2024ರ ಚುನಾವಣೆ ಲೆಕ್ಕಾಚಾರ: ಆಂಧ್ರ ಸಿಎಂ ಮಹೇಶ್ ಬಾಬು ತಂದೆಗೆ ವಿಶ್ ಮಾಡಿದ ಗುಟ್ಟೇನು?

ಮಹೇಶ್ ಬಾಬು ಟಾಲಿವುಡ್‌ನ ಸೂಪರ್‌ಸ್ಟಾರ್. ತೆಲುಗು ಚಿತ್ರರಂಗದ ಸುಂದರ ನಟ. ಮಹೇಶ್ ಇಷ್ಟ ಪಡುವ ಅಭಿಮಾನಿಗಳಿಗೇನು ಕಮ್ಮಿಯಿಲ್ಲ. ಪ್ರಿನ್ಸ್ ಸಿನಿಮಾ ಅನೌನ್ಸ್ ಆದರೆ ಸಾಕು ಅಭಿಮಾನಿಗಳು ಅಖಾಡಕ್ಕೆ ಇಳಿದು ಬಿಡುತ್ತಾರೆ. ಇನ್ನು ಸಿನಿಮಾ ರಿಲೀಸ್ ಆದರೆ ಥಿಯೇಟರ್‌ ಮುಂದೆ ಹಬ್ಬವೋ ಹಬ್ಬ.

ಇಷ್ಟು ದೊಡ್ಡ ಫ್ಯಾನ್ ಫಾಲೋವಿಂಗ್ ಇದ್ದರೂ, ಮಹೇಶ್ ಬಾಬು ನೇರವಾಗಿ ಪಾಲಿಟಿಕ್ಸ್‌ನಲ್ಲಿ ಕಾಣಿಸಿಕೊಂಡಿಲ್ಲ. ಎಲ್ಲರೊಂದಿಗೆ ಎಷ್ಟು ಬೇಕೋ ಅಷ್ಟು ಸಂಬಂಧವನ್ನು ಸೂಪರ್‌ಸ್ಟಾರ್‌ ಮಹೇಶ್ ಬಾಬು ಇಟ್ಟುಕೊಂಡಿದ್ದಾರೆ. ಆದ್ರೀಗ ಆಂಧ್ರ ಸಿಎಂ ಜಗನ್ ಮಾಡಿದ ಒಂದು ಟ್ವೀಟ್ ಹೊಸ ರಾಜಕೀಯ ಲೆಕ್ಕಾಚಾರ ಹಾಕುವಂತೆ ಮಾಡಿದೆ. ಅಷ್ಟಕ್ಕೂ ಜಗನ್ ಮಾಡಿದ ಟ್ವೀಟ್ ಏನು? ಆ ಟ್ವೀಟ್‌ ಹಿಂದಿನ ರಾಜಕೀಯ ಲೆಕ್ಕಾಚಾರವೇನು?

ಜಗನ್ ಟ್ವೀಟ್‌ನಲ್ಲಿ ಏನಿದೆ?

ಆಂಧ್ರ ಪ್ರದೇಶ್ ಸಿ ಎಂ ಜಗನ್ ಇತ್ತೀಚೆಗೆ ದಾವೊಸ್ ಟ್ರಿಪ್ ಮುಗಿಸಿ ಬಂದಿದ್ದಾರೆ. ಪ್ರವಾಸ ಮುಗಿಸಿ ಬರುತ್ತಿದ್ದಂತೆ ಟ್ವೀಟ್ ಮಾಡಿದ್ದಾರೆ. ಟಾಲಿವುಡ್ ದಿಗ್ಗಜ, ಸೂಪರ್‌ಸ್ಟಾರ್ ಮಹೇಶ್ ಬಾಬು ತಂದೆ ಕೃಷ್ಣ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಇದೇ ಟ್ವೀಟ್ ಈಗ ಆಂಧ್ರ ಪ್ರದೇಶದಲ್ಲಿ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಮಹೇಶ್ ಬಾಬು ಹಾಗೂ ಮುಂದಿನ ಚುನಾವಣೆ ಬಗ್ಗೆ ಚರ್ಚೆಯಾಗುತ್ತಿದೆ.

