ಎನ್‌ಟಿಆರ್‌ಗೆ ಕೈ ಕೊಟ್ಟ ಆಲಿಯಾ, ದೀಪಿಕಾ: ಸಾಯಿ ಪಲ್ಲವಿ, ರಶ್ಮಿಕಾ ಇಬ್ಬರಲ್ಯಾರು ಹೀರೊಯಿನ್?
RRR ಬಳಿಕ ಜೂ.ಎನ್‌ಟಿಆರ್ ಸಿನಿಮಾ ಮೇಲೆ ಎಲ್ಲರ ಕಣ್ಣಿದೆ. ಕೊರಟಾಲ ಶಿವ ಹಾಗೂ ಜೂ.ಎನ್‌ಟಿಆರ್ ಕಾಂಬಿನೇಷನ್ ಸಿನಿಮಾ ಹೇಗಿರುತ್ತೆ? ಜೂ.ಎನ್‌ಟಿಆರ್‌ಗೆ ನಾಯಕಿ ಯಾರಾಗುತ್ತಾರೆ? ಇಂತಹದ್ದೇ ಒಂದಿಷ್ಟು ಕುತೂಹಲ ಸಿನಿಪ್ರಿಯರಲ್ಲಿದೆ. ಅದಕ್ಕೆ ಕಾರಣ, ಆಲಿಯಾ ಭಟ್ ಹಾಗೂ ದೀಪಿಕಾ ಪಡುಕೋಣೆ.
ಜೂ. ಎನ್‌ಟಿಆರ್ 30ನೇ ಸಿನಿಮಾಗೆ ಆಲಿಯಾ ಭಟ್ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಇನ್ನೇನು ಶೂಟಿಂಗ್‌ಗೆ ಬಂದೇ ಬಿಡ್ತಾರೆ ಎಂದಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಆಲಿಯಾ ಭಟ್ 'NTR 30' ಸಿನಿಮಾದಿಂದ ಹೊರ ನಡೆದಿದ್ದರು. ಆಲಿಯಾ ಬಳಿಕ ದೀಪಿಕಾ ಪಡುಕೋಣೆಗೆ ಪ್ರೋಚ್ ಮಾಡಲಾಗಿತ್ತು. ಆದರೆ, ದೀಪಿಕಾ ಸಿನಿಮಾದಲ್ಲಿ ನಟಿಸಲು ಆಸಕ್ತಿ ತೋರಿಸಲ್ಲ ಎನ್ನುತ್ತಿದೆ ಟಾಲಿವುಡ್. ಅದಕ್ಕೀಗ ದಕ್ಷಿಣ ಭಾರತದ ಇಬ್ಬರು ಹೀರೊಯಿನ್ ಮೇಲೆ ಚಿತ್ರತಂಡ ಕಣ್ಣಿಟ್ಟಿದೆ ಎನ್ನಲಾಗಿದೆ.

