ಅಖಿಲ್ ಅಕ್ಕಿನೇನಿ 'ಏಜೆಂಟ್' ಟೀಸರ್ ಔಟ್: ಕಿಚ್ಚ ಸುದೀಪ್, ಶಿವ ಕಾರ್ತಿಕೇಯನ್ ಸಾಥ್
ಅಕ್ಕಿನೇನಿ ಕುಟುಂಬದ ಕುಡಿ ಅಖಿಲ್ ಅಕ್ಕಿನೇನಿಯ ಹೊಸ ಸಿನಿಮಾ ಏಜೆಂಟ್ ಬಿಡುಗಡೆಗೆ ಸಜ್ಜಾಗಿದೆ. ವಿಶೇಷ ಅಂದ್ರೆ ಇದು ಪಕ್ಕಾ ಪ್ಯಾನ್ ಇಂಡಿಯಾ ಸಿನಿಮಾ. ಸಿನಿಮಾ ಪೋಸ್ಟರ್ ನೋಡಿದರೆ, ಇದೊಂದು ಆಕ್ಷನ್ ಸಿನಿಮಾ ಅನ್ನೋದು ಅರಿವಿಗೆ ಈಗ ಸಿನಿಮಾ ತಂಡ ಟೀಸರ್ ಅನ್ನೇ ಬಿಡುಗಡೆ ಮಾಡಿದೆ.
ಟಾಲಿವುಡ್‌ನ ಸ್ಟೈಲಿಶ್ ಫಿಲ್ಮ್ ಮೇಕರ್ ಸುರೇಂದ್ರ ರೆಡ್ಡಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಅಕ್ಕಿನೇನಿ ಫ್ಯಾಮಿಲಿಯ ಅಖಿಲ್ ಅಕ್ಕಿನೇನಿಗೆ ದಕ್ಷಿಣ ಭಾರತದ ಸೂಪರ್‌ಸ್ಟಾರ್‌ಗಳು ಸಾಥ್ ನೀಡಿದ್ದು, ಟೀಸರ್ ಅನ್ನು ರಿಲೀಸ್ ಮಾಡಿದ್ದಾರೆ.

ಏಜೆಂಟ್ ಟೀಸರ್ ರಿಲೀಸ್ ಮಾಡಿದ ಕಿಚ್ಚ ಸುದೀಪ್
ಟಾಲಿವುಡ್‌ನ ಯಂಗ್ ಅಂಡ್ ಎನೆರ್ಜೆಟಿಕ್ ಹೀರೊ ಅಖಿಲ್ ಅಕ್ಕಿನೇನಿ. ಬಹಳ ದಿನಗಳ ಬಳಿಕ ಅಖಿಲ್ ಅಭಿನಯದ ಮೋಸ್ಟ್ ಅವೇಟೇಡ್ ಸಿನಿಮಾ 'ಏಜೆಂಟ್' ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಇದೇ ಟೀಸರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸಿನಿಪ್ರಿಯರನ್ನು ಸೆಳೆಯುತ್ತಿದೆ. ಯೂಟ್ಯೂಬ್‌ನಲ್ಲಿ ಸಂಚಲನ ಸೃಷ್ಟಿಸಿದೆ.
ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಕನ್ನಡದಲ್ಲೂ ಬಿಡುಗಡೆಯಾಗಲಿದೆ. ಹೀಗಾಗಿ ಕನ್ನಡ ಅವತರಣಿಕೆಯ ಟೀಸರ್ ಅನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರಿಲೀಸ್ ಮಾಡಿದ್ದಾರೆ. ಆದರೆ, ಚಿತ್ರತಂಡ 'ಕೆಜಿಎಫ್ 2' ನಂತೆ ಯೂನಿವರ್ಸಲ್ ಟೀಸರ್ ರಿಲೀಸ್ ಆಗಿರುವುದರಿಂದ ಎಲ್ಲಾ ಭಾಷೆಯಲ್ಲೂ ಒಂದೇ ಟೀಸರ್ ಅನ್ನು ರಿಲೀಸ್ ಮಾಡಲಾಗಿದೆ.

