ಇನ್ಮುಂದೆ 'ಪುಷ್ಪ 2' ಅಬ್ಬರ ಶುರು; ಅಲ್ಲು ಅರ್ಜುನ್ ಟೀಮ್‌ನಿಂದ ಫಸ್ಟ್ ಸಾಂಗ್ ಬಗ್ಗೆ ಕ್ರೇಜಿ ಅಪ್‌ಡೇಟ್
ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಪುಷ್ಪ 2'. ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ' ಜೋರಾಗಿ ಸದ್ದು ಮಾಡುತ್ತಿದ್ದಂತೆ 'ಪುಷ್ಪ 2' ಬಗ್ಗೆ ನಿರೀಕ್ಷೆಗಳು ಹೆಚ್ಚಾಗಿವೆ. ಅದರಲ್ಲೂ ಈಗಾಗಲೇ ರಿಲೀಸ್ ಆಗಿರುವ ಚಿಕ್ಕದೊಂದು ತುಣುಕು ಮತ್ತಷ್ಟು ಕುತೂಹಲವನ್ನು ಹೆಚ್ಚಿಸಿತ್ತು.
ಎರಡು ವರ್ಷಗಳಿಂದ 'ಪುಷ್ಪ 2'ಗಾಗಿ ಕಾದು ಕೂತಿದ್ದ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಸಿನಿಮಾ ತಂಡ ಸರ್ಪ್ರೈಸ್ ಕೊಡುವುದಕ್ಕೆ ಸಜ್ಜಾಗಿದೆ. ಅಲ್ಲು ಅರ್ಜುನ್ ಮ್ಯಾನರಿಸಂ, ಸ್ಟೈಲ್‌ಗೆ ಕಳೆದು ಹೋಗಿದ್ದ ಫ್ಯಾನ್ಸ್ ಈಗ ಪಾರ್ಟ್ 2 ನೋಡುವುದಕ್ಕೆ ತುದಿಗಾಗಲ್ಲಿ ನಿಂತಿದ್ದಾರೆ. ಇನ್ನೊಂದು ಕಡೆ 'ಪುಷ್ಪ 2' ಖರೀದಿ ಮಾಡುವುದಕ್ಕೆ ಸಿನಿಮಾ ಮಂದಿನೂ ಸಾಲುಗಟ್ಟಿ ನಿಂತಿದ್ದಾರೆ.

ಈ ಮಧ್ಯೆ ಅಲ್ಲು ಅರ್ಜುನ್ ಅಭಿಮಾನಿಗಳಿಗಾಗಿ ಸರ್ಪ್ರೈಸ್ ಒಂದು ಸಿಕ್ಕಿದೆ. 'ಪುಷ್ಪ 2' ಸಿನಿಮಾ ಜಸ್ಟ್ ಲುಕ್ ಅನ್ನಷ್ಟೇ ರಿಲೀಸ್ ಮಾಡಿದ್ದ ತಂಡ ಮೊದಲ ಹಾಡಿನ ಪ್ರೋಮೊ ರಿಲೀಸ್ ಮಾಡುತ್ತಿದೆ. ಏಪ್ರಿಲ್ 24ರ ಸಂಜೆ 4.05ಕ್ಕೆ ಮೊದಲ ಹಾಡಿನ ಪ್ರೋಮೊ ರಿಲೀಸ್ ಆಗಿದೆ. ಇದರಲ್ಲಿ ಇಡೀ ಹಾಡು ಯಾವಾಗ ರಿಲೀಸ್ ಆಗುತ್ತೆ ಅನ್ನೋದನ್ನು ಅನೌನ್ಸ್ ಮಾಡುವ ಸಾಧ್ಯತೆಯಿದೆ.
