Pushpa 2 Box Office Day 4:'ಪುಷ್ಪ 2' ಗೆ ಭಾನುವಾರದ ಬಾಡೂಟ; 4 ದಿನದಲ್ಲಿ ₹800 ಕೋಟಿ ಲೂಟಿ
ಯಾವುದೇ ಪ್ಯಾನ್ ಇಂಡಿಯಾ ಸಿನಿಮಾ ಬಂದರೂ ಕರ್ನಾಟಕದಲ್ಲಿ ಸಿಗುವ ರೆಸ್ಪಾನ್ಸ್ ಮೇಲೆ ಚಿತ್ರತಂಡ ಒಂದು ಕಣ್ಣಿಟ್ಟಿರುತ್ತೆ. ಇಲ್ಲಿ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕರೆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆಯುತ್ತೆ ಅನ್ನೋದು ವಾಡಿಕೆ. ಅಲ್ಲು ಅರ್ಜುನ್ ನಟನೆಯ 'ಪುಷ್ಪ 2' ಕೂಡ ಹಾಗೇ. ಬಿಡುಗಡೆಯಾದ ದಿನದಿಂದ ಕರ್ನಾಟಕದ ಬಾಕ್ಸಾಫೀಸ್ ಇಂಟ್ರೆಸ್ಟಿಂಗ್ ಆಗಿದೆ.
ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಆರಂಭದಲ್ಲಿ ತಮಿಳುನಾಡಿನಲ್ಲಿ 'ಪುಷ್ಪ 2' ಕಲೆಕ್ಷನ್ ಅಷ್ಟೊಂದು ಮಜವಾಗಿರಲಿಲ್ಲ. ಆದರೆ ಎರಡನೇ ದಿನದ ಬಳಿಕ ಗಳಿಕೆಯಲ್ಲಿ ಏರಿಕೆ ಕಂಡಿದೆ. ತೆಲುಗು ಸಹಜವಾಗಿ ಅತೀ ಹೆಚ್ಚು ಕಲೆಕ್ಷನ್ ಮಾಡುತ್ತಿದೆ. ಹಾಗೇ ಹಿಂದಿ ಬೆಲ್ಟ್‌ಗಳಲ್ಲಿ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಸಿನಿಮಾ 'ಪುಷ್ಪ 2' ನೋಡಿ ಎಂಜಾಯ್ ಮಾಡುತ್ತಿದ್ದಾರೆ.

ಕರ್ನಾಟಕದಲ್ಲಿ ' ಪುಷ್ಪ 2'ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಫಸ್ಟ್ ಡೇ ಫಸ್ಟ್ ಶೋನಲ್ಲೇ ತೆಲುಗು ಪ್ರೇಕ್ಷಕರೇ ಸಿನಿಮಾ ಇಷ್ಟ ಪಟ್ಟಿರಲಿಲ್ಲ. ಆದರೂ, ಕಲೆಕ್ಷನ್ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ನಿನ್ನೆ (ಡಿಸೆಂಬರ್ 9) 'ಪುಷ್ಪ 2' ರಿಲೀಸ್ ಆಗಿ ನಾಲ್ಕನೇ ದಿನ. ವೀಕೆಂಡ್ ಆಗಿದ್ದರಿಂದ ಈ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಹಾಗಿದ್ದರೆ ಈ ನಾಲ್ಕು ದಿನಗಳಲ್ಲಿ ಕರ್ನಾಟಕದಲ್ಲಿ ಗಳಿಸಿದ್ದೆಷ್ಟು? ಕನ್ನಡ ವರ್ಷನ್‌ನಿಂದ ಎಷ್ಟು ಕಲೆಕ್ಷನ್ ಆಗಿದೆ? ತಿಳಿಯಲು ಮುಂದೆ ಓದಿ.
4ನೇ ದಿನ 'ಪುಷ್ಪ 2' ಗಳಿಸಿದ್ದೆಷ್ಟು?
ಅಲ್ಲು ಅರ್ಜುನ್ 'ಪುಷ್ಪ 2'ಗಿದು ಮೊದಲ ವೀಕೆಂಡ್. ಹಾಗೇ ನಿನ್ನೆ (ಭಾನುವಾರ) ನಾಲ್ಕನೇ ದಿನ. ವೀಕೆಂಡ್‌ನಲ್ಲಿ ಈ ಸಿನಿಮಾದ ಕರ್ನಾಟಕದಲ್ಲೂ ದೊಡ್ಡ ಕಲೆಕ್ಷನ್ ಮಾಡುತ್ತೆ ಅಂತ ನಿರೀಕ್ಷೆ ಮಾಡಲಾಗಿತ್ತು. ಅದರಂತೆ ನಾಲ್ಕನೇ ದಿನ ಬೆಂಗಳೂರು, ಮೈಸೂರು, ಕರ್ನಾಟಕ ಆಂಧ್ರ ಗಡಿ ಭಾಗಗಳಲ್ಲಿ ಈ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. 4ನೇ ದಿನ 'ಪುಷ್ಪ 2' ಕರ್ನಾಟಕದಲ್ಲಿ 8.2 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವಿತರಕರ ವಲಯದಿಂದ ಲೆಕ್ಕ ಸಿಕ್ಕಿದೆ. ಕರ್ನಾಟಕದ ಮಟ್ಟಿಗೆ ಪರಭಾಷೆಯ ಸಿನಿಮಾ ಈ ಮಟ್ಟಿಗೆ ಗಳಿಕೆ ಮಾಡಿದ್ದು ವಿತರಕರಿಗೆ ಲಾಭವೇ.

