ತೆಲುಗು ನಟ ಅಲ್ಲು ಅರ್ಜುನ್ ಕ್ಯಾರವಾನ್‌ಗೆ ಲಾರಿ ಡಿಕ್ಕಿ
ತೆಲುಗು ನಟ ಅಲ್ಲು ಅರ್ಜುನ್ ಅವರ ಖಾಸಗಿ ಕ್ಯಾರವಾನ್ ಅಪಘಾತಕ್ಕೆ ಒಳಗಾಗಿದೆ. ತೆಲಂಗಾಣದ ಖಮ್ಮಂ ಹತ್ತಿರದ ಸತ್ಯನಾರಾಯಣಪುರಂದಲ್ಲಿ ಈ ಅಪಘಾತ ಸಂಭವಿಸಿದೆ.
ದುರಾದೃಷ್ಟವಶಾತ್ ಯಾವುದೇ ಪ್ರಾಣಾಪಾಯವೂ ವರದಿ ಆಗಿಲ್ಲ. ಪುಷ್ಪ ಸಿನಿಮಾದ ಚಿತ್ರೀಕರಣ ಮುಗಿಸಿ ವಾಪಸ್ ಹೋಗುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ.
ನಟ ಅಲ್ಲು ಅರ್ಜುನ್ ಈ ಕ್ಯಾರವಾನ್‌ನಲ್ಲಿ ಇರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ, ಲಾರಿ ಡಿಕ್ಕಿ ಹೊಡೆದ ಪರಿಣಾಮ ಅಲ್ಲು ಅರ್ಜುನ್ ಅವರ ಕ್ಯಾರವಾನ್ ಹಿಂಭಾಗ ಜಖಂಗೊಂಡಿದೆ.

ಪ್ರಸ್ತುತ, ಅಲ್ಲು ಅರ್ಜುನ್ ಅವರು ಸುಕುಮಾರ್ ನಿರ್ದೇಶನದ ಪುಷ್ಪ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಅಂದ್ಹಾಗೆ, ಅಲ್ಲು ಅರ್ಜುನ್ ಅವರು ಈ ಕ್ಯಾರವ್ಯಾನ್ ಬೆಲೆ ಬರೋಬ್ಬರಿ 7 ಕೋಟಿ. ಬರಿ ಕ್ಯಾರವ್ಯಾನ್ ಇಂಟಿರಿಯರ್ ಡಿಸೈನ್ ಗಾಗಿ ಸುಮಾರು 3.5 ಕೋಟಿ ಖರ್ಚು ಮಾಡಲಾಗಿದೆಯಂತೆ. ಮುಂಬೈ ಮೂಲದ ಡಿಸೈನರ್ ಒಬ್ಬರು ವಿಶೇಷ ಕಾಳಜಿ ವಹಿಸಿ ಬಸ್ ತಯಾರಿಸಿದ್ದಾರೆ.


Click it and Unblock the Notifications











