ವಿಜಯ್ ದೇವರಕೊಂಡ ಬಳಿಕ ಮತ್ತೊಬ್ಬ ಟಾಲಿವುಡ್‌ ಹೀರೊ ಬಾಲಿವುಡ್‌ಗೆ ಎಂಟ್ರಿ?

ಇತ್ತೀಚೆಗೆ ದಕ್ಷಿಣ ಭಾರತದ ಹೀರೊಗಳ ಕಣ್ಣು ಬಾಲಿವುಡ್ ಮೇಲೆ ಬಿದ್ದಿದೆ. ಪ್ಯಾನ್ ಇಂಡಿಯಾ ಸಿನಿಮಾದಿಂದ ಬಾಲಿವುಡ್‌ ಬಾಕ್ಸಾಫೀಸ್‌ಗೆ ಲಗ್ಗೆ ಇಟ್ಟಿರೋ ದಕ್ಷಿಣದ ಸ್ಟಾರ್ ನಟರು ಒಂದ್ಕಡೆಯಾದರೆ, ಅದೇ ಇನ್ನೊಂದು ಕಡೆ ಬಾಲಿವುಡ್‌ ಸಿನಿಮಾದಿಂದಲೇ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿ ನಿಂತಿದ್ದಾರೆ.

ಸದ್ಯ ಟಾಲಿವುಡ್‌ನಲ್ಲಿ ಬಿಸಿ ಬಿಸಿ ಸುದ್ದಿಯೊಂದು ಓಡಾಡುತ್ತಿದೆ. ಅಕ್ಕಿನೇನಿ ಕುಟುಂಬ ಕುಡಿ ಬಾಲಿವುಡ್‌ಗೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದೆ ಎನ್ನಲಾಗಿದೆ. ಟಾಲಿವುಡ್‌ ಕಿಂಗ್ ನಾಗಾರ್ಜುನಾ ಅವರ ಎರಡನೇ ಪುತ್ರ ಅಖಿಲ್ ಅಕ್ಕಿನೇನಿ ಬಾಲಿವುಡ್‌ ಪ್ರವೇಶಕ್ಕೆ ವೇದಿಕೆ ಸಜ್ಜಾಗುತ್ತಿದೆ ಅನ್ನೋ ಮಾತು ಕೇಳಿ ಬರುತ್ತಿದೆ.

ಕರಣ್ ಜೋಹರ್ ಭೇಟಿ ಮಾಡಿದ ನಾಗಾರ್ಜುನಾ

ಅಷ್ಟಕ್ಕೂ ಅಖಿಲ್ ಅಕ್ಕಿನೇನಿ ಬಾಲಿವುಡ್ ಪ್ರವೇಶದದ ಬಗ್ಗೆ ಟಾಲಿವುಡ್‌ನಲ್ಲಿ ಸುದ್ದಿ ಹಬ್ಬುತ್ತಿರೋದಕ್ಕೆ ಕಾರಣವಿದೆ. ಇತ್ತೀಚೆಗೆ ನಾಗಾರ್ಜುನಾ ಬಾಲಿವುಡ್‌ನ ಸ್ಟಾರ್ ನಿರ್ದೇಶಕ ಕರಣ್ ಜೋಹರ್ ಕಚೇರಿಗೆ ಭೇಟಿ ನೀಡಿದ್ದರು. ಎರಡನೇ ಪುತ್ರನ ಬಾಲಿವುಡ್‌ ಎಂಟ್ರಿ ಬಗ್ಗೆ ಮಾತಾಡಲೆಂದೇ ಕರಣ್‌ ಜೋಹರ್ ಭೇಟಿ ಮಾಡಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ.

After Vijay Devarakonda Akhil Akkineni Will Make Bollywood Debut For Karan Johar Movie

ನಾಗಾರ್ಜುನಾ ಪುತ್ರ ಅಖಿಲ್ ಅಕ್ಕಿನೇನಿಯನ್ನು ಕರಣ್‌ ಜೋಹರ್ ಬಾಲಿವುಡ್‌ಗೆ ಇಂಟ್ರುಡ್ಯೂಸ್ ಮಾಡಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಇದಕ್ಕಾಗಿ ಈಗಾಗಲೇ ಪೂರ್ವ ತಯಾರಿಗಳು ಆರಂಭ ಆಗಿದ್ದು, ಅಧಿಕೃತ ಮಾಹಿತಿ ಹೊರಬೀಳಬೇಕಿದೆ ಎನ್ನುತ್ತಿದೆ ಟಾಲಿವುಡ್.

