ಉತ್ತರ ಭಾರತದಲ್ಲಿ 'ಪುಷ್ಪ 2' ದಾಖಲೆ ಬ್ಯುಸಿನೆಸ್: ರಾಜಮೌಳಿ, ಶಾರುಖ್ ಸಿನಿಮಾಗಳೂ ಲೆಕ್ಕಕ್ಕಿಲ್ಲ
ಅಲ್ಲು ಅರ್ಜುನ್ ಹಾಗೂ ಸುಕುಮಾರ್ ಕಾಂಬಿನೇಷನ್ ಸಿನಿಮಾ 'ಪುಷ್ಪ 2' ಬ್ಯುಸಿನೆಸ್ ವಿಚಾರದಲ್ಲಿ ಹೊಸ ದಾಖಲೆಗಳನ್ನು ಬರೆದಿದೆ. ಇದೂವರೆಗೂ ರಾಜಮೌಳಿ, ಶಾರುಖ್ ಖಾನ್ ಹೆಸರಿನಲ್ಲಿದ್ದ ದಾಖಲೆಗಳನ್ನು ಉಡೀಸ್ ಮಾಡಿದೆ. ಇಂತಹದ್ದೊಂದು ಸುದ್ದಿ ಟಾಲಿವುಡ್‌ನಲ್ಲೀಗ ಭಾರೀ ಸದ್ದು ಮಾಡುತ್ತಿದೆ.
'ಪುಷ್ಪ 2' ಸಿನಿಮಾಗೆ ಈ ಮಟ್ಟಿಗೆ ಕ್ರೇಜ್ ಹುಟ್ಟಿಕೊಳ್ಳುವುದಕ್ಕೆ ಕಾರಣ 'ಪುಷ್ಪ' ಮೊದಲ ಪಾರ್ಟ್. ಅಲ್ಲು ಅರ್ಜುನ್‌ಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಮಟ್ಟಕ್ಕೆ ಸದ್ದು ಮಾಡುತ್ತೆ ಎಂದು ಯಾರು ನಿರೀಕ್ಷೆ ಕೂಡ ಮಾಡಿರಲಿಲ್ಲ. ಆದರೆ, 'ಪುಷ್ಪ' ಹಾಡುಗಳು, ಮ್ಯಾನರಿಸಂ, ಡೈಲಾಗ್ ಸಿನಿಪ್ರಿಯರಿಗೆ ಕಿಕ್ ಕೊಟ್ಟಿದ್ದವು. ಈ ಸಿನಿಮಾದ ಅಲ್ಲು ಅರ್ಜುನ್ ಮ್ಯಾನರಿಸಂಗೆ ಸೆಲೆಬ್ರೆಟಿಗಳೇ ರಿಲೀಸ್ ಮಾಡುವುದಕ್ಕೆ ಶುರು ಮಾಡಿದ್ದರು.

ಹೀಗಾಗಿ 'ಪುಷ್ಪ 2' ನಿರೀಕ್ಷೆಗಳನ್ನು ಹುಟ್ಟಾಕಿದೆ. ಇತ್ತೀಚೆಗೆ ಅಲ್ಲು ಅರ್ಜುನ್ ಹುಟ್ಟುಹಬ್ಬದ ವೇಳೆ ರಿಲೀಸ್ ಮಾಡಿದ್ದ ಚಿಕ್ಕದೊಂದು ಟೀಸರ್‌ಗೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಬೆನ್ನಲ್ಲೇ ಉತ್ತರ ಭಾರತದಲ್ಲಿ 'ಪುಷ್ಪ 2' ಹೈ ಡಿಮ್ಯಾಂಡ್ ಬಂದಿದೆಯಂತೆ. ಈ ಸಿನಿಮಾದ ಥಿಯೇಟ್ರಿಕರ್ ರೈಟ್ಸ್ ದಾಖಲೆ ಮೊತ್ತಕ್ಕೆ ಸೇಲ್ ಆಗಿದೆ ಅನ್ನೋ ಸುದ್ದಿ ಹರಿದಾಡುತ್ತಿದೆ.
ಅಲ್ಲು ಅರ್ಜುನ್ ಸಿನಿಮಾ 'ಪುಷ್ಪ 2' ನೋಡುವುದಕ್ಕೆ ಪ್ರೇಕ್ಷಕರು ಕಾದು ಕೂತಿದ್ದಾರೆ. ಈಗಾಗಲೇ 'ಪುಷ್ಪ 2' ಸಿನಿಮಾದ ಚಿಕ್ಕ ಚಿಕ್ಕ ತುಣುಕುಗಳನ್ನು ಹೊರ ಬಿಟ್ಟಿದ್ದಾರೆ. ಇದನ್ನು ನೋಡಿದ್ಮೇಲೆ ಸಿನಿಮಾ ಬಗ್ಗೆ ಕ್ರೇಜ್ ದುಪ್ಪಟ್ಟಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅಲ್ಲು ಅರ್ಜುನ್ ಸಿನಿಮಾ ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತೆ ಅಂತ ತೆಲುಗು ಮಂದಿ ಭವಿಷ್ಯ ನುಡಿದಿದ್ದಾರೆ. ಅದರಂತೆ ಉತ್ತರ ಭಾರತದಲ್ಲಿ ಸಿನಿಮಾದ ಬ್ಯುಸಿನೆಸ್ ಕೂಡ ದುಪ್ಪಟ್ಟಾಗಿದೆ ಅನ್ನೋ ಮಾತು ಕೇಳಿ ಬರುತ್ತಿದೆ.
ಸಿನಿಮಾ ಬಿಡುಗಡೆಗೂ ಮುನ್ನವೇ 'ಪುಷ್ಪ 2' ಚಿತ್ರತಂಡ ವ್ಯಾಪಾರವನ್ನು ಕುದುರಿಸುತ್ತಿದೆ. ಈಗಾಗಲೇ ಆಡಿಯೋ ರೈಟ್ಸ್, ಡಿಜಿಟಲ್ ರೈಟ್ಸ್ ಅಂತ ಭಾರಿ ದೊಡ್ಡ ಮೊತ್ತದ ಬ್ಯುಸಿನೆಸ್ ಅನ್ನು ಮಾಡಿದೆ ಅನ್ನೋ ಮಾತು ಟ್ರೇಡಿಂಗ್ ವಲಯದಲ್ಲಿ ಕೇಳಿ ಬರುತ್ತಿದೆ. 'ಪುಷ್ಪ 2' ಸಿನಿಮಾ ಆಡಿಯೋ ರೈಟ್ಸ್ ಸುಮಾರು 60 ಕೋಟಿ ರೂಪಾಯಿಗೆ ಸೇಲ್ ಆಗಿದೆ ಎನ್ನಲಾಗಿದೆ.

