ಯಶ್ ಆಯ್ತು.. ವಿಜಯ್ ಆಯ್ತು.. ಅಕ್ಷಯ್ ಆಯ್ತು.. ಈಗ ಮೆಗಾಸ್ಟಾರ್‌; ತೆಲುಗಿಗೆ ಕೆವಿಎನ್ ಎಂಟ್ರಿ

ಮೆಗಾ ಸ್ಟಾರ್ ಚಿರಂಜೀವಿ ಇತ್ತೀಚೆಗಷ್ಟೇ 70ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವೇಳೆ ಹೊಸ ಹೊಸ ಸಿನಿಮಾಗಳು ಅನೌನ್ಸ್ ಆಗಿದ್ದವು. ಅವುಗಳಲ್ಲಿ ಕನ್ನಡದ ದುಬಾರಿ ಸಿನಿಮಾಗಳ ನಿರ್ಮಾಣ ಸಂಸ್ಥೆ ಕೆವಿಎನ್ ನಿರ್ಮಿಸಲು ಹೊರಟಿರುವ ಪ್ರಾಜೆಕ್ಟ್ ಕೂಡ ಒಂದು. ಈ ಮೂಲಕ ಕೆವಿಎನ್ ಸಂಸ್ಥೆ ಅಧಿಕೃತವಾಗಿ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಂತೆ ಆಗಿದೆ.

70ನೇ ವಯಸ್ಸಿನಲ್ಲೂ ಮೆಗಾಸ್ಟಾರ್ ಚಿರಂಜೀವಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಒಂದರ ಹಿಂದೊಂದು ಸಿನಿಮಾಗಳನ್ನು ಒಪ್ಪಿಕೊಂಡು ಯುವ ನಟರಿಗ್ಯಾಕೆ, ಸ್ವತ: ತಮ್ಮ ಪುತ್ರ ರಾಮ್ ಚರಣ್‌ಗೆ ಪೈಪೋಟಿ ನೀಡುತ್ತಿದ್ದಾರೆ. ತೆಲುಗಿನ ಯುವ ನಟರಿಗೂ ಇಷ್ಟೊಂದು ಬೇಡಿಕೆ ಇಲ್ಲ. ಆ ಮಟ್ಟಿಗೆ ಮೆಗಾಸ್ವಾರ್‌ಗೆ ಬೇಡಿಕೆ ಇದೆ. ಈಗ ಚಿರಂಜೀವಿ 158ನೇ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಆ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದ್ದಾರೆ.

After Yash s Toxic Vijay s Jananayagan Maker KVN Productions Joins Hands with Megastar Chiranjeevi

ಚಿರಂಜೀವಿ ಹುಟ್ಟುಹಬ್ಬದ ಸಂಭ್ರಮದಲ್ಲಿ ಕೆವಿಎನ್‌ ಪ್ರೊಡಕ್ಷನ್ಸ್ ಫ್ಯಾನ್ಸ್‌ಗೆ ಸರ್ಪ್ರೈಸ್ ಕೊಟ್ಟಿದೆ. ಕನ್ನಡ ಚಿತ್ರಗಳಿಂದ ಸಿನಿಮಾ ನಿರ್ಮಾಣ ಹಾಗೂ ವಿತರಣೆಯಲ್ಲಿ ದೊಡ್ಡ ಹೆಸರು ಮಾಡಿರುವ ಕೆವಿಎನ್‌ ಸಂಸ್ಥೆ ಬಿಗ್ ಪ್ರಾಜೆಕ್ಟ್‌ಗಳಿಗೆ ಕೈ ಹಾಕಿದೆ. ಈಗಾಗಲೇ ಸೂಪರ್‌ಸ್ಟಾರ್‌ಗಳ ಪ್ರಾಜೆಕ್ಟ್‌ಗಳು ನಿರ್ಮಾಣ ಹಂತದಲ್ಲಿವೆ. ಆಗಲೇ ಮತ್ತೊಂದು ಮೆಗಾ ಪ್ರಾಜೆಕ್ಟ್‌ಗೆ ಕೈ ಹಾಕಿದ್ದು ಸಿನಿಮಾ ಮಂದಿಯಲ್ಲಿ ಅಚ್ಚರಿ ಮೂಡಿಸಿವೆ.

