ಅಣ್ಣನಿಗೆ 2ನೇ ಮದುವೆ.. ತಮ್ಮನಿಗೆ 2ನೇ ನಿಶ್ಚಿತಾರ್ಥ; ಅಕ್ಕಿನೇನಿ ಕುಟುಂಬದಲ್ಲಿ ಸಂಭ್ರಮವೋ ಸಂಭ್ರಮ!

ಅಕ್ಕಿನೇನಿ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ನಾಗಾರ್ಜುನಾ ಪುತ್ರ ನಾಗಚೈತನ್ಯ ಡಿಸೆಂಬರ್ ತಿಂಗಳಿನಲ್ಲಿ ಎರಡನೇ ವಾರಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಸಮಂತಾ ಜೊತೆಗಿನ ವಿಚ್ಛೇದನದ ಬಳಿಕ ನಾಗಚೈತನ್ಯ ಮತ್ತೊಮ್ಮೆ ಪ್ರೀತಿಯಲ್ಲಿ ಬಿದ್ದಿದ್ದರು. ಬಹುಭಾಷಾ ನಟಿ ಶೋಭಿಯಾ ಜೊತೆ ಸುತ್ತಾಡುತ್ತಿದ್ದ ನಾಗಚೈತನ್ಯ ಇಬ್ಬರ ಬಗ್ಗೆ ಗುಲ್ಲೆದಿದ್ದರೂ ಪ್ರತಿಕ್ರಿಯೆ ನೀಡಿರಲಿಲ್ಲ. ಕುಟುಂಬಸ್ಥರ ಎದುರು ನಿಶ್ಚಿತಾರ್ಥ ಮಾಡಿಕೊಂಡ ಬಳಿಕ ಅಧಿಕೃತವಾಗಿ ಅನೌನ್ಸ್ ಮಾಡಿದ್ದರು.

ಸದ್ಯ ಅಕ್ಕಿನೇನಿ ಕುಟುಂಬದಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ನಾಗಚೈತನ್ಯ ಹಾಗೂ ಶೋಭಿತಾ ಮದುವೆ ಅದ್ಧೂರಿಯಾ ಮಾಡುವುದಕ್ಕೆ ನಾಗಾರ್ಜುನ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಇನ್ನೊಂದು ತಮ್ಮ ಎರಡನೇ ಪುತ್ರ ಅಖಿಲ್ ಅಕ್ಕಿನೇನಿಯ ನಿಶ್ಚಿತಾರ್ಥವನ್ನು ಮಾಡಿದ್ದಾರೆ. ಈ ಗ್ಯಾಪ್‌ನಲ್ಲಿ ಎರಡನೇ ಮಗನ ನಿಶ್ಚಿತಾರ್ಥದ ಖುಷಿಯನ್ನು ಹಂಚಿಕೊಂಡಿದ್ದಾರೆ.

Ahead of Naga Chaitanya Sobhita wedding Akhil Akkineni Engaged to Zainab Ravdjee

ಒಂದ್ಕಡೆ ಮೊದಲನೇ ಮಗನ ಎರಡನೇ ಮದುವೆಗೆ ಸಿದ್ಧತೆಗಳು ನಡೆದಿವೆ. ಇನ್ನೊಂದು ಕಡೆ ಎರಡನೇ ಪುತ್ರನಿಗೆ ಎರಡನೇ ಬಾರಿ ನಿಶ್ಚಿತಾರ್ಥವನ್ನು ಮಾಡಲಾಗಿದೆ. ಈ ಮೂಲಕ ಅಕ್ಕಿನೇನಿ ಕುಟುಂಬದಲ್ಲಿ ಎರಡೆರಡು ಸಂಭ್ರಮಗಳು ಮನೆ ಮಾಡಿವೆ. ಒಂದ್ಕಡೆ ಮದುವೆ ಆಗಿದ್ದರೆ, ಇನ್ನೊಂದು ಕಡೆ ನಿಶ್ಚಿತಾರ್ಥ ನಡೆದಿದೆ. ಅಖಿಲ್ ಅಕ್ಕಿನೇನಿ ಕೂಡ ನಿಶ್ಚಿತಾರ್ಥ ಮಾಡಿಕೊಂಡ ಯುವತಿ ಯಾರು? ನಾಗಾರ್ಜುನ ಹೇಳಿದ್ದೇನು? ತಿಳಿಯಲು ಮುಂದೆ ಓದಿ.

ಟಾಲಿವುಡ್‌ ಮನ್ಮಥ ನಾಗಾರ್ಜುನ ಎರಡನೇ ಪತ್ನಿ ಅಮಲಾ ಅಕ್ಕಿನೇನಿಯ ಪುತ್ರ ಅಖಿಲ್ ಕೂಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ದೊಡ್ಡ ಹಿಟ್ ಅನ್ನೋದು ಇನ್ನೂ ಸಿಕ್ಕಿಲ್ಲ. 30 ವರ್ಷ ಈ ನಟ ಟಾಲಿವುಡ್‌ನ ಸ್ಟಾರ್ ನಟನಾಗುವ ಎಲ್ಲಾ ಸಾಧ್ಯತೆಗಳೂ ಇವೆ. ಒಂದು ಕಡೆ ವೃತ್ತಿ ಬದುಕು ಸಾಗುತ್ತಿದ್ದರೆ, ಇನ್ನೊಂದು ಕಡೆ ವೈಯಕ್ತಿಕ ಬದುಕಿನಲ್ಲೂ ಸಂಭ್ರಮ ನಡೆಯುತ್ತಿದೆ. ಅಂದ್ಹಾಗೆ ಅಖಿಲ್ ಅಕ್ಕಿನೇನಿ ನಿಶ್ಚಿತಾರ್ಥ ಮಾಡಿಕೊಂಡಿರುವ ಯುವತಿಯ ಹೆಸರು ಝೈನಾಬ್ ರಾವಡ್ಜಿ.

