ಸಮಂತಾ-ನಾಗ ಚೈತನ್ಯ ವಿಚ್ಚೇದನಕ್ಕೇನು ಕಾರಣ? ನಾಗಾರ್ಜುನ ಸಹೋದರಿ ಬಿಟ್ಟುಕೊಟ್ಟ ಗುಟ್ಟೇನು?
ಟಾಲಿವುಡ್‌ನ ಕ್ಯೂಟ್ ಜೋಡಿಯಾಗಿದ್ದ ಸಮಂತಾ ಹಾಗೂ ನಾಗ ಚೈತನ್ಯ ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿ ಬೇರೆ ದಾರಿ ಹಿಡಿದಿದ್ದಾರೆ. ಇವರಿಬ್ಬರೂ ವಿಚ್ಚೇದನ ಪಡೆದು ವರ್ಷಗಳೇ ಆಗಿವೆ. ಹೀಗಿದ್ದರೂ ಡಿವೋರ್ಸ್ ಕಾರಣವೇನು ಅನ್ನೋದು ಅವರ ಅಭಿಮಾನಿಗಳಿಗೇ ಗೊತ್ತಿಲ್ಲ. ಸಮಂತಾ ಹಾಗೂ ನಾಗಚೈತನ್ಯ ಇಬ್ಬರೂ ಈ ಬಗ್ಗೆ ಎಲ್ಲೂ ಹೇಳಿಕೊಂಡಿಲ್ಲ. ಈಗ ನಾಗ ಚೈತನ್ಯ ಅವರ ಚಿಕ್ಕಮ್ಮ ನಾಗ ಸುಶೀಲಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ್ದಾರೆ.
ಸಮಂತಾ ಹಾಗೂ ನಾಗ ಚೈತನ್ಯ ಇಬ್ಬರನ್ನೂ ಬೆಸೆದಿದ್ದು ಗೌತಮ್ ವಾಸುದೇವ್ ಮೆನನ್ ನಿರ್ದೇಶನದ 'ಯೇ ಮಾಯಾ ಚೇಸಾವೇ' ಸಿನಿಮಾ. ಈ ಸಿನಿಮಾದ ಮೂಲಕವೇ ಇಬ್ಬರ ಪರಿಚಯವಾಗಿತ್ತು. ಅಲ್ಲಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದ ಈ ಜೋಡಿ, ಮದುವೆ ಬಳಿಕ ಬೇರೆಯಾಗಿದ್ದು ಅಭಿಮಾನಿಗಳಿಗೆ ಇನ್ನೂ ಪ್ರಶ್ನೆಗಳಾಗಿಯೇ ಉಳಿದಿವೆ. ಇಬ್ಬರೂ ಬೇರೆಯಾದ ನೋವಿನಲ್ಲಿರುವ ಅಭಿಮಾನಿಗಳು ಇಂದಿಗೂ ಉತ್ತರ ಹುಡುಕುತ್ತಲೇ ಇದ್ದಾರೆ.

ನಾಗ ಚೈತನ್ಯ ಹಾಗೂ ಸಮಂತಾ 'ಯೇ ಮಾಯಾ ಚೇಸಾವೇ' ಸಿನಿಮಾದ ಸೆಟ್‌ನಲ್ಲಿ ಮೊದಲ ಬಾರಿ ಭೇಟಿಯಾಗಿದ್ದರು. ಈ ಸಿನಿಮಾದ ಶೂಟಿಂಗ್ ವೇಳೆ ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುವುದಕ್ಕೆ ಶುರು ಮಾಡಿದ್ದರು. ಆದರೆ, ಕೆಲವು ಸಮಯಗಳ ಕಾಲ ಈ ವಿಷಯವನ್ನು ಗೌಪ್ಯವಾಗಿಯೇ ಇಟ್ಟಿದ್ದರು. ಕೆಲವು ವರ್ಷಗಳ ಬಳಿಕ ನಾಗ ಚೈತನ್ಯ ಹಾಗೂ ಸಮಂತಾ ಪ್ರೀತಿಸುತ್ತಿರುವ ವಿಷಯ ಮಾಧ್ಯಮಗಳಲ್ಲಿ ಹರಿದಾಡಿತ್ತು. ಆ ಸಮಯದಲ್ಲೂ ಇಬ್ಬರೂ ನಿರಾಕರಿಸಿರಲಿಲ್ಲ.
