'ಪುಷ್ಪ 2' ಸಿನಿಮಾ ಹೇಗಿದೆ? ಇಲ್ಲಿದೆ ಮೊದಲ ವಿಮರ್ಶೆ; ಅಲ್ಲು ಅರ್ಜುನ್ ಸಿನಿಮಾದಲ್ಲಿ ಏನಿದೆ? ಏನಿಲ್ಲ?

ಈ ವರ್ಷದ ಬಹು ನಿರೀಕ್ಷೆಯ ಸಿನಿಮಾ 'ಪುಷ್ಪ 2' ಬಿಡುಗಡೆಗೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಜೋಡಿಯನ್ನು ತೆರೆಮೇಲೆ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದೆ. ಇದೇ ಬೆನ್ನಲ್ಲೇ ಅಡ್ವಾನ್ಸ್ ಬುಕಿಂಗ್‌ನಲ್ಲಿ 'ಪುಷ್ಪ 2' ಒಂದೊಂದೇ ದಾಖಲೆಗಳನ್ನು ಬರೆಯುತ್ತಿದೆ. ಟ್ರೇಡ್ ಎಕ್ಸ್‌ಪರ್ಟ್‌ಗಳು ಮೊದಲ ದಿನದ ಬಾಕ್ಸಾಫೀಸ್ ಲೆಕ್ಕಾಚಾರ ಹಾಕುತ್ತಿದ್ದಾರೆ.

ಅಲ್ಲು ಅರ್ಜುನ್‌ಗೆ 'ಪುಷ್ಪ' ಪಾರ್ಟ್ 1 ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಜನಪ್ರಿಯತೆ ತಂದುಕೊಟ್ಟಿತ್ತು. ಹಿಂದಿ ಬೆಲ್ಟ್‌ನಲ್ಲಿ ಅನಿರೀಕ್ಷಿತ ಮಟ್ಟದಲ್ಲಿ ಸಿನಿಮಾ ಬಾಕ್ಸಾಫೀಸ್ ಅನ್ನು ಲೂಟಿ ಮಾಡಿತ್ತು. ಅದೇ ಯಶಸ್ಸನ್ನು ಮುಂದಿಟ್ಟುಕೊಂಡು 'ಪುಷ್ಪ 2' ನಿರ್ಮಾಣ ಮಾಡಲಾಗಿದೆ. ಇಷ್ಟು ದಿನ 'ಪುಷ್ಪ 2' ನೋಡುವ ತವಕದಲ್ಲಿದ್ದ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿಮಾನಿಗಳು ಕೊನೆಗೂ ನಿರಾಳರಾಗಿದ್ದಾರೆ.

Allu Arjun Rashmika Mandanna starrer Pushpa 2 movie first review here is the details

ಬಿಗ್ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣ ಮಾಡಿರುವುದರಿಂದ ' ಪುಷ್ಪ 2'ಗೆ ರೆಸ್ಪಾನ್ಸ್ ಹೇಗಿರುತ್ತೆ? ಅನ್ನುವುದನ್ನು ಎದುರು ನೋಡುತ್ತಿದ್ದಾರೆ. ಇದೇ ವೇಳೆ ಈ ಸಿನಿಮಾದ ಮೊದಲ ವಿಮರ್ಶೆ ಹೊರಬಿದ್ದಿದೆ. ಈಗಾಗಲೇ 'ಪುಷ್ಪ 2' ಸಿನಿಮಾ ನೋಡಿದ್ದಾಗಿ ವಿಮರ್ಶಕರೊಬ್ಬರು ಹೇಳಿಕೊಂಡಿದ್ದು, ತಮ್ಮ ಸೋಶಿಯಲ್ ಮೀಡಿಯಾದ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಆ ಪೋಸ್ಟ್ ಪ್ರಕಾರ, 'ಪುಷ್ಪ 2' ಹೇಗಿದೆ? ತಿಳಿಯುವುದಕ್ಕೆ ಮುಂದೆ ಓದಿ.

'ಪುಷ್ಪ 2' ಪ್ಯಾನ್ ಇಂಡಿಯಾ ಲೆವೆಲ್‌ ಹವಾ ಕ್ರಿಯೇಟ್ ಮಾಡಿದೆ. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಜೋರಾಗಿಯೇ ಸದ್ದು ಮಾಡುತ್ತೆ ಅನ್ನೋದು ಸಿನಿಮಾ ಮಂದಿಯ ಲೆಕ್ಕಾಚಾರ. ಅದರಂತೆ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಹಾಗೂ ನಿರ್ದೇಶಕ ಸುಕುಮಾರ್ ಭರ್ಜರಿಯಾಗಿಯೇ ಪ್ರಚಾರ ಮಾಡುತ್ತಿದ್ದಾರೆ. ಇದೇ ವೇಳೆ ಸ್ವಯಂ ಘೋಷಿತ ಸಿನಿಮಾ ಕ್ರಿಟಿಕ್ ಉಮೈರ್ ಸಂಧು ಎಂದಿನಂತೆ ತಮ್ಮ ಸೋಶಿಯಲ್ ಮೀಡಿಯಾದ ಖಾತೆಯಲ್ಲಿ 'ಪುಷ್ಪ 2' ಬಿಡುಗಡೆಗೂ ಮುನ್ನವೇ ವಿಮರ್ಶೆ ಮಾಡಿದ್ದಾರೆ.