ಕೇವಲ ಎರಡು ಕುಟುಂಬಗಳು ಆಪ್ತರ ಸಮ್ಮುಖದಲ್ಲಿ ಅಖಿಲ್ ಅಕ್ಕಿನೇನಿ ಹಾಗೂ ಝೈನಾಬ್ ರಾವಡ್ಜಿ ಅವರ ನಿಶ್ಚಿತಾರ್ಥ ನೆರೆವೇರಿದೆ. ಈ ಸಮಾರಂಭವನ್ನು ಮಾಧ್ಯಮಗಳ ಕಣ್ಣಿಗೆ ಬೀಳದಂತೆ ಗುಟ್ಟಾಗಿ ಎಂಗೇಜ್‌ಮೆಂಟ್ ಮಾಡಿದ್ದಾರೆ. ಬಳಿಕ ತಮ್ಮ ಎಕ್ಸ್‌ ಖಾತೆಯಲ್ಲಿ ಮಗ ಹಾಗೂ ಭಾವಿ ಸೊಸೆಯ ಫೋಟೊವನ್ನು ಹಂಚಿಕೊಂಡು ವಿಷಯವನ್ನು ಬಹಿರಂಗ ಪಡಿಸಿದ್ದಾರೆ. ಹೀಗಾಗಿ ಝೈನಾಬ್ ರಾವಡ್ಜಿ ಯಾರು? ಎಲ್ಲಿಯವರು ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.

ನಾಗಾರ್ಜುನ ತಮ್ಮ ಎಕ್ಸ್ ಖಾತೆಯಲ್ಲಿ ಎರಡನೇ ಮಗನ ನಿಶ್ಚಿತಾರ್ಥದ ಬಗ್ಗೆ ಹೀಗೆ ಬರೆದುಕೊಂಡಿದ್ದಾರೆ. " ನಮ್ಮ ಮಗ ಅಖಿಲ್ ಅಕ್ಕಿನೇನಿ ಹಾಗೂ ಸೊಸೆಗೆ ಝೈನಾಬ್ ರಾವಡ್ಜಿ ನಿಶ್ಚಿತಾರ್ಥದ ವಿಷಯವನ್ನು ತಿಳಿಸಲು ನಮಗೆ ಖುಷಿಯಾಗುತ್ತಿದೆ. ಝೈನಾಬ್‌ರನ್ನು ನಮ್ಮ ಅಕ್ಕಿನೇನಿ ಕುಟುಂಬಕ್ಕೆ ಸ್ವಾಗತಿಸಲು ನಮಗೆ ಅತೀವ ಸಂತಸವಾಗುತ್ತಿದೆ. ಯುವ ದಂಪತಿಗಳಿಗೆ ಅಭಿನಂದಿಸಿ. ಜೀವನ ಪರ್ಯಂತೆ ಪ್ರೀತಿ, ಸಂತೋಷ ಮತ್ತು ನಿಮ್ಮ ಆಶೀರ್ವಾದ ನೀಡಿ ಹಾರೈಸಿ" ಎಂದು ನಾಗಾರ್ಜುನ ಹೇಳಿದ್ದಾರೆ.

ಅಂದ್ಹಾಗೆ ಅಖಿಲ್ ಅಕ್ಕಿನೇನಿಗೂ ಇದು ಎರಡನೇ ನಿಶ್ಚಿತಾರ್ಥ. 2016ರಲ್ಲಿ ಹೈದರಾಬಾದ್ ಮೂಲದ ಫ್ಯಾಷನ್ ಡಿಸೈನರ್ ಹಾಗೂ ಉದ್ಯಮಿ ಜಿವಿಕೆ ರೆಡ್ಡಿ ಅವರ ಮೊಮ್ಮಗಳು ಶ್ರಿಯಾ ಭುಪಾಲ್ ಜೊತೆ ನಿಶ್ಚಿತಾರ್ಥ ಆಗಿತ್ತು. ಆದರೆ, ಅದು ಮತ್ತೆ ಮದುವೆವರೆಗೂ ಮುಂದುವರೆಯಲೇ ಇಲ್ಲ. ಆಗ ಅಕ್ಕಿನೇನಿಗೆ ಆಗ 22 ವರ್ಷ. ಶ್ರಿಯಾ ಭುಪಾಲ್‌ಗೆ 26 ವರ್ಷ ವಯಸ್ಸಾಗಿತ್ತು. ಈ ಕಾರಣಕ್ಕೆ ನಿಶ್ಚಿತಾರ್ಥ ಮುರಿದು ಬಿದ್ದಿತ್ತು ಎಂದು ಹೇಳಲಾಗುತ್ತು.

More from Filmibeat

English summary
Ahead of Naga Chaitanya-Sobhita wedding Akhil Akkineni Engaged to Zainab Ravdjee. Who is she?;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X