'ಪುಷ್ಪ' ಸಿನಿಮಾ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿದ್ದವು. ದೇವಿಶ್ರೀ ಪ್ರಸಾದ್ ಕಂಪೋಸ್ ಮಾಡಿರುವ ಹಾಡುಗಳು ಭಾಷೆಯ ಗಡಿ ದಾಟಿ ಕಿಕ್ ಕೊಟ್ಟಿದ್ದವು. ಈಗ ಎಲ್ಲರ ಕಣ್ಣು 'ಪುಷ್ಪ 2' ಮೇಲೆ ನಿಂತಿದೆ. ದೇವಿಶ್ರೀ ಪ್ರಸಾದ್ ಟ್ಯೂನ್‌ಗಳಿಗೆ ಟಾಲಿವುಡ್‌ನಲ್ಲಿ ದೊಡ್ಡ ಫ್ಯಾನ್ ಫಾಲೋವಿಂಗ್ ಇದೆ. ಹೀಗಾಗಿ "ಪುಷ್ಪ ಪುಷ್ಪ.." ಹಾಡನ್ನು ಎದುರು ನೋಡುತ್ತಿದ್ದಾರೆ.
'ಪುಷ್ಪ 2' ನಿರ್ಮಾಣ ಸಂಸ್ಥೆ ಮೊದಲ ಹಾಡಿನ ಪ್ರೋಮೊ ರಿಲೀಸ್ ಡೇಟ್ ಮಾಡುತ್ತಿದ್ದಂತೆ ಅಲ್ಲು ಅರ್ಜುನ್ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಎಲ್ಲಾ ಯೂಟ್ಯೂಬ್ ದಾಖಲೆಗಳನ್ನು ಮುರಿಯುತ್ತೆಂದು ಕಾಮೆಂಟ್ ಮಾಡುವುದಕ್ಕೆ ಶುರುವಿಟ್ಟುಕೊಂಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ನಿರ್ದೇಶಕ ಸುಕುಮಾರ್ ಹಾಗೂ ಅಲ್ಲು ಅರ್ಜುನ್ ಕಾಂಬಿನೇಷನ್ ಮೇಲೆ ಕಣ್ಣಿದೆ. ಜೊತೆಗೆ ದೇವಿಶ್ರೀ ಪ್ರಸಾದ್ ಸಂಗೀತ ಸಿನಿಪ್ರಿಯರಿಗೆ ಕಿಕ್ ಕೊಡೋದು ಗ್ಯಾರಂಟಿ ಎಂದೇ ಹೇಳುತ್ತಿದ್ದಾರೆ.
ಅಲ್ಲು ಅರ್ಜುನ್ ಸಿನಿಮಾ ಎರಡು ವರ್ಷಗಳ ಬಳಿಕ ರಿಲೀಸ್‌ಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. 'ಪುಷ್ಪ' ರೆಸ್ಪಾನ್ಸ್ ಬಳಿಕ ಥ್ರಿಲ್ ಆಗಿದ್ದ ತಂಡ ಪಾರ್ಟ್ 2 ಮಾಡುವುದಕ್ಕೆ ಸಮಯ ತೆಗೆದುಕೊಂಡಿತ್ತು. ನಿರ್ದೇಶಕ ಸುಕುಮಾರ್ ಕಥೆಯನ್ನು ಮತ್ತಷ್ಟು ತಿದ್ದಿ ತಿಡಿದ್ದರು. ಹೀಗಾಗಿ ಸಿನಿಮಾ ಮೇಕಿಂಗ್‌ಗೆ ಮತ್ತಷ್ಟು ಸಮಯ ಹಿಡಿದಿತ್ತು. ಕೊನೆಗೂ ಶೂಟಿಂಗ್ ಮುಗಿಸಿ, ಆಗಸ್ಟ್ 15ಕ್ಕೆ ಸಿನಿಮಾ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ರೆಡಿಯಾಗಿದೆ. ಮೊದಲ ಹೆಜ್ಜೆ ಎಂಬಂತೆ ಫಸ್ಟ್ ಸಾಂಗ್ ರಿಲೀಸ್‌ಗೆ ಮುಹೂರ್ತ ಫಿಕ್ಸ್ ಮಾಡುವ ತರಾತುರಿಯಲ್ಲಿದೆ.


Click it and Unblock the Notifications











