ಬೆಳ್ಳಂಬೆಳಗ್ಗೆ ನೇರವೇರಿದ ನಾಗಾರ್ಜನ ದ್ವಿತೀಯ ಪುತ್ರ ಅಖಿಲ್ ಅಕ್ಕಿನೇನಿ ಮದುವೆ; ಯಾರಿಗೆಲ್ಲ ಆಹ್ವಾನವಿತ್ತು?

ಟಾಲಿವುಡ್ ಕಿಂಗ್ ನಾಗಾರ್ಜುನ ಕುಟುಂಬದಲ್ಲಿ ಎರಡೆರಡು ಮದುವೆ ಸಂಭ್ರಮ. ಕೆಲವು ದಿನಗಳ ಹಿಂದಷ್ಟೇ ನಾಗಚೈತನ್ಯ ಅವರಿಗೆ ಎರಡನೇ ಮದುವೆ ಮಾಡಿದ್ದರು. ಸಮಂತಾರಿಂದ ಬೇರೆಯಾದ ಬಳಿಕ ಶೋಭಿತಾ ಧೂಲಿಪಾಲ ಅವರಿಂದಿಗೆ ನಾಗಚೈತನ್ಯ ಎರಡನೇ ಮದುವೆ ಆಗಿದ್ದರು. ಈಗ ಇವರ ದ್ವಿತೀಯ ಪುತ್ರ ಅಖಿಲ್ ಅಕ್ಕಿನೇನಿ ಮದುವೆಯನ್ನು ನೆರವೇರಿಸಿದ್ದಾರೆ. ಇಂದು (ಜೂನ್ 6) ಬೆಳಗ್ಗೆ ಅಖಿಲ್ ಅಕ್ಕಿನೇನಿ ಮದುವೆ ಅದ್ಧೂರಿಯಾಗಿ ನಡೆದಿದೆ.

ಅಖಿಲ್ ಅಕ್ಕಿನೇನಿ ತೆಲಂಗಾಣದ ಉದ್ಯಮಿ ಜುಲ್ಫಿ ರಾವ್ಜಿಯವರ ಪುತ್ರಿ ಜೈನಾಬ್ ರಾವ್ಜಿಯೊಂದಿಗೆ ಸಪ್ತಪದಿ ತುಳಿದಿದ್ದಾರೆ. ಕಳೆದ ವರ್ಷ ನವೆಂಬರ್ 26ರಲ್ಲಿ ಈ ಜೋಡಿಯ ನಿಶ್ಚಿತಾರ್ಥ ನಡೆದಿತ್ತು. ಅಖಿಲ್ ಅಕ್ಕಿನೇನಿ ಹಾಗೂ ಜೈನಾಬ್ ರಾವ್ಜಿ ಅವರ ವಿವಾಹಕ್ಕೆ ಕೇವಲ ಆಪ್ತರಿಗಷ್ಟೇ ಆಹ್ವಾನವನ್ನು ನೀಡಲಾಗಿತ್ತು. ಅಲ್ಲದೇ ನಾಗಾರ್ಜುನ ಅವರ ಹೊಸ ಮನೆಯಲ್ಲಿ ಈ ಜೋಡಿಯ ವಿವಾಹವನ್ನು ನಾಗಾರ್ಜುನ ನೆರವೇರಿಸಿದ್ದಾರೆ.

Akhil Akkineni and Zainab Ravdjee wedding first photo out here is details

ಅಖಿಲ್ ಅಕ್ಕಿನೇನಿ ಮದುವೆ ಇಂದು (ಜೂನ್ 6) ಬೆಳಗಿನ ಜಾವ 3 ಗಂಟೆಗೆ ನಾಗಾರ್ಜುನಾ ಖರೀದಿಸಿರುವ ಹೊಸ ಮನೆಯಲ್ಲಿ ನೆರವೇರಿದೆ. ಇದು ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿದೆ. ಈ ಶುಭ ಗಳಿಗೆಯಲ್ಲಿ ಎರಡೂ ಕುಟುಂಬದ ಸದಸ್ಯರು ಹಾಗೂ ಆಪ್ತರು ಮಾತ್ರ ಭಾಗವಹಿಸಿದ್ದರು. ಅಕ್ಕಿನೇನಿ ಕುಟುಂಬದ ಕುಡಿಯ ಮದುವೆಯ ಫೋಟೋಗಳು ಈಗ ಹೊರಬಿದ್ದಿವೆ.

ಅಖಿಲ್ ಅಕ್ಕಿನೇನಿ ವಿವಾಹ ಮಹೋತ್ಸವ ಅದ್ಧೂರಿಯಾಗಿ ನಡೆದಿದೆ. ಎರಡು ಕಡೆಯ ಕುಟುಂಬಸ್ಥರು ಹಾಗೂ ಆತ್ಮೀಯರಿಗೆ ಮಾತ್ರ ಪ್ರವೇಶವಿದ್ದ ಸಮಾರಂಭದಲ್ಲಿ ಸಂಭ್ರಮ ಮನೆ ಮಾಡಿತ್ತು. ನಾಗಾರ್ಜುನ್ ಹೊಸ ಮನೆಯೊಳಗೆ ಅಖಿಲ್ ಅಕ್ಕಿನೇನಿ ಪ್ರವೇಶ ಮಾಡುತ್ತಿದ್ದಂತೆ ಸಂಬಂಧಿಕರು ಹಾಗೂ ಆತ್ಮೀಯರು ಅದ್ಧೂರಿ ಸ್ವಾಗತ ನೀಡಿದ್ದರು. ಬಳಿಕ ಮೆರವಣಿಗೆ ಮೂಲಕ ಅಖಿಲ್ ಅಕ್ಕಿನೇನಿಯನ್ನು ಕರೆದುಕೊಂಡು ಹೋಗಲಾಯ್ತು. ನಾಗಾರ್ಜುನ, ನಾಗ ಚೈತನ್ಯ ಇಬ್ಬರೂ ಈ ವೇಳೆ ಡ್ಯಾನ್ಸ್ ಮಾಡಿ ಸಂಚಲನ ಸೃಷ್ಟಿಸಿದರು.

