"ಶ್ರೀವಲ್ಲಿ ಪಾತ್ರ ನನಗೇನಾದ್ರೂ ಸಿಕ್ಕಿದ್ರೆ, ರಶ್ಮಿಕಾಳನ್ನೂ ಹಿಂದಿಕ್ಕುತ್ತಿದ್ದೆ": ನಟಿ ಐಶ್ವರ್ಯಾ ರಾಜೇಶ್

ದಕ್ಷಿಣ ಭಾರತದ ಜನಪ್ರಿಯ ನಟಿ ಐಶ್ವರ್ಯಾ ರಾಜೇಶ್. ಇತ್ತೀಚೆಗೆ ಈ ನಟಿಯ ಸಿನಿಮಾಗಳಿಗೆ ಸಿನಿಪ್ರೇಮಿಗಳು ಮನಸಾರೆ ಇಷ್ಟ ಪಟ್ಟು ಕಣ್ತುಂಬಿಕೊಳ್ಳುತ್ತಿದ್ದಾರೆ. ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಜೈ ಎನಿಸಿಕೊಂಡಿದ್ದಾರೆ.

ಐಶ್ವರ್ಯಾ ರಾಜೇಶ್ ಇತ್ತೀಚೆಗೆ ನಟಿಸಿದ 'ಫರ್ಹಾನಾ' ಸಿನಿಮಾ ಕೂಡ ಪ್ರೇಕ್ಷಕರಿಗೆ ಇಷ್ಟ ಆಗಿದೆ. ಈ ಸಿನಿಮಾದಲ್ಲಿ ಮುಸ್ಲಿಂ ಮಹಿಳೆಯ ಪಾತ್ರದಲ್ಲಿ ಐಶ್ವರ್ಯಾ ರಾಜೇಶ್ ಮಿಂಚಿದ್ದರು. ಈ ಪಾತ್ರಕ್ಕೆ ಮೆಚ್ಚುಗೆನೂ ಸಿಕ್ಕಿತ್ತು.

Aishwarya Rajesh Said she can do Pushpas Srivalli Character Better than Rashmika Mandanna

ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ಐಶ್ವರ್ಯಾ ರಾಜೇಶ್ ಇತ್ತೀಚೆಗೆ ಸಂದರ್ಶನವನ್ನ ನೀಡಿದ್ದರು. ಆ ವೇಳೆ ರಶ್ಮಿಕಾ ಮಂದಣ್ಣ ನಟಿಸಿದ್ದ 'ಪುಷ್ಪ' ಸಿನಿಮಾದ ಶ್ರೀವಲ್ಲಿ ಪಾತ್ರದ ಬಗ್ಗೆ ಇಂಟ್ರೆಸ್ಟಿಂಗ್ ಕಮೆಂಟ್ ಮಾಡಿದ್ದಾರೆ. ಆ ಕಮೆಂಟ್ ಏನು? ಈಗ ಯಾಕೆ ಹೀಗೆ ಹೇಳಿದ್ರು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ರಶ್ಮಿಕಾಗಿಂತ ಚೆನ್ನಾಗಿ ನಟಿಸುತ್ತಿದೆ

ಐಶ್ವರ್ಯಾ ರಾಜೇಶ್ ತಮಿಳು ಹಾಗೂ ಮಲಯಾಳಂ ಭಾಷೆಯ ಸಿನಿಮಾಗಳಲ್ಲೇ ಹೆಚ್ಚಾಗಿ ನಟಿಸುತ್ತಿದ್ದಾರೆ. ಆದರೆ, ತೆಲುಗು ಭಾಷೆಯ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಈ ಬಗ್ಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಪ್ರಶ್ನೆ ಮಾಡಲಾಗಿತ್ತು. ಆಗ ಉತ್ತರಿಸುವಾಗ ಯಾಕೆ ತೆಲುಗು ಸಿನಿಮಾದಲ್ಲಿ ನಟಿಸುತ್ತಿಲ್ಲ ಅನ್ನೋದನ್ನು ರಿವೀಲ್ ಮಾಡಿದ್ದಾರೆ.

Aishwarya Rajesh Said she can do Pushpas Srivalli Character Better than Rashmika Mandanna

ಇದೇ ವೇಳೆ ರಶ್ಮಿಕಾ ಮಂದಣ್ಣ ನಟಿಸಿದ 'ಪುಷ್ಪ' ಸಿನಿಮಾ ಶ್ರೀವಲ್ಲಿ ಪಾತ್ರದ ಬಗ್ಗೆ ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ. "ಒಂದು ವೇಳೆ ನನಗೆ ಶ್ರೀವಲ್ಲಿ ಪಾತ್ರವನ್ನು ನೀಡಿದ್ದರೆ, ನಾನು ಅವರಿಗಿಂತ ಚೆನ್ನಾಗಿ ನಟಿಸುತ್ತಿದೆ" ಎಂದಿದ್ದಾರೆ.

