65ನೇ ವಯಸ್ಸಿನಲ್ಲೂ ನಾಗಾರ್ಜುನ ಫಿಟ್ನೆಸ್‌ಗೆ ಸಾರಿಸಾಟಿಯಿಲ್ಲ; ಡಯೆಟ್‌ಗೆ ಅಂತಲೇ ತಿಂಗಳಿಗೆ ಎಷ್ಟು ಲಕ್ಷ ಖರ್ಚು?

ಟಾಲಿವುಡ್‌ನ ದಿಗ್ಗಜ ಅಕ್ಕಿನೇನಿ ನಾಗಾರ್ಜುನ ಫಿಟ್ನೆಸ್ ಬಗ್ಗೆ ಎಲ್ಲರಿಗೂ ಒಂದು ಕಣ್ಣಿದೆ. ವಯಸ್ಸು 65 ಆದರೂ, ಲುಕ್‌ನಲ್ಲಿ ಟಾಲಿವುಡ್ ಮನ್ಮಥನನ್ನು ಹಿಂದಿಕ್ಕುವುದಕ್ಕೆ ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಇವರ ಸಮಾಕಾಲೀನರು ಕೂಡ ತಮ್ಮ ವಯಸ್ಸನ್ನು ಮರೆ ಮಾಚುವುದರಲ್ಲಿ ಸೋತಿದ್ದಾರೆ. ಆದರೆ, ಅಕ್ಕಿನೇನಿ ನಾಗಾರ್ಜುನ ಹಾಗಲ್ಲ. 65ರಲ್ಲೂ ಯುವಕರನ್ನೇ ನಾಚುವಂತೆ ಮಾಡುತ್ತಿದ್ದಾರೆ.

ಟಾಲಿವುಡ್‌ನಲ್ಲಿ ನಾಗಾರ್ಜುನ ಫಿಟ್ನೆಸ್‌ ಬಗ್ಗೆ ಮಾತಾಡದವರೇ ಇಲ್ಲ. ಇಂದಿನ ಯುವ ನಟರಿಗೆ ಕಾಂಪಿಟೇಷನ್ ಕೊಡುವ ನಾಗರ್ಜುನ ಫಿಟ್ನೆಸ್ ಮೇಲೆ ಸಾಕಷ್ಟು ಮಂದಿಗೆ ಕಣ್ಣಿದೆ. ವಯಸ್ಸು 50 ದಾಟುತ್ತಿದ್ದಂತೆ ಕೆಲವು ಸ್ಟಾರ್‌ ನಟರ ಮುಖಗಳು ಸುಕ್ಕು ಕಟ್ಟುವುದಕ್ಕೆ ಶುರುವಾಗುತ್ತವೆ. ಅಂತಹದ್ರಲ್ಲಿ ನಾಗಾರ್ಜುನ ಇನ್ನೂ ಯಂಗ್ ಆಗಿ ಹೇಗೆ ಕಾಣಿಸುತ್ತಾರೆ? ಅವರ ಫಿಟ್ನೆಸ್ ಮಂತ್ರವೇನು? ಡಯೆಟ್ ಪ್ಲ್ಯಾನ್ ಹೇಗಿದೆ? ಅಂತ ತಿಳಿದುಕೊಳ್ಳುವ ಕುತೂಹಲ ಸಹಜ.

Akkineni Nagarjuna spends lakhs of rupees per month for his diet here is the details

