ಮೂರನೇ ದಿನ 'ಪುಷ್ಪ 2' ಹವಾ ಕಮ್ಮಿ ಆಯ್ತಾ? ಜಾಸ್ತಿ ಆಯ್ತಾ? ಕರ್ನಾಟಕ ಕಲೆಕ್ಷನ್ ಹೀಗಿದೆ ನೋಡಿ

ಕಳೆದ ಮೂರು ದಿನಗಳಿಂದ ಎಲ್ಲಿ ನೋಡಿದರೂ ಅಲ್ಲು ಅರ್ಜುನ್ 'ಪುಷ್ಪ 2' ಸಿನಿಮಾ ಬಗ್ಗೆ ಮಾತು. ಫಸ್ಟ್ ಡೇ ಫಸ್ಟ್ ಶೋ 'ಪುಷ್ಪ 2'ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಜನರು ಸಿನಿಮಾ ನೋಡುವುದನ್ನು ಮಾತ್ರ ಕಮ್ಮಿ ಮಾಡಿಲ್ಲ. ಅದರಲ್ಲೂ ವೀಕೆಂಡ್‌ನಲ್ಲಿ ಈ ಸಿನಿಮಾ ಕಲೆಕ್ಷನ್‌ನಲ್ಲಿ ಏರಿಕೆ ಕಂಡಿದೆ. ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಜೋಡಿಗೆ ಜೈ ಎಂದಿದ್ದಾರೆ.

ತೆಲುಗು ರಾಜ್ಯಗಳಲ್ಲಿ 'ಪುಷ್ಪ 2' ಕಲೆಕ್ಷನ್ ಜೋರಾಗಿದೆ. ತೆಲುಗು ಮಂದಿಗೆ ಮಾಸ್ ಮಸಾಲಾ ಎಂಟರ್‌ಟೈನರ್‌ ಇಷ್ಟ ಆಗಿದೆ. ಆದರೆ, ಕರ್ನಾಟಕ ಹಾಗೂ ತಮಿಳುನಾಡಿದಲ್ಲಿ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೀಗಾಗಿ ದೊಡ್ಡ ಮಟ್ಟದ ದಾಖಲೆಯನ್ನು ಮಾಡುವಲ್ಲಿ ಹಿಂದೆ ಬಿದ್ದಿದೆ. ಕಳೆದ ಎರಡು ದಿನಗಳಲ್ಲಿ ಚಿತ್ರತಂಡವೇ ಹೇಳಿಕೊಂಡಂತೆ ವಿಶ್ವದಾದ್ಯಂತ 'ಪುಷ್ಪ 2' 449 ಕೋಟಿ ರೂಪಾಯಿ (Gross)ಕಲೆಕ್ಷನ್ ಆಗಿದೆ ಎಂದು ಹೇಳಿಕೊಂಡಿದೆ.

Allu Arjun Rashmika Mandanna movie Pushpa 2 day 3 Karnataka box office Collection report

ಎರಡನೇ ದಿನಕ್ಕಿಂತ ಮೂರನೇ ದಿನ 'ಪುಷ್ಪ 2' ಕಲೆಕ್ಷನ್ ಏರಿಕೆಯಾಗಿದೆ. ಕರ್ನಾಟಕದಲ್ಲೂ ಕೊಂಚ ಮಟ್ಟಿಗೆ ಏರಿಕೆಯಾಗಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಕೊಟ್ಟಿರುವ ಲೆಕ್ಕ. ಹಾಗಿದ್ದರೆ 'ಪುಷ್ಪ 2' ಮೂರನೇ ದಿನ ಎಷ್ಟು ಕಲೆಕ್ಷನ್ ಮಾಡಿದೆ? ಕರ್ನಾಟಕದಲ್ಲಿ ಈ ಸಿನಿಮಾ ಗಳಿಸಿದ್ದೆಷ್ಟು? ಅನ್ನೋದನ್ನು ತಿಳಿಯಲು ಮುಂದೆ ಓದಿ.

3ನೇ ದಿನ 'ಪುಷ್ಪ 2' ಕಲೆಕ್ಷನ್ ಹೇಗಿದೆ?

ವೀಕೆಂಡ್‌ನಲ್ಲಿ ನಿರೀಕ್ಷೆ ಮಾಡಿದಂತೆ ಅಲ್ಲು ಅರ್ಜುನ್ ಸಿನಿಮಾ 'ಪುಷ್ಪ 2' ಕಲೆಕ್ಷನ್‌ ಏರಿಕೆ ಕಂಡಿದೆ. ಟ್ರೇಡ್ ಟ್ರ್ಯಾಕರ್ sacnilk ಪ್ರಕಾರ ಈ ಸಿನಿಮಾ ಭಾರತದಾದ್ಯಂತ ಸುಮಾರು 115 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದರಲ್ಲಿ ತೆಲುಗು ಹಾಗೂ ಹಿಂದಿ ಏರಿಯಾಗಳಲ್ಲಿ ಈ ಸಿನಿಮಾಗೆ ಸೂಪರ್ ರೆಸ್ಪಾನ್ಸ್ ಸಿಕ್ಕಿದೆ. ಇನ್ನು ಕನ್ನಡ, ತಮಿಳು ಹಾಗೂ ಮಲಯಾಳಂನಲ್ಲಿ ಸಾಧಾರಾಣ ರೆಸ್ಪಾನ್ಸ್ ಸಿಕ್ಕಿದೆ.