ಕೊನೆಗೊಂದು ದಿನ ಹಿರಿಯರ ಒಪ್ಪಿಗೆ ಪಡೆದು ತಾವು ಮದುವೆ ಆಗುತ್ತಿರುವ ವಿಷಯವನ್ನು ರಿವೀಲ್ ಮಾಡಿದ್ದರು. ಬಳಿಕ ಗೋವಾದಲ್ಲಿ ಸಮಂತಾ ಹಾಗೂ ನಾಗ ಚೈತನ್ಯ ಹಿಂದೂ ಹಾಗೂ ಕ್ರಿಶ್ಚಿಯನ್ ಸಂಪ್ರದಾಯದಂತೆ ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮದುವೆಯ ಬಳಿಕ ಸಮಂತಾ ಸಿನಿಮಾಗಳಲ್ಲಿ ನಟಿಸುವುದನ್ನು ಕಡಿಮೆ ಮಾಡಿದ್ದರೂ, ಸಿನಿಮಾಗಳಲ್ಲಿ ನಟಿಸುವುದನ್ನು ನಿಲ್ಲಿಸಿರಲಿಲ್ಲ. ಈ ಜೋಡಿ ಆಗಾಗ ಹಲವು ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡು ಅಭಿಮಾನಿಗಳಿಗೆ ದರ್ಶನ ಕೊಡುತ್ತಿದ್ದರು. ಆದರೆ, ಮದುವೆಯಾದ ಕೆಲವೇ ವರ್ಷಗಳಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಮೂಡಿದ್ದವು. ಹೀಗಾಗಿ ಈ ಜೋಡಿ ವಿಚ್ಛೇದನಕ್ಕೆ ಮುಂದಾಗಿತ್ತು.
ಅದ್ಯಾವಾಗ ಸಮಂತಾ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತನ್ನ ಹೆಸರಿನ ಜೊತೆಗಿದ್ದ 'ಅಕ್ಕಿನೇನಿ' ಹೆಸರನ್ನು ತೆಗೆದುಹಾಕಿದರೋ ಆಗ ವದಂತಿಗಳು ಕನ್ಫರ್ಮ್ ಆಗಿದ್ದವು. ನಾಗ ಚೈತನ್ಯ ರನ್ನು ಅನ್‌ಫಾಲೋ ಮಾಡಿದ ಬಳಿಕವಂತೂ ವದಂತಿಗಳು ನಿಜವೆಂದು ಸಾಬೀತಾಯಿತು. ಇಬ್ಬರೂ ತಮ್ಮ ಮದುವೆಯ ಫೋಟೋಗಳನ್ನು ಇನ್‌ಸ್ಟಾಗ್ರಾಂನಿಂದ ಡಿಲೀಟ್ ಮಾಡಿದ್ದರು. ಕೊನೆಗೆ ಈ ಜೋಡಿ ಜಂಟಿಯಾಗಿ ವಿಚ್ಛೇದನ ಪಡೆದಿರುವುದಾಗಿ ತಮ್ಮ ಸೋಶಿಯಲ್ ಮೀಡಿಯಾ ಮೂಲಕ ರಿವೀಲ್ ಮಾಡಿದ್ದರು.

ಇಷ್ಟೆಲ್ಲ ನಡೆದರೂ ಅಸಲಿ ಕಾರಣವೇನು ಅನ್ನೋದು ರಿವೀಲ್ ಆಗಿರಲಿಲ್ಲ. ಇಬ್ಬರೂ ಬಹಿರಂಗವಾಗಿ ವಿಚ್ಚೇದನಕ್ಕೆ ಕಾರಣವೇನು? ಅನ್ನೋದನ್ನು ಹೇಳಿಕೊಂಡಿರಲಿಲ್ಲ. ಇಬ್ಬರೂ ಬೇರೆಯಾಗುವುದಕ್ಕೆ ಅಸಲಿ ಕಾರಣವನ್ನು ತಿಳಿದುಕೊಳ್ಳುವುದಕ್ಕೆ ಅಭಿಮಾನಿಗಳು ಬಯಸಿದ್ದರು. ಆದರೆ, ಆ ಗುಟ್ಟನ್ನು ಇವರಿಬ್ಬರೂ ಬಿಟ್ಟುಕೊಟ್ಟಿಲ್ಲ. ಈಗ ನಾಗ ಚೈತನ್ಯ ಅವರ ಚಿಕ್ಕಮ್ಮ ನಾಗ ಸುಶೀಲಾ ಈ ವಿಚ್ಛೇದನ ಪ್ರಕರಣದ ಬಗ್ಗೆ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ.
