'ಕಣ್ಣಪ್ಪ' ಸಿನಿಮಾದಲ್ಲಿ ಪ್ರಭಾಸ್‌ಗೆ 30 ನಿಮಿಷ.. ಅಕ್ಷಯ್ ಕುಮಾರ್, ಮೋಹನ್ ಲಾಲ್, ಕಾಜಲ್‌ಗೆ ಎಷ್ಟು?

ಟಾಲಿವುಡ್‌ನ ದುಬಾರಿ ಸಿನಿಮಾ ಕಣ್ಣಪ್ಪ ಇದೇ ವಾರ ಬಿಡುಗಡೆಯಾಗುತ್ತಿದೆ. 24 ಫ್ರೇಮ್ಸ್ ಫ್ಯಾಕ್ಟರಿ ಹಾಗೂ ಎವಿಎ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಲ್ಲಿ ತೆಲುಗು ಚಿತ್ರರಂಗದ ದಿಗ್ಗಜ ಮೋಹನ್ ಬಾಬು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಮೋಹನ್‌ ಬಾಬು ಅವರ ಪುತ್ರ ವಿಷ್ಣು ಮಂಚು ನಾಯಕನಾಗಿ ಕಣ್ಣಪ್ಪನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದ್ಹಾಗೆ ಈ ಸಿನಿಮಾಗೆ ಕಥೆ, ಚಿತ್ರಕಥೆ ಕೊಟ್ಟಿದ್ದೂ ಕೂಡ ವಿಷ್ಣು ಮಂಚು.

'ಕಣ್ಣಪ್ಪ' ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಒಂದು ಇತಿಹಾಸವನ್ನು ನಿರ್ಮಿಸಬಹುದೆಂಬ ನಿರೀಕ್ಷೆಯನ್ನು ಟಾಲಿವುಡ್‌ನಲ್ಲಿದೆ. ಬಹಳ ದಿನಗಳ ಬಳಿಕ ಪೌರಾಣಿಕ ಸಿನಿಮಾ ಟಾಲಿವುಡ್‌ನಲ್ಲಿ ಸದ್ದು ಮಾಡುವ ಸಾಧ್ಯತೆಯಿದೆ. ಈ ಸಿನಿಮಾದಲ್ಲಿ ವಿಷ್ಣು ಮಂಚು, ಮೋಹನ್‌ ಬಾಬು ಜೊತೆ ಅಕ್ಷಯ್ ಕುಮಾರ್, ಪ್ರಭಾಸ್, ಮೋಹನ್ ಲಾಲ್, ಶರತ್ ಕುಮಾರ್, ಕಾಜಲ್ ಅಗರ್ವಾಲ್, ಪ್ರೀತಿ ಮುಕುಂದನ್ ಸೇರಿದಂತೆ ಹಲವು ಜನಪ್ರಿಯ ನಟರು ನಟಿಸಿದ್ದಾರೆ.

Akshay Kumar Mohanlal Prabhas screen space in Vishnu Manchu movie Kannappa

ಈ ಬಹುಕೋಟಿ ವೆಚ್ಚದ ಸಿನಿಮಾಗೆ ಸ್ಟಾರ್‌ ಪ್ಲಸ್‌ಗೆ 'ಮಹಾಭಾರತ' ಧಾರಾವಾಹಿಯನ್ನು ನಿರ್ದೇಶಿಸಿದ್ದ ಮುಖೇಶ್ ಕುಮಾರ್ ಸಿಂಗ್ ಆಕ್ಷನ್ ಕಟ್ ಹೇಳಿದ್ದಾರೆ. ಶೆಲ್ಡನ್ ಚಾವು ಛಾಯಾಗ್ರಹಣವನ್ನು, ಸ್ಟೀಫನ್ ದೇವಸ್ಸಿ ಸಂಗೀತವನ್ನು ಮತ್ತು ಆಂಥೋನಿ ಗುನ್ಸಾಲ್ವೆಜ್ ಸಂಕಲನವನ್ನು ನಿರ್ವಹಿಸಿದ್ದಾರೆ. ವಿಷ್ಣು ಮಂಚು ಬಿಟ್ಟು ಭಾರತೀಯ ಚಿತ್ರರಂಗದ ಸೂಪರ್‌ಸ್ಟಾರ್‌ಗಳು ಈ ಸಿನಿಮಾದಲ್ಲಿ ಎಷ್ಟು ನಿಮಿಷ ಕಾಣಿಸಿಕೊಳ್ಳುತ್ತಾರೆ? ತಿಳಿಯುವುದಕ್ಕೆ ಮುಂದೆ ಓದಿ.

