"ನನಗೆ ಅಲ್ಲು ಅರ್ಜುನ್ ಇಷ್ಟ ಆಗಲ್ಲ"; ಬಾಲಕೃಷ್ಣ ಮುಂದೇನೆ ಸತ್ಯ ಒಪ್ಪಿಕೊಂಡ ಅಮ್ಮ
ಟಾಲಿವುಡ್‌ನ ಐಕಾನ್ ಸ್ಟಾರ್ ಅಲ್ಲು ಅರ್ಜುನ್ 'ಪುಷ್ಪ 2' ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ವರ್ಷ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ ಅಷ್ಟೇ. ಹೀಗಾಗಿ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಇಂದು (ನವೆಂಬರ್ 24) ಚೆನ್ನೈನಲ್ಲಿ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಸಿನಿಮಾದ ಪ್ರಚಾರ ಮಾಡಿದ್ದರು.
ಅತ್ತ ಅಲ್ಲು ಅರ್ಜುನ್ ಸಿನಿಮಾ ಪ್ರಚಾರ ಮಾಡುತ್ತಿದ್ದರೆ, ಇತ್ತ ಅವರ ಬಗ್ಗೆ ತಾಯಿ ಹೇಳಿದ ಮಾತಿನ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಅಲ್ಲು ಅರ್ಜುನ್ ಹಾಗೂ ಕುಟುಂಬ ಇತ್ತೀಚೆಗೆ ಆಹಾ ಓಟಿಟಿಗೆ ಬಾಲಕೃಷ್ಣ ನಡೆಸಿಕೊಡುವ 'ಅನ್‌ಸ್ಟಾಪಬಲ್' ಸೀಸನ್ 4ರಲ್ಲಿ ಭಾಗವಹಿಸಿದ್ದರು. ಈ ಟಾಕ್ ಶೋನಲ್ಲಿ ಅಮ್ಮ ನಿರ್ಮಲಾ ಕೂಡ ಭಾಗವಹಿಸಿದ್ದರು.

ಬಾಲಕೃಷ್ಣ ನಡೆಸಿಕೊಡುವ 'ಅನ್‌ಸ್ಟಾಪಬಲ್' ಟಾಕ್ ಶೋ ಕಳೆದ ಮೂರು ಸೀಸನ್ ಕೂಡ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಈಗ ನಾಲ್ಕನೇ ಸೀಸನ್ ಕೂಡ ಅಷ್ಟೇ ಸದ್ದು ಮಾಡಿದೆ. ಅಲ್ಲು ಅರ್ಜುನ್ ಈ ಕಾರ್ಯಕ್ರಮಕ್ಕೆ ಬಂದು ಹೋದ ಬಳಿಕ ಅವರ ಎಪಿಸೋಡ್‌ನ ತುಣುಕೊಂದು ಸಿಕ್ಕಾಪಟ್ಟೆ ಸದ್ದು ಮಾಡುವುದಕ್ಕೆ ಶುರು ಮಾಡಿದೆ. ಈ ಶೋನಲ್ಲಿ ಅಲ್ಲು ಅರ್ಜುನ್ ಜೊತೆ ತಾಯಿ ಸುನೀತಾ ಕೂಡ ಭಾಗವಹಿಸಿದ್ದರು. ಆ ವೇಳೆ ಅಲ್ಲು ಅರ್ಜುನ್ ಅಂದರೆ ಇಷ್ಟವಿರಲಿಲ್ಲ ಅಂತ ಹೇಳಿದ್ದರು. ಆ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಷ್ಟಕ್ಕೂ ಮಗನ ಬಗ್ಗೆನೇ ತಾಯಿ ಹೀಗಂದಿದ್ದು ಯಾಕೆ? ತಿಳಿಯಲು ಮುಂದೆ ಓದಿ.
ಟಾಕ್ ಶೋ ಅನ್‌ಸ್ಟಾಪಬಲ್‌ಗೆ ಅತಿಥಿಯಾಗಿ ಬಂದಿದ್ದ ಅಲ್ಲು ಅರ್ಜುನ್‌ಗೆ ಬಾಲಕೃಷ್ಣ ಸರ್ಪ್ರೈಸ್ ಕೊಟ್ಟಿದ್ದರು. ಈ ಶೋಗೆ ಅಲ್ಲು ಅರ್ಜುನ್ ಅಮ್ಮ ನಿರ್ಮಲಾರನ್ನು ಕರೆಸಿದ್ದರು. ಈ ವೇಳೆ ಬಾಲಕೃಷ್ಣ, ಅಲ್ಲು ಅರ್ಜುನ್ ಹಾಗೂ ತಾಯಿ ನಿರ್ಮಲಾ ನಡುವಿನ ಸಂಭಾಷಣೆ ಸಿಕ್ಕಾಪಟ್ಟೆ ಇಂಟ್ರೆಸ್ಟಿಂಗ್ ಆಗಿತ್ತು. ಈ ಮೂವರು ಮಧ್ಯೆ ನಡೆದ ಸಂಭಾಷಣೆಯ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದೇ ವಿಡಿಯೋದಲ್ಲಿ ಅಲ್ಲು ಅರ್ಜುನ್ ಅಂದರೆ ನನಗೆ ಇಷ್ಟ ಅಂತ ತಾಯಿ ನಿರ್ಮಲಾ ಹೇಳಿದ್ದಾರೆ.
ಅನ್‌ಸ್ಟಾಪಬಲ್‌ಗೆ ಬಂದಿದ್ದ ಅಲ್ಲು ಅರ್ಜುನ್ ತಾಯಿಗೆ ಬಾಲಕೃಷ್ಣ "ನಿಮ್ಮ ಮೂವರು ಮಕ್ಕಳಲ್ಲಿ ಯಾರು ನಿಮ್ಮ ಫೇವರಿಟ್?" ಎಂದು ಪ್ರಶ್ನೆ ಹೇಳಿದ್ದರು. ಈ ಪ್ರಶ್ನೆಗೆ ನಿರ್ಮಾಲ ಅರವಿಂದ್ ಉತ್ತರ ಕೊಡುವುದಕ್ಕೂ ಮುನ್ನ ಅಲ್ಲು ಅರ್ಜುನ್ ಉತ್ತರಿಸುವುದಕ್ಕೆ ಶುರು ಮಾಡಿದ್ದರು. "ನಿಜ ಹೇಳು ನಮ್ಮ ಮೂವರು ಮಕ್ಕಳಲ್ಲಿ ನಿಮ್ಮ ಫೇವರಿಟ್ ಯಾರು? ನಾನಾ ಅಥವಾ ಶಿರೀಶ್ ಎಂದು ಕೇಳುತ್ತಲೇ ಇದ್ದೇನೆ. ನನ್ನ ಫೀಲಿಂಗ್ ಏನಂದರೆ, ಶಿರೀಶ್ ಅವರ ಅಚ್ಚು ಮೆಚ್ಚಿನ ಮಗ. ಆದರೆ, ಅವರು ಒಪ್ಪಿಕೊಳ್ಳುತ್ತಿಲ್ಲ ಅನ್ನೋದು ನನ್ನ ಫೀಲಿಂಗ್. ಕಳೆದ 30 ವರ್ಷಗಳಿಂದ ನಾನು ಈ ಪ್ರಶ್ನೆ ಕೇಳುತ್ತಲೇ ಇದ್ದೇನೆ." ಎಂದು ಹೇಳುತ್ತಾರೆ.

