ವೇದಿಕೆ ಮೇಲೆ "ಆಂಟಿ.. ಆಂಟಿ" ಎಂದು ಕೂಗಿದ ಕಿಡಿಗೇಡಿಗಳು; ಕಿರುಕುಳ ನೀಡಿದವರಿಗೆ 'ಪುಷ್ಪ' ನಟಿ ಎಚ್ಚರಿಕೆ
ತೆಲುಗಿನ ಜನಪ್ರಿಯ ನಿರೂಪಕಿ ಮತ್ತು ನಟಿ ಅನಸೂಯ ಭಾರದ್ವಾಜ್‌ಗೂ ವಿವಾದಕ್ಕೂ ಬಿಡಲಾರದ ನಂಟು ಅಂತ ಅನಿಸುತ್ತೆ. ತಮ್ಮ ಮಾತು, ವರ್ತನೆಗಳಿಂದಲೇ ನಿರಂತರ ವಿವಾದಗಳಲ್ಲಿ ಸಿಕ್ಕಿಕೊಳ್ಳುತ್ತಾರೆ. ಅದೆಷ್ಟೇ ತಾಳ್ಮೆಯಿಂದ ಇರುವುದಕ್ಕೆ ಪ್ರಯತ್ನಿಸಿದರೂ, ಕೆಲವರು ಅವರನ್ನು ವಿವಾದಗಳಿಗೆ ಎಳೆದು ತರುತ್ತಲೇ ಇರುತ್ತಾರೆ. ಇತ್ತೀಚೆಗೆ ಹೋಳಿ ಹಬ್ಬದ ಸಂದರ್ಭದಲ್ಲಿ ಅನಸೂಯ ಹೊಸದೊಂದು ವಿವಾದಕ್ಕೆ ಸಿಲುಕಿದ್ದಾರೆ.
ಇವರಿಗೆ ಸೋಶಿಯಲ್ ಮೀಡಿಯಾದಲ್ಲಿ ಆಗಲಿ, ಇಲ್ಲ ಯಾವುದೇ ಕಾರ್ಯಕ್ರಮಗಳಲ್ಲಿ ಟೀಕೆಗಳನ್ನು ಮಾಡಿದರೆ ತಡೆದುಕೊಳ್ಳುವುದಿಲ್ಲ. ಇತ್ತೀಚೆಗೆ ಅನಸೂಯ ಭರದ್ವಾಜ್ ಕಾರ್ಯಕ್ರಮವೊಂದಕ್ಕೆ ಹೋಗಿದ್ದರು. ಆ ವೇದಿಕೆಯ ಮೇಲೆ ಮಾತನಾಡುತ್ತಿರುವಾಗ ಕೆಲವರು ಅಸಭ್ಯವಾಗಿ ಕಾಮೆಂಟ್ ಮಾಡಿದ್ದರು. ವೇದಿಕೆ ಮೇಲಿದ್ದ ಅನಸೂಯಾಗೆ "ಆಂಟಿ... ಆಂಟಿ" ಎಂದು ಕೂಗಿದರು.

ಆ ವೇಳೆ ವೇದಿಕೆ ಮೇಲಿದ್ದ ಅನುಸೂಯ ಭಾರದ್ವಾಜ್ ತಮ್ಮ ಕೋಪವನ್ನು ನಿಯಂತಿಸಿಕೊಂಡರು. ಬಳಿಕ ಸೋಶಿಯಲ್ ಮೀಡಿಯಾದಲ್ಲಿ ತಮ್ಮನ್ನು ಆಂಟಿ ಎಂದು ಕರೆದವರಿಗೆ, ಹೀಗಿ ಕಿರುಕುಳ ನೀಡುತ್ತಿರುವವರಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಅಷ್ಟಕ್ಕೂ ಅವರು ಏನು ಹೇಳಿದ್ದಾರೆಂದು ನೋಡುವುದಾರೇ,
ಅನಸೂಯ ಭಾರದ್ವಾಜ್ ತಮ್ಮ ಮನಸ್ಸಿನಲ್ಲಿರುವುದನ್ನು ನೇರವಾಗಿ ಹೇಳುವುದು ರೂಢಿ. ಯಾರೇ ಏನೇ ಅಂದರೂ ಅದನ್ನು ಅವರು ಸಹಿಸುವುದಿಲ್ಲ. ಅದಟಕ್ಕೆ ತಿರುಗೇಟು ಕೊಡುವುದರಿಂದ ಹಿಂದೆ ಸರಿಯುವುದಿಲ್ಲ. ತನ್ನ ಈ ಪ್ರವೃತ್ತಿಯನ್ನು ಹಲವು ಬಾರಿ ರಿಪೀಟ್ ಮಾಡಿ ತೋರಿಸಿದ್ದಾರೆ. ತಮ್ಮ ಬಗ್ಗೆ, ತಮ್ಮ ಉಡುಗೆಯ ಬಗ್ಗೆ ಅಸಭ್ಯವಾಗಿ ಮಾತನಾಡಿದವರಿಗೆ, ಆಕ್ಷೇಪಾರ್ಹ ಪೋಸ್ಟ್ ಹಾಕಿದವರ ಚಳಿ ಬಿಡಿಸಿದ್ದಾರೆ. ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ತೀವ್ರವಾಗಿ ತರಾಟೆ ತೆಗೆದುಕೊಂಡಿದ್ದಾರೆ.
