'ಪುಷ್ಪ' ಸಿನಿಮಾಗಾಗಿ ಅಲ್ಲು ಅರ್ಜುನ್, ರಶ್ಮಿಕಾ, ಸಮಂತಾ ಪಡೆದ ಸಂಭಾವನೆ ಕೇಳಿದರೆ ಶಾಕ್ ಆಗ್ತೀರಾ!

'ಪುಷ್ಪ' ಯಾರೇ ಬರಲಿ, ಯಾರೇ ಹೋಗಲಿ ಜಗ್ಗದೆ ಮುನ್ನುಗುತ್ತಿರುವ ಸಿನಿಮಾ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಸಮಂತಾ, ಹಾದ್ ಫಾಸಿಲ್, ಧನಂಜಯ್ ಜೊತೆ ನಿರ್ದೇಶಕ ಸುಕುಮಾರ್. ಇಷ್ಟು ಮಂದಿ ದಿಗ್ಗಜರು ಒಂದೇ ಸಿನಿಮಾದಲ್ಲಿರುವಾಗ, ಸಿನಿಮಾದ ಗಳಿಕೆ ಗಗನಕ್ಕೆ ಮುಟ್ಟದೆ ಇರುತ್ತಾ? 'ಪುಷ್ಪ' ಸಿನಿಮಾ ಬಾಕ್ಸಾಫೀಸ್‌ನಲ್ಲಂತೂ ಧೂಳೆಬ್ಬಿಸುತ್ತಿವೆ. ಇದೇ ವೇಳೆ ಈ ಸಿನಿಮಾ ಈ ಎಲ್ಲಾ ನಟ-ನಟಿಯರು ಪಡೆದ ಸಂಭಾವನೆ ಕೂಡ ಅಷ್ಟೇ ಸದ್ದು ಮಾಡುತ್ತಿದೆ.

'ಪುಷ್ಪ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಕೆಜಿಎಫ್ ಸಿನಿಮಾವನ್ನು ಹಿಂದಿಕ್ಕಿದೆ. ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ ಇನ್ನು 'ಪುಷ್ಪ' ಆಟ ನಿಂತಿಲ್ಲ. ದಿನದಿಂದ ದಿನಕ್ಕೆ ಸಿನಿಮಾದ ಗಳಿಕೆ ಹೆಚ್ಚಾಗುತ್ತಲೇ ಇದೆ. 75 ಕೋಟಿ ಗಳಿಕೆಯತ್ತ ಸಿನಿಮಾ ಮುನ್ನುಗ್ಗುತ್ತಿದೆ. ಇದೇ ವೇಳೆ ಈ ಸಿನಿಮಾದಲ್ಲಿ ನಟಿಸುವುದಕ್ಕೆ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಸಮಂತಾ ಸೇರಿದಂತೆ ಪ್ರಮುಖ ಪಾತ್ರಗಳು ಪಡೆದ ಸಂಭಾವನೆ ಬಗ್ಗೆ ಬಾರಿ ದೊಡ್ಡ ಚರ್ಚೆಯಾಗುತ್ತಿದೆ. ಹಾಗಿದ್ದರೆ, ಯಾರಿಗೆ ಎಷ್ಟೆಷ್ಟು ಸಂಭಾವನೆ ಸಿಕ್ಕಿದೆ ಅನ್ನುವುದನ್ನು ತಿಳಿಯಲು ಮುಂದೆ ಓದಿ.

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಬಲು ದುಬಾರಿ

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಬಲು ದುಬಾರಿ

'ಪುಷ್ಪ' ಪ್ಯಾನ್ ಇಂಡಿಯಾ ಸಿನಿಮಾ ಹಣೆಪಟ್ಟಿ ಹೊತ್ತು ಬಿಡುಗಡೆಯಾಗಿತ್ತು. ಮೂಲಗಳ ಪ್ರಕಾರ 'ಪುಷ್ಪ' ಸಿನಿಮಾ ಬಜೆಟ್ 200 ರಿಂದ 250 ಕೋಟಿ ಎಂದು ಅಂದಾಜಿಸಲಾಗಿದೆ. ಇಷ್ಟು ದೊಡ್ಡ ಬಜೆಟ್‌ನಲ್ಲಿ ಪ್ರಮುಖ ಪಾತ್ರಗಳು ಪಡೆದ ಸಂಭಾವನೆ ಮೊತ್ತ ಕೂಡ ಅಷ್ಟೇ ದೊಡ್ಡದಿದೆ. ಟಾಲಿವುಡ್ ಮೂಲಗಳ ಪ್ರಕಾರ 'ಪುಷ್ಪ' ಸಿನಿಮಾಗೆ ಅಲ್ಲು ಅರ್ಜುನ್ ಪಡೆದ ಸಂಭಾವನೆ ಬರೋಬ್ಬರಿ 18 ರಿಂದ 20 ಕೋಟಿ ಎಂದು ಎನ್ನಲಾಗುತ್ತಿದೆ. ಆದರೆ, ಇದು ಕೇವಲ ಒಂದು ಪಾರ್ಟ್‌ಗೋ, ಇಲ್ಲಾ ಎರಡೂ ಪಾರ್ಟ್ ಸೇರಿ ಇಷ್ಟು ದೊಡ್ಡ ಸಂಭಾವನೆ ಪಡೆದಿದ್ದಾರೋ ಎನ್ನುವುದು ಸ್ಪಷ್ಟವಾಗಿಲ್ಲ.

