ಬಾಕ್ಸಾಫೀಸ್‌ನಲ್ಲಿ 173 ಕೋಟಿ ದಾಖಲಿಸಿದ 'ಪುಷ್ಪ': 3 ದಿನಗಳಲ್ಲಿ ಕರ್ನಾಟಕದ ಗಳಿಕೆ ಎಷ್ಟು?
ಯಾವುದೇ ಸಿನಿಮಾ ಆಗಿದ್ದರೂ ಬಿಡುಗಡೆಯಾದ ಮೊದಲ ಮೂರು ದಿನದ ಗಳಿಕೆ ಚಿತ್ರಕ್ಕೆ ತುಂಬಾನೇ ಮುಖ್ಯ ಆಗಿರುತ್ತೆ. ಅಲ್ಲು ಅರ್ಜುನ್ 'ಪುಷ್ಪ' ಈ ಪರೀಕ್ಷೆಯಲ್ಲಿ ಗೆದ್ದು ಬೀಗಿದೆ. ಮೊದಲ ವಾರ
ಅಲ್ಲು ಅರ್ಜುನ್ 'ಪುಷ್ಪ' ಬಾಕ್ಸಾಫೀಸ್‌ನಲ್ಲಿ ತನ್ನ ಹಾವಳಿಯನ್ನು ಮುಂದುವರೆಸಿದೆ. ಬಿಡುಗಡೆಯಾದ ಕಡೆಗಳಲ್ಲೆಲ್ಲಾ ಗಲ್ಲಾಪೆಟ್ಟಿಗೆಯನ್ನು ದೋಚುತ್ತಲೇ ಇದೆ. ಮೂರು ದಿನಗಳಲ್ಲಿ 'ಪುಷ್ಪ' ಲೂಟಿ ಮಾಡಿದ್ದು ನೋಡುತ್ತಿದ್ದರೆ, ಹೊಸ ದಾಖಲೆಯನ್ನೇ ಬರೆಯಬಹುದು ಎನ್ನುವ ನಿರೀಕ್ಷೆಯಿದೆ.
'ಪುಷ್ಪ' ಕೇವಲ ಆಂಧ್ರ, ತೆಲಂಗಾಣದಲ್ಲಿ ಅಷ್ಟೇ ಅಲ್ಲ. ಭಾರತದಲ್ಲಿ ಅಷ್ಟೇ ಅಲ್ಲ. ವಿಶ್ವದಾದ್ಯಂತ ಅಲ್ಲು ಅರ್ಜುನ್ ಸಿನಿಮಾ ಗ್ರ್ಯಾಂಡ್ ಆಗಿ ತೆರೆಕಂಡಿತ್ತು. ಫಸ್ಟ್ ಡೇ ಫಸ್ಟ್ ಶೋನೇ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೀಗಿದ್ದರೂ, ಮೂರು ದಿನಗಳಲ್ಲಿ ಸಿನಿಮಾ ಗಳಿಕೆಯಲ್ಲಿ ಹಿಂದೆ ಬಿದಿಲ್ಲ. ಬಾಲಯ್ಯನ 'ಅಖಂಡ' ಬಳಿಕ ಅಲ್ಲು ಅರ್ಜುನ್ 'ಪುಷ್ಪ' ಬೇಜಾನ್ ಸದ್ದು ಮಾಡುತ್ತಿದೆ. ಹಾಗಿದ್ದರೆ, ಈ ಮೂರು ದಿನಗಳಲ್ಲಿ ಎಲ್ಲೆಲ್ಲಿ ಎಷ್ಟು ಗಳಿಕೆ ಕಂಡಿದೆ? ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ ಪುಷ್ಪ ದೋಚಿದ್ದೆಷ್ಟು? ಅನ್ನುವುದನ್ನು ತಿಳಿಯಲು ಮುಂದೆ ಓದಿ....