Allu Arjun Rashmika Mandanna starrer Pushpa 2 movie first review here is the details

ಉಮೈರ್ ಸಂಧು ಪ್ರಕಾರ, "ಪುಷ್ಪ 2 ಸಿನಿಮಾ ಪೈಸಾ ವಸೂಲ್ ಹಾಗೂ ಸೀಟಿಮಾರ್ ಎಂಟರ್‌ಟೈನರ್. ಇದು ಮಾಸ್ ಹಾಗೂ ಕ್ಲಾಸ್ ಸಿನಿಮಾವನ್ನು ಇಷ್ಟಪಡುವವರಿಗೆ ಇಷ್ಟ ಆಗುತ್ತೆ. ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾ ದಾಖಲೆಗಳನ್ನು ಬರೆಯುತ್ತೆ. ಅತೀ ದೊಡ್ಡ ಹಿಟ್ ಸಿನಿಮಾ ಆಗಿ ಹೊರ ಹೊಮ್ಮುತ್ತೆ. ಈ ವರ್ಷ ಇಲ್ಲಿವರೆಗೂ ಬಿಡುಗಡೆಯಾಗಿರುವ ಸಿನಿಮಾವನ್ನು ಮೀರಿಸುತ್ತೆ. " ಹೇಳಿಕೊಂಡಿದ್ದಾರೆ.

ಹಾಗೇ ಸಿನಿಮಾದಲ್ಲಿ ಅಲ್ಲು ಅರ್ಜುನ್ ಪಾತ್ರ ಡ್ಯಾಶಿಂಗ್ ಆಗಿದೆ. ಮಾಸ್ ಅವತಾರ ಎಲ್ಲರಿಗೂ ಇಷ್ಟ ಆಗುತ್ತೆ. ಇವರ ಆಕ್ಷನ್ ಹಾಗೂ ಕಾಮಿಡಿ ಟೈಮಿಂಗ್ ಅಲ್ಲು ಅರ್ಜುನ್‌ಗೆ ಮತ್ತೊಂದು ನ್ಯಾಷನಲ್ ಅವಾರ್ಡ್ ಅನ್ನು ತಂದು ಕೊಡುತ್ತೆ. ರಶ್ಮಿಕಾ ಮಂದಣ್ಣ ನಟನೆ ಕೂಡ ಚೆನ್ನಾಗಿದೆ. ಆದರೆ, ಫಹಾದ್ ಫಾಸಿಲ್ ತಮ್ಮ ಪಾತ್ರದ ಮೂಲಕ ಪ್ರೇಕ್ಷಕರ ಮನಸ್ಸು ಗೆಲ್ಲುತ್ತಾರೆ ಎಂದು ಉಮೈರ್ ಸಂಧು ಹೇಳಿಕೊಂಡಿದ್ದಾರೆ.

ಅಂದ್ಹಾಗೆ ಉಮೈರ್ ಸಂಧು ಸಿನಿಮಾವನ್ನು ಎಲ್ಲಿ ನೋಡಿದ್ದಾರೆ ಅನ್ನುವ ಬಗ್ಗೆ ಮಾಹಿತಿ ಇಲ್ಲ. 'ಪುಷ್ಪ 2' ಪೇಯ್ಡ್ ರಿವ್ಯೂ ಡಿಸೆಂಬರ್ 4 ರಾತ್ರಿಯಿಂದ ಆರಂಭ ಆಗುತ್ತಿದೆ. ಅದಕ್ಕೂ ಮುನ್ನ ಇವರು ಎಲ್ಲಿ ಸಿನಿಮಾ ನೋಡಿದ್ದಾರೆ ಅನ್ನೋ ರಿವೀಲ್ ಆಗಿಲ್ಲ. ಆದರೆ, ಪ್ರತಿಬಾರಿ ಬಿಗ್ ಬಜೆಟ್ ಸಿನಿಮಾ ರಿಲೀಸ್‌ಗೂ ಮುನ್ನ ವಿಮರ್ಶೆಯನ್ನು ಮಾಡಿ ಹಾಕುತ್ತಾರೆ. ಹಾಗೇ 'ಪುಷ್ಪ 2' ಸಿನಿಮಾದ ವಿಮರ್ಶೆ ಕೂಡ ಮಾಡಿದ್ದು, ಅದು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

More from Filmibeat

English summary
Allu Arjun, Rashmika Mandanna starrer Pushpa 2 movie first review here is the details;
Read more about: allu arjun pushpa 2 review
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X