ಅಕ್ಕಿನೇನಿ ಕುಟುಂಬದ ಈ ಮದುವೆ ಸಮಾರಂಭದಲ್ಲಿ ತೆಲುಗು ಚಿತ್ರರಂಗದಿಂದ ನಾಗಾರ್ಜುನ ಆಪ್ತ ಗೆಳೆಯ ಮೆಗಾಸ್ಟಾರ್ ಚಿರಂಜೀವಿ, ಮೆಗಾ ಪವರ್‌ಸ್ಟಾರ್ ರಾಮ್ ಚರಣ್ ಮತ್ತು ಪತ್ನಿ ಉಪಾಸನ, ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್, ನಾಯಕ ಸುಮಂತ್, ನಾಗ ಚೈತನ್ಯ ಹಾಗೂ ಪತ್ನಿ ಶೋಭಿತಾ ಧೂಲಿಪಾಲ, ಶರ್ವಾನಂದ್, ರಾಜಮೌಳಿ ಪುತ್ರ ಕಾರ್ತಿಕೇಯ, ಈ ಮದುವೆಯ ಪ್ರಮುಖ ಆಕರ್ಷಣೆಯಾಗಿದ್ದರು. ಈ ಮದುವೆಯಲ್ಲಿ ಕೇವಲ 30 ಮಂದಿ ಕುಟುಂಬಸ್ಥರು ಹಾಗೂ ಆತ್ಮೀಯರು ಭಾಗವಹಿಸಿದ್ದರು ಎನ್ನಲಾಗಿದೆ.

ಹೀಗಾಗಿ ಚಿತ್ರರಂಗದ ಗಣ್ಯರು ಹಾಗೂ ಕುಟುಂಬಸ್ಥರಿಗೆ ಅದ್ಧೂರಿ ಆರತಕ್ಷತೆಯನ್ನು ಹಮ್ಮಿಕೊಳ್ಳಲಾಗಿದೆ. ಇದೇ ತಿಂಗಳ 8ನೇ ತಾರೀಕಿನಂದು ಹೈದರಾಬಾದ್‌ನಲ್ಲಿರುವ ನಾಗಾರ್ಜುನ ಅವರ ಅನ್ನಪೂರ್ಣ ಸ್ಟುಡಿಯೋದಲ್ಲಿ ಈ ಆರತಕ್ಷತೆ ಕಾರ್ಯಕ್ರಮ ನಡೆಯುತ್ತಿದೆ. ಕಿಂಗ್ ನಾಗಾರ್ಜುನ ಹಾಗೂ ಪತ್ನಿ ಅಮಲಾ ಇಬ್ಬರೂ ಖುದ್ದಾಗಿ ತೆರಳಿ ಮಗನ ಆರತಕ್ಷತೆಗೆ ಸಿನಿಮಾ ಮಂದಿಯ ಗಣ್ಯರು ಹಾಗೂ ರಾಜಕೀಯ ಮುಖಂಡರಿಗೆ ಆಹ್ವಾನವನ್ನು ನೀಡಿದ್ದಾರೆ. ಹೀಗಾಗಿ ಜೂನ್ 8ರಂದು ಅದ್ಧೂರಿಯಾಗಿ ಈ ಕಾರ್ಯಕ್ರಮ ನಡೆಯಲಿದೆ.

ಪಾರ್ಸಿ ಕುಟುಂಬಕ್ಕೆ ಸೇರಿದ ಜೈನಾಬ್ ರಾವ್ಜಿಯನ್ನು ಅಖಿಲ್ ಅಕ್ಕಿನೇನಿ ಪ್ರೀತಿಸುತ್ತಿದ್ದರು. ಬಳಿಕ ಎರಡೂ ಕುಟುಂಬಗಳೂ ಇವರ ಪ್ರೀತಿಗೆ ಒಪ್ಪಿಗೆ ಸೂಚಿಸಿ ಮದುವೆಗೆ ಸಮ್ಮತಿ ಸೂಚಿಸಿವೆ. ಇವರೂ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಹೈದರಾಬಾದ್‌ನಲ್ಲಿ ನಟಿಸಿದ ಜೈನಾಲ್ ರಂಗಭೂಮಿಯಾಗಿ ಗುರುತಿಸಿಕೊಂಡಿದ್ದಾರೆ. ಭಾರತದಲ್ಲಷ್ಟೇ ಅಲ್ಲದೆ ದುಬೈ, ಲಂಡನ್‌ನಲ್ಲಿಯೂ ಕಲಾವಿದೆಯಾಗಿ ಗುರುತಿಸಿಕೊಂಡಿದ್ದಾರೆ. ಎರಡು ವರ್ಷಗಳ ಹಿಂದೆ ಇಬ್ಬರೂ ಭೇಟಿಯಾಗಿದ್ದರು. ಆ ಭೇಟಿ ಪ್ರೀತಿಗೆ ತಿರುಗಿ, ಮದುವೆವರೆಗೂ ಬಂದು ನಿಂತಿದೆ. ಜೈನಾಬ್ ತಂದೆ ಜುಲ್ಫಿ ರಾವ್ಜಿ ತೆಲಂಗಾಣದಲ್ಲಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ.

More from Filmibeat

English summary
Akhil Akkineni and Zainab Ravdjee wedding first photo out here is details;
Read more about: akhil akkineni wedding nagarjuna
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X