್ಡವರಾಗಿದ್ದ ನಟಿ ರಮಾಪ್ರಭಾ ಅವರೊಂದಿಗೆ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇದ್ದರು. ಬಳಿಕ ಅವರನ್ನೇ ವಿವಾಹವಾಗಿದ್ದರು. ಆದರೆ, 14 ವರ್ಷಗಳ ಬಳಿಕ ಇಬ್ಬರ ನಡುವಿನ ಭಿನ್ನಾಭಿಪ್ರಾಯದಿಂದ ಬೇರೆಯಾದರು.

After Sarath Babus death, his sister Saritha reacted to family disputes over property deeds

ಶರತ್ ಬಾಬು ಬಳಿಕ ತಮಿಳು ನಟ ನಂಬಿಯಾರ್ ಪುತ್ರಿ ಸ್ನೇಹಲತಾರನ್ನು ವಿವಾಹವಾದರು. ಆದರೆ, ಅವರಿಗೆ ಮಕ್ಕಳಾಗಲಿಲ್ಲ. ಹೀಗಾಗಿ ಶರತ್ ಬಾಬು ಅಗಲಿದ ಬಳಿಕ ಅವರ ಆಸ್ತಿಗೆ ವಾರಸುದಾರರು ಯಾರು ಎಂಬ ಚರ್ಚೆ ಶುರುವಾಗಿದೆ. ಇದೇ ವಿಚಾರಕ್ಕೆ ಕುಟುಂಬದ ನಡುವೆ ಕಿತ್ತಾಟ ಶುರುವಾಗಿದೆ ಎಂದೂ ಹೇಳಲಾಗುತ್ತಿದೆ.

ಆಸ್ತಿಗೆ ವಾರಸುದಾರರು ಯಾರು?

ಶರತ್ ಬಾಬು ಅವರ ಆಸ್ತಿ ವಿಚಾರಕ್ಕೆ ಕುಟುಂಬದಲ್ಲಿ ಗದ್ದಲ ಶುರುವಾಗಿದೆ ಅನ್ನೋ ಸುದ್ದಿ ಹಬ್ಬಿದೆ. ಶರತ್ ಬಾಬು ಮೂರು ಬಾರಿ ಮದುವೆ ಆಗಿದ್ದರು. ಆದರೂ, ಅವರಿಗೆ ಮಕ್ಕಳಾಗಲಿಲ್ಲ. ಹೀಗಾಗಿ ಸಹೋದರರ ಮಕ್ಕಳನ್ನೇ ತನ್ನ ಮಕ್ಕಳೆಂದು ಭಾವಿಸಿದ್ದರು.

ಶರತ್ ಬಾಬು ತಮ್ಮ ಪಾಲಿನ ಆಸ್ತಿಯನ್ನು 13 ಭಾಗಗಳಾಗಿ ಸಹೋದರರ ಮಕ್ಕಳಿಗೆ ಹಂಚಲಾಗಿದೆ. ಆದರೂ, ತಮ್ಮ ಅವರ ಹೆಸರಿನಲ್ಲಿ ಇನ್ನೂ ಹಲವು ಪ್ರಾಪರ್ಟಿಗಳು ಇವೆ. ಹೈದರಾಬಾದ್, ಚೆನ್ನೈ, ಬೆಂಗಳೂರುನಲ್ಲಿ ಆಸ್ತಿ ಹೊಂದಿದ್ದು, ಆ ವಿಚಾರಕ್ಕೆ ಕಿತ್ತಾಟ ಶುರುವಾಗಿದೆ ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಆಸ್ತಿಗಾಗಿ ಕಿತ್ತಾಟ.. ಸರಿತಾ ಹೇಳಿದ್ದೇನು?

ಶರತ್ ಬಾಬು ನಿಧನದ ಬಳಿಕ ಅವರ ಸಹೋದರಿ ಸರಿತಾರನ್ನು ಮಾಧ್ಯವೊಂದು ಸಂದರ್ಶನ ಮಾಡಿದೆ. ಆ ವೇಳೆ ಸರಿತಾ ಅವರಿಗೆ ಶರತ್ ಬಾಬು ಅವರ ಆಸ್ತಿಯ ಬಗ್ಗೆ ಪ್ರಸ್ತಾಪ ಮಾಡಲಾಗಿತ್ತು. ಈ ಪ್ರಶ್ನೆಗೆ ಸರಿತಾ " ಆ ಬಗ್ಗೆ ನನಗೆ ಏನೂ ಗೊತ್ತಿಲ್ಲ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಶರತ್ ಬಾಬು ಸಹೋದರಿಯ ಮಕ್ಕಳನ್ನು ತನ್ನ ಮಕ್ಕಳೆಂದೇ ಭಾವಿಸಿದ್ದರು. ಅಲ್ಲದೆ ತನ್ನ ಮಗಳ ಮದುವೆಯನ್ನು ಅವರೇ ಮುಂದೆ ನಿಂತು ಮಾಡಿದ್ದರು. ಎಲ್ಲರ ಮಕ್ಕಳನ್ನು ತನ್ನ ಮಕ್ಕಳು ಎಂದೇ ಭಾವಿಸಿದ್ದರು. ಎಂದು ಸ್ವತ: ಸರಿತಾ ಅವರೇ ಆ ಸಂದರ್ಶನದಲ್ಲಿ ಹೇಳಿದ್ದಾರೆ.

More from Filmibeat

English summary
After Sarath Babu's death, his sister reacted to family disputes over property deeds, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X