ಪೌರಾಣಿಕ ಸಿನಿಮಾ 'ಕಣ್ಣಪ್ಪ'ದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಶಿವನ ಪಾತ್ರದಲ್ಲಿ ನಟಿಸಿದ್ದಾರೆ. ಮೋಹನ್ ಲಾಲ್, ಪ್ರಭಾಸ್, ಮೋಹನ್ ಬಾಬು, ಕಾಜಲ್ ಸೇರಿದಂತೆ ಇನ್ನು ಕೆಲ ನಟರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಉತ್ತರ ಭಾರತ ಮತ್ತು ದಕ್ಷಿಣ ಭಾರತದಲ್ಲಿ ಪ್ರಮುಖ ರಾಜ್ಯಗಳಲ್ಲಿ ಪ್ರಚಾರ ಮಾಡಲಾಗಿದೆ. ಈಗಾಗಲೇ ಕನ್ನಡ, ಮಲಯಾಳಂ ಹಾಗೂ ತಮಿಳು ಭಾಷೆಗಳಲ್ಲಿ 'ಕಣ್ಣಪ್ಪ' ಸಿನಿಮಾದ ಪ್ರಚಾರ ಮಾಡಲಾಗಿದೆ. ಸದ್ಯ ಸೆನ್ಸಾರ್ ಮಂಡಳಿಯ (CBFC) ಅಧಿಕಾರಿಗಳು ಇತ್ತೀಚೆಗೆ ಈ ಸಿನಿಮಾವನ್ನು ವೀಕ್ಷಿಸಿದ್ದಾರೆ. ಈ ವೇಳೆ 'ಕಣ್ಣಪ್ಪ' ಬಗ್ಗೆ ಕೆಲವು ವಿಷಯಗಳು ಹೊರ ಬಿದ್ದಿವೆ.

'ಕಣ್ಣಪ್ಪ' ಸಿನಿಮಾ ಪ್ರಮುಖ ಆಕರ್ಷಣೆ ಪ್ರಭಾಸ್. ಈ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಂತ ಕೇವಲ ಐದು ಹತ್ತು ನಿಮಿಷಗಳಿಗೆ ಬಂದು ಹೋಗುವ ಪಾತ್ರವಲ್ಲ. ಈ ಸಿನಿಮಾದಲ್ಲಿ ರೆಬೆಲ್ ಸ್ಟಾರ್ ಸುಮಾರು 30 ನಿಮಿಷಗಳ ಕಾಲ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಪ್ಯಾನ್ ಇಂಡಿಯಾ ರಿಲೀಸ್ ಆಗುತ್ತಿರುವ 'ಕಣ್ಣಪ್ಪ' ಸಿನಿಮಾಗೆ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪವರ್ ಸಿಕ್ಕಂತೆ ಆಗಿದೆ.

Akshay Kumar Mohanlal Prabhas screen space in Vishnu Manchu movie Kannappa

ಇನ್ನು ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇವರು ಇಡೀ ಸಿನಿಮಾದಲ್ಲಿ 15 ನಿಮಿಷಗಳ ಕಾಲ ಇರುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಹಾಗೇ ಬಾಲಿವುಡ್ ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್ ಶಿವನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ಒಂದು ಹಾಡು ಸೇರಿದಂತೆ ಸುಮಾರು 18 ನಿಮಿಷಗಳ ಕಾಲ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಿದ್ದಾರೆ. ಇನ್ನು ಪಾರ್ವತಿಯ ಪಾತ್ರದಲ್ಲಿ ನಟಿಸಿರುವ ಕಾಜಲ್ ಅಗರ್ವಾಲ್ 15 ನಿಮಿಷಗಳ ಕಾಲ ಸಿನಿಮಾದಲ್ಲಿ ಇರುತ್ತಾರೆ ಎಂದು ಸುದ್ದಿ ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ.

'ಕಣ್ಣಪ್ಪ' ಸಿನಿಮಾ ಸುಮಾರು 3 ಗಂಟೆ 15 ನಿಮಿಷಗಳಷ್ಟು ರನ್ ಟೈಮ್ ಇದೆ. ಸೆನ್ಸಾರ್ ಮಂಡಳಿ ಈ ಸಿನಿಮಾಗೆ ಯು/ಎ ಸರ್ಟಿಫಿಕೇಟ್ ಕೊಟ್ಟಿದೆ ಎಂದು ಚಿತ್ರತಂಡ ಬಹಿರಂಗ ಪಡಿಸಿದೆ. ಪಾತ್ರಗಳನ್ನ ಅಚ್ಚುಕಟ್ಟಾಗಿ ವಿನ್ಯಾಸಗೊಳಿಸಿದ್ದು, ಸೂಪರ್‌ಸ್ಟಾರ್‌ಗಳ ಎಂಟ್ರಿ ಸಿನಿಮಾಗೆ ಯಾವುದೇ ರೀತಿ ತೊಂದರೆಯಾಗಿಲ್ಲ. ಅದು ಕಥೆಯಲ್ಲಿ ಹೊಂದಿಕೊಂಡಿದೆ ಎಂದು ಹೇಳಲಾಗುತ್ತಿದೆ. ಮುಖೇಶ್ ಕುಮಾರ್ ಸಿಂಗ್ ಈ ಸಿನಿಮಾ ಜೂನ್ 27 ರಂದು ಅದ್ದೂರಿಯಾಗಿ ರಿಲೀಸ್ ಆಗುತ್ತಿದೆ.

More from Filmibeat

English summary
Akshay Kumar, Mohanlal, Prabhas screen space in Vishnu Manchu movie Kannappa.
Read more about: tollywood akshay kumar mohanlal
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X