ಈ ಹಿಂದೆ ಇಂತಹ ಕೃತ್ಯಗಳಲ್ಲಿ ತೊಡಗಿದ್ದ ಅದೆಷ್ಟೋ ಯೂಟ್ಯೂಬ್ ಚಾನೆಲ್‌ಗಳು, ಸೋಶಿಯಲ್ ಮೀಡಿಯಾ ಖಾತೆಗಳ ವಿರುದ್ಧ ತಿರುಗಿಬಿದ್ದಿದ್ದರು. ಅವುಗಳ ವಿರುದ್ಧ ಈ ಹಿಂದೇನೆ ಪೊಲೀಸರಿಗೆ ದೂರು ನೀಡಿದ್ದರು. ತಮ್ಮ ಮೇಲೆ ಆಕ್ಷೇಪಾರ್ಹ ಕಾಮೆಂಟ್ ಮಾಡಿದ 30 ಲಕ್ಷ ಜನರನ್ನು ಬ್ಲಾಕ್ ಮಾಡಿಸಿದ್ದಾಗಿ ನಟಿ-ನಿರೂಪಕಿ ಅನಸೂಯ ತಿಳಿಸಿದ್ದರು. ತಮ್ಮ ಮೇಲೆ ಮಿತಿಮೀರಿದ ಕಾಮೆಂಟ್‌ಗಳು ಬಂದಾಗ ಸಹಿಸಿಕೊಂಡರೂ, ವ್ಯಕ್ತಿತ್ವ ಅಥವಾ ಕುಟುಂಬದ ಮೇಲಿನ ಟೀಕೆಗಳಿಗೆ ಪ್ರತಿಕ್ರಿಯಿಸುವುದು ಅನಿವಾರ್ಯ ಎಂದು ಅನಸೂಯ ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಪರಿಚಯವಿಲ್ಲದಿದ್ದರೂ ತನ್ನ ಉಡುಗೆಯ ಬಗ್ಗೆ ಮಾತನಾಡುವುದೇಕೆ ಎಂದು ಮಹಿಳೆಯರ ವಿರುದ್ಧ ಕಿಡಿಕಾರಿದ್ದಾರೆ.
ಅನಸೂಯ ಭಾರಧ್ವಾಜ್ ಇತ್ತೀಚೆಗೆ ಸಿಕ್ಕಾಪಟ್ಟೆ ಚರ್ಚೆಯಲ್ಲಿದ್ದರು. ನಟ ಶಿವಾಜಿ ನಟಿಯ ಗ್ಲಾಮರಸ್ ಡ್ರೆಸ್ ಬಗ್ಗೆ ಹೇಳಿಕೆ ಕೊಟ್ಟಿದ್ದರು. ಅದರ ವಿರುದ್ಧವೂ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದರು. ಶಿವಾಜಿ ವಿರುದ್ಧ ಟೀಕೆಯ ಬಾಣಗಳನ್ನು ಬಿಡುತ್ತಲೇ ಇದ್ದರು. ಕೊನೆಗೆ ತನ್ನ ಹೇಳಿಕೆಯ ಬಗ್ಗೆ ಕ್ಷಮೆ ಕೇಳಿದರೂ ಅನಸೂಯ ಬಿಟ್ಟಿರಲಿಲ್ಲಿ. ಆ ವಿವಾದ ಈಗ ತಣ್ಣಗಾಗಿದೆ.
