'ಕೆಜಿಎಫ್ 2' ತಂಡಕ್ಕೆ ಶುಭಕೋರಿದ ಅಲ್ಲು ಅರ್ಜುನ್

'ಕೆಜಿಎಫ್ 2' ಸಿನಿಮಾ ಯಶಸ್ಸು ಭಾರತಕ್ಕಷ್ಟೇ ಅಲ್ಲ. ವಿಶ್ವಕ್ಕೆ ದೊಡ್ಡ ಶಾಕ್ ಕೊಟ್ಟಂತಾಗಿದೆ. ಬಾಕ್ಸಾಫೀಸ್‌ನಲ್ಲಿ 'ಕೆಜಿಎಫ್ 2' ಲೂಟಿ ಮಾಡುತ್ತಿರುವುದನ್ನು ನೋಡಿದರೆ, ಸದ್ಯಕ್ಕೆ ಈ ವೇಗ ತಗ್ಗುವಂತೆ ಕಾಣುತ್ತಿಲ್ಲ. ಈ ಕಾರಣಕ್ಕೆ ಭಾರತದ ಸೆಲೆಬ್ರೆಟಿಗಳು 'ಕೆಜಿಎಫ್ 2' ಸಕ್ಸಸ್‌ಗೆ ಶುಭಕೋರುತ್ತಿದ್ದಾರೆ.

'ಕೆಜಿಎಫ್ 2' ಸಿನಿಮಾ ಬಿಡುಗಡೆಗೂ ಮುನ್ನ ಇಷ್ಟೊಂದು ಕಲೆಕ್ಷನ್ ಮಾಡಬಹುದೆಂದು ಯಾರೂ ಊಹೆ ಕೂಡ ಮಾಡಿರಲಿಲ್ಲ. ಕೆಲವರು 'ಕೆಜಿಎಫ್ 2' ಕೇವಲ ಬಿಲ್ಡಪ್ ಸಿನಿಮಾ ಎಂದು ಭಾವಿಸಿದ್ದರು. ಆದರೆ, ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡಿ ಹೊಸ ಇತಿಹಾಸವನ್ನೇ ರಚಿಸಿದೆ. ಗ್ಲೋಬಲ್ ಮಾರ್ಕೆಟ್‌ನಲ್ಲಿ 'ಕೆಜಿಎಫ್ 2' ಅಬ್ಬರವನ್ನು ನೋಡಿ ಟಾಲಿವುಡ್ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

'ಕೆಜಿಎಫ್ 2' ತಂಡಕ್ಕೆ ಅಲ್ಲು ಅರ್ಜುನ್ ಶುಭಾಶಯ

ಟಾಲಿವುಡ್ ಸ್ಟಾರ್ ನಟ ಅಲ್ಲು ಅರ್ಜುನ್ 'ಕೆಜಿಎಫ್ 2' ಬಗ್ಗೆ ಕೊನೆಗೂ ಮೌನ ಮುರಿದಿದ್ದಾರೆ. 'ಕೆಜಿಎಫ್ 2' ಸಿನಿಮಾ ವೀಕ್ಷಿಸಿದ ಬಳಿಕ ಇಡೀ ಚಿತ್ರತಂಡವನ್ನು ಮನಸಾರೆ ಹೊಗಳಿದ್ದಾರೆ. "ಕೆಜಿಎಫ್ 2 ತಂಡಕ್ಕೆ ಶುಭಾಶಯಗಳು. ಯಶ್ ನಟನೆ, ಕಾರ್ಯಕ್ಷಮತೆ ಅದ್ಭುತವಾಗಿದೆ. ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ಸೇರಿದಂತೆ ಎಲ್ಲರ ಅಭಿನಯ ಸೆಳೆಯುತ್ತಿದೆ. ರವಿ ಬಸ್ರೂರು ಹಿನ್ನೆಲೆ ಸಂಗೀತ ಅದ್ಭುತವಾಗಿದೆ. ಭುವನ್ ಗೌಡ ದೃಶ್ಯ ವೈಭವ ಸಖತ್ತಾಗಿದೆ. ಎಲ್ಲಾ ತಂತ್ರಜ್ಞರನ್ನು ನಾನು ಗೌರವಿಸುತ್ತೇನೆ." ಎಂದು ಅಲ್ಲು ಅರ್ಜುನ್ ಟ್ವೀಟ್ ಮಾಡಿದ್ದಾರೆ.