'ಪುಷ್ಪ' ವಿಶ್ವದಾದ್ಯಂತ ಗಳಿಕೆ 173 ಕೋಟಿ
ಮೊದಲ ದಿನವೇ 'ಪುಷ್ಪ'ಗೆ ಸಿಕ್ಕಿರುವ ರೆಸ್ಪಾನ್ಸ್ ನೋಡಿದರೆ, ಬಾಕ್ಸಾಫೀಸ್‌ನಲ್ಲಿ ಇಷ್ಟೊಂದು ಸದ್ದು ಮಾಡುತ್ತೆ ಅನ್ನುವ ಕಲ್ಪನೆ ಸಿನಿಮಾ ಮಂದಿಗೆ ಇರಲಿಲ್ಲ. ಮಿಶ್ರ ಪ್ರತಿಕ್ರಿಯೆಯಿಂದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗುತ್ತೆ ಎನ್ನಲಾಗಿತ್ತು. ಆದರೆ, 'ಪುಷ್ಪ' ಈ ಎಲ್ಲಾ ಲೆಕ್ಕಾಚಾರಗಳನ್ನೂ ತಲೆಕೆಳಗಾಗುವಂತೆ ಮಾಡಿದೆ. ಟ್ರೇಡ್ ಅನಾಲಿಸ್ಟ್‌ಗಳ ಪ್ರಕಾರ, 'ಪುಷ್ಪ' ವಿಶ್ವದಾದ್ಯಂತ ಬರೋಬ್ಬರಿ 173 ಕೋಟಿ ಲೂಟಿ ಮಾಡಿದೆ ಎನ್ನಲಾಗಿದೆ. 'ಪುಷ್ಪ' ಎಲ್ಲೆಲ್ಲಿ ತೆರೆಕಂಡಿತ್ತೋ, ಅಲ್ಲೆಲ್ಲಾ ಗಳಿಕೆ ಗಗನಕ್ಕೇರಿದೆ.
ಆಂಧ್ರ-ತೆಲಂಗಾಣದಲ್ಲಿ 'ಪುಷ್ಪ' ಗಳಿಕೆ ಎಷ್ಟು?
ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಸಿನಿಮಾ 'ಪುಷ್ಪ' ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದೆ. ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಜೋಡಿ ತೆಲುಗು ಮಂದಿಯನ್ನು ಮೋಡಿ ಮಾಡುವಲ್ಲಿ ಗೆದ್ದಿದೆ. ಆಂಧ್ರ ಹಾಗೂ ತೆಲಂಗಾಣ ಈ ಎರಡೂ ರಾಜ್ಯಗಳಿಂದಲೂ ಬರೋಬ್ಬರಿ 78 ಕೋಟಿ ಗಳಿಕೆ ಆಗಿದೆ ಅನ್ನುವ ಲೆಕ್ಕ ನೀಡಲಾಗಿದೆ. ಇದರಲ್ಲಿ ನಿರ್ಮಾಪಕರಿಗೆ ಸಿಕ್ಕ ಶೇರ್ 52.98 ಕೋಟಿ. ಹೀಗಾಗಿ ವರ್ಷದ ಕೊನೆಯಲ್ಲಿ ಟಾಲಿವುಡ್ ಬಾಕ್ಸಾಫೀಸ್‌ನಲ್ಲಿ 'ಪುಷ್ಪ' ದೊಡ್ಡ ಬಾಂಬ್ ಅನ್ನೇ ಸಿಡಿಸಿದೆ.

ಕರ್ನಾಟಕದಲ್ಲಿ 'ಪುಷ್ಪ' ಗಳಿಕೆ ಎಷ್ಟು?
ಕರ್ನಾಟಕದಲ್ಲಿ 'ಪುಷ್ಪ' ಸಿನಿಮಾ ಬಿಡುಗಡೆಗೆ ವಿರೋಧ ವ್ಯಕ್ತವಾಗಿತ್ತು. ಬಾಯ್‌ಕಾಟ್ ಅಭಿಯಾನ ಶುರು ಮಾಡಿದ್ದರು. ಆದರೂ, 'ಪುಷ್ಪ' ಸಿನಿಮಾಗೆ ಯಾವುದೇ ಎಫೆಕ್ಟ್ ಆಗಿಲ್ಲ. ಯಾಕಂದರೆ, 'ಪುಷ್ಪ' ಮೂರು ದಿನಗಳಲ್ಲಿ ದಾಖಲೆ ಗಳಿಕೆ ಮಾಡಿದೆ. 280ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಸಿನಿಮಾ, ಮೂರು ದಿನಗಳಲ್ಲಿ 16 ಕೋಟಿ ಲೂಟಿ ಮಾಡಿದೆ. ಮೊದಲ ದಿನ 5.5 ಕೋಟಿ ಗಳಿಸಿದರೆ, ಎರಡನೇ ದಿನ 4.5 ಕೋಟಿ ಹಾಗೂ ಭಾನುವಾರ ಮೂರನೇ ದಿನ 6 ಕೋಟಿ ಗಳಿಸಿದೆ ಎನ್ನಲಾಗಿದೆ.
ತಮಿಳು, ಹಿಂದಿ, ಮಲಯಾಳಂನಲ್ಲಿ 'ಪುಷ್ಪ' ಗಳಿಸಿದ್ದೆಷ್ಟು?
ಕರ್ನಾಟಕ ಅಷ್ಟೇ ಅಲ್ಲ. ತಮಿಳುನಾಡು, ಕೇರಳ ಹಾಗೂ ಉತ್ತರ ಭಾರತದಲ್ಲೂ ಸಿನಿಮಾ ಗಳಿಕೆಯಲ್ಲಿ 'ಪುಷ್ಪ' ಹಿಂದೆ ಬಿದ್ದಿಲ್ಲ. ವಿಶ್ವದ ಮೂಲೆ ಮೂಲೆಯಲ್ಲೂ ಅಲ್ಲು ಅರ್ಜುನ್ 'ಪುಷ್ಪ' ಬಾಕ್ಸಾಫೀಸ್‌ನಲ್ಲಿ ಕೋಟಿ ಕೋಟಿ ಲೂಟಿ ಮಾಡಿದೆ.
ಹಿಂದಿ 'ಪುಷ್ಪ' - 12.07 ಕೋಟಿ (3 ದಿನ)
ತಮಿಳು 'ಪುಷ್ಪ' - 11.25 ಕೋಟಿ (3 ದಿನ)
ಮಲಯಾಳಂ 'ಪುಷ್ಪ' - 06.40 ಕೋಟಿ(3 ದಿನ)
ಅಮೆರಿಕ ಗಳಿಕೆ -12.17 ಕೋಟಿ (3 ದಿನ)


Click it and Unblock the Notifications











