ಮಗಳ ಹಿಂದೆ ಹಿಂದೆ ಓಡಿದ ಅಲ್ಲು ಅರ್ಜುನ್ : ಪತ್ನಿ ಶೇರ್ ಮಾಡಿದ ವಿಡಿಯೋ ವೈರಲ್
ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ' ಚಿತ್ರ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದ್ದಂತೆ ದಕ್ಷಿಣ ಭಾರತದಿಂದ ಮತ್ತೊಬ್ಬ ಪ್ಯಾನ್ ಇಂಡಿಯಾ ಸ್ಟಾರ್ ಖದರ್ ಆರಂಭ ಆಗಿದೆ. ಇಷ್ಟು ಪ್ರಚಾರ, ಸಿನಿಮಾ ರಿಲೀಸ್ ಅಂತ ತಲೆ ಕೆಡಿಸಿಕೊಂಡಿದ್ದ ಅಲ್ಲು ಅರ್ಜುನ್ ಈಗ ರಿಲ್ಯಾಕ್ಸ್ ಮೂಡಿಗೆ ಜಾರಿದ್ದಾರೆ. ಕುಟುಂಬದೊಂದಿಗೆ ಅತಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ.
ಯಾವುದೇ ಭಾಷೆಯ ಸ್ಟಾರ್ ಇರಲಿ. ಒಂದು ಸಿನಿಮಾದ ಬಳಿಕ ಒಂದು ಚಿಕ್ಕ ಬ್ರೇಕ್ ತೆಗೆದುಕೊಳ್ಳುತ್ತಾರೆ. ಅದರಲ್ಲೂ ಆ ಸಿನಿಮಾ ಗೆದ್ದಬಿಟ್ಟರೆ, ಫ್ಯಾಮಿಲಿ ಸಮೇತ ಗಾಯಬ್ ಆಗಿಬಿಡುತ್ತಾರೆ. ಅಲ್ಲು ಅರ್ಜುನ್‌ಗೆ ಸಿಕ್ಕಿರುವ ಯಶಸ್ಸು ಚಿಕ್ಕದಲ್ಲ. ಫ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಗೆದ್ದಿರುವುದರಿಂದ ಒಂದು ಬ್ರೇಕ್ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಈಗ ಅಲ್ಲು ಅರ್ಜುನ್ ಪತ್ನಿ ಒಂದು ವಿಡಿಯೋ ಶೇರ್ ಮಾಡಿದ್ದು, ಅದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಜಾಲಿ ಮೂಡಿಗೆ ಜಾರಿದ ಅಲ್ಲು ಅರ್ಜುನ್
ಅಲ್ಲು ಅರ್ಜುನ್ ಜಾಲಿ ಮೂಡ್‌ನಲ್ಲಿ ಇದ್ದಾರೆ. ಪುಷ್ಪ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿದೆ. ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಇಷ್ಟು ದಿನ ಇದೊಂದು ಯಶಸ್ಸಿಗಾಗಿ ಕಷ್ಟ ಪಟ್ಟಿದ್ದ ಅಲ್ಲು ಅರ್ಜುನ್ ಈಗ ಕೊಂಚ ರಿಲ್ಯಾಕ್ಸ್ ಮೂಡಿಗೆ ಜಾರಿದ್ದಾರೆ. ಹೀಗಿ ಬಿಡುವಿನ ವೇಳೆಯನ್ನು ಕುಟುಂಬದೊಂದಿಗೆ ಹೆಚ್ಚಾಗಿ ಕಳೆಯುತ್ತಿದ್ದಾರೆ. ಅದರಲ್ಲು ಪುತ್ರಿ ಅರ್ಹ ಜೊತೆ ಆಟ-ಮಸ್ತಿ ಮಾಡುತ್ತಾ ಯಶಸ್ಸನ್ನು ಎಂಜಾಯ್ ಮಾಡುತ್ತಿದ್ದಾರೆ. ಪುತ್ರಿ ಅರ್ಹ ಜೊತೆ ಅಲ್ಲು ಅರ್ಜುನ್ ಸಮಯ ಕಳೆಯುತ್ತಿರುವ ವಿಡಿಯೋವನ್ನು ಪತ್ನಿ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.
ಮಗಳೊಂದಿಗೆ ಹೆಜ್ಜೆ ಹಾಕಿದ ಅಲ್ಲು ಅರ್ಜುನ್
ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಪುತ್ರಿ ಅರ್ಹ ಹಿಂದೆ ಹಿಂದೆ ಪುಟ್ಟ ಪುಟ್ಟ ಹೆಜ್ಜೆ ಹಾಕಿದೆ ವಿಡಿಯೋವನ್ನು ಪತ್ನಿ ಶೇರ್ ಮಾಡಿದ್ದಾರೆ. ಇದೇ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಲ್ಲು ಅರ್ಜುನ್ ಪತ್ನಿ ಸ್ನೇಹ ರೆಡ್ಡಿ ಇನ್‌ಸ್ಟಾಗ್ರಾಂ ಶೇರ್ ಮಾಡುತ್ತಿದ್ದಂತೆ ನೆಟ್ಟಿಗರು ಕಮೆಂಟ್ ಆಡಲು ಆರಂಭಿಸಿದ್ದಾರೆ. ಅಪ್ಪ-ಮಗಳು ಬಾಂಧವ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಇಬ್ಬರಿಗೂ ಒಳ್ಳೆಯದಾಗಲಿ ಅಂತ ಹರಸುತ್ತಿದ್ದಾರೆ.

