'ಕೆಜಿಎಫ್ 3' ಗಿಂತಲೂ ಮುನ್ನವೇ 'ಪುಷ್ಪ 3' ? ಯಶ್ ಹೇಳಿಕೆ ಬೆನ್ನಲ್ಲೇ 3ನೇ ಸರಣಿ ಅನೌನ್ಸ್?
ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಸಿನಿಮಾ 'ಪುಷ್ಪ' ಎರಡನೇ ಪಾರ್ಟ್ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಇದಕ್ಕೂ ಮೊದಲು 'ಪುಷ್ಪ 2' ಡಿಸೆಂಬರ್ 6 ರಂದು ಬಿಡುಗಡೆಯಾಗುತ್ತೆ ಎಂದು ಚಿತ್ರತಂಡ ಅನೌನ್ಸ್ ಮಾಡಿತ್ತು. ಆದ್ರೀಗ ಹೊಸ ರಿಲೀಸ್ ಡೇಟ್ ಅನ್ನು ನಿರ್ಮಾಪಕರು ಅನೌನ್ಸ್ ಮಾಡಿದ್ದಾರೆ. ಇಂದು (ಅಕ್ಟೋಬರ್ 24) ಹೈದರಾಬಾದ್‌ನಲ್ಲಿ ನಿರ್ಮಾಪಕರು 'ಪುಷ್ಪ 2' ಸಿನಿಮಾವನ್ನು ಒಂದು ದಿನ ಮುನ್ನವೇ ರಿಲೀಸ್ ಮಾಡುವುದಕ್ಕೆ ಮುಂದಾಗಿದ್ದಾರೆ.
ಹೌದು, ಅಲ್ಲು ಅರ್ಜುನ್ 'ಪುಷ್ಪ 2' ಒಂದು ದಿನ ಮುನ್ನ ರಿಲೀಸ್ ಆಗಲಿದೆ. ಅಂದರೆ, ಡಿಸೆಂಬರ್ 5 ರಂದು ಥಿಯೇಟರ್‌ಗೆ ಅಪ್ಪಳಿಸಲಿದೆ. ಹಾಗೇ ಡಿಸೆಂಬರ್ 4 ರಂದು ಪ್ರೀಮಿಯರ್ ಶೋ ನಡೆಯಲಿದೆ ಎಂದು ನಿರ್ಮಾಪಕರು ಅನೌನ್ಸ್ ಮಾಡಿದ್ದಾರೆ. ಇದೇ ವೇಳೆ 'ಪುಷ್ಪ ಪಾರ್ಟ್ 1'ಗಿಂತಲೂ 'ಪುಷ್ಪ 2' ಲಾರ್ಜ್ ಸ್ಕೇಲ್‌ನಲ್ಲಿ ರಿಲೀಸ್ ಆಗುತ್ತಿದೆ ಎಂದು ಚಿತ್ರತಂಡ ಹೇಳಿದೆ.

ಈ ಮಧ್ಯೆ 'ಪುಷ್ಪ' ನಿರ್ಮಾಪಕರು ಪಾರ್ಟ್ 3 ಬಗ್ಗೆನೂ ಸುಳಿವು ನೀಡಿದ್ದಾರೆ. ಎರಡು ದಿನದ ಹಿಂದಷ್ಟೇ ರಾಕಿಂಗ್ ಸ್ಟಾರ್ ಯಶ್ 'ಕೆಜಿಎಫ್ 3' ಸೆಟ್ಟೇರುವ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದರು. ಆ ಬೆನ್ನಲ್ಲೇ 'ಪುಷ್ಪ 3' ಬಗ್ಗೆ ಟಾಕ್ ಶುರುವಾಗಿದೆ. ಈ ಮೂಲಕ 'ಕೆಜಿಎಫ್ 3' ಜೊತೆ 'ಪುಷ್ಪ 3' ಬಾಕ್ಸಾಫೀಸ್ ಕದನಕ್ಕೆ ಇಳಿಯುತ್ತಾ? ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.
'ಕೆಜಿಎಫ್ 3' ಬಗ್ಗೆ ಯಶ್ ಹೇಳಿದ್ದೇನು?
ರಾಕಿಂಗ್ ಸ್ಟಾರ್ ಇತ್ತೀಚೆಗೆ 'ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾ' ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನವನ್ನು ನೀಡಿದ್ದರು. ಅದರಲ್ಲಿ ಕ್ರಿಕೆಟರ್ ಶುಭ್‌ಮನ್ ಗಿಲ್ 'ಕೆಜಿಎಫ್ 3' ಯಾವಾಗ ಎಂದು ಪ್ರಶ್ನೆ ಮಾಡಿದ್ದರು. ಆ ವೇಳೆ ಯಶ್ 'ಕೆಜಿಎಫ್ 3' ಬಂದೇ ಬರುತ್ತೆ ಅನ್ನೋದನ್ನು ಕನ್ಫರ್ಮ್ ಮಾಡಿದ್ದಾರೆ. ಆದರೆ, 'ಟಾಕ್ಸಿಕ್' ಹಾಗೂ 'ರಾಮಾಯಣ' ಸಿನಿಮಾಗಳ ಕಡೆಗೆ ಹೆಚ್ಚು ಗಮನ ಹರಿಸಿದ್ದೇನೆ ಎಂದಿದ್ದರು. ಇದೇ ವೇಳೆ 'ಕೆಜಿಎಫ್ 3' ಯಾವಾಗ ಸೆಟ್ಟೇರುತ್ತೆ ಅನ್ನೋ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಬದಲಾಗಿ ಸಮಯ ಬಂದಾಗ ಹೇಳುತ್ತೇನೆ ಎಂದಷ್ಟೇ ಹೇಳಿದ್ದರು. ಈ ಬೆನ್ನಲ್ಲೇ 'ಪುಷ್ಪ 3' ಬಗ್ಗೆನೂ ನಿರ್ಮಾಪಕರು ಸುಳಿವು ಕೊಟ್ಟಿದ್ದಾರೆ.
'ಪುಷ್ಪ 3' ಸುಳಿವು ಕೊಟ್ಟ ನಿರ್ಮಾಪಕ
ಅಲ್ಲು ಅರ್ಜುನ್ ಸಿನಿಮಾ 'ಪುಷ್ಪ 2' ರಿಲೀಸ್ ಡೇಟ್ ಅನೌನ್ಸ್ ಮಾಡಿದ ಬೆನ್ನಲ್ಲೇ ಪುಷ್ಪ 3 ಬಗ್ಗೆನೂ ನಿರ್ಮಾಪಕರು ಸುಳಿವು ಕೊಟ್ಟಿದ್ದಾರೆ. ಆದರೆ, ಅವರೂ ಕೂಡ ಅಡ್ಡ ಗೋಡೆ ಮೇಲೆ ದೀಪವಿಟ್ಟಿದ್ದು, ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. 'ಪುಷ್ಪ 2' ರಿಲೀಸ್ ಬಳಿಕ ನಿರ್ದೇಶಕ ಸುಕುಮಾರ್ ರಾಮ್ ಚರಣ್ ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರೆ. ಆ ಗ್ಯಾಪ್‌ನಲ್ಲಿ ಅಲ್ಲು ಅರ್ಜುನ್ ಬೇರೆ ಸಿನಿಮಾಗಳಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

