Pushpa 2 Box Office:ಪೇಯ್ಡ್ ಪ್ರೀಮಿಯರ್‌ನಿಂದ 'ಪುಷ್ಪ 2' ಕರ್ನಾಟಕದಲ್ಲಿ ಗಳಿಸಿದ್ದೆಷ್ಟು ಕೋಟಿ?

ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟನೆಯ 'ಪುಷ್ಪ 2' ಸಿನಿಮಾ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಅಗತ್ಯಕ್ಕಿಂತ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಿದ್ದ ವಿತರಕರ ಬಾಕ್ಸಾಫೀಸ್‌ ನಿರೀಕ್ಷೆ ಕೂಡ ದೊಡ್ಡದಿದೆ. ಮಿಡ್‌ನೈಟ್ ಹಾಗೂ 4 ಗಂಟೆ ಶೋಗಳು ಕ್ಯಾನ್ಸಲ್ ಆದ ಬೆನ್ನಲ್ಲೇ ಕಲೆಕ್ಷನ್‌ಗೆ ಕೊಂಚ ಹಿನ್ನೆಲೆಯಾಗಿದೆ. ಆದರೆ. ಪೇಯ್ಡ್‌ ಪ್ರೀಮಿಯರ್‌ನಿಂದ ಕೊಂಚ ಮಟ್ಟಿಗೆ ಲಾಭ ಆಗಿದೆ.

'ಪುಷ್ಪ 2' ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಕಲೆಕ್ಷನ್ ಮಾಡಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ವಿಶ್ವದಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರಿಂದ ಮುಂದಿನ ದಿನಗಳಲ್ಲಿ ಕಲೆಕ್ಷನ್ ಹೇಗಿರುತ್ತೆ ಅನ್ನೋದು ಕುತೂಹಲ. ಬಿಡುಗಡೆಗೂ ಮುನ್ನವೇ ದೊಡ್ಡ ಮಟ್ಟದಲ್ಲಿ ಬ್ಯುಸಿನೆಸ್ ಮಾಡಿದ್ದ ಚಿತ್ರತಂಡ ಬಾಕ್ಸಾಫೀಸ್ ಕಲೆಕ್ಷನ್ ಅನ್ನು ಎದುರು ನೋಡುತ್ತಿದೆ.

Allu Arjun Rashmika Mandanna movie Pushpa 2 paid premiere Karnataka box office Collection report

ಸದ್ಯ ಪೇಯ್ಡ್ ಪ್ರೀಮಿಯರ್‌ನಿಂದ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳ ಲೆಕ್ಕ ಹಾಕಿದ್ದಾರೆ. ಅದರಲ್ಲೂ ಕರ್ನಾಟಕದಲ್ಲಿ 'ಪುಷ್ಪ 2' ಪೇಯ್ಡ್ ಪ್ರೀಮಿಯರ್‌ನಿಂದ ಎಷ್ಟು ಗಳಿಸಿದೆ? ಕರ್ನಾಟಕದಲ್ಲಿ ಎಷ್ಟು ಸ್ಕ್ರೀನ್‌ಗಳಲ್ಲಿ ಪೇಯ್ಡ್ ಪ್ರೀಮಿಯರ್ ಆಗಿತ್ತು? ಭಾರತದಾದ್ಯಂತ ಎಷ್ಟು ಕಲೆಕ್ಷನ್ ಆಗಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

'ಪುಷ್ಪ 2' ಕರ್ನಾಟಕ ಸ್ಕ್ರೀನ್ಸ್ ಎಷ್ಟು?

ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಜೋಡಿಯ 'ಪುಷ್ಪ 2' ಸಿನಿಮಾದ ಬಾಕ್ಸಾಫೀಸ್‌ ಕಲೆಕ್ಷನ್ ಮೇಲೆ ಎಲ್ಲರ ಕಣ್ಣಿದೆ. 'ಕೆಜಿಎಫ್ 2' ಅನ್ನು ಹಿಂದಿಕ್ಕಲೇ ಬೇಕು ಅಂತ ಹಠಕ್ಕೆ ಬಿದ್ದಿರುವ ಚಿತ್ರತಂಡ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಿದೆ. ಅದಕ್ಕೆ ಕರ್ನಾಟಕದಲ್ಲೂ ಪೇಯ್ಡ್ ಪ್ರೀಮಿಯರ್ ಮಾಡಿತ್ತು. ಕರ್ನಾಟಕದಲ್ಲಿ 'ಪುಷ್ಪ 2' ತೆಲುಗು ವರ್ಷನ್ 245 ಸ್ಕ್ರೀನ್, ತಮಿಳು ವರ್ಷನ್ 70 ಸ್ಕ್ರೀನ್, ಹಿಂದಿ ವರ್ಷನ್ 135 ಸ್ಕ್ರೀನ್ ಹಾಗೂ ಕನ್ನಡ ವರ್ಷನ್ 160 ಸ್ಕ್ರೀನ್‌ಗಳಲ್ಲಿ ಬಿಡುಗಡೆ ಮಾಡಲಾಗಿತ್ತು.

ಟಾಪ್ 5 ಸಿಂಗಲ್ ಸ್ಕ್ರೀನ್ ಕಲೆಕ್ಷನ್

'ಪುಷ್ಪ 2' ಪೇಯ್ಡ್ ಪ್ರೀಮಿಯರ್‌ಗೆ ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾಕಷ್ಟು ಸ್ಕ್ರೀನ್‌ಗಳಲ್ಲಿ ಪೇಯ್ಡ್ ಪ್ರೀಮಿಯರ್ ಆಗಿದ್ದರೂ, ಕೆಲವು ಕಡೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಗಿದ್ದೂ, ಬೆಂಗಳೂರಿನಲ್ಲಿ ಅತೀ ಹೆಚ್ಚು ಕೆಲೆಕ್ಷನ್ ಮಾಡಿದ ಟಾಪ್ 5 ಥಿಯೇಟರ್‌ಗಳ ಲೆಕ್ಕ ವಿತಕರ ವಲಯದಲ್ಲಿ ಚರ್ಚೆಯಾಗುತ್ತಿದೆ. ಅದರಲ್ಲೂ ಸಿಂಗಲ್ ಸ್ಕ್ರೀನ್‌ಗಳಲ್ಲಿ ಗಳಿಸಿದ ಲೆಕ್ಕಾಚಾರ ಹೀಗಿದೆ.

Allu Arjun Rashmika Mandanna movie Pushpa 2 paid premiere Karnataka box office Collection report

ಊರ್ವಶಿ 8.9 ಲಕ್ಷ ರೂಪಾಯಿ
ಮುಕುಂದ 5.9 ಲಕ್ಷ ರೂಪಾಯಿ
ಲಕ್ಷ್ಮಿ 5.6 ಲಕ್ಷ ರೂಪಾಯಿ
ಬೃಂದ 5.0 ಲಕ್ಷ ರೂಪಾಯಿ
ರಾಧಾಕೃಷ್ಣ 4.5 ಲಕ್ಷ ರೂಪಾಯಿ

ಮಲ್ಟಿಪ್ಲೆಕ್ಸ್‌ ಕಲೆಕ್ಷನ್ ಹೇಗಿದೆ?

ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಹಾಗೂ ಫಹಾದ್ ಫಾಸಿಲ್ ಜೋಡಿಯನ್ನು ನೋಡುವುದಕ್ಕೆ ಸಿನಿಪ್ರಿಯರ ಕಾತುರರಾಗಿದ್ದರು. ಈ ಹಿನ್ನೆಲೆಯಲ್ಲಿ 'ಪುಷ್ಪ 2'ಗೆ ಮಲ್ಟಿಪ್ಲೆಕ್ಸ್‌ಗಳಲ್ಲೂ ಪೇಯ್ಡ್ ಪ್ರೀಮಿಯರ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಕರ್ನಾಟಕದಾದ್ಯಂತ ಪೇಯ್ಡ್ ಪ್ರೀಮಿಯರ್ ಮಲ್ಟಿಪ್ಲೆಕ್ಸ್ ಕಲೆಕ್ಷನ್ ಬಗ್ಗೆನೂ ವಿತಕರ ವಲಯದಲ್ಲಿ ಓಡಾಡುತ್ತಿರುವ ಲೆಕ್ಕ ಹೀಗಿದೆ.

