ಯಶ್ ಹಿಂದೆನೇ ಗ್ಲೋಬಲ್ ಸಿನಿಮಾ ಮೇಲೆ ಕಣ್ಣಿಟ್ಟ ಅಲ್ಲು ಅರ್ಜುನ್; ಅಟ್ಲೀ ಆಕ್ಷನ್.. ₹600 ಕೋಟಿ ಬಜೆಟ್

ಟಾಲಿವುಡ್‌ನ ಐಕಾನ್ ಸ್ಟಾರ್ ಅಲ್ಲು ಅರ್ಜುನ್‌ಗೆ ಇಂದು (ಏಪ್ರಿಲ್ 8) ಹುಟ್ಟುಹಬ್ಬ. 43ನೇ ವರ್ಷಕ್ಕೆ ಕಾಲಿಟ್ಟಿರುವ ಅಲ್ಲು ಅರ್ಜುನ್ ಪತ್ನಿ ಹಾಗೂ ಮಕ್ಕಳೊಂದಿಗೆ ಬರ್ತ್‌ಡೇಯನ್ನು ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬದ ಈ ಶುಭ ಸಂದರ್ಭದಲ್ಲಿ ಅಲ್ಲು ಅರ್ಜುನ್ ಹೊಸ ಸಿನಿಮಾ ಅನೌನ್ಸ್ ಆಗಿದೆ. ತಮಿಳಿನ ಸ್ಟಾರ್ ನಿರ್ದೇಶಕ ಅಟ್ಲೀ ಐಕಾನ್‌ ಸ್ಟಾರ್‌ಗೆ ಆಕ್ಷನ್ ಕಟ್ ಹೇಳುವುದು ಕನ್ಫರ್ಮ್ ಆಗಿದೆ.

'ಪುಷ್ಪ 2' ಸೂಪರ್‌ ಸಕ್ಸಸ್‌ನಲ್ಲಿ ತೇಲಾಡುತ್ತಿರುವ ಅಲ್ಲು ಅರ್ಜುನ್‌ಗೆ ಈ ಬಾರಿ ಬರ್ತ್‌ಡೇ ಸಖತ್ ಸ್ಪೆಷಲ್. ಒಂದ್ಕಡೆ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಇನ್ನೊಂದು ಕಡೆ ಬರ್ತ್‌ಡೇಗೆ ಮತ್ತೊಂದು ಮೆಗಾ ಬಜೆಟ್ ಸಿನಿಮಾ ಅನೌನ್ಸ್ ಆಗಿದೆ. ಅಲ್ಲು ಅರ್ಜುನ್ ಹಾಗೂ ಅಟ್ಲೀ ಕಾಂಬಿನೇಷನ್ ಸಿನಿಮಾವನ್ನು 'ಜೈಲರ್', 'ಜೈಲರ್ 2' ಸಿನಿಮಾಗಳ ನಿರ್ಮಾಣ ಸಂಸ್ಥೆ ಸನ್ ಪಿಕ್ಚರ್ಸ್ ಪ್ರಡ್ಯೂಸ್ ಮಾಡುತ್ತಿದೆ.

Allu Arjun and Atlee movie announced AA22xA6 its a Rs 600 crore movie

ಅಲ್ಲು ಅರ್ಜುನ್ 43ನೇ ಹುಟ್ಟುಹಬ್ಬಕ್ಕೆ ಈ ಮೆಗಾ ಪ್ರಾಜೆಕ್ಟ್ ಅನೌನ್ಸ್ ಆಗಿದೆ. ಸದ್ಯಕ್ಕೆ ಈ ಸಿನಿಮಾಗೆ AA22xA6 ಅಂತ ಟೈಟಲ್ ಫಿಕ್ಸ್ ಮಾಡಲಾಗಿದೆ. ಈ ಅನೌನ್ಸ್‌ಮೆಂಟ್ ಜೊತೆಗೆ ಸಿನಿಮಾಗೆ ಪೂರ್ವ ತಯಾರಿ ನಡೆಸಿದ ವಿಡಿಯೋವನ್ನು ರಿಲೀಸ್ ಮಾಡಲಾಗಿದೆ. ಈ ಮೂಲಕ ಇದೊಂದು ಸೈನ್ಸ್ ಫಿಕ್ಷನ್ ಸಿನಿಮಾ ಎನ್ನುವ ಸುಳಿವನ್ನು ಅಲ್ಲು ಅರ್ಜುನ್ ಹಾಗೂ ಅಟ್ಲೀ ನೀಡಿದ್ದಾರೆ.