2025ಕ್ಕೆ 'ಪುಷ್ಪ 3' ಆರಂಭ ?
ಅಲ್ಲು ಅರ್ಜುನ್ ಟಾಪ್ ನಿರ್ದೇಶಕರೊಂದಿಗೆ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅಲ್ಲು ಅರ್ಜುನ್ ಹಾಗೂ ಸುಕುಮಾರ್ 2025ರಲ್ಲಿ ಮತ್ತೆ 'ಪುಷ್ಪ 3'ಗಾಗಿ ಮತ್ತೆ ಒಂದಾಗುತ್ತಿದ್ದಾರೆ ಅನ್ನೋ ಮಾತು ಹೇಳಿ ಬರುತ್ತಿದೆ. ಆದರೆ, ಈ ಬಗ್ಗೆ ನಿರ್ಮಾಪಕರು ಖಚಿತ ಮಾಹಿತಿಯನ್ನು ನೀಡಿಲ್ಲ. ಆದರೆ, ಅಲ್ಲು ಅರ್ಜುನ್ ಎರಡೂ ಪಾರ್ಟ್‌ಗಳಿಗಂತಲೂ ದುಬಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಪಾರ್ಟ್ 3 ಬಗ್ಗೆ ಸ್ಕ್ರೀಪ್ಟ್ ಕೂಡ ರೆಡಿಯಾಗುತ್ತಿದೆ ಎಂದು ಹೇಳಲಾಗುತ್ತಿದೆ.
'ಕೆಜಿಎಫ್ 3' Vs 'ಪುಷ್ಪ 3'
'ಪುಷ್ಪ' ಆರಂಭ ಆದ ದಿನದಿಂದಲೂ 'ಕೆಜಿಎಫ್' ಜೊತೆ ಪೈಪೋಟಿಗೆ ಬಿದ್ದಿದ್ದಾರೆ. 'ಕೆಜಿಎಫ್' ಸಿನಿಮಾದ ಜೊತೆಗೆ ತಮ್ಮನ್ನು ಹೋಲಿಕೆ ಮಾಡಿಕೊಳ್ಳುತ್ತಲೇ ಇದ್ದಾರೆ. ಈಗ 'ಪುಷ್ಪ 2' ಸಿನಿಮಾವನ್ನು ಬಾಕ್ಸಾಫೀಸ್‌ನಲ್ಲಿ ಸಾವಿರ ಕೋಟಿ ಗಡಿ ದಾಟಿಸುವ ಟಾರ್ಗೆಟ್ ಇಟ್ಟುಕೊಂಡಿದ್ದಾರೆ. ಆದರೆ, ಮೂಲಗಳ ಪ್ರಕಾರ, 'ಕೆಜಿಎಫ್ 3'ಗಿಂತ ಮುನ್ನ 'ಪುಷ್ಪ 3' ಮೊದಲು ಸೆಟ್ಟೇರುವ ಸಾಧ್ಯತೆಯಿದೆ ಎನ್ನಲಾಗಿದೆ. ಹಾಗೇ 'ಕೆಜಿಎಫ್ 3'ಗೂ ಮುನ್ನವೇ ಸಿನಿಮಾ ರಿಲೀಸ್ ಆಗಲಿದೆ.


Click it and Unblock the Notifications











