Iran-Israel-US War: ಇರಾನ್-ಇಸ್ರೇಲ್-ಯುಸ್ ಯುದ್ಧ.. NTR- ಪ್ರಶಾಂತ್ ನೀಲ್ 'ಡ್ರ್ಯಾಗನ್' ತಂಡ ಪಾರಾಯಿತೇ?
ಇಸ್ರೇಲ್ ಹಾಗೂ ಅಮೆರಿಕಾ ತನ್ನ ವೈರಿ ದೇಶ ಇರಾನ್ ಮೇಲೆ ಯುದ್ಧ ಸಾರಿದೆ. ಹೀಗಾಗಿ ಸುತ್ತಮುತ್ತಲಿನ ಅರಬ್ ರಾಷ್ಟ್ರಗಳಲ್ಲಿ ಆತಂಕ ಸೃಷ್ಟಿಯಾಗಿದೆ. ಅದರಲ್ಲೂ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅಮೆರಿಕ-ಇಸ್ರೇಲ್ ಜಂಟಿ ದಾಳಿ ಬಲಿಯಾದ ಮೇಲೆ ಪರಿಸ್ಥಿತಿ ಬಿಗಡಾಯಿಸಿದೆ. ನಾಲ್ಕು ದಶಕಗಳ ಕಾಲ ಇರಾನ್ ಆಳಿದ್ದ ಖಮೆನಿ ಹತ್ಯೆಗೆ ಪ್ರತಿಕಾರ ತೀರಿಸಿಕೊಳ್ಳುವುದಕ್ಕೆ ಪಟ್ಟು ಹಿಡಿದು ಕೂತಿದೆ. ಹೀಗಾಗಿ ಇರಾನ್-ಇಸ್ರೇಲ್ ಅಷ್ಟೇ ಅಲ್ಲದೆ, ಸುತ್ತಮುತ್ತಲಿನ ದೇಶಗಳಲ್ಲೂ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಇದೇ ವೇಳೆ ಭಾರತೀಯ ಚಿತ್ರರಂಗದ ತಾರೆಯರು, ಫಿಲ್ಮ್ ಮೇಕರ್ಸ್ ಯುದ್ಧ ನಡೆಯುತ್ತಿರುವ ಸುತ್ತಮುತ್ತಲಿನ ದೇಶಗಳಲ್ಲಿ ಸಿಕ್ಕಿಕೊಂಡಿದ್ದಾರೆ. ಇದರಲ್ಲಿ ಟಾಲಿವುಡ್ ತಂಡ ಕೂಡ ಸೇರಿಕೊಂಡಿದೆ. ಜೂನಿಯರ್ ಎನ್‌ಟಿಆರ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್‌ನಲ್ಲಿ ನಿರ್ಮಾಣ ಆಗುತ್ತಿರುವ 'ಡ್ರ್ಯಾಗನ್' ಸಿನಿಮಾ ತಂಡ ಕೂಡ ಒಂದು ಎನ್ನಲಾಗಿದೆ. ಈ ಬಗ್ಗೆ ಟಾಲಿವುಡ್‌ನಲ್ಲಿ ಚರ್ಚೆಯಾಗುತ್ತಿದೆ.

'ಡ್ರ್ಯಾಗನ್' ಸಿನಿಮಾವನ್ನು ಎನ್‌ಟಿಆರ್ ಆರ್ಟ್ಸ್ ಮತ್ತು ಮೈತ್ರಿ ಮೂವಿ ಮೇಕರ್ಸ್ ಜಂಟಿಯಾಗಿ ಬಿಗ್ ಬಜೆಟ್‌ನಲ್ಲಿ ಶೂಟಿಂಗ್ ಮಾಡುತ್ತಿದ್ದಾರೆ. ಈ ಸಿನಿಮಾಗಾಗಿ ಇಬ್ಬರ ಅಭಿಮಾನಿಗಳು ಕೂಡ ಕಾತರದಿಂದ ಕಾಯುತ್ತಿದ್ದಾರೆ. ಇಷ್ಟೊಂದು ನಿರೀಕ್ಷೆಯನ್ನು ಹುಟ್ಟಾಕಿರುವ ಸಿನಿಮಾ ತಂಡ ಇರಾನ್-ಇಸ್ರೇಲ್-ಅಮೆರಿಕ ಯುದ್ಧದ ಸಂದರ್ಭದಲ್ಲಿ ದೊಡ್ಡ ಅಪಾಯದಿಂದ ಪಾರಾಗಿದೆ ಎಂದು ಸುದ್ದಿಯಾಘಿದೆ. ಅಸಲಿಗೆ ಅಲ್ಲಿ ಏನಾಯಿತು ಎಂದು ನೋಡುವುದಾರೇ,
ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ ಸಿನಿಮಾ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ಈ ಸಿನಿಮಾದಲ್ಲಿ ಜೂನಿಯರ್ ಎನ್‌ಟಿಆರ್‌ಗೆ ಜೋಡಿಯಾಗಿ ರುಕ್ಮಿಣಿ ವಸಂತ್ ನಟಿಸುತ್ತಿದ್ದಾರೆ. ಜೊತೆಗೆ ಬಾಲಿವುಡ್ ನಟ ಅನಿಲ್ ಕಪೂರ್, ಮಲಯಾಳಂ ತಾರೆ ಟೋವಿನೋ ಥಾಮಸ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರವಿ ಬಸ್ರೂರ್ ಸಂಗೀತದ ಜೊತೆಗೆ ಆಕ್ಷನ್, ಎಮೋಷನ್, ಅದ್ದೂರಿ ಸೀನ್‌ಗಳ ನಿರೀಕ್ಷೆಯಲ್ಲಿ ಸಿನಿಪ್ರಿಯರು ಇದ್ದಾರೆ.
ಹೀಗಾಗಿ ಪ್ರಶಾಂತ್ ನೀಲ್ ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು 'ಡ್ರ್ಯಾಗನ್' ಸಿನಿಮಾದ ಶೂಟಿಂಗ್ ಮಾಡುತ್ತಿದ್ದಾರೆ. ಇತ್ತೀಚೆಗೆ ಈ ತಂಡ ಜೋರ್ಡಾನ್‌ನಲ್ಲಿ ಚಿತ್ರೀಕರಣ ಮಾಡುತ್ತಿತ್ತು ಎನ್ನಲಾಗಿದೆ. ಇಲ್ಲಿನ ಮರುಭೂಮಿಯಲ್ಲಿ ಮೂರು ಆಕ್ಷನ್ ಸೀಕ್ವೆನ್ಸ್ ಅನ್ನು ಶೂಟ್ ಮಾಡಲಾಗಿದೆ ಎನ್ನಲಾಗಿದೆ. ಇತ್ತ ಜೂನಿಯರ್ ಎನ್‌ಟಿಆರ್ ಡ್ಯೂಪ್ ಇಲ್ಲದೆ ಸಾಹಸ ದೃಶ್ಯಗಳಲ್ಲಿ ನಟಿಸಿದ್ದಾರೆ ಅನ್ನೋ ಸುದ್ದಿನೂ ಇದೆ. ಇಷ್ಟೇ ಅಲ್ಲದೆ ಇಲ್ಲಿ ಮಾಸ್ ಹಾಡುಗಳನ್ನು ಚಿತ್ರೀಕರಿಸಲಾಗಿದೆ ಎನ್ನಲಾಗಿದೆ.

