ಬಿಡುಗಡೆಗೂ ಮುನ್ನ 'ಪುಷ್ಪ 2' ದಾಖಲೆ; ಬರೀ ಅಡ್ವಾನ್ಸ್ ಟಿಕೆಟ್ ಬುಕಿಂಗ್‌ನಿಂದಲೇ ರೆಕಾರ್ಡ್ ಕಲೆಕ್ಷನ್
ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ 'ಪುಷ್ಪ 2' ಸಿನಿಮಾ ಡಿಸೆಂಬರ್ 4ರ ರಾತ್ರಿಯಿಂದಲೇ ಥಿಯೇಟರ್‌ನಲ್ಲಿ ಅಬ್ಬರಿಸುವುದಕ್ಕೆ ಶುರುವಾಗುತ್ತೆ. ಡಿಸೆಂಬರ್ 4 ರ ರಾತ್ರಿ ಅಭಿಮಾನಿಗಳಿಗಾಗಿ ಪೇಯ್ಡ್ ಪ್ರೀಮಿಯರ್ ಅನ್ನು ಚಿತ್ರತಂಡ ಆಯೋಜಿಸಿದೆ. ಐದು ಪ್ರಮುಖ ಭಾಷೆಗಳಲ್ಲೂ ಈ ಸಿನಿಮಾದ ಪ್ರೀಮಿಯರ್ ಇದೆ. ಅದಕ್ಕೆ ಮುಗಿಬಿದ್ದು ಟಿಕೆಟ್‌ಗಳನ್ನು ಬುಕ್ ಮಾಡುತ್ತಿದ್ದಾರೆ.
'ಪುಷ್ಪ 2' ಸಿನಿಮಾ ಅಡ್ವಾನ್ಸ್ ಬುಕಿಂಗ್ ಓಪನ್ ಮಾಡಿದ ದಿನದಿಂದಲೂ ಟಿಕೆಟ್ ದರ ಏರಿಕೆ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿದ್ದವು. ಹಾಗೇ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಕ್ಕೆ 'ಪುಷ್ಪ 2' ತಂಡ ನಿರ್ಧಾರ ಮಾಡಿತ್ತು. ಅದೇ ರೀತಿ ಭಾರತದಾದ್ಯಂತ ಸುಮಾರು 12 ಸಾವಿರಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಸಿನಿಮಾ ರಿಲೀಸ್ ಮಾಡುವುದಕ್ಕೆ ಮುಂದಾಗಿದೆ.

ಅಲ್ಲು ಅರ್ಜುನ್ ಸಿನಿಮಾ 'ಪುಷ್ಪ 2' ಟಿಕೆಟ್ ಬೆಲೆ ಗಗನಕ್ಕೇರಿದ್ದರೂ ಖರೀದಿ ಮಾಡುವವರ ಸಂಖ್ಯೆ ಏನೂ ಕಮ್ಮಿಯಾಗಿಲ್ಲ. ಅಡ್ವಾನ್ಸ್ ಬುಕಿಂಗ್‌ನಲ್ಲಿಯೇ 'ಪುಷ್ಪ 2' ದಾಖಲೆ ಬರೆಯುವತ್ತ ಮುನ್ನುಗ್ಗುತ್ತಿದೆ. 'RRR', 'ಬಾಹುಬಲಿ 2', 'ಕೆಜಿಎಫ್ 2' ಸಿನಿಮಾ ಮೊದಲ ದಿನದ ದಾಖಲೆಗಳನ್ನು ಬ್ರೇಕ್ ಮಾಡುತ್ತೆ ಅನ್ನೋದು ಟ್ರೇಡ್ ಎಕ್ಸ್‌ಪರ್ಟ್‌ಗಳ ಲೆಕ್ಕಾಚಾರ. ಅಡ್ವಾನ್ಸ್ ಬುಕಿಂಗ್‌ನಿಂದ 'ಪುಷ್ಪ 2' ಇದೂವರೆಗೂ ಗಳಿಸಿದ್ದು ಎಷ್ಟು?
2024ರ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಪುಷ್ಪ 2' ಥಿಯೇಟರ್‌ನಲ್ಲಿ ಹವಾ ಎಬ್ಬಿಸುತ್ತಾ? ಈ ಪ್ರಶ್ನೆಗೆ ಅಡ್ವಾನ್ಸ್ ಬುಕಿಂಗ್ ಉತ್ತರ ಕೊಟ್ಟಿದೆ. ಕೇವಲ ಅಡ್ವಾನ್ಸ್ ಬುಕಿಂಗ್‌ನಿಂದಲೇ ಈ ಸಿನಿಮಾ ಸುಮಾರು 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಚಿತ್ರತಂಡವೇ ಅಧಿಕೃತವಾಗಿ ಘೋಷಣೆ ಮಾಡಿದೆ. ಹೀಗಾಗಿ ಮೊದಲ ದಿನ ಈಗಾಗಲೇ ದಾಖಲೆ ಬರೆದ ಪ್ಯಾನ್ ಇಂಡಿಯಾ ಸಿನಿಮಾಗಳ ರೆಕಾರ್ಡ್ ಅನ್ನು ಬ್ರೇಕ್ ಮಾಡುವುದು ಪಕ್ಕಾ ಎನ್ನುತ್ತಿದ್ದಾರೆ ಟ್ರೇಡ್ ಎಕ್ಸ್‌ಪರ್ಟ್ಸ್.
