ಅಲ್ಲು ಅರ್ಜುನ್‌ಗೆ ಇನ್‌ಸ್ಟಾಗ್ರಾಂನಲ್ಲಿ 15 ಮಿಲಿಯನ್ ಫಾಲೋವರ್ಸ್: ಫ್ಯಾನ್ಸ್‌ಗೆ ಧನ್ಯವಾದ ಹೇಳಿದ ಐಕಾನ್ ಸ್ಟಾರ್

ಟಾಲಿವುಡ್ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಯಶಸ್ಸಿನ ಅಲೆಯಲ್ಲಿ ತೇಲಾಡುತ್ತಿದ್ದಾರೆ. ನಿರಂತರವಾಗಿ ಎರಡು ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡಿರುವ ಅಲ್ಲು ಅರ್ಜುನ್‌ಗೆ ಅಭಿಮಾನಿಗಳು ದುಪ್ಪಟ್ಟಾಗಿದ್ದಾರೆ. ಕಳೆದ ವರ್ಷ 'ಅಲಾ ವೈಕುಂಠಪುರಮುಲೋ' ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿತ್ತು. ಈ ವರ್ಷ ತೆರೆಕಂಡ ಪ್ಯಾನ್ ಇಂಡಿಯಾ ಚಿತ್ರ 'ಪುಷ್ಪ' ಕೂಡ ಗಲ್ಲಾಪೆಟ್ಟಿಗೆಯನ್ನೇ ಕೊಳ್ಳೆ ಹೊಡೆದಿದೆ.

ಎರಡು ದಾಖಲೆ ಸಿನಿಮಾಗಳನ್ನು ನೀಡಿರುವ ಐಕಾನ್ ಸ್ಟಾರ್‌ಗೆ ಟಾಲಿವುಡ್‌ನಲ್ಲಿ ಬೇಡಿಕೆ ಹೆಚ್ಚಾಗಿದೆ. ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರ ಹೊಮ್ಮಿರುವ ಅಲ್ಲು ಅರ್ಜುನ್ ನಡೆಗೆ ಟಾಲಿವುಡ್ ಕೂಡ ಅಚ್ಚರಿ ವ್ಯಕ್ತಪಡಿಸಿದೆ. ಎರಡು ಸಿನಿಮಾಗಳ ಅಂತರದಲ್ಲಿಯೇ ಈ ನಟನ ಯಶಸ್ಸಿನ ಪ್ರಮಾಣ ಕೂಡ ದುಪ್ಪಟ್ಟು ಹೆಚ್ಚಾಗಿದೆ. ಇದರೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಐಕಾನ್ ಸ್ಟಾರ್ ಫಾಲೋವರ್ಸ್ ಕೂಡ ಹೆಚ್ಚಾಗುತ್ತಲೇ ಇದ್ದಾರೆ.

ಅಲ್ಲುಗೆ 15 ಮಿಲಿಯನ್ ಫಾಲೋವರ್ಸ್

ಅಲ್ಲುಗೆ 15 ಮಿಲಿಯನ್ ಫಾಲೋವರ್ಸ್

'ಪುಷ್ಪ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಜಾದು ಮಾಡುತ್ತಿದ್ದಂತೆ ಇತ್ತ ಐಕಾನ್ ಸ್ಟಾರ್ ಮತ್ತೊಂದು ಖುಷಿ ವಿಚಾರ ಸಿಕ್ಕಿದೆ. ಇನ್‌ಸ್ಟಾಗ್ರಾಂನಲ್ಲಿ ಸುಮಾರು 15 ಮಿಲಿಯನ್ ಮಂದಿ ಅಲ್ಲು ಅರ್ಜುನ್‌ರನ್ನು ಫಾಲೋ ಮಾಡುತ್ತಿದ್ದಾರೆ. ಈ ಖುಷಿ ವಿಷಯವನ್ನು ಸ್ವತ: ಅಲ್ಲು ಅರ್ಜುನ್ ಇನ್‌ಸ್ಟಾಗ್ರಾಂನಲ್ಲಿ ಅಭಿಮಾನಿಗಳಿಗಾಗಿ ಶೇರ್ ಮಾಡಿಕೊಂಡಿದ್ದಾರೆ. "15 ಮಿಲಿಯನ್ ಫಾಲೋವರ್ಸ್ ನಿಮ್ಮ ಈ ಪ್ರೀತಿಗೆ ಧನ್ಯವಾದಗಳು." ಎಂದು ಪೋಸ್ಟ್ ಮಾಡಿದ್ದಾರೆ.