ಪ್ರಶಾಂತ್ ನೀಲ್‌ಗೆ ಅಲ್ಲು ಅರ್ಜುನ್ ಸಲಾಂ

ಪ್ರಶಾಂತ್ ನೀಲ್ ನಿರ್ದೇಶನ ಕಂಡು ಅಲ್ಲು ಅರ್ಜುನ್ ಥ್ರಿಲ್ ಆಗಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಬಗ್ಗೆ ಟ್ವೀಟ್‌ನಲ್ಲಿ ಹಾಡಿ ಹೊಗಳಿದ್ದಾರೆ. " ಪ್ರಶಾಂತ್ ನೀಲ್ ಅದ್ಭುತವಾಗಿ ನಿರ್ದೇಶನ ಮಾಡಿದ್ದಾರೆ. ಅವರ ಆಲೋಚನೆ ಹಾಗೂ ನಂಬಿಕೆಯನ್ನು ನಾನು ಗೌರವಿಸುತ್ತೇನೆ. ಭಾರತೀಯ ಚಿತ್ರರಂಗವನ್ನು ಮತ್ತೊಂದು ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು." ಎಂದು ಅಲ್ಲು ಅರ್ಜುನ್ ಟ್ವೀಟ್ ಮೂಲಕ ಶುಭ ಕೋರಿದ್ದಾರೆ.

'ಕೆಜಿಎಫ್'ಗೆ ಟಕ್ಕರ್ ಕೊಟ್ಟಿದ್ದ ಅಲ್ಲು ಅರ್ಜುನ್

'ಕೆಜಿಎಫ್'ಗೆ ಟಕ್ಕರ್ ಕೊಟ್ಟಿದ್ದ ಅಲ್ಲು ಅರ್ಜುನ್

ಟಾಲಿವುಡ್‌ನ ಐಕಾನ್ ಸ್ಟಾರ್ ಅಲ್ಲು ಅರ್ಜುನ್ 'ಪುಷ್ಪ' ಸಿನಿಮಾ ಬಿಡುಗಡೆ ವೇಳೆ 'ಕೆಜಿಎಫ್' ಚಿತ್ರಕ್ಕೆ ಪರೋಕ್ಷವಾಗಿ ಟಕ್ಕರ್ ಕೊಟ್ಟಿದ್ದರು. 'ಕೆಜಿಎಫ್‌' ಸಿನಿಮಾವನ್ನೂ ಮೀರಿಸುತ್ತೆ ಎಂದು ಪರೋಕ್ಷವಾಗಿ ಹೇಳಿದ್ದರು. ಅದರಂತೆ 'ಕೆಜಿಎಫ್ ಚಾಪ್ಟರ್ 1'ರ ದಾಖಲೆಯನ್ನು 'ಪುಷ್ಪ' ಬ್ರೇಕ್ ಮಾಡಿತ್ತು. 'ಪುಷ್ಪ' ರಿಲೀಸ್ ಆದ ಕೆಲವೇ ತಿಂಗಳುಗಳಲ್ಲಿ 'ಕೆಜಿಎಫ್ 2' ಅದರ ದಾಖಲೆಗಳನ್ನು ಉಡೀಸ್ ಮಾಡಿದೆ.

ಅಲ್ಲು ಅರ್ಜುನ್ ಮೇಲೆ ಒತ್ತಡ

ಅಲ್ಲು ಅರ್ಜುನ್ ಮೇಲೆ ಒತ್ತಡ

'ಕೆಜಿಎಫ್ 2' ಸಿನಿಮಾ ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆಯುತ್ತಿದ್ದಂತೆ ಅಲ್ಲು ಅರ್ಜುನ್ ಮೇಲೆ ಒತ್ತಡ ಹೆಚ್ಚಾಗಿದೆ. ಐಕಾನ್ ಸ್ಟಾರ್ ಅಭಿನಯದ 'ಪುಷ್ಪ 2' ಸಿನಿಮಾ 'ಕೆಜಿಎಫ್ 2' ದಾಖಲೆಗಳನ್ನು ಮುರಿಯಲೇ ಬೇಕಿದೆ. ಆರಂಭದಿಂದಲೂ 'ಕೆಜಿಎಫ್‌' ಜೊತೆ 'ಪುಷ್ಪ' ತಂಡ ಹೋಲಿಕೆ ಮಾಡಿಕೊಳ್ಳುತ್ತಿತ್ತು. ಈಗ 'ಕೆಜಿಎಫ್ 2' ಆರ್ಭಟ ಕಂಡು ಕಂಗಾಲಾಗಿರುವುದಂತೂ ಸತ್ಯ. ಇನ್ನು ಅಲ್ಲು ಅರ್ಜುನ್ ಟ್ವೀಟ್ ಮೂಲಕ ಶುಭ ಕೋರಿದ್ದು, 'ಪುಷ್ಪ 2' ಸಿನಿಮಾದ ಬಜೆಟ್ ಅನ್ನು ಮತ್ತಷ್ಟು ಹೆಚ್ಚಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

More from Filmibeat

English summary
Allu Arjun Congratulated Yash, Prashanth Neel, Srinidhi Shetty, Raveena Tandon for KGF 2 Success, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X