For Quick Alerts
    ALLOW NOTIFICATIONS  
    For Daily Alerts

    ಅಭಿಮಾನಿಗಳಿಗೆ ಸಂತಸದ ಸುದ್ದಿ ನೀಡಿದ ಅಲ್ಲು ಅರ್ಜುನ್

    |

    ಸುಕುಮಾರ್ ನಿರ್ದೇಶನದಲ್ಲಿ ಅಲ್ಲು ಅರ್ಜುನ್ ನಟಿಸುತ್ತಿರುವ 'ಪುಷ್ಪ' ಚಿತ್ರ ಈಗಾಗಲೇ ಸಾಕಷ್ಟು ಸದ್ದು ಮಾಡಿದೆ. ಚಿತ್ರದಲ್ಲಿ ನಟಿರುವ ಕಲಾವಿದರ ಕುರಿತಾಗಿಯೇ ಎರಡು ಮೂರು ತಿಂಗಳಿನಿಂದ ಚರ್ಚೆ ನಡೆಯುತ್ತಿದೆ. ಈ ನಡುವೆ ಅಲ್ಲು ಅರ್ಜುನ್ ಮತ್ತೊಂದು ಸಿನಿಮಾದ ಘೋಷಣೆ ಮಾಡಿದ್ದಾರೆ.

    ನಿರ್ದೇಶಕ ಕೊರಟಾಲ ಶಿವ ಜತೆ ಸಿನಿಮಾ ಮಾಡುತ್ತಿರುವುದಾಗಿ ಅಲ್ಲು ಅರ್ಜುನ್ ಪ್ರಕಟಿಸಿದ್ದಾರೆ. ಈ ಚಿತ್ರಕ್ಕೆ ಇನ್ನೂ ಅಧಿಕೃತ ಹೆಸರು ಇರಿಸಿಲ್ಲ. ತಾತ್ಕಾಲಿಕವಾಗಿ 'ಎಎ21' ಎಂದು ಶೀರ್ಷಿಕೆ ಇರಿಸಲಾಗಿದೆ. ಈ ಚಿತ್ರದ ವಿಶೇಷ ಪೋಸ್ಟರ್ ಅನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದೆ.

    ಅಲ್ಲು ಅರ್ಜುನ್ 'ಪುಷ್ಪ' ಸಿನಿಮಾದಿಂದ ಹೊರಬಂದ ನಟ ವಿಜಯ್ ಸೇತುಪತಿ ಹೇಳಿದ್ದೇನು?

    ಜುಲೈ 31ರಂದು ಅಲ್ಲು ಅರ್ಜುನ್ ಅಜ್ಜ ಅಲ್ಲು ರಾಮಲಿಂಗಯ್ಯ ಅವರ 16ನೇ ಪುಣ್ಯತಿಥಿ. ತಾತನನ್ನು ನೆನೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಅರ್ಜುನ್, ನಂತರ ತಮ್ಮ ಹೊಸ ಚಿತ್ರದ ಘೋಷಣೆ ಮಾಡಿದ್ದಾರೆ. ಮುಂದೆ ಓದಿ.

    ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆ

    ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆ

    ಯುವಸುಧಾ ಆರ್ಟ್ಸ್ ಮತ್ತು ಜಿಎ2 ಪಿಕ್ಚರ್ಸ್ ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರ 2022ರ ಆರಂಭದಲ್ಲಿ ಪ್ರಪಂಚದಾದ್ಯಂತ ಬಿಡುಗಡೆಯಾಗಲಿದೆ ಎಂದು ಮಾಹಿತಿ ನೀಡಲಾಗಿದೆ. ಅತಿ ದೊಡ್ಡ ಮನರಂಜನೆಯ ಚಿತ್ರ ಬಹುಭಾಷೆಗಳಲ್ಲಿ ತಯಾರಾಗಲಿದೆ ಎಂದು ಪ್ರಕಟಿಸಲಾಗಿದೆ.

    ಪ್ಯಾನ್ ಇಂಡಿಯಾ ಚಿತ್ರ

    ಪ್ಯಾನ್ ಇಂಡಿಯಾ ಚಿತ್ರ

    ಹೀಗಾಗಿ ಇದು ಕನ್ನಡದಲ್ಲಿಯೂ ಡಬ್ ಆಗಿ ಬಿಡುಗಡೆಯಾಗಲಿದೆ ಎಂಬ ನಿರೀಕ್ಷೆ ಮೂಡಿಸಿದೆ. ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಚಿತ್ರದ ಪೋಸ್ಟರ್ ಅನ್ನು ಕನ್ನಡದಲ್ಲಿಯೂ ಬಿಡುಗಡೆ ಮಾಡಲಾಗಿತ್ತು. ಕನ್ನಡದಲ್ಲಿ ಕೂಡ 'ಪುಷ್ಪ' ಬಿಡುಗಡೆ ಮಾಡಲಾಗುವುದು ಎಂದು ತಿಳಿಸಲಾಗಿತ್ತು. ಹಾಗೆಯೇ 'ಎಎ21' ಸಹ ಕನ್ನಡದಲ್ಲಿ ತೆರೆಕಾಣುವ ನಿರೀಕ್ಷೆಯಿದೆ.

    ಗ್ರಾಮವೊಂದರ ನದಿ ದಡ

    ಗ್ರಾಮವೊಂದರ ನದಿ ದಡ

    'ಎಎ21' ಚಿತ್ರದ ಪೋಸ್ಟರ್ ಗಮನ ಸೆಳೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನದಿಯೊಂದರ ತೀರದಲ್ಲಿ ನಿಂತಿರುವ ಯುವಕರಿಬ್ಬರು ಹಳ್ಳಿಯೊಂದರ ಕಡೆಗೆ ನೋಡುತ್ತಾ ನಿಂತಿರುವುದನ್ನು ಪೋಸ್ಟರ್‌ನಲ್ಲಿ ಚಿತ್ರಿಸಲಾಗಿದೆ. ಪಕ್ಕದಲ್ಲಿ ದೋಣಿಯೊಂದು ಇದೆ. ಈ ಪೋಸ್ಟರ್ ಚಿತ್ರದ ಕಥೆ ಏನಿರಬಹುದು ಎಂಬ ಸುಳಿವು ನೀಡದೆ ಇದ್ದರೂ ಕುತೂಹಲ ಮೂಡಿಸುವಂತಿದೆ.

    English summary
    Allu Arjun and director Koratala Siva are all set to join hands for a big Project. AA21 poster released.

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
    X