ಅಕ್ಕಿನೇನಿ ನಾಗಾರ್ಜುನ ತಮ್ಮ ಫಿಟ್ನೆಸ್ ಮಂತ್ರವೇನು ಅನ್ನೋದನ್ನು ಈಗಾಗಲೇ ಹಲವು ಬಾರಿ ಹೇಳಿಕೊಂಡಿದ್ದಾರೆ. ದಿನಕ್ಕೆ ಎಷ್ಟು ಗಂಟೆ ವರ್ಕ್‌ಔಟ್ ಮಾಡುತ್ತಾರೆ. ಆಹಾರ ಪದ್ಧತಿ ಬಗ್ಗೆನೂ ಗುಟ್ಟನ್ನು ಬಿಟ್ಟುಕೊಟ್ಟಿದ್ದಾರೆ. ಆದರೆ, ಇಷ್ಟೊಂದು ಫಿಟ್ನೆಸ್ ಅನ್ನು ಕಾಪಾಡಿಕೊಳ್ಳುವುದಕ್ಕಾಗಿ ಅಕ್ಕಿನೇನು ನಾಗಾರ್ಜುನ ಪ್ರತಿ ತಿಂಗಳಿಗೆ ಲಕ್ಷಾಂತರ ರೂಪಾಯಿ ಹಣವನ್ನು ಖರ್ಚು ಮಾಡುತ್ತಾರೆ. ಹಾಗಿದ್ದರೆ, ಇವರ ಡಯೆಟ್ ಪ್ಲ್ಯಾನ್ ಹೇಗಿದೆ? ಎಷ್ಟು ಖರ್ಚು ಮಾಡುತ್ತಾರೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಟಾಲಿವುಡ್ ಮನ್ಮಥ ಅಕ್ಕಿನೇನಿ ನಾಗಾರ್ಜುನ ವಾರಕ್ಕೆ ಐದರಿಂದ ಆರು ದಿನಗಳ ಕಾಲ ವರ್ಕ್‌ಔಟ್ ಮಾಡುತ್ತಾರೆ. ದಿನಕ್ಕೆ ಒಂದು ಗಂಟೆ ಬೆಳಗ್ಗಿನ ಹೊತ್ತಲ್ಲಿ ವರ್ಕ್‌ಔಟ್ ಮಾಡುತ್ತಾರೆ. ಈ ವೇಳೆ ಎಲ್ಲಾ ರೀತಿಯ ವರ್ಕ್‌ಔಟ್ ಅನ್ನೂ ಮಾಡುತ್ತಾರೆ. ಹಾಗೇ ಕಾರ್ಡಿಯೋಗೆ ಹೆಚ್ಚಿನ ಒತ್ತು ಕೊಡುವುದಾಗಿ ಹೇಳಿಕೊಂಡಿದ್ದಾರೆ. ಇದರೊಂದಿಗೆ ಕೇವಲ ವರ್ಕ್‌ಔಟ್ ಅಂತ ಜಿಮ್‌ನಲ್ಲಿ ಅಷ್ಟೇ ಸಮಯ ಕಳೆಯುವುದಿಲ್ಲ. ಇದರೊಂದಿಗೆ ಸ್ವಿಮ್ಮಿಂಗ್ ಹಾಗೂ ಗಾಲ್ಫ್ ಆಡುವುದರ ಕಡೆಗೆ ಗಮನ ಹರಿಸುತ್ತಾರೆ.

ಅಕ್ಕಿನೇನಿ ನಾಗರ್ಜುನ ಕಳೆದ 35 ವರ್ಷಗಳಿಂದ ಒಂದು ಗಂಟೆ ಜಿಮ್‌ನಲ್ಲಿ ಕಸರತ್ತು ಮಾಡುವುದನ್ನು ರೂಢಿ ಮಾಡಿಕೊಂಡು ಬಂದಿದ್ದಾರೆ. ಫಿಟ್ನೆಸ್ ಬಗ್ಗೆ ಕಾಳಜಿ ಇಟ್ಟುಕೊಂಡಿರುವ ನಾಗಾರ್ಜುನ ಜಿಮ್ ಅನ್ನು ಮಿಸ್ ಮಾಡುವುದಿಲ್ಲ. ಒಂದು ವೇಳೆ ಜಿಮ್‌ಗೆ ಹೋಗುವುದಕ್ಕೆ ಆಗದೇ ಹೋದರೆ, ಲಾಂಗ್ ವಾಕ್ ಹಾಗೂ ಸ್ವಿಮ್ ಅನ್ನು ಮಾಡುವುದನ್ನು ಮಾತ್ರ ನಿಲ್ಲಿಸುವುದಿಲ್ಲ. ಈಗಾಗಲೇ ಹಲವೆಡೆ ನೀಡಿರುವ ಸಂದರ್ಶನದಲ್ಲಿ ವರ್ಕ್‌ಔಟ್ ನನ್ನ ಮೊದಲ ಆಯ್ಕೆ. ಬೆಳಗ್ಗೆ ಎದ್ದ ಕೂಡಲೇ ವರ್ಕ್‌ಔಟ್ ಮುಗಿಸಿ, ಮುಂದಿನ ಕೆಲಸಗಳನ್ನು ಆರಂಭ ಮಾಡುತ್ತಾರೆ.