ಯಾವ್ಯಾವ ಭಾಷೆಯಿಂದ ಎಷ್ಟೆಷ್ಟು?
ಅಲ್ಲುಅರ್ಜುನ್ 'ಪುಷ್ಪ 2' ಕರ್ನಾಟಕದಲ್ಲಿ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ತೆಲುಗಿನಲ್ಲಿ 245 ಸ್ಕ್ರೀನ್‌ಗಳು, ತಮಿಳು ಸ್ಕ್ರೀನ್ 70, ಹಿಂದಿ ಸ್ಕ್ರೀನ್ 135, ಹಾಗೂ ಕನ್ನಡದಲ್ಲಿ 160 ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿತ್ತು. ಭಾನುವಾರ ತೆಲುಗು ಬಿಟ್ಟರೆ 'ಪುಷ್ಪ 2' ಕನ್ನಡದ ವರ್ಷನ್ ಅತೀ ಹೆಚ್ಚು ಹಣವನ್ನು ಗಳಿಸಿದೆ. ಭಾನುವಾರ ಕನ್ನಡದ ಮಂದಿ ಕೂಡ ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ.
'ಪುಷ್ಪ 2' ಭಾನುವಾರದ ಕಲೆಕ್ಷನ್ (Net)
'ಪುಷ್ಪ 2' ತೆಲುಗು 4.9 ಕೋಟಿ ರೂ.
'ಪುಷ್ಪ 2' ಹಿಂದಿ 1.3 ಕೋಟಿ ರೂ.
'ಪುಷ್ಪ 2' ತಮಿಳು 30 ಲಕ್ಷ ರೂ.
'ಪುಷ್ಪ 2' ಕನ್ನಡ 1.7 ಕೋಟಿ ರೂ.
ಒಟ್ಟು 8.2 ಕೋಟಿ ರೂ.
ಭಾರತದಾದ್ಯಂತ ಕಲೆಕ್ಷನ್ ಎಷ್ಟು?
ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಹಾಗೂ ಫಹಾದ್ ಫಾಸಿಲ್ ತೆರೆಮೇಲೆ ಮೋಡಿ ಮಾಡುತ್ತಿದೆ. ಸುಕುಮಾರ್ ನಿರ್ದೇಶಕ ಮತ್ತೆ ವರ್ಕ್ ಔಟ್ ಆದಂತೆ ಇದೆ. ಭಾನುವಾರ ಭಾರತದಾದ್ಯಂತ ಈ ಸಿನಿಮಾ ಉತ್ತಮ ಕಲೆಕ್ಷನ್ ಮಾಡಿದೆ. ಆಂಧ್ರ, ತೆಲಂಗಾಣ, ತಮಿಳುನಾಡು, ಕೇರಳ ಹಾಗೂ ಹಿಂದಿ ಬೆಲ್ಟ್‌ಗಳಲ್ಲಿ 'ಪುಷ್ಪ 2' ಕಲೆಕ್ಷನ್ ಚೆನ್ನಾಗಿದೆ. ಆಲ್ ಓವರ್ ಇಂಡಿಯಾ ಕಲೆಕ್ಷನ್ ಬಗ್ಗೆ ವಿತರಕರಿಗೆ ಸಿಕ್ಕಿರುವ ಲೆಕ್ಕಾಚಾರ ಹೀಗಿದೆ.
ಆಂಧ್ರ-ತೆಲಂಗಾಣ 66 ಕೋಟಿ ರೂ.
ತಮಿಳುನಾಡು 9.5 ಕೋಟಿ ರೂ.
ಕೇರಳ 05 ಕೋಟಿ ರೂ.
ಕರ್ನಾಟಕ 8.2 ಕೋಟಿ ರೂ.
ಹಿಂದಿ 85 ಕೋಟಿ ರೂ.
₹800 ಕೋಟಿ ಕ್ಲಬ್ ಸೇರಿದ 'ಪುಷ್ಪ 2'
ಅಲ್ಲು ಅರ್ಜನ್, ರಶ್ಮಿಕಾ ಮಂದಣ್ಣ ಸಿನಿಮಾ 'ಪುಷ್ಪ 2' ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆಯುವ ಮುನ್ಸೂಚನೆ ನೀಡಿದೆ. 'ಕೆಜಿಎಫ್ 2' ದಾಖಲೆಯನ್ನು ಮುರಿಯಲೇ ಬೇಕು ಅಂತ ಪಣ ತೊಟ್ಟಿರುವ ತಂಡ ನಾಲ್ಕೇ ದಿನಕ್ಕೆ ವಿಶ್ವದಾದ್ಯಂತ 800 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಹಿಂದಿ ಬೆಲ್ಡ್‌ನಲ್ಲೇ ಭಾನುವಾರ ದಾಖಲೆ ಕಲೆಕ್ಷನ್ ಆಗಿದೆ. ನಾಲ್ಕು ದಿನಗಳಲ್ಲಿ 285 ಕೋಟಿ ರೂ. ಗಳಿಸಿದೆ. ಭಾರತದಾದ್ಯಂತ 529.45 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ. ಆದರೆ, ಸೋಮವಾರದಿಂದ ಅಸಲಿ ಆಟ ಶುರುವಾಗುತ್ತೆ.


Click it and Unblock the Notifications











