'ಬುಟ್ಟ ಬೊಮ್ಮಾ' ಹಾಡಿಗೆ ಆನೆ ಜತೆ ಟಿಕ್ ಟಾಕ್ ಮಾಡಿದ ಅಲ್ಲು ಅರ್ಜುನ್ ಅಭಿಮಾನಿ: ವಿಡಿಯೋ ವೈರಲ್

ಅಲ್ಲು ಅರ್ಜುನ್ ಅಭಿನಯದ 'ಅಲಾ ವೈಕುಂಠಪುರಮುಲೋ' ಈ ವರ್ಷದ ಬ್ಲಾಕ್‌ಬಸ್ಟರ್ ಚಿತ್ರಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ತ್ರಿವಿಕ್ರಂ ಶ್ರೀನಿವಾಸ್ ನಿರ್ದೇಶನದ ಈ ಚಿತ್ರ, 'ಬಾಹುಬಲಿ' ಬಳಿಕ ತೆಲುಗಿನಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಕಂಡಿದೆ. ಸಿನಿಮಾ ಚಿತ್ರರಸಿಕರ ಮನಗೆದ್ದಿದ್ದಲ್ಲದೆ, ಅದರ ಹಾಡುಗಳೂ ಸೂಪರ್ ಹಿಟ್ ಆಗಿವೆ. 'ಬುಟ್ಟ ಬೊಮ್ಮಾ', 'ರಾಮುಲೋ ರಾಮುಲಾ' ಹಾಗೂ ಇತರೆ ಹಾಡುಗಳು 2020ರ ಚಾರ್ಟ್ ಬಸ್ಟರ್ ಹಾಡುಗಳೆಂಬ ಕೀರ್ತಿಗೆ ಭಾಜನವಾಗಿವೆ.

Recommended Video

Yash spoke about Challenging Star Darshan's Robert Cinema

ಈ ಚಿತ್ರದ ಹಾಡುಗಳು ಜನಪ್ರಿಯವಾಗಲು ಸಿನಿಮಾದಲ್ಲಿನ ಅದರ ನೃತ್ಯ ಸಂಯೋಜನೆಯೂ ಕಾರಣ. ಹೀಗಾಗಿ ಈ ಹಾಡುಗಳು ಶಾಲಾ ಕಾಲೇಜುಗಳ ಕಾರ್ಯಕ್ರಮಗಳಲ್ಲಿಯೂ ಬಳಕೆಯಾಗುತ್ತಿವೆ.

ಈ ಮಧ್ಯೆ ಅಲ್ಲು ಅರ್ಜುನ್ ಅಭಿಮಾನಿಗಳು ಮತ್ತೊಂದು ಮಟ್ಟಕ್ಕೆ ಹೋಗಿದ್ದಾರೆ. ಸಿನಿಮಾದಲ್ಲಿ ಅಲ್ಲು ಅರ್ಜುನ್ ನೃತ್ಯಭಂಗಿ ಎಲ್ಲರ ಗಮನ ಸೆಳೆದಿದೆ. ನೃತ್ಯ ಕೌಶಲವನ್ನು ಮೆಚ್ಚಿಕೊಂಡ ಅಭಿಮಾನಿಗಳು ವಿಭಿನ್ನ ಪ್ರಯೋಗಗಳನ್ನು ಮಾಡಿ ಮೆಚ್ಚುಗೆ ಗಳಿಸುತ್ತಿದ್ದಾರೆ. ಮುಂದೆ ಓದಿ...

ಬುಟ್ಟ ಬೊಮ್ಮಾ ಸೂಪರ್ ಹಿಟ್

ಬುಟ್ಟ ಬೊಮ್ಮಾ ಸೂಪರ್ ಹಿಟ್

'ಅಲಾ ವೈಕುಂಟಪುರಮುಲೋ' ಚಿತ್ರದ ಹಾಡುಗಳಲ್ಲಿಯೇ ಅತಿ ಹೆಚ್ಚು ಜನಪ್ರಿಯತೆ ಗಳಿಸಿರುವುದು, ಕ್ಯಾಚಿ ಎನಿಸಿರುವುದು 'ಬುಟ್ಟ ಬೊಮ್ಮಾ' ಹಾಡು. ಇದು ಎಲ್ಲರ ಅಚ್ಚುಮೆಚ್ಚಿನ ಗೀತೆಯಾಗಿದೆ. ಪೂಜಾ ಹೆಗ್ಡೆ ಜತೆ ಸ್ಟೈಲಿಶ್ ಸ್ಟಾರ್ ಅಲ್ಲು ಹಾಕಿದ ಹೆಜ್ಜೆಗಳನ್ನು ಮತ್ತೆ ಮತ್ತೆ ನೋಡಿ ಅಭಿಮಾನಿಗಳು ಅನುಕರಿಸುತ್ತಿದ್ದಾರೆ.