ಅಲ್ಲು ಅರ್ಜುನ್‌ಗೆ ಅತೀ ಹೆಚ್ಚು ಫಾಲೋವರ್ಸ್

ಇನ್‌ಸ್ಟಾಗ್ರಾಂನಲ್ಲಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿದ ದಕ್ಷಿಣ ಭಾರತದ ಎಂಬ ಹೆಗ್ಗಳಿಕೆ ಅಲ್ಲು ಅರ್ಜುನ್ ಪಾಲಾಗಿದೆ. ಹೀಗಾಗಿ ಅಲ್ಲು ಇನ್‌ಸ್ಟಾಗ್ರಾಂನಲ್ಲಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ. " 15 ಮಿಲಿಯನ್.. ನೀವೆಲ್ಲರೂ ಇಷ್ಟೊಂದು ಪ್ರೀತಿ ತೋರಿಸಿದ್ದಕ್ಕೆ ಧನ್ಯವಾದಗಳು. ಎಂದೆಂದಿಗೂ ಕೃತಜ್ಞತೆಗಳನ್ನು ಸಲ್ಲಿಸುವೆ. ಎಲ್ಲರಿಗೂ ಮಕರ ಸಂಕ್ರಾಂತಿಯ ಶುಭಾಶಯಗಳು." ಎಂದು ಅಲ್ಲು ಅರ್ಜುನ್ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

'ಪುಷ್ಪ' ಗಳಿಕೆ 300 ಕೋಟಿ

'ಪುಷ್ಪ' ಗಳಿಕೆ 300 ಕೋಟಿ

ಇನ್ನೊಂದು ಕಡೆ ಅಲ್ಲು ಅರ್ಜುನ್ ಮೊದಲ ಪ್ಯಾನ್ ಇಂಡಿಯಾ ಸಿನಿಮಾ 'ಪುಪ್ಪ' ಬಾಕ್ಸಾಫೀಸ್ ಅನ್ನು ಕೊಳ್ಳೆ ಹೊಡೆದಿದೆ. ಬಿಡುಗಡೆ ಕೊಂಡ 27 ದಿನಗಳಲ್ಲಿ ವಿಶ್ವದಾದ್ಯಂತ ಸುಮಾರು 300 ಕೋಟಿಯನ್ನು ಕಲೆ ಹಾಕಿದೆ. ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ 'ಪುಷ್ಪ' ಸಿನಿಮಾದ ಸಾಧನೆ ಮೆಚ್ಚುವಂತಹದ್ದೇ. ಯಾಕೆಂದರೆ, ಡಬ್ ಆದ ಸಿನಿಮಾವೊಂದು ಬರೋಬ್ಬರಿ 80 ಕೋಟಿ ಗಳಿಸಿ ಅಚ್ಚರಿ ಮೂಡಿಸಿದೆ. ಹೀಗಾಗಿ ಆಲ್ ಇಂಡಿಯಾ ಲೆವೆಲ್‌ನಲ್ಲಿ ಅಲ್ಲು ಅರ್ಜುನ್ ಸದ್ದು ಮಾಡುತ್ತಿದ್ದಾರೆ.

'ಪುಷ್ಪ 2' ಬಿಡುಗಡೆ ಯಾವಾಗ?

'ಪುಷ್ಪ 2' ಬಿಡುಗಡೆ ಯಾವಾಗ?

'ಪುಷ್ಪ' ಸಿನಿಮಾಗೆ ಭರ್ಜರಿ ಸಕ್ಸಸ್ ಸಿಕ್ಕಿದ್ದರಿಂದ ನಿರ್ದೇಶಕ ಸುಕುಮಾರ್ ಇಡೀ ಸಿನಿಮಾವನ್ನು ರೀ ಶೂಟ್ ಮಾಡುವುದಕ್ಕೆ ಸಜ್ಜಾಗಿದ್ದಾರೆ. ಹೀಗಾಗಿ ಫೆಬ್ರವರಿಯಿಂದ 'ಪುಷ್ಪ 2'ಗಾಗಿ ಇಡೀ ಚಿತ್ರತಂಡ ಮತ್ತೆ ಅಖಾಡಕ್ಕೆ ಇಳಿಯಲಿದೆ. ಡಿಸೆಂಬರ್ 17, 2021ಕ್ಕೆ ಪುಷ್ಪ ಬಿಡುಗಡೆಯಾಗಿತ್ತು. ಹೀಗಾಗಿ 'ಪುಷ್ಪ 2' ಚಿತ್ರವನ್ನು ಡಿಸೆಂಬರ್ 16 , 2022ರಂದು ರಿಲೀಸ್ ಮಾಡಲು ನಿರ್ಧರಿಸಿದ್ದಾರೆ. ಒಂದು ವೇಳೆ ಚಿತ್ರತಂಡ ಅಂದುಕೊಂಡಂತೆ ಆದರೆ, ಪ್ರೇಕ್ಷಕರು ಮತ್ತೆ ವರ್ಷದ ಕೊನೆಯಲ್ಲಿ 'ಪುಷ್ಪ 2' ನೋಡುವುದು ಪಕ್ಕಾ.

More from Filmibeat

English summary
Icon Star Allu Arjun achieved to becoming the first south Indian actor to cross 15 million Instagram followers. Allu Arjun on Friday expressed gratitude to his fans and well-wishers for their unending love and support.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X