ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಭರ್ಜರಿ ಸಿಹಿ ಸುದ್ದಿ!

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ 'ಪುಷ್ಪ' ಬಾಕ್ಸಾಫೀಸ್‌ನಲ್ಲಿ ಹೇಗೆ ಸದ್ದು ಮಾಡಿತ್ತು ಅನ್ನೋದು ನಿಮಗೆ ಗೊತ್ತೇ ಇದೆ. ಅದಕ್ಕೆ 'ಪುಷ್ಪ 2' ಸೀಕ್ವೆಲ್‌ಗೆ ಬಗ್ಗೆ ಇಡೀ ಚಿತ್ರತಂಡ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿತ್ತು. ಸ್ಕ್ರಿಪ್ಟ್ ಅನ್ನು ಮತ್ತಷ್ಟು ಟೈಟ್ ಮಾಡೋಕೆ ಮುಂದಾಗಿತ್ತು. ಅದರಂತೆ ಸುಕುಮಾರ್ ಈಗ ಸಿನಿಮಾ ಶೂಟಿಂಗ್ ಮಾಡೋಕೆ ರೆಡಿಯಾಗಿದ್ದಾರೆ.

'ಪುಷ್ಪ 2' ಟಾಲಿವುಡ್‌ನ ಬಹು ನಿರೀಕ್ಷಿತ ಸಿನಿಮಾಗಳಲ್ಲೊಂದು. ಪುಷ್ಪ ಗೆಲುವಿನ ಜೋಷ್‌ನಲ್ಲೇ ಶೂಟಿಂಗ್ ಆರಂಭ ಮಾಡೋಕೆ ಸಿದ್ಧತೆಗಳನ್ನು ಮಾಡಿಕೊಂಡಿದೆ. ಕಳೆದ ವರ್ಷ ಡಿಸೆಂಬರ್ 17, 2021 ರಂದು ರಿಲೀಸ್ ಆಗಿದ್ದ ಈ ಸಿನಿಮಾ ವಿಶ್ವದಾದ್ಯಂತ ಭರ್ಜರಿ ಸಕ್ಸಸ್ ಕಂಡಿತ್ತು.

ಅದರಲ್ಲೂ ಹಿಂದಿ ಬಾಕ್ಸಾಫೀಸ್‌ನಲ್ಲಿ 'ಪುಷ್ಪ' ದಾಖಲೆಯನ್ನೇ ಬರೆದಿತ್ತು. ಯಾರೂ ನಿರೀಕ್ಷೆ ಮಾಡದಷ್ಟು ಗಳಿಕೆ ಕಂಡಿತ್ತು. ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಸುಮಾರು 100 ಕೋಟಿ ರೂ. ಅಧಿಕ ಕಲೆಕ್ಷನ್ ಮಾಡಿ, ಅಲ್ಲು ಅರ್ಜುನ್‌ಗೆ ದೊಡ್ಡ ಮಾರುಕಟ್ಟೆಯನ್ನೇ ಸೃಷ್ಟಿ ಮಾಡಿದೆ. ಕರ್ನಾಟಕ, ಕೇರಳ, ತಮಿಳುನಾಡಿನಲ್ಲೂ ಸಿಕ್ಕಾಪಟ್ಟೆ ಕಲೆಕ್ಷನ್ ಮಾಡಿತ್ತು. ಹೀಗಾಗಿ 'ಪುಷ್ಪ 2'ಗೆ ಈಗಾಗಲೇ ಈ ಎಲ್ಲಾ ಕಡೆ ಭಾರೀ ಕ್ರೇಜ್ ಸೃಷ್ಟಿಯಾಗಿದೆ.

Allu Arjun Starrer Pushpa 2 Shooting Will Start From September 8th

'ಪುಷ್ಪ' ಸಿನಿಮಾ ಯಶಸ್ಸಿ ಬೆನ್ನಲ್ಲೇ ಚಿತ್ರತಂಡ ಚುರುಕುಕೊಂಡಿತ್ತು. ಎರಡನೇ ಭಾಗವನ್ನು ಮತ್ತಷ್ಟು ಬಲಗೊಳಿಸಲೇಬೇಕು ಅಂತ ತೀರ್ಮಾನಿಸಿದ್ದರು. ಹಾಗೇ ಸಿನಿಮಾ ಬಜೆಟ್ ಅನ್ನು ದುಪ್ಪಟ್ಟು ಮಾಡಲಾಗಿತ್ತು. ಸಿನಿಮಾವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ನಿರ್ಮಾಣ ಮಾಡಲು ಮುಂದಾಗಿತ್ತು.

ಪುಷ್ಪರಾಜ್ ಆಗಿ ನಟಿಸಿದ್ದ ಅಲ್ಲು ಅರ್ಜುನ್ ಪಾತ್ರ ಪ್ರೇಕ್ಷಕರನ್ನು ಬೆರಗುಗೊಳಿಸಿತ್ತು. ಸುಕುಮಾರ್ ಕಥೆ ಬರೆದು ನಿರ್ದೇಶಿಸಿದ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಹೀರೊಯಿನ್. ಶ್ರೀವಲ್ಲಿ ಪಾತ್ರದಲ್ಲಿ ಅತ್ಯುತ್ತಮವಾಗಿ ನಟಿಸಿದ್ದರು. ಶ್ರೀವಲ್ಲಿ ಅವರ ಪಾತ್ರ ಭಾರತದಾದ್ಯಂತ ಮನೆ ಮಾತಾಗಿತ್ತು.

ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಜೊತೆಗೆ ಮಲಯಾಳಂ ನಟ ಫಹಾದ್ ಫಾಸಿಲ್ ಪಾತ್ರ ಕೂಡ ಪ್ರೇಕ್ಷಕರ ಮೆಚ್ಚುಗೆಗೆ ಕಾರಣವಾಗಿತ್ತು. ಫಹಾದ್ ಫಾಸಿಲ್ ಈ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ಭನ್ವರ್‌ಸಿಂಗ್ ಶೇಕಾವತ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇವರೊಂದಿಗೆ ಡಾಲಿ ಧನಂಜಯ, ಸುನೀಲ್, ಅನಸೂಯಾ ಮತ್ತು ಅಜಯ್ ಗೋಶ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Allu Arjun Starrer Pushpa 2 Shooting Will Start From September 8th

'ಪುಷ್ಪ 2' ಸಿನಿಮಾದಲ್ಲಿ ವಿಜಯ್ ಸೇತುಪತಿ ಕೂಡ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಇನ್ನೂ ಅಧಿಕೃತವಾಗಿ ಚಿತ್ರತಂಡ ಅನೌನ್ಸ್ ಮಾಡಬೇಕಿದೆ. ದೇವಿ ಶ್ರೀ ಪ್ರಸಾದ್ ಪಾರ್ಟ್ 2ಗೂ ಭರ್ಜರಿ ಮ್ಯೂಸಿಕ್ ನೀಡಿದ್ದಾರೆ. ಸದ್ಯ ಈ ಸಿನಿಮಾ ಶೂಟಿಂಗ್ ಬಗ್ಗೆ, ಸಿನಿಮಾದ ಬಜೆಟ್ ಬಗ್ಗೆ ಅಲ್ಲು ಅರ್ಜುನ್ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

More from Filmibeat

English summary
Allu Arjun Starrer Pushpa 2 Shooting Will Start From September 8th, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X