ಆನೆ ಜತೆ ಟಿಕ್ ಟಾಕ್ ವಿಡಿಯೋ

ಆನೆ ಜತೆ ಟಿಕ್ ಟಾಕ್ ವಿಡಿಯೋ

ಇದರ ನಡುವೆ ಅಲ್ಲು ಅರ್ಜುನ್ ಅಭಿಮಾನಿಯೊಬ್ಬರ ಟಿಕ್ ಟಾಕ್ ನೃತ್ಯದ ವಿಡಿಯೋ ವೈರಲ್ ಆಗಿದೆ. ಆನೆಯ ಜತೆಗೆ 'ಬುಟ್ಟ ಬೊಮ್ಮಾ' ಹಾಡಿನ ಟಿಕ್ ಟಾಕ್ ವಿಡಿಯೋ ನೆಟ್ಟಿಗರ ಮನಗೆದ್ದಿದೆ. ಫ್ಯಾನ್ಸ್ ಹೀಗೆ ವಿಶಿಷ್ಟ ಪ್ರಯೋಗಗಳನ್ನು ಮಾಡುವುದು ಹೊಸತಲ್ಲ. ಆದರೆ ಆನೆಯ ಜತೆಗಿನ ಟಿಕ್ ಟಾಕ್ ಮುದ್ದಾಗಿದೆ ಎನ್ನುವುದು ಎಲ್ಲರ ಅಭಿಪ್ರಾಯ.

ಹಾಡಿಗೆ ನರ್ತಿಸಿದ ಅನೆ

ಈ ವಿಡಿಯೋದಲ್ಲಿ ಅಲ್ಲು ಅರ್ಜುನ್ ಅಭಿಮಾನಿಯೊಬ್ಬ 'ಬುಟ್ಟ ಬೊಮ್ಮಾ' ಹಾಡಿಗೆ ಆನೆಯ ಜತೆಗೆ ನರ್ತಿಸಿದ್ದಾರೆ. ಸನ್ ಗ್ಲಾಸ್ ಹಾಕಿಕೊಂಡ ಅಭಿಮಾನಿ, ಕಪ್ಪು ಅಂಗಿ ಮತ್ತು ನೀಲಿ ಜೀನ್ಸ್‌ ಪ್ಯಾಂಟ್‌ನಲ್ಲಿ ಅಲ್ಲು ಅವರನ್ನು ಅನುಕರಿಸಿದ್ದಾರೆ. ಅವರ ಹಿಂದೆ ನೀರಿನಲ್ಲಿ ನಿಂತ ಆನೆ ಹಾಡಿನ ಲಯಕ್ಕೆ ತಕ್ಕಂತೆ ತನ್ನ ಸೊಂಡಿಲು ಆಡಿಸಿದೆ. ನಾಯಿ, ಬೆಕ್ಕುಗಳನ್ನು ಟಿಕ್ ಟಾಕ್ ವಿಡಿಯೋಕ್ಕೆ ಬಳಸಿಕೊಳ್ಳುವುದನ್ನು ನೋಡಿದ್ದೇವೆ. ಆದರೆ ಆನೆಯೊಂದು ಹೀಗೆ ಹಾಡಿಗೆ ತನ್ನ ದೇಹ ಬಳುಕಿಸಿರುವುದು ವಿಶೇಷ ಎನಿಸಿದೆ.

40 ಮಿಲಿಯನ್ ವೀಕ್ಷಣೆ

40 ಮಿಲಿಯನ್ ವೀಕ್ಷಣೆ

ಅಂದಹಾಗೆ, ಅಲಾ ವೈಕುಂಠಪುರಮುಲೋ ಚಿತ್ರದ ಬುಟ್ಟ ಬೊಮ್ಮಾ ವಿಡಿಯೋ ಹಾಡು ಯೂಟ್ಯೂಬ್‌ನಲ್ಲಿ 40 ಮಿಲಿಯನ್ ಬಾರಿ ವೀಕ್ಷಣೆಗೆ ಒಳಗಾಗಿದೆ. ಅರ್ಮಾನ್ ಮಲಿಕ್ ಹಾಡಿರುವ ಈ ಹಾಡಿಗೆ ಸಂಗೀತ ನೀಡಿರುವುದು ಎಸ್. ತಮನ್. ಇದರಲ್ಲಿನ ಅಲ್ಲು ಅರ್ಜುನ್ ಮತ್ತು ಪೂಜಾ ಹೆಗ್ಡೆ ನೃತ್ಯಕ್ಕೂ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

More from Filmibeat

English summary
A fan made TikTok video with elephant for 'Butta Bomma' song of Allu Arjun's super hit movie Ala Vaikunthapurramuloo.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X