NTR 30ಗೆ ಹೀರೊಯಿನ್ ಯಾರು?
ಜೂ. ಎನ್‌ಟಿಆರ್ 30ನೇ ಸಿನಿಮಾಗೆ ಚಿತ್ರತಂಡ ಹೀರೊಯಿನ್ ಹುಡುಕುತ್ತಿದೆ. ಆಲಿಯಾ ಹಾಗೂ ದೀಪಿಕಾ ಪಡುಕೋಣೆ ಇಬ್ಬರೂ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದು ಹೇಳಿದ ಬಳಿಕ ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿದ್ಯಂತೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಗುರುತಿಸಿಕೊಂಡಿರುವ ಹೀರೊಯೊನ್ ಇದ್ದರೆ ಒಳ್ಳೆಯದು ಎಂದು ಚಿತ್ರತಂಡ ಬಯಸುತ್ತಿದೆ. ಆದರೆ, ಅವರಿಗೆ ಸಿಗುತ್ತಿಲ್ಲ ಎಂಬುದು ಟಾಲಿವುಡ್‌ನಲ್ಲಿ ಹರಿದಾಡುತ್ತಿರುವ ಸಂಗತಿ.
ಸದ್ಯ ಚಿತ್ರತಂಡದ ಮುಂದೆ ಇಬ್ಬರು ಹೀರೊಯಿನ್ ಇದ್ದಾರೆ. ಸಾಯಿ ಪಲ್ಲವಿ ದಕ್ಷಿಣ ಭಾರತದ ಎಲ್ಲಾ ಭಾಷಿಗರು ತಂಬಾನೇ ಚಿರಪರಿಚಿತ. ಅದರಲ್ಲೂ ತೆಲುಗು ಮಂದಿಯ ಫೇವರಿಟ್ ನಟಿ. ಹೀಗಾಗಿ ಸಾಯಿ ಪಲ್ಲವಿಯನ್ನು ಅಪ್ರೋಚ್ ಮಾಡಲಾಗಿದ್ಯಂತೆ. ಇನ್ನೊಂದು ಕಡೆ ಚಿತ್ರತಂಡ ರಶ್ಮಿಕಾ ಮಂದಣ್ಣಗೂ ಗಾಳ ಹಾಕುತ್ತಿದೆ ಎನ್ನಲಾಗಿದೆ.
ಎನ್‌ಟಿಆರ್-ರಶ್ಮಿಕಾ ಕಾಂಬಿನೇಷನ್ ವರ್ಕ್‌ಔಟ್ ಆಗುತ್ತಾ?
ರಶ್ಮಿಕಾ ಈಗ ಬಾಲಿವುಡ್ ಸಿನಿಮಾಗಳಲ್ಲೂ ಬ್ಯುಸಿ. ಬಾಲಿವುಡ್‌ನಲ್ಲಿಯೇ 3 ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಎರಡು ಸಿನಿಮಾಗಳ ಶೂಟಿಂಗ್ ಮುಗಿಸಿರುವ ರಶ್ಮಿಕಾ ಮಂದಣ್ಣ, ರಣ್‌ಬೀರ್ ಕಪೂರ್ ನಟಿಸುತ್ತಿರುವ 'ಎನಿಮಲ್' ಸಿನಿಮಾದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಮೊದಲೆರಡು ಸಿನಿಮಾ ರಿಲೀಸ್ ಆದರೆ, ರಶ್ಮಿಕಾ ಬಾಲಿವುಡ್ ಮಂದಿಗೆ ಇನ್ನೂ ಪರಚಿತರಾಗುತ್ತಾರೆ. ಈ ಕಾರಣಕ್ಕೆ ರಶ್ಮಿಕಾ ಮಂದಣ್ಣ ಎನ್‌ಟಿಆರ್ ಸಿನಿಮಾಗೆ ಸೂಟ್ ಆಗುತ್ತಾರೆ ಅನ್ನೋದು ಚಿತ್ರತಂಡದ ಲೆಕ್ಕ.

ಟಾಲಿವುಡ್ ಮೂಲಗಳ ಪ್ರಕಾರ, ಈಗಾಗಲೇ ಕೊರಟಾಲ ಶಿವ ಹಾಗೂ ಚಿತ್ರತಂಡ ರಶ್ಮಿಕಾ ಮಂದಣ್ಣಗೆ ಒಂದು ಸುತ್ತು ಅಪ್ರೋಚ್ ಕೂಡ ಮಾಡಲಾಗಿದೆ. ಆದರೆ, ರಶ್ಮಿಕಾ ಇನ್ನೂ ಸಮಯ ತೆಗೆದುಕೊಂಡಿದ್ದಾರೆ ಎನ್ನುತ್ತಿವೆ ಮೂಲಗಳು.
ಆಲಿಯಾ ಭಟ್ ಹಾಲಿವುಡ್‌ಗೆ ಹಾರಿದ್ದರಿಂದ ಟಾಲಿವುಡ್‌ನಲ್ಲಿ ನಟಿಸಬೇಕಿದ್ದ ಸಿನಿಮಾವನ್ನು ಕೈ ಬಿಟ್ಟಿದ್ದಾರೆ. ಒಂದು ವೇಳೆ ಹಾಲಿವುಡ್ ಸಿನಿಮಾಗೆ ಅವಕಾಶ ಬಾರದೆ ಹೋಗಿದ್ದರೆ, ಎನ್‌ಟಿಆರ್ 30ನೇ ಸಿನಿಮಾಗೆ ಆಲಿಯಾ ಭಟ್ ಹೀರೊಯಿನ್ ಆಗಿ ಮತ್ತೊಮ್ಮೆ ತೆಲುಗಿನ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದರು.


Click it and Unblock the Notifications