ವಿಜಯ್ ದೇವರಕೊಂಡ ಪರಿಚಯಿಸಿದ್ದ ಕರಣ್

ಸ್ಟಾರ್ ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯಿಸುವುದರಲ್ಲಿ ಕರಣ್‌ ಜೋಹರ್ ಎಕ್ಸ್‌ಪರ್ಟ್ ಅನ್ನೋದು ಗೊತ್ತೇ ಇದೆ. ಇತ್ತೀಚೆಗೆಷ್ಟೇ ಟಾಲಿವುಡ್‌ನ ಯಂಗ್ ಹೀರೊ ವಿಜಯ್ ದೇವರಕೊಂಡರನ್ನು ಬಾಲಿವುಡ್‌ ಇಂಟ್ರುಡ್ಯೂಸ್ ಮಾಡಿದ್ದರು. ಆದರೆ, ಟೇಕಾಫ್ ಸರಿಯಾಗಿ ಆಗಲಿಲ್ಲ ಅಷ್ಟೇ.

After Vijay Devarakonda Akhil Akkineni Will Make Bollywood Debut For Karan Johar Movie

ವಿಜಯ್ ದೇವರಕೊಂಡ ಅಭಿನಯಿಸಿದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿದೆ. 'ಲೈಗರ್' ಬಿಡುಗಡೆಯಾದ ಕ್ಷಣದಿಂದಲೇ ನೆಗೆಟಿವ್ ರಿಪೋರ್ಟ್‌ಗಳು ಬಂದಿದ್ದವು. ಹೀಗಾಗಿ ಕರಣ್ ಜೋಹರ್ ವಿಜಯ್ ದೇವರಕೊಂಡನನ್ನು ಬಾಲಿವುಡ್‌ನಲ್ಲಿ ಲಾಂಚ್ ಮಾಡುವಲ್ಲಿ ಸೋತಿದ್ದಾರೆ. ಆದರೂ, ಈ ಬಾರಿ ಮತ್ತೊಬ್ಬ ದಿಗ್ಗಜನ ಮಗನನ್ನು ಅದ್ದೂರಿಯಾಗಿಯೇ ಇಂಟ್ರು ಡ್ಯೂಸ್ ಮಾಡಲಿದ್ದಾರೆ ಎನ್ನಲಾಗಿದೆ.

ಬಿಡುಗಡೆಗೆ ರೆಡಿಯಾಗಿದೆ 'ಎಜೆಂಟ್'

ಅಖಿಲ್ ಅಕ್ಕಿನೇನಿ ನಟಿಸಿದ ತೆಲುಗು ಸಿನಿಮಾಗಳು ಯಾವುದೂ ಬ್ಲಾಕ್ ಬಸ್ಟರ್ ಲಿಸ್ಟ್ ಸೇರಿಲ್ಲ. ಸದ್ಯ ಹೊಸ ಸಿನಿಮಾ 'ಏಜೆಂಟ್' ಸಿನಿಮ ಬಿಡುಗಡೆಗೆ ಸಜ್ಜಾಗಿ ನಿಂತಿದೆ. ಸುರೇಂದರ್ ರೆಡ್ಡಿ ನಿರ್ದೇಶನದ ಈ ಸಿನಿಮಾ ತುಣುಕುಗಳು ಈಗಾಗಲೇ ಹಲ್‌ಚಲ್ ಎಬ್ಬಿಸಿವೆ.

'ಏಜೆಂಟ್' ಸಿನಿಮಾ ಗಮನ ಸೆಳೆಯುವುದಕ್ಕೆ ಮತ್ತೊಂದು ಕಾರಣವಿದೆ. ಅಖಿಲ್ ಅಕ್ಕಿನೇನಿ ಜೊತೆ ಮಲಯಾಳಂ ಸೂಪರ್‌ಸ್ಟಾರ್ ಮಮ್ಮುಟ್ಟಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ 'ಏಜೆಂಟ್' ಸಿನಿಮಾ ಬಾಲಿವುಡ್‌ ಮಂದಿಯ ಗಮನ ಸೆಳೆದರೆ, ಅಖಿಲ್ ಗೆದ್ದಂತೆ.

More from Filmibeat

English summary
Akhil Akkineni Will Make Bollywood Debut On Karan Johar Movie, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X