ನಿರ್ದೇಶಕ ಸುಕುಮಾರ್‌ಗೆ 'ಪುಷ್ಪ 2' ಚಿತ್ರಕ್ಕೆ ಕ್ಲೈಮ್ಯಾಕ್ಸ್ ಸಿಕ್ತಂತೆ: ಏನದು ಓಪನ್ ಎಂಡ್ ಕ್ಲೈಮ್ಯಾಕ್ಸ್?
'ಪುಷ್ಪ' ಗಲ್ಲಾಪಟ್ಟಿಗೆಯಲ್ಲಿ ಧೂಳೆಬ್ಬಿಸಿದ್ದು ಗೊತ್ತೇ ಇದೆ. ಸುಕುಮಾರ್ ನಿರ್ದೇಶಿಸಿದ ಈ ಸಿನಿಮಾ ಅಲ್ಲು ಅರ್ಜುನ್ ಅನ್ನು ಪ್ಯಾನ್ಇಂಡಿಯಾ ಸ್ಟಾರ್ ಮಾಡಿದೆ. ರಶ್ಮಿಕಾ ಮಂದಣ್ಣಗೆ ಮತ್ತೊಂದು ಸಕ್ಸಸ್‌ಫುಲ್ ಸಿನಿಮಾ ಕೊಟ್ಟಿದೆ. ಈಗ 'ಪುಷ್ಪ 2' ಬಗ್ಗೆ ಇಡೀ ಚಿತ್ರತಂಡ ತಲೆಕೆಡಿಸಿಕೊಂಡಿದೆ. ಈ ಚಿತ್ರವನ್ನು ಇನ್ನೊಂದು ಲೆವೆಲ್‌ಗೆ ತೆಗೆದುಕೊಂಡು ಹೋಗಲು ಸಕಲ ಪ್ರಯತ್ನಗಳೂ ನಡೆಯುತ್ತಿವೆ. ಆದರೆ, ಕೆಲವು ದಿನಗಳಿಂದ ನಿರ್ದೇಶಕ ಸುಕುಮಾರ್‌ಗೆ ಕ್ಲೈಮ್ಯಾಕ್ಸ್ ಸಿಕ್ಕಿಲ್ಲ ಅಂತ ಸುದ್ದಿ ಹರಿದಾಡಿತ್ತು. ಕೊನೆಗೂ ಕ್ಲೈಮ್ಯಾಕ್ ಸಿಕ್ಕಿದೆ ಅಂತಿದೆ ಟಾಲಿವುಡ್.
ಸಿನಿಮಾ ನಿರ್ದೇಶಕರ ಮುಂದೆ ದೊಡ್ಡ ಸವಾಲು ಅಂತ ಅನಿಸಿಕೊಳ್ಳುವುದು ಕ್ಲೈಮ್ಯಾಕ್ಸ್. ಸಿನಿಮಾ ಇಷ್ಟ ಪಡುವವರು ಯಾರಿಗೆ ಕೇಳಿದರೂ, ಮೊದಲು ಕ್ಲೈಮ್ಯಾಕ್ಸ್ ಬಗ್ಗೆನೇ ಮಾತಾಡುತ್ತಾರೆ. ಅದಕ್ಕೆ ನಿರ್ದೇಶಕ ಗಮನ ಈ ಕ್ಲೈಮ್ಯಾಕ್ಸ್ ಸೀನ್ ಬಗ್ಗೆನೇ ಇರುತ್ತೆ. ಅದಕ್ಕೆ 'ಪುಷ್ಪ 2' ಸಿನಿಮಾದ ಕ್ಲೈಮ್ಯಾಕ್ಸ್ ಬಗ್ಗೆ ಸುಕುಮಾರ್ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದ್ದರಂತೆ. ಕೊನೆಗೆ ತನ್ನ ಮನಸ್ಸಿಗೆ ಒಪ್ಪುವಂತಹ ಸೀನ್ ಸಿಕ್ಕಿದೆ ಎಂದು ಹೇಳುತ್ತಿದೆ ಟಾಲಿವುಡ್.