ಹೀಗೆ ಅನಸೂಯ ಭಾರದ್ವಾಜ್ ಟಾಲಿವುಡ್‌ನ ಖಡಕ್ ಲೇಡಿ. ಯಾರಾದರೂ ತನ್ನ ತಂಟೆಗೆ ಬಂದರೆ, ಅವರಿಗೆ ತನ್ನ ಮಾತುಗಳಿಂದಲೇ ಚುಚ್ಚಿ ನರಕ ತೋರಿಸಿಬಿಡುತ್ತಾರೆ. ಇನ್ನು ಇತ್ತೀಚೆಗೆ ಹೋಳಿ ಹಬ್ಬದ ಸಂಭ್ರಮದಲ್ಲಿ ಅನಸೂಯ ಭಾರದ್ವಾಜ್ ಮುಖ್ಯ ಅತಿಥಿಯಾಗಿ ಬಂದಿದ್ದರು. ಹೋಳಿ ಹಬ್ಬದ ಖುಷಿಯಲ್ಲಿ ವೇದಿಕೆ ಮೇಲೆ ಡ್ಯಾನ್ಸ್ ಕೂಡ ಮಾಡಿ ರಂಜಿಸಿದರು. ಆ ಬಳಿಕ ಮೈಕ್ ಹಿಡಿದು ವೇದಿಕೆ ಮೇಲೆ ಬಂದ ಮಾತಾಡುತ್ತಿದ್ದಂತೆ ಕೆಲ ಕಿಡಿಗೇಡಿಗಳು "ಆಂಟಿ... ಆಂಟಿ" ಎಂದು ಕೂಗುವುದಕ್ಕೆ ಶುರು ಮಾಡಿದ್ದರು. ಇದನ್ನು ಗಮನಿಸಿದ ಅನಸೂಯ ಭಾರದ್ವಾಜ್ ತಾಳ್ಮೆಯಿಂದ ತನ್ನ ಭಾಷಣವನ್ನು ಮುಗಿಸಿದರು.

ಇದಾದ ಬಳಿಕ ಕಿಡಿಗೇಡಿಗಳು ಸುಮ್ಮನಿರಲಿಲ್ಲ. ಸೋಶಿಯಲ್ ಮೀಡಿಯಾದ ಟ್ರೋಲ್ ಮಾಡುವುದಕ್ಕೆ ಶುರು ಮಾಡಿದ್ದರು. ಆಗ ಕೆರಳಿದ ಅನಸೂಯ ಭಾರದ್ವಾಜ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದರು.
" ಬೇರೆಯವರ ನೋವಿನಲ್ಲಿ ಸಂತೋಷ ಕಾಣುವುದು ಒಳ್ಳೆಯದಲ್ಲ. ಬೇರೆಯವರ ಬಗ್ಗೆ ಸಹಾನುಭೂತಿ, ಸಮಾಜದ ಬಗ್ಗೆ ಜವಾಬ್ದಾರಿಯಿರದವರನ್ನು ಸಮಾಜ ಪ್ರಶ್ನೆ ಮಾಡಲೇಬೇಕು. ವಯಸ್ಸನ್ನೇ ಆಧಾರವಾಗಿಟ್ಟುಕೊಂಡು ಬಾಡಿ ಶೇಮಿಂಗ್ ಹಾಗೂ ಮಹಿಳೆಯರ ಬಗ್ಗೆ ತಾರತಮ್ಯ ಮಾಡುವುದು ತಪ್ಪು. ಇಂತಹವರನ್ನು ನೋಡಿ ಸಮಾಜಕ್ಕೆ ನಾಚಿಕೆಯಾಗಬೇಕು. ಪ್ರತಿಯೊಬ್ಬರೂ ತಮಗೆ ಯಾಕೆ ಬೇಕು ಎಂದು ಬಿಟ್ಟರೆ, ಇಂತಹ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ" ಎಂದಿದ್ದಾರೆ. "ನಾನು ಯಾವಾಗಲೂ ಇದ್ದದ್ದನ್ನು ಇದ್ದ ಹಾಗೆ ಮಾತನಾಡುತ್ತೇನೆ; ಯಾರಿಗೂ ಹೆದರುವುದಿಲ್ಲ. ಹಲವಾರು ಅವಮಾನ, ಅಡೆತಡೆಗಳನ್ನು ದಾಟಿ ಈ ಮಟ್ಟಕ್ಕೆ ಬಂದಿದ್ದೇನೆ. ನನ್ನ ಪಯಣ, ನನ್ನ ವಿಜಯಗಳು ನನಗೆ ಹೆಮ್ಮೆ. ಕಷ್ಟಪಟ್ಟು ಬೆಳೆಯುತ್ತಿರುವವರನ್ನು ತಗ್ಗಿಸಲು ನೀವ್ಯಾರು?" ಎಂದು ಪ್ರಶ್ನೆ ಮಾಡಿದ್ದಾರೆ.


Click it and Unblock the Notifications











