Pushpa 2 Box Office Day 35: 35 ದಿನಗಳಲ್ಲಿ 'ಪುಷ್ಪ 2' ಗಳಿಸಿದ ಹಣದಲ್ಲಿ ಕರ್ನಾಟಕದ ಪಾಲು ಎಷ್ಟು?
ಅಲ್ಲು ಅರ್ಜುನ್ 'ಪುಷ್ಪ 2' ಗ್ಲೋಬಲ್ ಬಾಕ್ಸಾಫೀಸ್‌ನಲ್ಲಿ ದಾಖಲೆ ಮಾಡಿದೆ. ಈಗಾಗಲೇ 'ಬಾಹುಬಲಿ 2' ದಾಖಲೆಯನ್ನು ಹಿಂದಿಕ್ಕಿದ್ದು, ಆಮಿರ್ ಖಾನ್ ನಟಿಸಿದ 'ದಂಗಲ್' ಬಾಕ್ಸಾಫೀಸ್ ರೆಕಾರ್ಡ್ ಅನ್ನು ಮುರಿಯುವತ್ತ ಹೆಜ್ಜೆ ಇಟ್ಟಿದೆ. ಈ ಸಿನಿಮಾ ರಿಲೀಸ್ ಆಗಿ 36 ದಿನಗಳಿಗೆ ಕಾಲಿಟ್ಟಿದ್ದು, ಥಿಯೇಟರ್‌ನಲ್ಲಿ ಇನ್ನೂ ಉತ್ತಮ ಗಳಿಕೆಯನ್ನು ಕಾಣುತ್ತಿದೆ.
ಸಿನಿಮಾ ರಿಲೀಸ್ ಆದ ಐದನೇ ವಾರವೂ ಕಲೆಕ್ಷನ್ ಉತ್ತಮವಾಗಿದೆ. ಬಾಕ್ಸಾಫೀಸ್ ಟ್ರ್ಯಾಕರ್ ಸ್ಯಾಕ್ನಿಲ್ಕ್.ಕಾಮ್ ಪ್ರಕಾರ 'ಪುಷ್ಪ 2' ಐದನೇ ವಾರದಲ್ಲಿ ಸುಮಾರು 23 ಕೋಟಿ ರೂಪಾಯಿಯಷ್ಟು ಕಲೆಕ್ಷನ್ ಮಾಡಿದ್ದು, ವೀಕೆಂಡ್‌ನಲ್ಲಿ ಇದಕ್ಕೆ ಇನ್ನೂ ಐದಾರು ಕೋಟಿ ಸೇರಿಕೊಳ್ಳಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಐದೂ ಭಾಷೆಗಳಿಂದಲೂ 'ಪುಷ್ಪ 2'ಗೆ ಆರಂಭದಲ್ಲಿ ಉತ್ತಮ ಕಲೆಕ್ಷನ್ ಆಗಿತ್ತು.

'ಪುಷ್ಪ 2'ಗೆ ಕರ್ನಾಟಕದಲ್ಲೂ ಭರ್ಜರಿ ಕಲೆಕ್ಷನ್ ಆಗಿದೆ. ಮಿಶ್ರ ಪ್ರತಿಕ್ರಿಯೆ ಸಿಕ್ಕಿದರೂ ಬಾಕ್ಸಾಫೀಸ್ ಕಲೆಕ್ಷನ್‌ನಲ್ಲಿ ಏನೂ ಎಫೆಕ್ಟ್ ಆಗಿಲ್ಲ. ಆದರೆ, ಗಮನಿಸಬೇಕಾದ ಅಂಶ ಅಂದರೆ, ಈ ಬಾರಿ ಕನ್ನಡ ವರ್ಷನ್‌ಗೂ ರೆಸ್ಪಾನ್ಸ್ ಸೂಪರ್ ಆಗಿದೆ. ನಿಧಾನವಾಗಿ ಡಬ್ಬಿಂಗ್ ಸಿನಿಮಾಗಳನ್ನು ಕನ್ನಡಿಗರು ನೋಡುವುದಕ್ಕೆ ಶುರು ಮಾಡಿದ್ದಾರೆ. ಹಾಗಿದ್ದರೆ 'ಪುಷ್ಪ 2' ಕನ್ನಡದ ವರ್ಷನ್ ಕಲೆಕ್ಷನ್ ಎಷ್ಟು? ತಿಳಿಯಲು ಮುಂದೆ ಓದಿ.
'ಪುಷ್ಪ 2' ಕರ್ನಾಟಕದ ಕಲೆಕ್ಷನ್ ಎಷ್ಟು?
ಅಲ್ಲು ಅರ್ಜುನ್ 'ಪುಷ್ಪ 2' ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ ಜೋರಾಗಿಯೇ ಸದ್ದು ಮಾಡಿದೆ. ಪರಭಾಷೆಯ ಸಿನಿಮಾವೊಂದು ಕನ್ನಡದ ಸೂಪರ್‌ಸ್ಟಾರ್ ಸಿನಿಮಾಗಳಿಗಿಂತಲೂ ಹೆಚ್ಚು ಕಲೆಕ್ಷನ್ ಮಾಡಿದೆ. ಇಂದು ಕನ್ನಡ ಚಿತ್ರರಂಗಕ್ಕೆ ಎಚ್ಚರಿಕೆನೂ ಆಗಬಹುದು. ಪಾಠನೂ ಆಗಬಹುದು. ಕರ್ನಾಟಕದಲ್ಲಿ ಅಗತ್ಯಕ್ಕಿಂತ ಹೆಚ್ಚು ಥಿಯೇಟರ್‌ಗಳಲ್ಲಿ ಸಿನಿಮಾವನ್ನು ರಿಲೀಸ್ ಮಾಡಿದ್ದರು. ಮಿಶ್ರ ಪ್ರತಿಕ್ರಿಯೆಯ ಹೊರತಾಗಿಯೂ ಈ ಸಿನಿಮಾ 76.65 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎನ್ನುತ್ತಿವೆ ಕರ್ನಾಟಕದ ವಿತರಕರ ಮೂಲಗಳು.