Akkineni Nagarjuna spends lakhs of rupees per month for his diet here is the details

ಫಿಟ್ನೆಸ್ ಜೊತೆ ನಾಗಾರ್ಜುನ ಡಯೆಟ್‌ ಅನ್ನು ಕಟ್ಟು ನಿಟ್ಟಾಗಿ ಫಾಲೋ ಮಾಡುತ್ತಾರೆ. ಕಳೆದ 30 ವರ್ಷಗಳಿಂದ ಈ ಡಯೆಟ್ ಅನ್ನು ಫಾಲೋ ಮಾಡಿಕೊಂಡು ಬರುತ್ತಿದ್ದಾರೆ. ಸಂಜೆ 7 ರಿಂದ 7.30ರ ಒಳಗೆ ನಾಗಾರ್ಜುನ ಊಟ ಮಾಡಿ ಮುಗಿಸುತ್ತಾರೆ. ಅಲ್ಲಿಂದ ಮತ್ತೆ ಬೆಳಗ್ಗೆ ತಿಂಡಿಯವರೆಗೂ ಏನನ್ನೂ ಮುಟ್ಟುವುದಿಲ್ಲ. ಈ ಗ್ಯಾಪ್‌ನಲ್ಲಿ ಸುಮಾರು 12 ಗಂಟೆಗಳ ಅಂತರವಿರುತ್ತೆ. ಅಂದರೆ, 12 ಗಂಟೆ ಯಾವುದೇ ಆಹಾರವನ್ನು ತೆಗೆದುಕೊಳ್ಳುವುದಿಲ್ಲ.

12 ಗಂಟೆ ಒಂದೇ ಒಂದು ಅಗಳನ್ನು ಮುಟ್ಟದ ನಾಗಾರ್ಜುನ ಇನ್ನು 12 ಗಂಟೆಗಳಲ್ಲಿ ಏನನ್ನು ತಿನ್ನಬೇಕು ಅಂತ ಪ್ಲಾನ್ ಹಾಕಿಕೊಂಡಿದ್ದಾರೆ. ಆ ಪ್ಲ್ಯಾನ್ ಮಾಡಿಕೊಡುವುದಕ್ಕೆ ಅಂತಾನೇ ಒಂದು ತಂಡವಿದೆ. ಇವರಿಗೆ ಪ್ರತಿ ದಿನ 10 ಸಾವಿರ ರೂಪಾಯಿಯನ್ನು ಖರ್ಚು ಮಾಡುತ್ತಾರೆ. ಅಂದರೆ, ಒಂದು ತಿಂಗಳಿಗೆ ಡಯೆಟ್ ಪ್ಯಾನ್‌ಗೆ ಅಂತಾನೇ 3 ಲಕ್ಷ ರೂಪಾಯಿ ಹಣವನ್ನು ಖರ್ಚು ಮಾಡುತ್ತಾರೆ. ವರ್ಕ್‌ಔಟ್ ಹಾಗೂ ಡಯೆಟ್ ಎರಡನ್ನು ಸಮಾನವಾಗಿ ಬ್ಯಾಲೆನ್ಸ್ ಮಾಡುವುದರಿಂದ ನಾಗಾರ್ಜುನ 65ನೇ ವಯಸ್ಸಿನಲ್ಲೂ ಸಿಕ್ಕಾಪಟ್ಟೆ ಫಿಟ್ ಆಗಿದ್ದಾರೆ.

More from Filmibeat

English summary
Akkineni Nagarjuna spends lakhs of rupees per month for his diet. Here is the details;
Read more about: lifestyle tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X