ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಅಲ್ಲು ಅರ್ಜುನ್ 'ಪುಷ್ಪ': ವರ್ಷದ ಅತ್ಯುತ್ತಮ ಸಿನಿಮಾ ಪಟ್ಟ

ಐಕಾನ್ ಸ್ಟಾರ್ ಅಲ್ಲು ಅರ್ಜುನ್ 'ಪುಷ್ಪ' ಇನ್ನೂ ತನ್ನ ಆಟ ನಿಲ್ಲಿಸಿಲ್ಲ. ಥಿಯೇಟರ್‌ನಿಂದ ಒಟಿಟಿವರೆಗೆ ಬಂದು ನಿಂತಿದ್ದರೂ, 'ಪುಷ್ಪ' ಸದ್ದು ಮಾಡುತ್ತಲೇ ಇದೆ. ಮೊದಲ ಪ್ಯಾನ್ ಇಂಡಿಯಾ ಸಿನಿಮಾದಲ್ಲಿಯೇ ಅಲ್ಲು ಅರ್ಜುನ್ ಚಿಂದಿ ಉಡಾಯಿಸಿದ್ದಾರೆ. ಬಾಕ್ಸಾಫೀಸ್‌ನಲ್ಲಿ ಗೆದ್ದು ಬೀಗಿದ 'ಪುಷ್ಪ' ಮೊದಲ ಪ್ರತಿಷ್ಟಿತ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಸಿನಿಮಾ ಕ್ಷೇತ್ರದಲ್ಲಿ ನೀಡಲಾಗುವ ಪ್ರತಿಷ್ಟಿತ ದಾದಾ ಸಾಹೇಬ್ ಪ್ರಶಸ್ತಿಯನ್ನು ಗೆದ್ದು ಹೊಸ ದಾಖಲೆ ಬರೆದಿದೆ.

ರಾಷ್ಟ್ರ ಮಟ್ಟದಲ್ಲಿ ಮತ್ತೊಂದು ದಕ್ಷಿಣ ಭಾರತದ ಸಿನಿಮಾ ಇತಿಹಾಸ ಬರೆದಂತಾಗಿದೆ. ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ ನೂರು ಕೋಟಿ ಲೂಟಿ ಮಾಡಿದ ಮೇಲೆ ಅಲ್ಲು ಅರ್ಜುನ್ ನಸೀಬು ಬದಲಾಗಿದೆ. ಪುಷ್ಪ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಸಿನಿಮಾ ರಿಲೀಸ್ ಆಗಿ ಎರಡು ತಿಂಗಳಾಗಿದ್ದರೂ ಹಾಡುಗಳು ಟ್ರೆಂಡಿಂಗ್‌ನಲ್ಲಿವೆ. ಸದ್ಯ 'ಪುಷ್ಪ' ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡು ಸದ್ದು ಮಾಡುತ್ತಿದೆ.

 'ಪುಷ್ಪ'ಗೆ ಪ್ರತಿಷ್ಟಿತ ದಾದಾ ಸಾಹೇಬ್ ಪ್ರಶಸ್ತಿ

'ಪುಷ್ಪ'ಗೆ ಪ್ರತಿಷ್ಟಿತ ದಾದಾ ಸಾಹೇಬ್ ಪ್ರಶಸ್ತಿ

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಗಿಟ್ಟಿಸಿಕೊಳ್ಳುವಲ್ಲಿ ಅಲ್ಲು ಅರ್ಜುನ್ ಸಿನಿಮಾ ಪುಷ್ಪ ಗೆದ್ದಿದೆ. ಫೆಬ್ರವರಿ 20 ರಂದು ಮುಂಬೈನಲ್ಲಿ ದಾದಾ ಸಾಹೇಬ್ ಫಾಲ್ಕೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಸಮಾರಂಭ ನಡೆಯಿತು. ಈ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದ ಪುಷ್ಪ ವರ್ಷದ ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯದ ಹಾಗೂ ಸಮಂತಾ ಹೆಜ್ಜೆ ಹಾಕಿರುವ ಈ ಚಿತ್ರದ ದಾದಾ ಸಾಹೇಬ್ ಫಾಲ್ಕೆ- ವರ್ಷದ ಅತ್ಯುತ್ತಮ ಪ್ರಶಸ್ತಿ ಗೆದ್ದಿರುವ ಹೊಸ ಇತಿಹಾಸ ಸೃಷ್ಟಿಸಿದಂತಾಗಿದೆ.

'ಪರಿಶ್ರಮಕ್ಕೆ ಸಿಕ್ಕ ಪ್ರಶಸ್ತಿ' ಎಂದ ಫಾಲ್ಕೆ

ದಾದಾ ಸಾಹೇಬ್ ಪ್ರಶಸ್ತಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ತನ್ನ ಇನ್‌ಸ್ಟಾಗ್ರಾಂ ಖಾತೆಯ ಮೂಲಕ 'ಪುಷ್ಪ' ತಂಡಕ್ಕೆ ಶುಭಕೋರಿದೆ. " ದಾದಾ ಸಾಹೇಬ್ ಪ್ರಶಸ್ತಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ 2022ದಲ್ಲಿ ವರ್ಷದ ಅತ್ಯುತ್ತಮ ಸಿನಿಮಾ ವಿಭಾಗವದಲ್ಲಿ 'ಪುಷ್ಪ: ದಿ ರೈಸ್' ಪ್ರಶಸ್ತಿಯನ್ನು ಗೆದ್ದಿರುವುದಕ್ಕೆ ಅಭಿನಂದನೆಗಳು. ನಿಮ್ಮ ಪರಿಶ್ರಮ ತಕ್ಕ ಪ್ರತಿಫಲ ಸಿಕ್ಕಿದೆ. ನಿಮ್ಮ ಮುಂದಿನ ಎಲ್ಲಾ ಕೆಲಸಗಳಿಗೆ ಡಿಪಿಐಎಫ್‌ಎಫ್‌ ಶುಭ ಕೋರುತ್ತದೆ." ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದೆ.

