ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ ಅಲ್ಲು ಅರ್ಜುನ್ 'ಪುಷ್ಪ': ಮೊದಲ ದಿನದ ಗಳಿಕೆ ಎಷ್ಟು?

ಅಲ್ಲು ಅರ್ಜುನ್ ರಶ್ಮಿಕಾ ಮಂದಣ್ಣ ಕಾಂಬಿನೇಷನ್‌ ಸಿನಿಮಾ 'ಪುಷ್ಪ' ಭರ್ಜರಿ ಪ್ರಚಾರದ ಮೂಲಕ ಥಿಯೇಟರ್‌ಗೆ ಎಂಟ್ರಿ ಕೊಟ್ಟಿತ್ತು. ಪ್ಯಾನ್ ಇಂಡಿಯಾ ಸಿನಿಮಾ ಆಗಿ ಗ್ರ್ಯಾಂಡ್ ಎಂಟ್ರಿಕೊಟ್ಟಿದ್ದ 'ಪುಷ್ಪ' ಮೊದಲ ದಿನ ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿಲ್ಲ. ಕರ್ನಾಟಕದಲ್ಲಿ ತೆಲುಗು 'ಪುಷ್ಪ' ಹಾಗೂ ಕೇರಳದಲ್ಲಿ ತಮಿಳು 'ಪುಷ್ಪ' ರಿಲೀಸ್ ಆಗಿತ್ತು. ಹೀಗಿದ್ದರೂ, ಬಾಕ್ಸಾಫೀಸ್‌ನಲ್ಲಿ ಅಲ್ಲು ಅರ್ಜುನ್ ಸಿನಿಮಾ ಧೂಳೆಬ್ಬಿಸಿದೆ.

ಪ್ರಾದೇಶಿಕ ಸಿನಿಮಾವೊಂದು ಪ್ಯಾನ್ ಇಂಡಿಯಾ ಅವತಾರವೆತ್ತಿ ಗ್ರ್ಯಾಂಡ್ ರಿಲೀಸ್ ಆಗುವುದು ದೊಡ್ಡ ವಿಷಯ. 'ಪುಷ್ಪ' ಪ್ಯಾನ್ ಇಂಡಿಯಾ ಸಿನಿಮಾವನ್ನಾಗಿ ರಿಲೀಸ್ ಮಾಡಲು ನಿರ್ದೇಶಕ ಸುಕುಮಾರ್ ಕೊನೆಯ ಕ್ಷಣದವರೆಗೂ ಪರದಾಡಿದ್ದರು. ಆದರೂ, ಎರಡು ಭಾಷೆಗಳಲ್ಲಿ ಬಿಡುಗಡೆ ಮಾಡದೆ ಕೇವಲ ಮೂರು ಭಾಷೆಗಳಲ್ಲಿ ಮಾತ್ರ ಚಿತ್ರ ತೆರೆಕಂಡಿತ್ತು. ಹೀಗಾಗಿ 'ಪುಷ್ಪ' ಲೆಕ್ಕಾಚಾರ ಕೊಂಚ ತಲೆಕೆಳಗಾಗಿದೆ. ಆದರೂ ಅಲ್ಲು ವೃತ್ತಿ ಬದುಕಿನಲ್ಲಿಯೇ ಮೊದಲ ದಿನ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಎನ್ನಲಾಗಿದೆ.

 'ಪುಷ್ಪ' ಮೊದಲ ದಿನದ ಗಳಿಕೆ ಎಷ್ಟು?

'ಪುಷ್ಪ' ಮೊದಲ ದಿನದ ಗಳಿಕೆ ಎಷ್ಟು?

'ಪುಷ್ಪ' ಸಿನಿಮಾದ ಬಗ್ಗೆ ನಿರೀಕ್ಷೆ ದುಪ್ಪಟ್ಟಾಗಲು ಸಾಕಷ್ಟು ಕಾರಣವಿತ್ತು. ನಿರ್ದೇಶಕ ಸುಕುಮಾರ್ ಹಾಗೂ ಅಲ್ಲು ಅರ್ಜುನ್ ಕಾಂಬಿನೇಷನ್. ಈ ಜೋಡಿ ಒಂದಾದಗೆಲ್ಲಾ ಸಿನಿಮಾ ಬಾಕ್ಸಾಫೀಸ್ ಅನ್ನು ಚಿಂದಿ ಉಡಾಯಿಸಿದೆ. ಹೀಗಾಗಿ ಪುಷ್ಪ ಸಿನಿಮಾದ ಬಾಕ್ಸಾಫೀಸ್ ಮೇಲೆ ಇಡೀ ದಕ್ಷಿಣ ಭಾರತೀಯ ಚಿತ್ರರಂಗ ಕಣ್ಣಿಟ್ಟಿತ್ತು. ಅದಕ್ಕೆ ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಿದೆ. ಒಂದು ಲೆಕ್ಕಚಾರದ ಪ್ರಕಾರ, ಮೂರು ಭಾಷೆಗಳಿಂದ ಮೊದಲ ದಿನ 'ಪುಷ್ಪ' ಸಿನಿಮಾ ಗಳಿಸಿದ್ದು ಬರೋಬ್ಬರಿ 35 ಕೋಟಿಗೂ ಅಧಿಕ ಎನ್ನಲಾಗಿದೆ.

3 ದಿನಕ್ಕೆ 'ಪುಷ್ಪ' ಗಳಿಕೆ 100 ಕೋಟಿ?

3 ದಿನಕ್ಕೆ 'ಪುಷ್ಪ' ಗಳಿಕೆ 100 ಕೋಟಿ?