ಕನ್ನಡ ಅಷ್ಟೇ ಅಲ್ಲ, ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾಗಿ ಕೆವಿಎನ್‌ ಪ್ರೊಡಕ್ಷನ್ಸ್ ಹೊರ ಹೊಮ್ಮಿದೆ. ಕನ್ನಡದಿಂದ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿತ್ತು. ಅಲ್ಲಿಂದ ಬಾಲಿವುಡ್‌ ಪ್ರಾಜೆಕ್ಟ್ ಅನ್ನು ಅನೌನ್ಸ್ ಮಾಡಿದೆ. ಈಗ ಮೆಗಾಸ್ಟಾರ್‌ ಚಿರಂಜೀವಿಗೆ ಸಿನಿಮಾ ನಿರ್ಮಾಣ ಮಾಡುವ ಮೂಲಕ ತೆಲುಗು ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದೆ. ಈಗ ಕೇವಲ ಪ್ರಾಜೆಕ್ಟ್ ಅನ್ನಷ್ಟೇ ಅನೌನ್ಸ್ ಮಾಡಲಾಗಿದೆ. ಆದರೆ, ಇನ್ನೂ ಟ್ರೈಟಲ್, ಸ್ಟಾರ್‌ಕಾಸ್ಟ್ ಇದ್ಯಾವುದರ ಬಗ್ಗೆನೂ ಸುಳಿವು ಬಿಟ್ಟುಕೊಟ್ಟಿಲ್ಲ.

ಈ ಹಿಂದೆ ಮೆಗಾಸ್ಟಾರ್ ಚಿರಂಜೀವಿಗಾಗಿ 'ವಾಲ್ತೇರು ವೀರಯ್ಯ' ಸಿನಿಮಾ ನಿರ್ಮಾಣ ಮಾಡಿದ್ದ ಬಾಬಿ ಕೊಲ್ಲಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. 'ವಾಲ್ತೇರು ವೀರಯ್ಯ' ಸಿನಿಮಾ ಗೆದ್ದ ಬೆನ್ನಲ್ಲೇ ಮತ್ತೊಮ್ಮೆ ಚಿರುಗೆ ಆಕ್ಷನ್ ಕಟ್ ಹೇಳಲಿದ್ದಾರೆ. ಆ ಸಿನಿಮಾವನ್ನು ಕೆವಿಎನ್‌ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದೆ. ಈ ಸಿನಿಮಾ ಕೂಡ ದುಬಾರಿ ಬಜೆಟ್‌ನಲ್ಲಿಯೇ ನಿರ್ಮಾಣ ಮಾಡುವುದಕ್ಕೆ ನಿರ್ಧಾರ ಮಾಡಲಾಗಿದೆ.

After Yash s Toxic Vijay s Jananayagan Maker KVN Productions Joins Hands with Megastar Chiranjeevi

ಚಿರಂಜೀವಿ ಹಾಗೂ ಬಾಬಿ ಕೊಲ್ಲಿ ಕಾಂಬಿನೇಷನ್ ಸಿನಿಮಾವನ್ನು ಕೆವಿಎನ್‌ ಸಂಸ್ಥೆ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಮಾಡುವುಕ್ಕೆ ನಿರ್ಧರಿಸಿದೆ. ಮುಂಬರುವ ದಸರಾ ಹಬ್ಬಕ್ಕೆ ಈ ಸಿನಿಮಾವನ್ನು ಲಾಂಚ್ ಮಾಡುವುದಕ್ಕೆ ನಿರ್ಮಾಣ ಸಂಸ್ಥೆ ನಿರ್ಧರಿಸಿದೆ. ಹಾಗೇ ಡಿಸೆಂಬರ್‌ ತಿಂಗಳಿನಿಂದ ಮೆಗಾಸ್ಟಾರ್ 158ನೇ ಸಿನಿಮಾದ ಶೂಟಿಂಗ್ ಆರಂಭ ಆಗಲಿದೆ.

ಕೆವಿಎನ್‌ ಪ್ರೊಡಕ್ಷನ್‌ನ ದುಬಾರಿ ಸಿನಿಮಾಗಳನ್ನು ಒಂದರ ಹಿಂದೊಂದು ನಿರ್ಮಾಣ ಮಾಡುತ್ತಿದೆ. ಧ್ರುವ ಸರ್ಜಾ ಹಾಗೂ ಪ್ರೇಮ್ ಕಾಂಬಿನೇಷನ್‌ನ 'ಕೆಡಿ' ಬಿಡುಗಡೆಯಾಗಬೇಕಿದೆ. ಯಶ್‌ ಜೊತೆ ಸೇರಿ 'ಟಾಕ್ಸಿಕ್' ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಹಾಗೇ ದಳಪತಿ ವಿಜಯ್ ನಟಿಸುತ್ತಿರುವ ಕೊನೆಯ ಸಿನಿಮಾ 'ಜನ ನಾಯಗನ್' ನಿರ್ಮಾಣ ಹಂತದಲ್ಲಿದೆ. ಅಷ್ಟೇ ಅಲ್ಲದೆ, ಅಕ್ಷಯ್ ಕುಮಾರ್ ಸಿನಿಮಾ ನಿರ್ಮಾಣದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದೆ.

More from Filmibeat

English summary
After producing Vijay’s Jananayagan and Yash’s Toxic, KVN Productions is now collaborating with Megastar Chiranjeevi for their next big project. Here’s everything we know about the exciting new film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X