ಪ್ರಭಾಸ್ 'ಕಲ್ಕಿ 2898AD'ಸಿನಿಮಾದ ದೈತ್ಯ ವಾಹನ ಚಾಲಾಯಿಸಿ ಆನಂದ್ ಮಹೀಂದ್ರ; ವಿಡಿಯೋ ವೈರಲ್!
ಭಾರತದ ಜನಪ್ರಿಯ ಉದ್ಯಮಿ ಆನಂದ್ ಮಹೀಂದ್ರ ಕೇವಲ ಬ್ಯುಸಿನೆಸ್ ವಿಚಾರದಲ್ಲಿ ಮಾತ್ರ ಅಲ್ಲ. ಆಗಾಗ ಇನೋವೇಟಿವ್ ಐಡಿಯಾಗಳನ್ನು ಮೆಚ್ಚಿಕೊಂಡು ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ವಿಶ್ವದ ಯಾವುದೇ ಮೂಲೆಯಲ್ಲಿ ಯಾರೇ ವಿಶೇಷವಾದದ್ದನ್ನು ಕಂಡು ಹಿಡಿದರೂ ಮೆಚ್ಚು ಸೂಚಿಸುತ್ತಾರೆ. ಸಾಧ್ಯವಾದರೆ, ಅವರನ್ನು ಭೇಟಿ ಹುರಿದುಂಬಿಸುತ್ತಾರೆ.
ಹಾಗೇ ಆಟೋಮೊಬೈಲ್ ಅಷ್ಟೇ ಅಲ್ಲ, ಕ್ರಿಕೆಟ್, ಸಿನಿಮಾ ಕ್ಷೇತ್ರದಲ್ಲೂ ಅವರಿಗೆ ಆಸಕ್ತಿಯಿದೆ. ಪ್ರಭಾಸ್ ನಟಿಸುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ 'ಕಲ್ಕಿ 2898 AD'ಗಾಗಿ ನಿರ್ಮಾಣ ವಿಶೇಷ ವಾಹನವನ್ನು ನೋಡಿ ಮೆಚ್ಚಿಕೊಂಡಿದ್ದರು. ಆ ವಾಹನದ ಡಿಸೈನ್ ನೋಡಿ ಭೇಷ್ ಎಂದಿದ್ದರು. ಅಂದ್ಹಾಗೆ 'ಕಲ್ಕಿ 2898 AD'ಸಿನಿಮಾಗಾಗಿ ವಿಶೇಷವಾಗಿ ಡಿಸೈನ್ ಮಾಡಿದ್ದ ಈ ವಾಹನದ ಹೆಸರು ಬುಜ್ಜಿ.

'ಕಲ್ಕಿ 2898 AD'ಯಲ್ಲಿ ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್, ಕಮಲ್ ಹಾಸನ್, ದಿಶಾ ಪಠಾಣಿ ಅಂತಹ ದಿಗ್ಗಜರು ನಟಿಸಿದ್ದಾರೆ. ಇವರೊಂದಿಗೆ ಬುಚ್ಚಿ ಅನ್ನುವ ಈ ವಾಹನ ಕೂಡ ಸಿನಿಮಾ ಅಷ್ಟೇ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಭೈರವನ ಪಾತ್ರದಲ್ಲಿ ಸದಾ ಕಾಣಿಸಿಕೊಳ್ಳುವ ಬುಜ್ಜಿ ಸಿನಿಪ್ರಿಯರ ಅಚ್ಚು ಮೆಚ್ಚಿನ ಪಾತ್ರವಾಗಿ ಉಳಿಯಬಹುದು.
