ಪ್ರಭಾಸ್ ಜಾತಕದಲ್ಲಿ ದೋಷ.. ಡಾರ್ಲಿಂಗ್ ಬಗ್ಗೆ ವೇಣುಸ್ವಾಮಿ ಶಾಕಿಂಗ್ ಕಾಮೆಂಟ್ಸ್; ಫ್ಯಾನ್ಸ್‌ಗೆ ಆತಂಕವೇಕೆ?

ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಈಗ ಫ್ಯಾನ್ ಇಂಡಿಯಾ ಸೂಪರ್‌ಸ್ಟಾರ್. ಇವರ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ನೂರಾರು ಕೋಟಿ ಲೂಟಿ ಮಾಡುತ್ತವೆ. ಆದರೆ, 'ಬಾಹುಬಲಿ' ಬಳಿಕ ಪ್ರಭಾಸ್ ಸಿನಿಮಾಗಳು ಒಂದೊಂದು ಮಖಾಡೆ ಮಲಗಿದ್ದು ಗೊತ್ತೇ ಇದೆ. ಮೂರು ಬಿಗ್‌ಬಜೆಟ್ ಸಿನಿಮಾಗಳು ಒಂದರ ಹಿಂದೊಂದು ಸೋಲುಂಡಿದ್ದವು. ಈಗ 'ಸಲಾರ್' ಮೂಲಕ ಮತ್ತೆ ಯಶಸ್ಸಿನ ರುಚಿ ಕಂಡಿದ್ದಾರೆ.

ಅತೀ ಕಡಿಮೆ ಸಮಯದಲ್ಲಿ ಪ್ರಭಾಸ್ ಟಾಲಿವುಡ್‌ನ ಸ್ಟಾರ್ ನಟನಾಗಿ ಹೊರಹೊಮ್ಮಿದ್ದರು. 'ಬಾಹುಬಲಿ' ಸಿನಿಮಾ ಮೆಗಾ ಬ್ಲಾಕ್‌ ಬಸ್ಟರ್ ಆದ್ಮೇಲಂತೂ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸ್ಟಾರ್ ಆದರು. ಇಲ್ಲಿಂದ ಡಾರ್ಲಿಂಗ್ ನಟಿಸಿದ 'ಸಾಹೋ', 'ರಾಧೆ ಶ್ಯಾಮ್', 'ಆದಿಪುರುಷ್' ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸೋತಿದ್ದವು. ಇಲ್ಲಿಂದ ಟಾಲಿವುಡ್‌ನ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಯಂಗ್ ರೆಬೆಲ್ ಸ್ಟಾರ್ ಹಿಂದೆ ಬಿದ್ದಿದ್ದಾರೆ.

Again tollywood astrologer Venu Swamy commented on Prabhas Movies

ವೇಣು ಸ್ವಾಮಿ ಟಾಲಿವುಡ್‌ ಸೆಲೆಬ್ರೆಟಿಗಳ ಫೇವರಿಟ್. ತಾರೆಯರ ಬಗ್ಗೆ ಇವರು ನುಡಿದ ಭವಿಷ್ಯಗಳು ನಿಜವಾಗಿವೆ. ಹೀಗಾಗಿ ತೆಲುಗು ತಾರೆಯರ ಬಗ್ಗೆ ಆಗಾಗ ಒಂದು ಸೆನ್ಸೇಷನ್ ಕಮೆಂಟ್‌ಗಳನ್ನು ಮಾಡುತ್ತಲೇ ಇರುತ್ತಾರೆ. ಈ ಹಿಂದೆ ಪ್ರಭಾಸ್ ಜಾತಕದ ಬಗ್ಗೆ ಹೇಳಿ, ಅಭಿಮಾನಿಗಳ ಟೀಕೆಗೆ ಒಳಗಾಗಿದ್ದರು. ಈಗ ಮತ್ತೊಮ್ಮೆ ವೇಣು ಸ್ವಾಮಿ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಭವಿಷ್ಯದ ಬಗ್ಗೆ ಶಾಕಿಂಗ್ ಕಮೆಂಟ್ ಮಾಡಿದ್ದಾರೆ.

ಪ್ರಭಾಸ್ ಇಷ್ಟು ದಿನ ಸೋಲಿನ ಸುಳಿಗೆ ಸಿಲುಕಿದ್ದರು. 'ಬಾಹುಬಲಿ' ಸೀರಿಸ್‌ನಿಂದ ಗಳಿಸಿದ ಹೆಸರು ನಿಧಾನವಾಗಿ ಕ್ಷಿಣಿಸುತ್ತಿವೆಯೇನೋ? ಎಂಬ ಪ್ರಶ್ನೆ ಮೂಡುವುದಕ್ಕೆ ಶುರುವಾಗಿತ್ತು. ಆಗಲೇ ಪ್ರಭಾಸ್ ಜಾತಕದ ಬಗ್ಗೆ ಟಾಲಿವುಡ್ ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ ನುಡಿದಿದ್ದರು. ಪ್ರಭಾಸ್ ವೈಯಕ್ತಿಕ ಜೀವನದ ಬಗ್ಗೆನೂ ಹಲವು ಬಾರಿ ಮಾತಾಡಿದ್ದರು.