ಐಶ್ವರ್ಯಾ ರಾಜೇಶ್ ಹೇಳಿದ್ದೇನು?

ಸುಕುಮಾರ್ ನಿರ್ದೇಶನದಲ್ಲಿ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟಿಸಿದ್ದ 'ಪುಷ್ಪ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸಂಚಲನ ಸೃಷ್ಟಿಸಿತ್ತು. ಇದರೊಂದಿಗೆ ರಶ್ಮಿಕಾ ಮಂದಣ್ಣ ನಟಿಸಿದ ಶ್ರೀವಲ್ಲಿ ಪಾತ್ರಕ್ಕೂ ಮೆಚ್ಚುಗೆ ವ್ಯಕ್ತವಾಗಿತ್ತು. ಹೀಗಾಗಿಯೇ ಹಿಂದಿ ಬೆಲ್ಟ್‌ನಲ್ಲಿಯೇ ಸಿನಿಮಾ 100 ಕೋಟಿ ರೂ. ಗಳಿಸಿತ್ತು. ಆದರೆ, ಐಶ್ವರ್ಯಾ ರಾಜೇಶ್ 'ಪುಷ್ಪ'ದ ಶ್ರೀವಲ್ಲಿ ಪಾತ್ರ ತನಗೇನಾದರೂ ಕೊಟ್ಟಿದ್ದರೆ, ಇನ್ನೂ ಚೆನ್ನಾಗಿ ನಟಿಸುತ್ತಿದ್ದೆ ಎಂದಿದ್ದಾರೆ.

" ಒಂದು ವೇಳೆ ನನಗೆ ಆ ಅವಕಾಶ ಸಿಕ್ಕಿದ್ದರೆ, ಅದರೊಳಗೆ ತಲ್ಲೀನನಾಗಿಬಿಡುತ್ತಿದೆ. ಶ್ರೀವಲ್ಲಿ ಪಾತ್ರದಲ್ಲಿ ರಶ್ಮಿಕಾ ಚೆನ್ನಾಗಿಯೇ ನಟಿಸಿದ್ದಾರೆ. ಆದರೆ, ಆ ಪಾತ್ರಕ್ಕೆ ನಾನು ಸೂಕ್ತ ಆಯ್ಕೆ ಅಂತ ಅನಿಸಿತ್ತಿದೆ." ಎಂದು ಐಶ್ವರ್ಯಾ ರಾಜೇಶ್ ಅಭಿಪ್ರಾಯ ಪಟ್ಟಿದ್ದಾರೆ.

ನನ್ನ ಕುಟುಂಬ ಮೆಚ್ಚುವಂತಹ ಪಾತ್ರ ಮಾಡ್ಬೇಕು

" ನನಗೆ ತೆಲುಗು ಚಿತ್ರರಂಗ ತುಂಬಾನೇ ಇಷ್ಟ. ಆದರೆ, ನನಗೆ ಒಂದೊಳ್ಳೆ ತೆಲುಗು ಸಿನಿಮಾ ಮೂಲಕ ಕಮ್‌ಬ್ಯಾಕ್ ಮಾಡಬೇಕು ಅಂತ ಆಸೆ. ಈ ಮೂಲಕ ನನ್ನ ಕುಟುಂಬ ನನ್ನ ಮೇಲೆ ಹೆಮ್ಮೆ ಪಡಬೇಕು. ವಿಜಯ್ ದೇವರಕೊಂಡ ನಟಿಸಿದ 'ವರ್ಲ್ಡ್‌ ಫೇಮಸ್ ಲವರ್' ಸಿನಿಮಾದಲ್ಲಿ ನಟಿಸಿದ್ದೆ. ಆದರೆ, ಆ ಸಿನಿಮಾ ಗೆಲ್ಲಲಿಲ್ಲ" ಎಂದು ತೆಲುಗು ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುವ ಬಗ್ಗೆ ಹೇಳಿದ್ದಾರೆ.

ಐಶ್ವರ್ಯಾ ರಾಜೇಶ್ 'ಸ್ವಪ್ನ ಸುಂದರಿ', 'ಡ್ರೈವರ್ ಜಮುನಾ', 'ದಿ ಗ್ರೇಟ್ ಇಂಡಿಯನ್ ಕಿಚನ್', 'ಕಾಕಾ ಮುಟ್ಟೈ', 'ವಡಾ ಚೆನ್ನೈ'ನಂತಹ ಸಿನಿಮಾಗಳಲ್ಲಿ ನಟಿಸಿ, ಮೆಚ್ಚುಗೆ ಗಳಿಸಿದ್ದಾರೆ.

More from Filmibeat

English summary
Aishwarya Rajesh Said she can do Pushpa's Srivalli Character Better than Rashmika Mandanna, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X