ಇದರೊಂದಿಗೆ ಓಟಿಟಿಗೂ ಸಿಕ್ಕಾಪಟ್ಟೆ ಬೇಡಿಕೆ ಇತ್ತು. ಓಟಿಟಿ ಪ್ಲಾಟ್‌ಫಾರ್ಮ್‌ಗಳು ಕೂಡ ಸಿನಿಮಾ ಹಕ್ಕುಗಳನ್ನು ಖರೀದಿ ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದವು. ಕೊನೆಗೂ ನೆಟ್‌ಫ್ಲಿಕ್ಸ್ ಭಾರಿ ಮೊತ್ತಕ್ಕೆ ಸಿನಿಮಾದ ಹಕ್ಕುಗಳನ್ನು ಖರೀದಿ ಮಾಡಿದೆ ಅನ್ನೋ ಮಾತು ಕೇಳಿ ಬರುತ್ತಿದೆ. 275 ಕೋಟಿ ರೂಪಾಯಿಗೆ ನೆಟ್‌ಫ್ಲಿಕ್ಸ್ ಖರೀದಿ ಮಾಡಿದೆ ಅನ್ನೋದು ಟ್ರೇಡ್ ವಲಯದಲ್ಲಿ ಹರಿದಾಡುತ್ತಿರುವ ಸುದ್ದಿ.
ಆದ್ರೀಗ ಉತ್ತರ ಭಾರತದಲ್ಲೂ 'ಪುಷ್ಪ 2' ಗೆ ಕ್ರೇಜ್ ಇರೋದನ್ನು ಮನಗಂಡು ಥಿಯೇಟ್ರಿಕಲ್ ಹಕ್ಕುಗಳನ್ನು ಖರೀದಿ ಮಾಡುವುದಕ್ಕೆ ವಿತರಕರು ಮುಂದೆ ಬಂದಿದ್ದಾರೆ. 'ಕೆಜಿಎಫ್' ಸೀರಿಸ್ ಅನ್ನು ಉತ್ತರ ಭಾರತದಲ್ಲಿ ವಿತರಣೆ ಮಾಡಿದ್ದ ಅನಿಲ್ ತಡಾನಿ ಸುಮಾರು 200 ಕೋಟಿ ರೂಪಾಯಿಗೆ ಉತ್ತರ ಭಾರತದ ಥಿಯೇಟ್ರಿಕಲ್ ಹಕ್ಕುಗಳನ್ನು ಖರೀದಿ ಮಾಡಿದ್ದಾರೆಂದು ವರದಿಯಾಗಿದೆ. ಟಾಲಿವುಡ್ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆಯಾಗಿದೆ ಎಂದು ಟಾಲಿವುಡ್ ಮಂದಿ ಹೇಳುತ್ತಿದ್ದಾರೆ. ಅಂದ್ಹಾಗೆ 'ಪುಷ್ಪ 2' ಸಿನಿಮಾ ಆಗಸ್ಟ್ 15ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ.


Click it and Unblock the Notifications