'ಪುಷ್ಪ 2' ಕ್ಲೈಮ್ಯಾಕ್ಸ್ ಗೊಂದಲ
'ಪುಷ್ಪ' ಸಿನಿಮಾ ಬ್ಲಾಕ್‌ಬಸ್ಟರ್ ಆಗಿರುವುದರಿಂದ ಸುಕುಮಾರ್ ಮೇಲೆ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ. ಬಾಲಿವುಡ್‌ನಲ್ಲೂ 100 ಕೋಟಿ ಮಾಡಿರುವ ಸಿನಿಮಾದ ಸೀಕ್ವೆಲ್ ಮತ್ತಷ್ಟು ಅದ್ಭುತವಾಗಿರಲೇಬೇಕು. 'ಪುಷ್ಪ 2' ಕಥೆ ಪ್ರೇಕ್ಷಕರಿಗೆ ಹಿಡಿಸದೆ ಹೋದರೆ, ಇಡೀ ತಂಡ ಗೆದ್ದೂ ಸೋತಂತೆ. ಅದಕ್ಕೆ ಸುಕುಮಾರ್ ಕಥೆ ಬಗ್ಗೆ ತುಂಬಾನೇ ತಲೆಕೆಡಿಸಿಕೊಂಡಿದ್ದಾರೆ. ಇದರೊಂದಿಗೆ ಈ ಸಿನಿಮಾವನ್ನು ಹೇಗೆ ಕೊನೆ ಮಾಡಬೇಕು ಅನ್ನೋ ಗೊಂದಲಕ್ಕೆ ಬಿದ್ದಿದ್ದರಂತೆ. ಸುಕುಮಾರ್ ಮುಂದೆ ಹಲವು ರೀತಿ ಕ್ಲೈಮ್ಯಾಕ್ಸ್ ಸೀನ್‌ಗಳಿತ್ತು. ಅವುಗಳಲ್ಲಿ ಯಾವುದು ತೆಗೆದುಕೊಳ್ಳಬೇಕು ಅನ್ನುವುದೇ ದೊಡ್ಡ ಸವಾಲಾಗಿತ್ತಂತೆ.

ಓಪನ್ ಎಂಡಿಂಗ್ ಕ್ಲೈಮ್ಯಾಕ್ಸ್
'ಪುಷ್ಪ 2' ಚಿತ್ರಕ್ಕೆ ಕ್ಲೈಮ್ಯಾಕ್ಸ್ ಹುಡುಕಲು ಕೂತಿದ್ದ ಸುಕುಮಾರ್ ಕೊನೆಗೂ ಒಂದು ನಿರ್ಧಾರಕ್ಕೆ ಬಂದಿದ್ದಾರಂತೆ. ಈ ಬಾರಿ ಓಪನ್ -ಎಂಡಿಂಗ್ ಕ್ಲೈಮ್ಯಾಕ್ಸ್ ತಂತ್ರವನ್ನು ಬಳಲು ನಿರ್ಧರಿಸಿದ್ದಾರೆ ಎನ್ನುತ್ತಿವೆ ಟಾಲಿವುಡ್ ಮೂಲಗಳು. ಸಿನಿಮಾದ ಆರಂಭದಲ್ಲಿ ಕ್ಲೈಮ್ಯಾಕ್ಸ್ ದೃಶ್ಯವನ್ನು ತೋರಿಸಿ, ಸಿನಿಮಾದ ಕೊನೆಯಲ್ಲಿ ಅದೇ ದೃಶ್ಯಕ್ಕೆ ಟ್ವಿಸ್ಟ್ ಕೊಡುವುದಕ್ಕೆ ಸಿನಿಮಾ ಭಾಷೆಯಲ್ಲಿ ಸಾಮಾನ್ಯವಾಗಿ ಓಪನ್-ಎಂಡಿಂಗ್ ಕ್ಲೈಮ್ಯಾಕ್ಸ್ ಎಂದು ಹೇಳುತ್ತಾರೆ. ಇದೇ ತಂತ್ರವನ್ನು 'ಪುಷ್ಪ 2' ಚಿತ್ರಕ್ಕೆ ಸುಕುಮಾರ್ ಬಳಸಲಿದ್ದಾರೆ ಎಂದು ಟಾಲಿವುಡ್ ಹರಿದಾಡುತ್ತಿರುವ ಬಿಸಿ ಬಿಸಿ ಸುದ್ದಿ.