'ಪುಷ್ಪ 2' ಬಳಿಕ ಅಲ್ಲು ಅರ್ಜುನ್ ಮುಂದಿನ ಸಿನಿಮಾ ಯಾವುದು ಅಂತ ಅವರ ಫ್ಯಾನ್ಸ್ ಎದುರು ನೋಡುತ್ತಿದ್ದರು. ಅದಕ್ಕೀಗ ತೆರೆ ಬಿದ್ದಿದ್ದೆ. ಸುಮಾರು ₹600 ಕೋಟಿ ರೂಪಾಯಿ ವೆಚ್ಚದಲ್ಲಿ ಸನ್ ಫಿಕ್ಚರ್ಸ್ ಅಲ್ಲು ಅರ್ಜುನ್-ಅಟ್ಲೀ ಜೋಡಿಯ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಈಗಾಗಲೇ ಇದಕ್ಕೆ ಬೇಕಾಗಿರುವ ಪೂರ್ವ ತಯಾರಿಯನ್ನು ಮಾಡಿಕೊಳ್ಳಲಾಗಿದೆ. ಯುಎಸ್‌ಎಗೆ ತೆರಳಿ ಅಲ್ಲಿನ ವಿಎಫ್‌ಎಕ್ಸ್ ಕಂಪನಿಗಳಿಗೆ ಭೇಟಿ ನೀಡಿ ಚರ್ಚೆ ಮಾಡಿದ್ದಾರೆ. ಹಾಲಿವುಡ್‌ ಸಿನಿಮಾಗಳಿಗೆ ವಿಎಫ್‌ಎಕ್ಸ್ ಮಾಡುವ ಪ್ರತಿಷ್ಠಿತ ಸಂಸ್ಥೆಗಳು ಕೂಡ AA22xA6 ಸ್ಕ್ರಿಪ್ಟ್ ಅನ್ನು ಒಪ್ಪಿಕೊಂಡಿವೆ.

ಈ ಕುರಿತು ಸನ್‌ ಪಿಕ್ಚರ್ಸ್ ಒಂದು ವಿಡಿಯೋವನ್ನು ರಿವೀಲ್ ಮಾಡಿದೆ. ಸನ್ ಪಿಕ್ಚರ್ಸ್ ಸಂಸ್ಥೆಯ ಆಫೀಸ್‌ನಲ್ಲಿ ನಿರ್ಮಾಪಕ ಕಲಾನಿಧಿ ಮಾರನ್ ಅವರನ್ನು ಭೇಟಿ ಮಾಡುವಲ್ಲಿಂದ ಹಿಡಿದು ಅಮೆರಿಕಗೆ ತೆರಳಿ ಅಲ್ಲಿನ ವಿಎಫ್‌ಎಕ್ಸ್ ಸಂಸ್ಥೆಯೊಂದು ಚರ್ಚೆ ಮಾಡುವವರೆಗೂ ಒಂದು ಗ್ಲಿಂಪ್ಸ್ ಅನ್ನು ರಿಲೀಸ್ ಮಾಡಲಾಗಿದೆ. ಈ ವೇಳೆ ಹಾಲಿವುಡ್ ಸೈನ್ಸ್ ಫಿಕ್ಷನ್ ಸಿನಿಮಾಗಳಲ್ಲಿ ಸದ್ದು ಮಾಡಿದ ಕ್ಯಾರೆಕ್ಟರ್‌ಗಳು ಕಂಡಿವೆ. ಅದರಲ್ಲಿ 'ಅವತಾರ್' ಬಳಿ ನಿಂತು ಈ ಅಲ್ಲು ಅರ್ಜುನ್ ಹಾಗೂ ಅಟ್ಲೀ ಚರ್ಚೆ ಮಾಡುವುದನ್ನು ನೋಡಬಹುದಾಗಿದೆ.