ಕನ್ನಡ ವರ್ಷನ್ ಎಷ್ಟು?
ಡಬ್ಬಿಂಗ್ ಸಿನಿಮಾಗಳನ್ನು ಕನ್ನಡಿಗರು ನೋಡುತ್ತಿಲ್ಲ. ಅದೇ ಭಾಷೆಯಲ್ಲಿಯೇ ನೋಡುವುದಕ್ಕೆ ಇಷ್ಟ ಪಡುತ್ತಿದ್ದಾರೆ ಅನ್ನೋ ಆರೋಪವಿತ್ತು. ಆದರೆ ಇತ್ತೀಚೆಗೆ ಕನ್ನಡದಲ್ಲಿ ಡಬ್ ಆದ ಸಿನಿಮಾಗಳು ಒಳ್ಳೆಯ ಕಲೆಕ್ಷನ್ ಮಾಡಿವೆ. ಕಳೆದ 35 ದಿನಗಳಲ್ಲಿ 'ಪುಷ್ಪ 2' ಕನ್ನಡ ವರ್ಷನ್ ಕರ್ನಾಟಕದಲ್ಲಿ ಸುಮಾರು 3.9 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಹೇಳಲಾಗುತ್ತಿದೆ. ಇದು ಕನ್ನಡಿಗರಿಗೆ ಖುಷಿ ವಿಷಯ. ಮುಂದಿನ ದಿನಗಳಲ್ಲಿ ಇದು 10 ಕೋಟಿ ರೂ.ಗೂ ಏರಲೂಬಹುದು.
ಯಾವ್ಯಾವ ಭಾಷೆಯಿಂದ ಎಷ್ಟೆಷ್ಟು ಕಲೆಕ್ಷನ್?
'ಪುಷ್ಪ 2' ಕರ್ನಾಟಕದಲ್ಲಿ ಐದೂ ಭಾಷೆಗಳಲ್ಲೂ ರಿಲೀಸ್ ಆಗಿತ್ತು. ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲೂ ಬಿಡುಗಡೆಯಾಗಿತ್ತು. ನಿರೀಕ್ಷೆಯಂತೆ ಎಲ್ಲಾ ಭಾಷೆಗಳಲ್ಲೂ ಗಳಿಕೆ ಉತ್ತಮವಾಗಿಯೇ ಆಗಿದೆ. ಕರ್ನಾಟಕದಲ್ಲಿ ಭಾಷೆಯಲ್ಲಿ ಗಳಿಸಿದ ಅಂದಾಜು ಕಲೆಕ್ಷನ್ ಹೀಗಿದೆ.
ಕರ್ನಾಟಕದ 'ಪುಷ್ಪ 2' ಕಲೆಕ್ಷನ್
ತೆಲುಗು 68 ಕೋಟಿ ರೂ.
ಕನ್ನಡ 3.9 ಕೋಟಿ ರೂ.
ತಮಿಳು 1.5 ಕೋಟಿ ರೂ.
ಹಿಂದಿ 2.7 ಕೋಟಿ ರೂ.
ಮಲಯಾಳಂ 55 ಲಕ್ಷ ರೂ
ಒಟ್ಟು 76.65 ಕೋಟಿ ರೂ.
'ದಂಗಲ್' ಹಿಂದಿಕ್ಕುತ್ತಾ?
ಅಲ್ಲು ಅರ್ಜುನ್ 'ಪುಷ್ಪ 2' ಗ್ಲೋಬಲ್ ಬಾಕ್ಸಾಫೀಸ್ ಕಲೆಕ್ಷನ್ ಭರ್ಜರಿಯಾಗಿದೆ. ಆಮಿರ್ ಖಾನ್ 'ದಂಗಲ್' ಸಿನಿಮಾದ ದಾಖಲೆಯನ್ನು ಮುರಿಯುವುದಕ್ಕೆ ಶತ ಪ್ರಯತ್ನ ಮಾಡುತ್ತಿದೆ. ಹೀಗಾಗಿ ಇನ್ನೂ 20 ನಿಮಿಷಗಳ ದೃಶ್ಯವನ್ನು ಸೇರಿಸಲಾಗುತ್ತಿದೆ. ಜನವರಿ 17ರಿಂದ ಚಿತ್ರಮಂದಿರದಲ್ಲಿ 20 ನಿಮಿಷ ಹೆಚ್ಚುವರಿ ದೃಶ್ಯಗಳು ಪ್ರಸಾರ ಆಗಲಿದೆ. 1,840 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. 'ದಂಗಲ್' 2070 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.
Disclaimer: 'ಪುಷ್ಪ 2' ಅಂಕಿ ಅಂಶಗಳನ್ನು ಹಲವು ಮೂಲಗಳಿಂದ ಸಂಗ್ರಹಿಸಲಾಗಿದ್ದು, ಗಳಿಕೆಯ ಅಧಿಕೃತ ಮಾಹಿತಿಯನ್ನು ಚಿತ್ರತಂಡ ನೀಡಬೇಕಿದೆ.


Click it and Unblock the Notifications