ಎಂಡಿಂಗ್ ಹ್ಯಾಪಿನಾ.. ಟ್ರಾಜಿಡಿನಾ?
ಸುಕುಮಾರ್‌ಗೆ ಕ್ಲೈಮ್ಯಾಕ್ಸ್ ಸಿಕ್ಕಿದ್ದೇನೋ ನಿಜ. ಅಲ್ಲಿಗೆ ಇವರ ಗೊಂದಲ ಹೋಗಿಲ್ಲ. 'ಪುಷ್ಪ 2' ಸಿನಿಮಾವನ್ನು ಖುಷಿ ಖುಷಿಯಾಗಿ ಎಂಡ್ ಮಾಡಬೇಕಾ? ಇಲ್ಲಾ ದು:ಖದ ಸನ್ನಿವೇಶಗಳಿಂದ ಕೊನೆ ಮಾಡಬೇಕಾ ಎಂಬ ಗೊಂದಲಕ್ಕೆ ಬಿದ್ದಿದ್ದರಂತೆ. ಅದಕ್ಕೆ ಹ್ಯಾಪಿನೂ ಬೇಡ, ಟ್ರಾಜಿಡಿನೂ ಬೇಡವೆಂದು ಓಪನ್-ಎಂಡಿಂಗ್ ತಂತ್ರದಿಂದ ಈ ಸಿನಿಮಾವನ್ನು ಮುಗಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ, ಇನ್ನೂ 'ಪುಷ್ಪ 2' ಚಿತ್ರದ ಸ್ಕ್ರಿಪ್ಟ್ ಕೆಲಸ ನಡೆಯುತ್ತಲೇ ಇದೆ. ಅದಕ್ಕೆ ಕೊನೆಯಲ್ಲಿ ಬದಲಾವಣೆ ಆದರೂ ಆಗಬಹುದು ಅನ್ನು ಅನುಮಾನ ಕೂಡ ಇದೆ.

ಪುಷ್ಪ ಕ್ಲೈಮ್ಯಾಕ್ಸ್ ಬದಲಾಗಿತ್ತು
'ಪುಷ್ಪ' ಪಾರ್ಟ್ 1 ಸಿನಿಮಾ ಕ್ಲೈಮ್ಯಾಕ್ಸ್ ಬಗ್ಗೆ ಸುಕುಮಾರ್ ತಲೆಯಲ್ಲಿ ಬೇರೆ ಏನೋ ಓಡುತ್ತಿತ್ತು. ಕೊನೆಯಲ್ಲಿ ಅಲ್ಲು ಅರ್ಜುನ್ ಹಾಗೂ ಫಹಾದ್ ಫಾಸಿಲ್ ಇಬ್ಬರನ್ನೂ ನಗ್ನರನ್ನಾಗಿ ಮಾಡಲು ತೀರ್ಮಾನಿಸಿದ್ದರಂತೆ. ಆದರೆ, ಇದು ಇಬ್ಬರ ಅಭಿಮಾನಿಗಳಿಗೂ ಇಷ್ಟ ಆಗುವುದಿಲ್ಲವೆಂದು ತಿಳಿದು ಬದಲಾವಣೆ ಮಾಡಲಾಗಿತ್ತು. ಹೀಗಾಗಿ ದು:ಖದ ಸನ್ನಿವೇಶಗಳಿಂದ ಸಿನಿಮಾ ಮುಗಿಸಿದರೆ ಜನರಿಗೆ ಇಷ್ಟ ಆಗುವುದಿಲ್ಲವೆಂದು ತಿಳಿದು ಇಂತಹ ಟೆಕ್ನಿಕ್ ಬಳಸುತ್ತಿದ್ದಾರಂತೆ ಸುಕುಮಾರ್.


Click it and Unblock the Notifications