ಪಿವಿಆರ್-ಐನಾಕ್ಸ್ ಎಲ್ಲಾ ಪ್ರಾಪರ್ಟೀಸ್ 1 ರಿಂದ 1.25 ಕೋಟಿ ರೂ.
ಸಿನಿಪೊಲೀಸ್ ಎಲ್ಲಾ ಪ್ರಾಪರ್ಟೀಸ್ 60 ಲಕ್ಷದಿಂದ 70 ಲಕ್ಷ ರೂ.
ಗೋಪಾಲನ್ ಮಾಲ್ ಎಲ್ಲಾ ಪ್ರಾಪರ್ಟೀಸ್ 20ಲಕ್ಷದಿಂದ 25 ಲಕ್ಷ ರೂ.
ಬೇರೆ ಪ್ರಾಪರ್ಟಿಗಳಿಂದ 20 ಲಕ್ಷದಿಂದ 25 ಲಕ್ಷ ರೂ.

ಕರ್ನಾಟಕದ ಪೇಯ್ಡ್ ಪ್ರೀಮಿಯರ್ ಕಲೆಕ್ಷನ್ ಎಷ್ಟು?

ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಕಾಂಬಿನೇಷನ್ ಸಿನಿಮಾ 'ಪುಷ್ಪ 2' ಪೇಯ್ಡ್ ಪ್ರೀಮಿಯರ್ ಕಲೆಕ್ಷನ್ ರೆಸ್ಪಾನ್ಸ್ ಚೆನ್ನಾಗಿದೆ. ಆದರೆ, ವಿತರಕರು ನಿರೀಕ್ಷೆ ಮಾಡಿದಷ್ಟು ಕಲೆಕ್ಷನ್ ಆಗಿಲ್ಲ ಅನ್ನೋ ಮಾತು ಕೇಳಿಬರುತ್ತಿದೆ. ಆದರೂ, ಕೇವಲ ಪೇಯ್ಡ್ ಪ್ರೀಮಿಯರ್‌ನಿಂದ ಕರ್ನಾಟಕದಲ್ಲಿ ಸುಮಾರು 3.5 ಕೋಟಿಯಿಂದ 4 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಅಂದಾಜಿಸಲಾಗಿದೆ.

ಭಾರತದಾದ್ಯಂತ ಹೇಗಿದೆ ಕಲೆಕ್ಷನ್

ಭಾರತದಾದ್ಯಂತ 'ಪುಷ್ಪ 2' ಪೇಯ್ಡ್ ಪ್ರೀಮಿಯರ್‌ಗೆ ಕಲೆಕ್ಷನ್ ಅದ್ಭುತವಾಗಿದೆ. ಆಂಧ್ರ ಪ್ರದೇಶ ಹಾಗೂ ತೆಲಂಗಾಣ 25 ಕೋಟಿ ರೂ.ಯಿಂದ 30 ಕೋಟಿ ರೂ. ಕಲೆಕ್ಷನ್ ಆಗಿರಬಹುದೆಂದು ಅಂದಾಜಿಸಲಾಗಿದ್ದು, ಆಂಧ್ರ ತೆಲಂಗಾಣದಿಂದ 25 ಕೋಟಿ ರೂ., ತಮಿಳುನಾಡು 15 ಕೋಟಿ ರೂ. ಕೇರಳ 2 ಕೋಟಿ ರೂ. ಹಾಗೂ ಉಳಿದ ಭಾಗಗಳಲ್ಲಿ 20 ರಿಂದ 25 ಕೋಟಿ ಆಗಿರಬಹುದೆಂದು ಅಂದಾಜಿಸಲಾಗಿದೆ.

More from Filmibeat

English summary
Allu Arjun, Rashmika Mandanna movie Pushpa 2 paid premiere Karnataka box office Collection report;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X