ಸಿಕ್ಸ್‌ಪ್ಯಾಕ್‌ನಲ್ಲಿ ಕಿಕ್ ಕೊಟ್ಟ ಅಖಿಲ್
'ಏಜೆಂಟ್' ಪಕ್ಕಾ ಮಾಸ್ ಸಿನಿಮಾ ಅನ್ನೋದು ಟೀಸರ್ ನೋಡಿದರೆ ಗೊತ್ತಾಗುತ್ತೆ. ಇನ್ನು ಟೀಸರ್‌ನಲ್ಲಿ ಅಖಿಲ್ ಅಕ್ಕಿನೇನಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಸಿಕ್ಸ್ ಪ್ಯಾಕ್‌ನಲ್ಲಿ ಕಂಡಿರುವುದು ಅಖಿಲ್ ಅಭಿಮಾನಿಗಳಿಗೆ ಸಖತ್ ಕಿಕ್ ಕೊಟ್ಟಿದೆ.
ಬಹಳ ದಿನಗಳ ಬಳಿಕ ಅಖಿಲ್ ಅಕ್ಕಿನೇನಿ ಟಾಲಿವುಡ್‌ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದು, ಭರ್ಜರಿ ಆಕ್ಷನ್ ಧಮಾಕಾ ಟೀಸರ್‌ನಲ್ಲಿದೆ. ಅಖಿಲ್ ಅಕ್ಕಿನೇನಿ ಹಾಗೂ ಮಲಯಾಳಂ ನಟ ಮಮ್ಮುಟ್ಟಿ ಕಾಂಬಿನೇಷನ್ ಸಖತ್ ಥ್ರಿಲ್ ಕೊಡುತ್ತದೆ. ಮಲಯಾಳಂನಲ್ಲಿ ಮಮ್ಮುಟ್ಟಿ ಹಾಗೂ ತಮಿಳಿನಲ್ಲಿ ಶಿವಕಾರ್ತಿಕೇಯನ್ ಟೀಸರ್ ರಿಲೀಸ್ ಮಾಡಿದ್ದಾರೆ.
'ಏಜೆಂಟ್' ಸೈ ಥ್ರಿಲ್ಲರ್ ಸ್ಟೋರಿ
'ಏಜೆಂಟ್' ಸಿನಿಮಾ ಹೈ ಬಜೆಟ್‌ನಲ್ಲಿ ನಿರ್ಮಾಣಗೊಂಡಿರುವ ಸ್ಪೈ ಥ್ರಿಲ್ಲರ್ ಸಿನಿಮಾ. ಅಖಿಲ್ ಅಕ್ಕಿನೇನಿ ಜೊತೆ ಸಾಕ್ಷಿ ವೈದ್ಯ ಜೋಡಿಯಾಗಿ ನಟಿಸಿದ್ದಾರೆ. 'ಸೈರಾ ನರಸಿಂಹ ರೆಡ್ಡಿ' ಅಂತಹ ಸಿನಿಮಾ ನಿರ್ದೇಶಿಸಿದ ಸುರೇಂದ್ರ ರೆಡ್ಡಿಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ವಕ್ಕಂತಂ ವಂಶಿ ಕಥೆ ಬರೆದಿದ್ದಾರೆ.
ಸೆನ್ಸೇಷನಲ್ ಮ್ಯೂಸಿಕ್ ಕಂಪೋಸರ್ ತಮಿಝಾ ಸಂಗೀತ ನೀಡಿದ್ದಾರೆ. ರಸೂಲ್ ಎಲ್ಲೂರು ಕ್ಯಾಮೆರಾ, ರಾಷ್ಟ್ರ ಪ್ರಶಸ್ತಿ ವಿಜೇತ ನವೀನ್ ನೂಲಿ ಎಡಿಟಿಂಗ್ ಮಾಡುತ್ತಿದ್ದಾರೆ. ಈಗಾಗ್ಲೇ ಸಿನಿಮಾ ಶೂಟಿಂಗ್ ಮುಗಿಸಿದ್ದು, ಚಿತ್ರತಂಡ ಟೀಸರ್ ರಿಲೀಸ್ ಮಾಡಿ ಪ್ರಮೋಷನ್ ಶುರು ಮಾಡಿದೆ.


Click it and Unblock the Notifications