ಜೂನಿಯರ್ ಎನ್‌ಟಿಆರ್, ಪ್ರಶಾಂತ್ ನೀಲ್ ತಂಡ ಸಿನಿಮಾ ಚಿತ್ರೀಕರಣಕ್ಕಾಗಿ ಜೋರ್ಡಾನ್‌ನಲ್ಲಿ ಬೀಡುಬಿಟ್ಟಿತ್ತು. ಇದೇ ವೇಳೆ ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕ ದಾಳಿ ಮಾಡಿದೆ. ಇದರಿಂದ ಇರಾಕ್, ಯುಎಇ, ಜೋರ್ಡಾನ್, ಇಸ್ರೇಲ್ ರಾಷ್ಟ್ರಗಳು ತಮ್ಮ ವಾಯುಪ್ರದೇಶ ಮುಚ್ಚಿವೆ. ಹೀಗಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ. ಜೋರ್ಡಾನ್‌ನ ಭಾರತೀಯ ರಾಯಭಾರ ಕಚೇರಿಯು ಅಲ್ಲಿನ ಭಾರತೀಯರಿಗೆ ಎಚ್ಚರಿಕೆಯನ್ನು ನೀಡಿತ್ತು. ಇದೇ ವೇಳೆ 'ಡ್ರ್ಯಾಗನ್' ತಂಡ ಜೋರ್ಡಾನ್ ಮರುಭೂಮಿಯಲ್ಲಿ ಚಿತ್ರೀಕರಣದಲ್ಲಿ ತೊಡಗಿದ್ದು ಎನ್ನಲಾಗಿದೆ.
ಇರಾನ್-ಇಸ್ರೇಲ್-ಅಮೆರಿಕ ಯುದ್ಧದ ಗಂಭೀರತೆಯನ್ನು ಅಂದಾಜಿಸಿದ ಪ್ರಶಾಂತ್ ನೀಲ್ ಮತ್ತು ತಂಡ ಶೂಟಿಂಗ್ ಅನ್ನು ಮುಗಿಸಿ, ಭಾರತಕ್ಕೆ ಸುರಕ್ಷಿತವಾಗಿ ಮರಳಿದೆ ಎನ್ನಲಾಗಿದೆ. ಯುದ್ಧದ ವಾತಾವರಣ ನಿರ್ಮಾಣ ಆದಾಗ, ಜೂನಿಯರ್ ಎನ್‌ಟಿಆರ್ ಹಾಗೂ ಪ್ರಶಾಂತ್ ನೀಲ್ ಎಚ್ಚೆತ್ತುಕೊಂಡು ಭಾರತಕ್ಕೆ ಹಿಂತಿರುಗಿದೆ. ಜೋರ್ಡಾನ್ ಶೆಡ್ಯೂಲ್ ಮಾರ್ಚ್ ಮೊದಲ ವಾರದವರೆಗೂ ಮುಂದುವರೆಯಬೇಕಿತ್ತು ಎನ್ನಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ತಂಡ ಫೆಬ್ರವರಿ 22 ರೊಳಗೆ ಶೆಡ್ಯೂಲ್ ಮುಗಿಸಿ, ಸುರಕ್ಷಿತವಾಗಿ ಹೈದರಾಬಾದ್ ತಲುಪಿದ್ದಾರೆ.


Click it and Unblock the Notifications