ಆಗ ಅಲ್ಲು ಅರವಿಂದ್ ತಾಯಿ ನಿರ್ಮಲ ಕೊಟ್ಟ ಉತ್ತರ ಹೀಗಿತ್ತು. "ನಾನು ನನ್ನ ಅಚ್ಚು ಮೆಚ್ಚಿನ ಮಗ ಯಾರು ಅಂತ ಹೇಳಬಹುದು. ಅದನ್ನು ಹೇಳುವುದರಲ್ಲಿ ಈಗೇನು ಪ್ರಯೋಜನವಿದೆ" ಎಂದಾಗ ಬಾಲಕೃಷ್ಣ ತಾನೂ ಕೂಡ ಶಿರೀಶ್ ಇಷ್ಟ ಪಡುತ್ತೇನೆ ಎಂದು ಹೇಳುತ್ತಾರೆ. ಆಗ ಅಲ್ಲು ಅರ್ಜುನ್ ಅಮ್ಮ ನಿರ್ಮಲ "ನಾನು ಅವನನ್ನು ತುಂಬಾ ಇಷ್ಟ ಪಡುತ್ತೇನೆ. ಆದರೆ, 30 ವರ್ಷಗಳಿಂದ ನಾನೇನು ಸುಳ್ಳು ಹೇಳಿಲ್ಲ. ನನಗೆ ಅದು ಮಾಡಿಲ್ಲ ಇದು ಮಾಡಿಲ್ಲ ಅಂತಾನೆ. ಶಿರೀಶ್ ಎಲ್ಲಾ ಮಾಡಿದ್ದೀಯ ಅಂತ ಹೇಳುತ್ತಾನೆ" ಎಂದು ಬಾಲಕೃಷ್ಣಗೆ ದೂರು ಕೊಟ್ಟಿದ್ದಾರೆ.
ಅನ್‌ಸ್ಟಾಪಬಲ್ ಟಾಕ್ ಶೋನಲ್ಲಿ ಅಲ್ಲು ಅರ್ಜುನ್ ಹಾಗೂ ಅವರ ತಾಯಿ ನಡುವಿನ ಸಂಭಾಷಣೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇನ್ನು ಸಿನಿಮಾ ವಿಚಾರಕ್ಕೆ ಬರೋದಾರೆ, ಅಲ್ಲು ಅರ್ಜುನ್ 'ಪುಷ್ಪ 2' ಡಿಸೆಂಬರ್ 5ನೇ ತಾರೀಕು ವರ್ಲ್ಡ್ ವೈಡ್ ರಿಲೀಸ್ ಆಗುತ್ತಿದೆ. 'ಕೆಜಿಎಫ್ 2' ದಾಖಲೆಯನ್ನು ಮುರಿಯಲೇ ಬೇಕು ಈ ತಂಡ ಅಂತ ಪಣ ತೊಟ್ಟು ನಿಂತಿದೆ. ಈ ಸವಾಲನ್ನು ಗೆಲ್ಲುತ್ತಾರಾ? ಅನ್ನೋದನ್ನು ಸಿನಿಪ್ರಿಯರು ಕೂಡ ಎದುರು ನೋಡುತ್ತಿದ್ದಾರೆ.


Click it and Unblock the Notifications