'ಪುಷ್ಪ 2' ಸಿನಿಮಾ ಅಡ್ವಾನ್ಸ್ ಬುಕಿಂಗ್ ಆರಂಭದಲ್ಲಿ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕರ್ನಾಟಕ, ಆಂಧ್ರ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಟಿಕೆಟ್ ದರವನ್ನು 800 ರೂಪಾಯಿಯಿಂದ 2000 ರೂಪಾಯಿವರೆಗೂ ಏರಿಕೆ ಮಾಡಲಾಗಿತ್ತು. ಬಳಿಕ ಸಿಂಗಲ್ ಸ್ಕ್ರೀನ್‌ಗಳಲ್ಲಿ ಟಿಕೆಟ್ ದರವನ್ನು ಕೊಂಚ ಮಟ್ಟಿಗೆ ಇಳಿಕೆ ಮಾಡಲಾಗಿದೆ. ಈ ಕಾರಣಕ್ಕೆ ಬುಕಿಂಗ್ಸ್ ಮತ್ತೆ ಏರಿಕೆ ಆಗಿದೆ ಎನ್ನಲಾಗಿದೆ. ಏನೇ ಇದ್ದರೂ ಸಿನಿಪ್ರಿಯರು ದೊಡ್ಡ ಮಟ್ಟದಲ್ಲಿಯೇ 'ಪುಷ್ಪ 2' ಸಿನಿಮಾ ಟಿಕೆಟ್ ಖರೀದಿ ಮಾಡಿದ್ದಾರೆ ಅನ್ನೋದು ಸಾಬೀತಾಗಿದೆ.
ಟ್ರೇಡ್ ಎಕ್ಸ್‌ಪರ್ಟ್‌ಗಳು ಈಗಾಗಲೇ 'ಪುಷ್ಪ 2' ಸಿನಿಮಾದ ಮೊದಲ ದಿನ ಗಳಿಕೆಯ ಅಂದಾಜು ಲೆಕ್ಕ ಹಾಕಿದ್ದಾರೆ. ಅಡ್ವಾನ್ಸ್ ಬುಕಿಂಗ್ ಸಿಕ್ಕಿರುವ ರೆಸ್ಪಾನ್ಸ್ ಅನ್ನು ಮುಂದಿಟ್ಟುಕೊಂಡು ಮೊದಲ ದಿನ ಅಲ್ಲು ಅರ್ಜುನ್ ಸಿನಿಮಾ ವಿಶ್ವದಾದ್ಯಂತ 250 ಕೋಟಿ ರೂಪಾಯಿ ಕಲೆಕ್ಷನ್ ಮಾಡಬಹುದು ಎಂದು ಲೆಕ್ಕ ಹಾಕಿದ್ದಾರೆ. ಅಲ್ಲದೆ ಪೇಯ್ಡ್ ಪ್ರೀಮಿಯರ್‌ನಿಂದಲೇ 10 ರಿಂದ 15 ಕೋಟಿ ರೂಪಾಯಿ ಕಲೆಕ್ಷನ್ ಆಗಬಹುದು ಎಂದು ಅಂದಾಜಿಸಲಾಗಿದೆ.
ಟ್ರೇಡ್ ಅನಲಿಸ್ಟ್‌ಗಳ ಈ ಲೆಕ್ಕಾಚಾರ ಏನಾದರೂ ಸರಿಯಾಗಿದ್ದಿದ್ದೇ ಆದರೆ, ಕೆಲವು ಪ್ಯಾನ್ ಇಂಡಿಯಾ ಸಿನಿಮಾಗಳ ದಾಖಲೆಯನ್ನು ಮುರಿಯಲಿದೆ. RRR ಮೊದಲ ದಿನ 223.50 ಕೋಟಿ ರೂ., 'ಬಾಹುಬಲಿ 2' 214.50 ಕೋಟಿ ರೂಪಾಯಿ ಹಾಗೂ 'ಕೆಜಿಎಫ್ ಚಾಪ್ಟರ್ 2' 164.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಈ ಎಲ್ಲಾ ದಾಖಲೆಗಳು ಉಡೀಸ್ ಆಗಲಿವೆ.


Click it and Unblock the Notifications