ರಶ್ಮಿಕಾ ಮಂದಣ್ಣಗೆ 8 ಕೋಟಿ ಸಂಭಾವನೆ

ರಶ್ಮಿಕಾ ಮಂದಣ್ಣಗೆ 8 ಕೋಟಿ ಸಂಭಾವನೆ

'ಪುಷ್ಪ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ರಶ್ಮಿಕಾ ಮಂದಣ್ಣಂಗೆ ಹಿಂದೆಂದೂ ಸಿಗದಷ್ಟು ಸಂಭಾವನೆ ಸಿಕ್ಕಿದೆ ಎನ್ನುತ್ತಿದ್ದಾರೆ ಟಾಲಿವುಡ್ ಮಂದಿ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿರುವ ರಶ್ಮಿಕಾ ಮಂದಣ್ಣ 'ಪುಷ್ಪ' ದೊಡ್ಡ ಮೊತ್ತದ ಸಂಭಾವನೆಯನ್ನೇ ಕೇಳಿದ್ದರು. ಅದರಂತೆ ರಶ್ಮಿಕಾಗೆ ಕಿಸೆ ಸೇರಿದ್ದು, ಬರೋಬ್ಬರಿ 8 ರಿಂದ 10 ಕೋಟಿ ಎನ್ನಲಾಗಿದೆ. ಆದರೆ, ಟಾಲಿವುಡ್‌ನಲ್ಲಿ ನಾಯಕಿಯರ ಸಂಭಾವನೆ 3 ಕೋಟಿ ದಾಟಿಲ್ಲ. ಹೀಗಾಗಿ ರಶ್ಮಿಕಾ ಎರಡೂ ಪಾರ್ಟ್‌ಗಳಿಗೆ ಸೇರಿ ಇಷ್ಟು ದೊಡ್ಡ ಸಂಭಾವನೆ ಪಡೆದಿರಬಹುದು ಎನ್ನಲಾಗುತ್ತಿದೆ.

ಸಮಂತಾ ಐಟಂ ಸಾಂಗಿಗೆ 2 ಕೋಟಿ

ಸಮಂತಾ ಐಟಂ ಸಾಂಗಿಗೆ 2 ಕೋಟಿ

'ಪುಷ್ಪ' ಸಿನಿಮಾಗಾಗಿ ಒಂದೇ ಒಂದು ಐಟಂ ಸಾಂಗ್‌ನಲ್ಲಿ ಸಮಂತಾ ಹೆಜ್ಜೆ ಹಾಕಿದ್ದರು. ಆದರೆ, ಈ ಚಿತ್ರಕ್ಕೆ ಸಮಂತಾ ಡ್ಯಾನ್ಸ್ ಪ್ಲಾಸ್ ಪಾಯಿಂಟ್ ಆಯಿತು. ಥಿಯೇಟರ್‌ನಲ್ಲಿ ಪ್ರೇಕ್ಷಕರು ಒನ್ ಮೋರ್ ಎಂದು ಕೂಗು ಹಾಕುವಷ್ಟು ಸಾಂಗ್ ಸದ್ದು ಮಾಡಿತ್ತು. ಈ ಚಿತ್ರದಿಂದ ಅಲ್ಲು ಅರ್ಜುನ್, ರಶ್ಮಿಕಾಗೆ ಎಷ್ಟು ಹೆಸರು ಬಂತೋ, ಅಷ್ಟೇ ಸಮಂತಾಗೂ ಕೂಡ ಹೆಸರು ಕೊಟ್ಟಿದೆ. ಆದರೆ, ಒಂದು ಐಟಂ ಸಾಂಗ್‌ನಲ್ಲಿ ನಟಿಸುವುದಕ್ಕೆ ಸಮಂತಾ ಪಡೆದ ಸಂಭಾವಣೆ ಬರೋಬ್ಬರಿ 1.5 ಕೋಟಿಯಿಂದ 2 ಕೋಟಿ ಎನ್ನುತ್ತಿದೆ ಟಾಲಿವುಡ್.

ಸುಕುಮಾರ್‌ಗೆ 25 ಕೋಟಿ ಸಂಭಾವನೆ

ಸುಕುಮಾರ್‌ಗೆ 25 ಕೋಟಿ ಸಂಭಾವನೆ

'ಪುಷ್ಪ' ಸಿನಿಮಾದಲ್ಲಿ ಫಹಾದ್ ಫಾಸಿಲ್ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ವಿಲನ್ ಆಗಿ ನಟಿಸುವುದಕ್ಕೆ ಫಹಾದ್ ಪಡೆದಿದ್ದು 3.5 ಕೋಟಿಯಿಂದ 4 ಕೋಟಿ ಎನ್ನಲಾಗಿದೆ. ಅದೇ ಸುನೀಲ್‌ಗೆ 1.5 ರಿಂದ 2 ಕೋಟಿ ನೀಡಲಾಗಿದೆ. ಎಲ್ಲಕ್ಕಿಂತ ದುಬಾರಿ ಅಂದರೆ ಅದು ಈ ಸಿನಿಮಾದ ನಿರ್ದೇಶಕ ಸುಕುಮಾರ್. 'ಪುಷ್ಪ' ಸಿನಿಮಾ ನಿರ್ದೇಶನಕ್ಕಾಗಿ ಸುಕುಮಾರ್ ಪಡೆದಿದ್ದು ಬರೋಬ್ಬರೋ 25 ಕೋಟಿ. ಹೀಗಾಗಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಸಮಂತಾಗಿಂತ ಸುಕುಮಾರ ದುಬಾರಿಯಾಗಿದ್ದಾರೆ.

More from Filmibeat

English summary
Allu Arjun, Rashmika Mandanna, Samantha charged big for Pushpa film. Allu Arjun and Rashmika Mandanna's films budget was reportedly Rs. 200 to 250 crores. Allu Arjun 18-20 crore, Rashmika 8-10 crore, Samantha 1.5 - 2 crore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X