3ನೇ ದಿನ ಕರ್ನಾಟಕದಲ್ಲಿ ಗಳಿಸಿದ್ದೆಷ್ಟು?

ತೆಲುಗು ಸಿನಿಮಾ ಕರ್ನಾಟಕದಲ್ಲೂ ಒಳ್ಳೆಯ ಕಲೆಕ್ಷನ್ ಮಾಡುತ್ತವೆ. ಅದರಲ್ಲೂ ಪ್ಯಾನ್ ಇಂಡಿಯಾ ಸಿನಿಮಾಗಳು ಬೆಂಗಳೂರಿನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ ಉದಾಹರಣೆಗಳು ಇವೆ. 'ಪುಷ್ಪ 2' ಕೂಡ 610 ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿತ್ತು. ಎರಡನೇ ದಿನ ಕರ್ನಾಟಕದಲ್ಲಿ 4.80 ಕೋಟಿ ರೂ. ಕಲೆಕ್ಷನ್ ಆಗಿತ್ತು. ಅದೇ ಮೂರನೇ ದಿನ ಸಿನಿಮಾದ ಗಳಿಕೆಯಲ್ಲಿ ಏರಿಕೆ ಕಂಡಿದೆ. ವೀಕೆಂಡ್ ಆಗಿದ್ದರಿಂದ 5.5 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎನ್ನಲಾಗಿದೆ.

Allu Arjun Rashmika Mandanna movie Pushpa 2 day 3 Karnataka box office Collection report

ಇಲ್ಲಿವರೆಗಿನ ಕಲೆಕ್ಷನ್ ಎಷ್ಟು?

ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ 2' ವಿಶ್ವದಾದ್ಯಂತ ಎರಡು ದಿನಕ್ಕೆ 449 ಕೋಟಿ ರೂಪಾಯಿ (Gross) ಕಲೆಕ್ಷನ್ ಮಾಡಿದೆ ಎಂದು ಚಿತ್ರತಂಡ ಘೋಷಿಸಿಕೊಂಡಿದೆ. ಇನ್ನೂ ಮೂರನೇ ದಿನ ಕಲೆಕ್ಷನ್ ಅನೌನ್ಸ್ ಆಗಬೇಕಿದೆ. ಟ್ರೇಡ್‌ ಎಕ್ಸ್‌ ಪರ್ಟ್‌ಗಳ ಪ್ರಕಾರ, ಮೂರನೇ ದಿನ 600 ಕೋಟಿ ರೂಪಾಯಿ ದಾಟುವ ಸಾಧ್ಯತೆಯಿದೆ. ಇನ್ನೂ ಭಾರತದಲ್ಲಿ 'ಪುಷ್ಪ 2' ಮೂರನೇ ದಿನಕ್ಕೆ 383.7 ಕೋಟಿ ರೂಪಾಯಿ (Net)ಕಲೆಕ್ಷನ್ ಮಾಡಿದೆ ಎಂದು sacnilk ವರದಿ ಮಾಡಿದೆ.

'ಕೆಜಿಎಫ್ 2' ಕಲೆಕ್ಷನ್ ಬ್ರೇಕ್ ಮಾಡುತ್ತಾ?

ಮೊದಲ ನಾಲ್ಕು ದಿನ ಅಂತ ಕಲೆಕ್ಷನ್ ಜೋರಾಗಿಯೇ ಇರುತ್ತೆ. ಆದರೆ, ಮೊದಲ ಸೋಮವಾರದ ಬಳಿಕ ಬಾಕ್ಸಾಫೀಸ್‌ನಲ್ಲಿ ಹೇಗೆ ಸದ್ದು ಮಾಡುತ್ತೆ ಅನ್ನೋದರ ಮೇಲೆ 'ಕೆಜಿಎಫ್ 2' ದಾಖಲೆಯನ್ನು ಮುರಿಯುತ್ತಾ? ಅನ್ನೋದು ಗೊತ್ತಾಗುತ್ತೆ. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, ಈಗಿರುವ ಟ್ರೆಂಡ್ ನೋಡಿದರೆ, 'ಕೆಜಿಎಫ್ 2'ದಾಖಲೆ ಮುರಿಯೋದು ಅನುಮಾನ ಎಂದು ಹೇಳಲಾಗುತ್ತಿದೆ.

More from Filmibeat

English summary
Allu Arjun, Rashmika Mandanna movie Pushpa 2 day 3 Karnataka box office Collection report;
Read more about: allu arjun pushpa 2 box office
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X