ಅಲ್ಲು ಅರ್ಜುನ್ ವಿರುದ್ಧ ನಿಲುತ್ತಾರಾ ವಿಜಯ್ ದೇವರಕೊಂಡ? ಇದಕ್ಕೆಲ್ಲ ಕಾರಣ ರಶ್ಮಿಕಾ ಮಂದಣ್ಣ?
ಟಾಲಿವುಡ್‌ನ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ 2' ರಿಲೀಸ್‌ಗೆ ರೆಡಿಯಾಗಿದೆ. ವರ್ಷದ ಕೊನೆಯ ತಿಂಗಳಲ್ಲಿ ಬಾಕ್ಸಾಫೀಸ್‌ಗೆ ಕಿಚ್ಚು ಹಚ್ಚುವುದಕ್ಕೆ ಇಡೀ ತಂಡ ಸಕಲ ಸಿದ್ಧವಾಗಿ ನಿಂತಿದೆ. ಅಲ್ಲುಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ತೆರೆಮೇಲಿನ ಕೆಮಿಸ್ಟ್ರಿಯನ್ನು ಕಣ್ತುಂಬಿಕೊಳ್ಳುವುದಕ್ಕೆ ಪ್ರೇಕ್ಷಕರು ಕೂಡ ತುದಿಗಾಲಲ್ಲಿ ನಿಂತಿದ್ದಾರೆ.
ಅದರಲ್ಲೂ ರಶ್ಮಿಕಾ ಮಂದಣ್ಣ ಹಾಗೂ ಅಲ್ಲು ಅರ್ಜುನ್ ಜೋಡಿಯ 'ಪೀಲಿಂಗ್ಸು' ಸಾಂಗ್ ಫ್ಯಾನ್ಸ್‌ಗೆ ಕಿಕ್ ಕೊಡುತ್ತಿದೆ. ಅಲ್ಲು ಅರ್ಜುನ್ ಜೊತೆ ಬೋಲ್ಡ್ ಆಗಿ ಹೆಜ್ಜೆ ಹಾಕಿದ್ದು ತೆಲುಗು ಮಂದಿಯ ಮನಗೆದ್ದಿದೆ. ಹೀಗಾಗಿ ಜೋಡಿಯನ್ನು ಮತ್ತೊಂದು ಸಿನಿಮಾದಲ್ಲಿ ನೋಡಬೇಕು ಅಂತ ಬಯಸಿದ್ದ ಇಬ್ಬರ ಅಭಿಮಾನಿಗಳಿಗೂ ಗುಡ್ ನ್ಯೂಸ್ ಸಿಕ್ಕಿದೆ. ಅದುವೇ 'ಪುಷ್ಪ 3'.

'ಪುಷ್ಪ 2' ರಿಲೀಸ್‌ಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ ಅನ್ನುವಾಗಲೇ 'ಪುಷ್ಪ 3' ಬರೋದು ಪಕ್ಕ ಅಂತ ಚಿತ್ರರಂಗದಲ್ಲಿ ಸುದ್ದಿಯಾಗಿದೆ. ಫಿಲ್ಮ್ ಕ್ರಿಟಿಕ್ ಹಾಗೂ ಟ್ರೇಡ್ ಎಕ್ಸ್‌ಪರ್ಟ್ ಮನೋಬಾಲ ವಿಜಯಬಾಲನ್ 'ಪುಷ್ಪ 3' ಟೈಟಲ್ ಅನ್ನು ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಆ ಫೋಟೊ ಈಗ ಸಿನಿಪ್ರಿಯರ ಕುತೂಹಲವನ್ನು ದುಪ್ಪಟ್ಟು ಮಾಡಿದೆ. ಇದರ ಜೊತೆಗೆ ಟಾಲಿವುಡ್ ರೌಡಿ ವಿಜಯ್ ದೇವರಕೊಂಡ ಹೆಸರೂ ಕೂಡ ಸದ್ದು ಮಾಡುತ್ತಿದೆ.
ಐಕಾನ್ ಸ್ಟಾರ್ ಅಲ್ಲು ಅರ್ಜುನ್ ವಿರುದ್ಧ ನಿಲ್ಲುವುದಕ್ಕೆ ವಿಜಯ್ ದೇವರಕೊಂಡ ನಿರ್ಧರಿಸಿರುವ ಬಗ್ಗೆನೂ ಚರ್ಚೆಯಾಗುತ್ತಿದೆ. ಹಾಗಂತ ಇಬ್ಬರೂ ರಿಯಲ್ ಲೈಫ್‌ನಲ್ಲಿ ಏನೂ ಹೊಡೆದಾಡುವುದಿಲ್ಲ. ಬದಲಾಗಿ 'ಪುಷ್ಪ 3' ಸಿನಿಮಾದಲ್ಲಿ ಅಲ್ಲು ಅರ್ಜುನ್‌ಗೆ ವಿರುದ್ದವಾಗಿ ನಿಲ್ಲುವುದೇ ವಿಜಯ್ ದೇವರಕೊಂಡ ಎನ್ನುವ ಸುದ್ದಿ ಕೂಡ ಹಬ್ಬಿದೆ. ವಿಜಯ್ ದೇವರಕೊಂಡ ಈ ಸಿನಿಮಾದಲ್ಲಿ ಖಳನಾಯಕನಾಗಿ ನಟಿಸುತ್ತಿದ್ದಾರೋ, ಇಲ್ಲ ಅಲ್ಲು ಅರ್ಜುನ್ ಎದುರು ನಟಿಸುತ್ತಿರೋ ಅನ್ನುವುದು ಇನ್ನೂ ಕನ್ಫರ್ಮ್ ಆಗಿಲ್ಲ.