ಏಪ್ರಿಲ್ ತಿಂಗಳಿಂದ 'ಪುಷ್ಪ 2' ಶೂಟಿಂಗ್
'ಪುಷ್ಪ' ಪಾರ್ಟ್ 1 ಗೆದ್ದಿದೆ. ಫ್ಯಾನ್ ಇಂಡಿಯಾ ಸಿನಿಮಾ ಟ್ರೀಟ್ಮೆಂಟ್ ಕೊಟ್ಟು ರಿಲೀಸ್ ಮಾಡಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದೆ. ಇದೇ ಜೋಷ್‌ನಲ್ಲಿರುವ ಚಿತ್ರತಂಡ 'ಪುಷ್ಪ 2' ಶೂಟಿಂಗ್ ಆರಂಭ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಟಾಲಿವುಡ್ ಮೂಲಗಳ ಪ್ರಕಾರ, 'ಪುಷ್ಪ 2' ಶೂಟಿಂಗ್ ಏಪ್ರಿಲ್ ತಿಂಗಳಿಂದ ಆರಂಭ ಆಗಲಿದೆ. ಅಲ್ಲು ಅರ್ಜುನ್ ಮ್ಯಾನರಿಸಂ ಅನ್ನು ಜನರು ಮೆಚ್ಚಿರುವುದರಿಂದ ಮತ್ತಷ್ಟು ಅದ್ದೂರಿಯಾಗಿ ಸಿನಿಮಾ ಶೂಟಿಂಗ್ ಮಾಡಲು ನಿರ್ಧರಿಸಲಾಗಿದೆ.

ಬಾಲಿವುಡ್ ಗಲ್ಲಾಪೆಟ್ಟಿಗೆಯಲ್ಲಿ 'ಪುಷ್ಪ' ಕಮಾಲ್
'ಪುಷ್ಪ' ಒಟ್ಟಾರೆ ಬಾಕ್ಸಾಫೀಸ್ ಕಲೆಕ್ಷನ್ 300 ಕೋಟಿ ಎಂದು ಹೇಳಲಾಗಿದೆ. ಆದರೆ, ಅಚ್ಚರಿ ಮೂಡಿಸಿದ್ದು ಬಾಲಿವುಡ್ ಬಾಕ್ಸಾಫೀಸ್. ಸುಮಾರು 100 ಕೋಟಿ ಗಳಿಸಿ ಲೆಕ್ಕಾಚಾರವನ್ನೆಲ್ಲಾ ತಲೆಕೆಳಗೆ ಮಾಡಿದೆ. ಬಾಹುಬಲಿ ಬಳಿಕ ಡಬ್ ಆದ ಸಿನಿಮಾ ಬಾಕ್ಸಾಫೀಸ್‌ನಲ್ಲಿ 100 ಕೋಟಿ ಗಳಿಸಿದ್ದು ದೊಡ್ಡ ವಿಷಯವೇ. ಹೀಗಾಗಿ ಉತ್ತರದಲ್ಲೂ ಸಿಕ್ಕಿದೆ ಯಶಸ್ಸಿನ ಹಿನ್ನೆಲೆಯಲ್ಲಿ ಪಾರ್ಟಿ 2 ಶೂಟಿಂಗ್‌ಗೆ ಚಿತ್ರತಂಡ ಸಜ್ಜಾಗಿದೆ. ಈ ಬಾರಿಗೆ ಬಾಕ್ಸಾಫೀಸ್‌ನಲ್ಲಿ ದಾಖಲೆಗಳನ್ನೆಲ್ಲಾ ಉಡೀಸ್ ಮಾಡಲು ಅಲ್ಲು ಅರ್ಜುನ್ ತುದಿಗಾಲಲ್ಲಿ ನಿಂತಿದ್ದಾರೆ.


Click it and Unblock the Notifications