ನಾಗ ಚೈತನ್ಯ ಮತ್ತು ಸಮಂತಾ ವಿಚ್ಛೇದನದ ಬಗ್ಗೆ ಕುಟುಂಬ ಸದಸ್ಯರು ಕೂಡ ಇದೂವರೆಗೂ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದ್ರೀಗ ಇತ್ತೀಚೆಗೆ ನಾಗ ಚೈತನ್ಯ ಅವರ ಚಿಕ್ಕಮ್ಮ ನಾಗ ಸುಶೀಲಾ ನೀಡಿದ ಸಂದರ್ಶನದಲ್ಲಿ ಸಮಂತಾ-ನಾಗ ಚೈತನ್ಯ ವಿಚ್ಚೇದನಕ್ಕೆ ಕಾರಣಗಳನ್ನು ಹೊರ ಹಾಕಿದ್ದಾರೆ. "ನಾಗಾರ್ಜುನ, ನಾಗ ಚೈತನ್ಯ ಹಾಗೂ ಸುಮಂತ್ ಮೂವರೂ ನಟರು. ಈ ಕಾರಣಕ್ಕೆ ಅವರು ತಮ್ಮ ವೃತ್ತಿಯವರನ್ನೇ ಮದುವೆಯಾದರು. ವಿಷಯ ಯಾವುದೇ ಇರಲಿ. ಪತಿ-ಪತ್ನಿಯರೇ ಕಾರಣರಾಗುತ್ತಾರೆ. ಇಬ್ಬರೂ ಪರಸ್ಪರ ಅರ್ಥ ಮಾಡಿಕೊಂಡು ಹೊಂದಿಕೊಂಡು ಹೋಗಬೇಕು. ಕೆಲವು ಕಾರಣಗಳಿಂದ ಬೇರ್ಪಡಬೇಕಾದ ಸನ್ನಿವೇಶದಲ್ಲೂ ಯಾರಿಗೂ ತೊಂದರೆಯಾಗದಂತೆ ವಿಚ್ಛೇದನ ಪಡೆದುಕೊಳ್ಳಬೇಕು. ಸಮಾಜಕ್ಕಾಗಿ ಅಥವಾ ಕುಟುಂಬದ ಗೌರವಕ್ಕಾಗಿ ಸಂತೋಷವಿಲ್ಲದೆ ಒಟ್ಟಿಗೆ ಇರಬೇಕಾದ ಅವಶ್ಯಕತೆ ಈಗಿನ ಕಾಲದ ಜನರಲ್ಲಿ ಇಲ್ಲ" ಎಂದು ನಾಗ ಸುಶೀಲಾ ಹೇಳಿದ್ದಾರೆ.
ಹಾಗೇ "ಇರುವುದು ಒಂದೇ ಜೀವನ. ವೈವಾಹಿಕ ಜೀವನದಿಂದ ಬೇರೆಯಾದರೆ ಏನಂತೆ, ಇಬ್ಬರೂ ಸ್ನೇಹಿತರಾಗಿ ಮುಂದುವರೆಯಬಹುದು. ಅಂತಹ ಅನೇಕ ಜೋಡಿಗಳನ್ನು ನಾನು ನೋಡಿದ್ದೇನೆ. ಆದರೆ ಕೆಲವರು ಮಾತ್ರ ಇನ್ನೂ ಜಗಳವಾಡುತ್ತಲೇ ಇದ್ದಾರೆ" ಎಂದು ಹೇಳಿದರು. ನಾಗ ಸುಶೀಲಾ ಅವರ ಈ ಹೇಳಿಕೆಗಳು ಸೋಶಿಯಲ್ ಮೀಡಿಯಾದಲ್ಲಿ ಸಂಚಲ ಸೃಷ್ಟಿಸುತ್ತಿವೆ.


Click it and Unblock the Notifications