 'ಪುಷ್ಪ'ಗೆ ಯಾಕೆ ಈ ಪ್ರಶಸ್ತಿ?

'ಪುಷ್ಪ'ಗೆ ಯಾಕೆ ಈ ಪ್ರಶಸ್ತಿ?

ಅಲ್ಲು ಅರ್ಜುನ್ 'ಪುಷ್ಪ' ಕಳೆದ ವರ್ಷ ಡಿಸೆಂಬರ್ 17ರಂದು ಐದು ಭಾಷೆಗಳಲ್ಲಿ ಬಿಡುಗಡೆಗೆ ಪ್ಲ್ಯಾನ್ ಮಾಡಿದ್ದರೂ, ನಾಲ್ಕು ಭಾಷೆಗಳಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿತ್ತು. ಇದು ಬಾಕ್ಸಾಫೀಸ್‌ನಲ್ಲಿ ಗೆದ್ದ ಬ್ಲಾಕ್‌ಬಸ್ಟರ್ ಸಿನಿಮಾ ಎಂದು ಸಾಬೀತಾಯಿತು. 300 ಕೋಟಿಗೂ ಅಧಿಕ ಮೊತ್ತವನ್ನು ಕಲೆ ಹಾಕಿತ್ತು. ಹಿಂದಿ ಅವತರಣಿಕೆಯೇ 100 ಕೋಟಿ ಗಳಿಸಿತ್ತು. ಸಿನಿಮಾ ಗಳಿಕೆಯಲ್ಲಷ್ಟೇ ಅಲ್ಲ, ಟ್ರೆಂಡ್‌ನಲ್ಲೂ ಹೆಸರು ಮಾಡಿದೆ. ಅಲ್ಲು ಅರ್ಜುನ್ ಅಭಿನಯಕ್ಕೆ ಮೆಚ್ಚುಗೆ ಮಾತುಗಳು ಕೇಳಿ ಬಂದಿತ್ತು. ಈ ಎಲ್ಲಾ ಕಾರಣವನ್ನು ಗಮನದಲ್ಲಿಟ್ಟುಕೊಂಡು 'ಪುಷ್ಪ' ಚಿತ್ರ ವರ್ಷದ ಅತ್ಯುತ್ತಮ ಸಿನಿಮಾ ಎಂಬ ಪ್ರಶಸ್ತಿಯನ್ನು ನೀಡಲಾಗಿದೆ.

 '83' ರಣ್‌ವೀರ್‌ ಅಭಿನಯಕ್ಕೆ ಪ್ರಶಸ್ತಿ

'83' ರಣ್‌ವೀರ್‌ ಅಭಿನಯಕ್ಕೆ ಪ್ರಶಸ್ತಿ

'ಪುಷ್ಪ' ಬಾಕ್ಸಾಫೀಸ್‌ನಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಅಂತಾಗಿದ್ದರೆ, ಇತ್ತ '83' ಬಾಕ್ಸಾಫೀಸ್‌ನಲ್ಲಿ ಸೋಲುಂಡ ಸಿನಿಮಾಗಳ ಪಟ್ಟಯಲ್ಲಿದೆ. ಆದರೂ '83' ಸಿನಿಮಾದಲ್ಲಿ ರಣ್‌ವೀರ್ ಸಿಂಗ್ ಅಭಿನಯಕ್ಕೆ ದಾದಾ ಸಾಹೇಬ್ ಫಾಲ್ಕೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ತೀರ್ಪುಗಾರು ಸೋತಿದ್ದಾರೆ. ಹೀಗಾಗಿ ರಣ್‌ವೀರ್ ಸಿಂಗ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಕೃತಿ ಸನನ್ ಅತ್ಯುತ್ತಮ ನಟಿ, ಸಿದ್ಧಾರ್ಥ್ ಮಲ್ಹೋತ್ರಾ ನಟನೆಯ 'ಶೇರ್‌ಷಾ' ಅತ್ಯುತ್ತಮ ಸಿನಿಮಾ, ಕಿಯಾರಾ ಅಡ್ವಾನಿ ಅತ್ಯುತ್ತಮ ನಟಿ (ಕಿಟಿಕ್ಸ್) ವಿಭಾಗದಲ್ಲಿ ಪಡೆದುಕೊಂಡಿದ್ದಾರೆ.

More from Filmibeat

English summary
Allu Arjun Rashmika and Samantha Starrer Pushpa wins Dadasaheb Phalke Award 2022. Dadasaheb Phalke International Film Festival Awards 2022 was held on 20th February in Mumbai. Pushpa wins Dadasaheb Phalke Award in the category of – Film Of The Year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X