ಟ್ರೇಡ್ ಎಕ್ಸ್‌ಪರ್ಟ್ ಮನೋಬಾಲ ವಿಜಯಬಾಲನ್ 'ಪುಷ್ಪ 3' ಸಿನಿಮಾದ ಪೋಸ್ಟರ್ ಅನ್ನು ಶೇರ್ ಮಾಡಿಕೊಂಡಿದ್ದಾರೆ. ಆ ಫೋಟೊದಲ್ಲಿ ಸೌಂಡ್ ಡಿಸೈನರ್ ರಸಲ್ ಪೂಕುಟ್ಟಿ ಜೊತೆಗೆ ಇನ್ನೂ ಕೆಲವು ಮಂದಿ ಇದ್ದು, ಅವರ ಹಿಂದೆ 'ಪುಷ್ಪ 3' ಟೈಟಲ್ ರಿವೀಲ್ ಆಗಿದೆ. ಈ ಪೋಟೊ ನೋಡಿದ ಬಳಿಕ 'ಪುಷ್ಪ' ಸೀರಿಸ್‌ನ ಮೂರನೇ ಚಾಪ್ಟರ್ ಬರುವುದು ಪಕ್ಕಾ ಅಂತಾಗಿದೆ.
'ಪುಷ್ಪ 2' ಟೈಟಲ್ ರಿವೀಲ್ ಆಗುತ್ತಿದ್ದಂತೆ ವಿಜಯ್ ದೇವರಕೊಂಡ ಹೆಸರು ಓಡಾಡುವುದಕ್ಕೆ ಶುರು ಮಾಡಿದೆ. ವಿಜಯ್ ದೇವರಕೊಂಡ ಈ ಸಿನಿಮಾದಲ್ಲಿ ಖಳನಾಯಕನಾಗಿ ಕಾಣಿಸಿಕೊಳ್ಲಲಿದ್ದಾರೆ ಅನ್ನೋ ಮಾತು ಕೇಳಿಬರುತ್ತಿದೆ. ಆದರೆ, ಚಿತ್ರತಂಡ ಹಾಗೂ ವಿಜಯ್ ದೇವರಕೊಂಡ ಅಧಿಕತವಾಗಿ ಈ ಬಗ್ಗೆ ಮಾಹಿಯನ್ನು ಹಂಚಿಕೊಂಡಿಲ್ಲ. ಆದರೆ, 'ಪುಷ್ಪ 2' ರಿಲೀಸ್‌ಗೆ ಇನ್ನೇನು ಎರಡು ದಿನ ಇದೆ ಅನ್ನುವಾಗಲೇ 'ಪುಷ್ಪ 3' ಸುದ್ದಿ ಹಬ್ಬಿದೆ.
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಈಗಾಗಲೇ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಗೀತಾ ಗೋವಿಂದರಂ' ಹಾಗೂ 'ಡಿಯರ್ ಕಾಮ್ರೇಡ್' ಸಿನಿಮಾ ಬಳಿಕ ಮತ್ತೆ ಇಬ್ಬರನ್ನೂ ಒಟ್ಟಿಗೆ ನೋಡುವುದಕ್ಕೆ ಫ್ಯಾನ್ಸ್ ಕೂಡ ಕಾದು ಕೂತಿದ್ದಾರೆ. ಸದ್ಯ ಈ ವಿಷಯವನ್ನು 'ಪುಷ್ಪ' ತಂಡ ಕನ್ಫರ್ಮ್ ಮಾಡಬೇಕಿದೆ. ಇದರ ಜೊತೆಗೆ 'ಕೆಜಿಎಫ್ 3' ಗೂ ಮುನ್ನವೇ 'ಪುಷ್ಪ 3' ರಿಲೀಸ್ ಆಗುತ್ತೆ ಅನ್ನೋ ಸುದ್ದಿಗಳು ಕೂಡ ಓಡಾಡುತ್ತಿವೆ.


Click it and Unblock the Notifications