ಯಶ್ 'ಕೆಜಿಎಫ್' ಅನ್ನು ಫ್ಯಾನ್ ಇಂಡಿಯಾ ಲೆವೆಲ್‌ಗೆ ತೆಗೆದುಕೊಂಡು ಹಾದಿಯನ್ನೇ ಅಲ್ಲ ಅರ್ಜುನ್ ಫಾಲೋ ಮಾಡಿದ್ದರು. 'ಪುಷ್ಪ' ಸೀರಿಸ್ ಅನ್ನು ಅದೇ ಫಾರ್ಮೂಲವನ್ನು ಇಟ್ಕೊಂಡು ಪ್ಯಾನ್ ಇಂಡಿಯಾ ಲೆವೆಲ್‌ಗೆ ತಲುಪಿಸಿದ್ದರು. 'ಕೆಜಿಎಫ್ 2' ಬಳಿಕ ಯಶ್ ಮುಂದಿನ ಸಿನಿಮಾ ಯಾವುದು? ಅಂತ ಹೇಗೆ ಫ್ಯಾನ್ಸ್ ತಲೆ ಕೆಡಿಸಿಕೊಂಡಿದ್ದರೋ. ಅದೇ ರೀತಿ ಅಲ್ಲು ಅರ್ಜುನ್ ಫ್ಯಾನ್ಸ್ ಕೂಡ ತಲೆ ಹುಳ ಬಿಟ್ಟುಕೊಂಡಿದ್ದರು. ಪ್ಯಾನ್ ಇಂಡಿಯಾ ಬಳಿಕ ಯಶ್ ಗ್ಲೋಬಲ್ ಸಿನಿಮಾಗೆ ಕೈ ಹಾಕಿದಂತೆ, ಅಲ್ಲು ಅರ್ಜುನ್ ಕೂಡ 'ಪುಷ್ಪ 2' ಬಳಿಕ ಗ್ಲೋಬಲ್ ಲೆವೆಲ್‌ನಲ್ಲಿ ಮಿಂಚುವುದಕ್ಕೆ ನಿರ್ಧರಿಸಿದಂತೆ ಇದೆ.

ಈ ಕಾರಣಕ್ಕೆ ಅಟ್ಲೀ ಜೊತೆ ಸೈನ್ಸ್ ಫಿಕ್ಷನ್ ಸಿನಿಮಾಗೆ ಕೈ ಹಾಕಿದ್ದಾರೆ. ಇತ್ತೀಚೆಗೆ ಸೈನ್ಸ್ ಫಿಕ್ಷನ್ ಸಿನಿಮಾಗಳಿಗೆ ಭಾರತದಲ್ಲಿ ಬೇಡಿಕೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಅಲ್ಲು ಅರ್ಜುನ್ ತನ್ನ 22ನೇ ಸಿನಿಮಾವನ್ನು ಆಯ್ಕೆ ಮಾಡಿಕೊಂಡಿರಬಹುದು ಎಂದು ಭವಿಷ್ಯ ನುಡಿಯಲಾಗಿದೆ. ಅಲ್ಲದೇ 'ಪುಷ್ಪ' ಸಿನಿಮಾದಲ್ಲಿ ಅಲ್ಲು ಅರ್ಜುನ್ ಮ್ಯಾನರಿಸಂ ದೇಶ ವಿದೇಶದಲ್ಲಿ ಸದ್ದು ಮಾಡಿತ್ತು. ಅದನ್ನೇ ಮುಂದಿಟ್ಟುಕೊಂಡು ಗ್ಲೋಬಲ್ ಆಡಿಯನ್ಸ್‌ಗಾಗಿ ಸಿನಿಮಾ ಮಾಡುವುದಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

More from Filmibeat

English summary
Allu Arjun and Atlee movie announced AA22xA6 its a Rs 600 crore movie.
Read more about: allu arjun atlee tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X