ಮೊದಲ ದಿನ 35 ಕೋಟಿ ಗಳಿಸಿದ 'ಪುಷ್ಪ' ಮೊದಲ ದಿನ ನಿಟ್ಟುಸಿರು ಬಿಟ್ಟಿದೆ. ಆದರೆ, 'ಪುಷ್ಪ' ಸಿನಿಮಾ ತೆರೆಕಂಡ ಮೊದಲ ದಿನವೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ ಎರಡನೇ ದಿನ ಹಾಗೂ ಮೂರನೇ ದಿನ ಸಿನಿಮಾಗಳಿಗೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಹೀಗಾಗಿ ಮೂರು ದಿನದಲ್ಲಿ 100 ಕೋಟಿ ದಾಟುತ್ತಾ ಅನ್ನುವುದರ ಬಗ್ಗೆ ಟ್ರೇಡ್ ಅನಾಲಿಸ್ಟ್‌ಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೂ, ಅಲ್ಲು ಅರ್ಜುನ್ ಸಿನಿಮಾ ಮೂರು ದಿನಗಳಲ್ಲಿ 80 ಕೋಟಿಯಿಂದ 100 ಕೋಟಿಯೊಳಗೆ ಕಳಿಕೆ ಮಾಡುತ್ತೆ ಎಂದು ಅಂದಾಜು ಮಾಡಿದ್ದಾರೆ.

ಮಲಯಾಳಂನಲ್ಲೂ ರಿಲೀಸ್ 'ಪುಷ್ಪ' ರಿಲೀಸ್

ಮಲಯಾಳಂನಲ್ಲೂ ರಿಲೀಸ್ 'ಪುಷ್ಪ' ರಿಲೀಸ್

'ಪುಷ್ಪ' ಸಿನಿಮಾ ಆಂಧ್ರ ಹಾಗೂ ತೆಲಂಗಾಣದಲ್ಲಿ ನಿರೀಕ್ಷೆಯಂತೆ ಗ್ರ್ಯಾಂಡ್ ಓಪನಿಂಗ್ ಕಂಡಿದೆ. ಬಹುತೇಕ ಚಿತ್ರಮಂದಿರಗಳು ಹೌಸ್‌ಫುಲ್ ಪ್ರದರ್ಶನ ಕಂಡಿವೆ. ಆದರೆ, ಹಿಂದಿ ಭಾಷೆಯಲ್ಲಿ ರಿಲೀಸ್ ಆದ ಮಹಾರಾಷ್ಟ್ರ ಸೇರಿದಂತೆ ಉತ್ತರ ಭಾರತದ ರಾಜ್ಯಗಳಲ್ಲಿ ಈ ಸಿನಿಮಾಗೆ 25 ರಿಂದ 30 ಪರ್ಸೆಂಟ್ ಓಪನಿಂಗ್ ಸಿಕ್ಕಿದೆ. ಇದೂ ಕೂಡ ಚಿತ್ರಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಎಂದೇ ಹೇಳಲಾಗಿದೆ.

ತಮಿಳುನಾಡು, ಕರ್ನಾಟಕದಲ್ಲಿ ಪ್ರತಿಕ್ರಿಯೆ ಏನು?

ತಮಿಳುನಾಡು, ಕರ್ನಾಟಕದಲ್ಲಿ ಪ್ರತಿಕ್ರಿಯೆ ಏನು?

ತಮಿಳುನಾಡಿನಲ್ಲಿ 'ಪುಷ್ಪ' ಸಿನಿಮಾವನ್ನು ಸುಮಾರು 400 ಸ್ಕ್ರೀನ್‌ಗಳಲ್ಲಿ ರಿಲೀಸ್ ಮಾಡಲಾಗಿತ್ತು. ಹೀಗಾಗಿ ಮೊದಲ ದಿನವೇ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೇವಲ ತಮಿಳುನಾಡಿನಲ್ಲಿ 35ಕೋಟಿ ಗಳಿಕೆ ಮಾಡಬಹುದು ಎನ್ನಲಾಗಿದೆ. ಇನ್ನೊಂದು ಕಡೆ ಕರ್ನಾಟಕದಲ್ಲಿ 800ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ತೆಲುಗು 'ಪುಷ್ಪ' ರಿಲೀಸ್ ಆಗಿದೆ. 'ಬಾಯ್‌ಕಾಟ್ ಪುಷ್ಪ' ಅಭಿಯಾನದ ಹೊರತಾಗಿಯೂ ಶೇ. 77 ಪರ್ಸೆಂಟ್‌ನಷ್ಟು ಪ್ರೇಕ್ಷಕರು ತೆಲುಗು 'ಪುಷ್ಪ'ವನ್ನು ನೋಡಿದ್ದಾರೆ. ಹೀಗಾಗಿ ಕರ್ನಾಟಕ ಹಾಗೂ ತಮಿಳುನಾಡಿನಿಂದಲೂ ಈ ಸಿನಿಮಾಗೆ ಉತ್ತಮ ಗಳಿಕೆ ಸಿಕ್ಕಿದೆ. ಮೊದಲ ದಿನದ 35 ಕೋಟಿಯಲ್ಲಿ ಕರ್ನಾಟಕದ ಶೇರ್ ಎಷ್ಟು ಅನ್ನುವುದು ಇನ್ನಷ್ಟೇ ಹೊರಬೀಳಬೇಕಿದೆ.

More from Filmibeat

English summary
Allu Arjun and Rashmika Mandanna acted most awaited film Pushpa First day collection is around 35 crore. According to trade anaylst predictions, the pan-India film will collect 100 crore in the first three days.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X