ಇನ್ನು ಆನಂದ್ ಮಹೀಂದ್ರ ಈ ವಾಹನದ ಡಿಸೈನ್‌ಗೆ ಮನಸೋತಿದ್ದರು. ಹಾಗೇ ಡಿಸೈನ್ ಮಾಡಿದವರನ್ನು ಹೊಗಳಿ ಕೊಂಡಾಡಿದ್ದರು. ಇಲ್ಲೊಂದು ಇಂಟ್ರೆಸ್ಟಿಂಗ್ ವಿಷಯವಿದೆ. ಈ ಸಿನಿಮಾದ ನಿರ್ದೇಶಕ ನಾಗ ಅಶ್ವಿನ್ ಮೇಕಿಂಗ್ ಸಮಯದಲ್ಲಿ ಆನಂದ್ ಮಹೀಂದ್ರ ಅವರಿಂದ ಸಹಾಯ ಕೇಳಿದ್ದರು. ಕಲ್ಕಿಗಾಗಿ ವಿಶೇಷವಾಗಿ ಡಿಸೈನ್ ಆಗುತ್ತಿರುವ ಬುಜ್ಜಿಗೆ ತಾಂತ್ರಿಕ ವಿಷಯಗಳಿಗೆ ಸಹಕರಿಸಲು ಸಹಾಯ ಕೇಳಿದ್ದರು. ಆ ವೇಳೆ ಕೊಯಮತ್ತೂರಿನ ಜಯೇಮ್ ಆಟೋಮೊಟಿವ್ ಕಂಪನಿಯನ್ನು ಸಂಪರ್ಕ ಮಾಡಿಕೊಟ್ಟಿದ್ದರು.
ಹೀಗಾಗಿ ಮಹೀಂದ್ರ ಕಂಪನಿಯ ಚೇರ್ಮನ್ ಆನಂದ್ ಮಹೀಂದ್ರಗೆ ಈ ವಾಹನದ ಮೇಲೆ ವಿಶೇಷವಾದ ಆಸಕ್ತಿ. ಬುಜ್ಜಿಯ ಉಗಮಕ್ಕೆ ಪರೋಕ್ಷವಾಗಿ ಕಾರಣವಾಗಿದ್ದ ಆನಂದ್ ಮಹೀಂದ್ರ ಕೊನೆಗೂ ಆ ವಾಹನವನ್ನು ಚಲಾಯಿಸಿ ಖುಷಿ ಪಟ್ಟಿದ್ದಾರೆ. ಅದರೊಂದಿಗೆ ನಿಂತು ಪೋಸ್ ಕೊಟ್ಟಿದ್ದಾರೆ. ಜೊತೆಗೆ ತಮ್ಮದೇ ಕಂಪನಿಯ ಹೊಸ ಕಾರನ್ನು ಪಕ್ಕದಲ್ಲಿ ನಿಲ್ಲಿಸಿಕೊಂಡು ಪ್ರಮೋಷನ್ ಕೂಡ ಮಾಡಿದ್ದಾರೆ.
ಆನಂದ್ ಮಹೀಂದ್ರ ಕಲ್ಕಿ ಸಿನಿಮಾದ ಈ ವಿಶೇಷ ವಾಹನವನ್ನು ಚಲಾಯಿಸಿದ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕೆಲವು ವಾರಗಳ ಹಿಂದೆ ಬುಜ್ಜಿಯನ್ನು ಪರಿಚಯಿಸಲಾಯಿತು. ಹೈದರಾಬಾದ್‌ನಲ್ಲಿ ಲಾಂಚ್ ಮಾಡಲಾಗಿತ್ತು. ಬಳಿಕ ಅದು ಪ್ರಮುಖ ನಗರಗಳನ್ನು ಸುತ್ತಿ ಬಂದಿದೆ. 'ಕಲ್ಕಿ 2898 AD' ಕೇವಲ ತೆಲುಗು ಚಿತ್ರರಂಗಕ್ಕಷ್ಟೇ ಅಲ್ಲ. ಭಾರತೀಯ ಚಿತ್ರರಂಗಕ್ಕೆ ದೊಡ್ಡ ಸಿನಿಮಾ.
ವೈಜಂತಿ ಮೂವೀಸ್ ಈ ಸಿನಿಮಾವನ್ನು ಸುಮಾರು 600 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿದೆ. ನಾಗ ಅಶ್ವಿನ್ ಈ ಸಿನಿಮಾವನ್ನು ನಿರ್ದೇಶಿಸಿತ್ತು. ಇತ್ತೀಚೆಗಷ್ಟೇ ಟ್ರೈಲರ್ ರಿಲೀಸ್ ಆಗಿದೆ. ಇದಕ್ಕೆ ಸಿನಿಪ್ರೇಮಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೇ ಜೂನ್ 27ರಂದು ವಿಶ್ವದಾದ್ಯಂತ ಸಿನಿಮಾ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ.


Click it and Unblock the Notifications