ಪ್ರಭಾಸ್ ಜಾತಕದ ಪ್ರಕಾರ, ಅವರಿಗೆ ಮದುವೆ ಆಗುವುದಿಲ್ಲ. ಮುಂದಿನ ದಿನಗಳಲ್ಲಿ ಅವರಿಗೆ ಆರೋಗ್ಯ ಸಮಸ್ಯೆ ಎದುರಾಗಲಿದೆ. ಪ್ರಭಾಸ್ ಅದೃಷ್ಟದ ದಿನಗಳು ಮುಗೀತು. ಇನ್ಮುಂದೆ ಅವರ ಸಿನಿಮಾಗಳು ಗೆಲ್ಲುವುದಿಲ್ಲ ಎಂದೆಲ್ಲ ಭವಿಷ್ಯ ನುಡಿದಿದ್ದರು. ಹಾಗೇ ಪ್ರಭಾಸ್ ನಟಿಸಿದ ಈ ಹಿಂದಿನ ಸಿನಿಮಾಗಳ ಭವಿಷ್ಯವನ್ನು ನುಡಿದಿದ್ದರು. ವಿವಾದಾತ್ಮಕ ಸಿನಿಮಾ 'ಆದಿಪುರುಷ' ಬಾಕ್ಸಾಫೀಸ್‌ನಲ್ಲಿ ಗೆಲ್ಲುವುದಿಲ್ಲ ಎಂದಿದ್ದರು. ಅದು ಕೂಡ ನಿಜ ಆಗಿತ್ತು.

Again tollywood astrologer Venu Swamy commented on Prabhas Movies

ಹಾಗೇ 'ಸಲಾರ್' ಕೂಡ ಗೆಲ್ಲುವುದಿಲ್ಲ ಎಂದು ಹೇಳಿದ್ದರು. ಆದರೆ, ವೇಣುಸ್ವಾಮಿಯ ಲೆಕ್ಕಾಚಾರಗಳೆಲ್ಲವೂ ಉಲ್ಟಾ ಆಗಿತ್ತು. ಈ ವೇಳೆ ವೇಣು ಸ್ವಾಮಿಯನ್ನು ಪ್ರಭಾಸ್ ಅಭಿಮಾನಿಗಳು ಇನ್ನಿಲ್ಲದಂತೆ ತರಾಟೆಗೆ ತೆಗೆದುಕೊಂಡಿದ್ದರು. ಆಗಲೂ ತಾನು ಹೇಳಿದ್ದರಲ್ಲಿ ಸುಳ್ಳಿಲ್ಲ. ತಾನು ಹೇಳಿದ್ದೆಲ್ಲವೂ ಸತ್ಯವೆಂದು ಪ್ರಭಾಸ್ ಅಭಿಮಾನಿಗಳಿಗೆ ತಿರುಗೇಟು ಕೊಟ್ಟಿದ್ದರು.

ಟಾಲಿವುಡ್ ಜ್ಯೋತಿಷಿ ವೇಣು ಸ್ವಾಮಿ ಮತ್ತೊಮ್ಮೆ ಪ್ರಭಾಸ್ ಜಾತಕದ ಬಗ್ಗೆ ಕಮೆಂಟ್ ಮಾಡಿದ್ದಾರೆ. ಅವರ ಜಾತಕದಲ್ಲಿ ದೋಷವಿದೆ. ಸಿನಿಮಾ ಅಷ್ಟೇ ಅಲ್ಲ. ಅವರ ವೈಯಕ್ತಿಕ ಜೀವನದಲ್ಲೂ ಸಾಕಷ್ಟು ಸಮಸ್ಯೆಗಳು ಮುಂದಿನ ದಿನಗಳಲ್ಲಿ ಎದುರಾಗುತ್ತವೆ" ಎಂದು ಹೇಳಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಪ್ರಭಾಸ್ ಆರೋಗ್ಯದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಟಾಲಿವುಡ್ ವಲಯದಲ್ಲಿ ಸಂಚಲನ ಮೂಡಿದೆ.

ಈ ಹಿಂದೆ ತಾನು ಹೇಳಿದಂತೆ 'ಆದಿಪುರುಷ್' ಸೋಲುತ್ತೆ ಅಂತ ಹೇಳಿದ್ದೆ, ಅದರಂತೆ ಸಿನಿಮಾ ಸೋತಿದೆ. ಹಾಗೇ 'ಸಲಾರ್' ಸಿನಿಮಾ ಅವರ ಅಭಿಮಾನಿಗಳು ಬಿಟ್ಟು ಬೇರೆ ಯಾರೂ ನೋಡುವುದಿಲ್ಲ ಎಂದು ಹೇಳಿದ್ದೆ. ಅವರ ಅಭಿಮಾನಿಗಳು ಬಿಟ್ಟು ಬೇರೆ ಯಾರೂ ಸಿನಿಮಾ ನೋಡಿಲ್ಲ ಎಂದಿದ್ದರು. ಈಗ ಮತ್ತೆ ಪ್ರಭಾಸ್ ಜಾತಕ ಚೆನ್ನಾಗಿಲ್ಲ. ಆರೋಗ್ಯ ಸಮಸ್ಯೆ ಎದುರಾಗುತ್ತವೆ ಎಂದಿದ್ದು ಅವರ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.

More from Filmibeat

English summary
Astrologer Venu Swamy shocking comment on Prabhas Movies:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X