2024 ಚುನಾವಣೆಯ ಲೆಕ್ಕಾಚಾರ

2024 ಚುನಾವಣೆಯ ಲೆಕ್ಕಾಚಾರ

ಟಾಲಿವುಡ್ ಪ್ರಕಾರ, ಆಂಧ್ರ ಸಿಎಂ ಜಗನ್ ಯಾರಿಗೂ ಅಷ್ಟು ಸುಲಭಕ್ಕೆ ವಿಶ್ ಮಾಡುವುದಿಲ್ಲ. ಜಗನ್‌ ಟಾಲಿವುಡ್ ಮಂದಿ ಮೇಲೆ ಮುನಿಸಿಕೊಂಡಿದ್ದಾರೆ. ತೆಲುಗು ಚಿತ್ರರಂಗ ತೆಲುಗು ದೇಶಂ ಪಾರ್ಟಿಗೆ ಬೆಂಬಲ ಸೂಚಿಸುತ್ತಿದೆ ಎನ್ನುವ ಕೋಪವಿದೆ. ಕಾರಣಕ್ಕೆ ಯಾರಿಗೂ ಅಷ್ಟು ಸುಲಭವಾಗಿ ವಿಶ್ ಮಾಡುವುದಿಲ್ಲ. ಆದರೂ, ಹಿರಿಯ ನಟ ಕೃಷ್ಣ ಅವರ ಹುಟ್ಟು ಹಬ್ಬಕ್ಕೆ ವಿಶ್ ಮಾಡಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿದೆ. ಇದು 2024ರ ಚುನಾವಣೆಯ ಲೆಕ್ಕಾಚಾರವೆಂದು ಟಾಲಿವುಡ್ ಹೇಳುತ್ತಿದೆ.

ಮುಂದಿನ ಚುನಾವಣೆ ಪ್ರಿನ್ಸ್ ಬೆಂಬಲ?

ಮುಂದಿನ ಚುನಾವಣೆ ಪ್ರಿನ್ಸ್ ಬೆಂಬಲ?

ಇನ್ನು ಎರಡು ವರ್ಷಗಳಲ್ಲಿ ಆಂಧ್ರ ಪ್ರದೇಶದಲ್ಲಿ ಚುನಾವಣೆ ನಡೆಯಲಿದೆ. ಹಾಗಾಗಿ ಈಗಿನಿಂದಲೇ ಸಿಎಂ ಜಗನ್ ಸಿದ್ಧತೆ ನಡೆಸುತ್ತಿದ್ದಾರೆ ಎನ್ನುವ ಮಾತು ಹೇಳಿ ಬರುತ್ತಿದೆ. ಅದಕ್ಕೆ ಜಗನ್ ಟಾಲಿವುಡ್‌ ಸೂಪರ್‌ಸ್ಟಾರ್ ಮಹೇಶ್ ಬಾಬು ಮೇಲೆ ಕಣ್ಣಿಟ್ಟಿದ್ದಾರೆ. ಮಹೇಶ್ ಬಾಬು ಚುನಾವಣಾ ಪ್ರಚಾರದ ಗಣಕ್ಕೆ ಇಳಿದರೆ, ಜಗನ್ ನೇತೃತ್ವದ ಪಕ್ಷಕ್ಕೆ ಬಲ ಬಂದಂತೆ ಆಗುತ್ತೆ. ಆ ಕಾರಣಕ್ಕೆ ಇಷ್ಟು ಆತ್ಮೀಯವಾಗಿ ಟ್ವೀಟ್ ಮಾಡಿದ್ದಾರೆ ಎನ್ನುತ್ತಿದೆ ಟಾಲಿವುಡ್.

ಜಗನ್ ಬರ್ತ್‌ಡೇಗೂ ಮಹೇಶ್ ಬಾಬು ವಿಶ್

ಜಗನ್ ಬರ್ತ್‌ಡೇಗೂ ಮಹೇಶ್ ಬಾಬು ವಿಶ್

ಸಿಎಂ ಜಗನ್ ಟ್ವೀಟ್ ಬಗ್ಗೆ ಸಿಕ್ಕಾಪಟ್ಟೆ ಲೆಕ್ಕಾಚಾರ ಹಾಕಲಾಗುತ್ತಿದೆ. ಈ ಮಧ್ಯೆ ಟಾಲಿವುಡ್‌ನ ಮತ್ತೊಂದು ತಂಡ ಇನ್ನೇನೋ ಹೇಳುತ್ತಿದೆ. ಮಹೇಶ್ ಬಾಬು ಕಳೆದ ಡಿಸೆಂಬರ್ 21ಕ್ಕೆ ಸಿ ಎಂ ಜಗನ್‌ಗೆ ಬರ್ತ್‌ಡೇ ವಿಶ್ ಮಾಡಿದ್ದರು. ಅದನ್ನು ಗಮನದಲ್ಲಿಟ್ಟುಕೊಂಡೇ ಜಗನ್ ಈಗ ಅವರ ತಂದೆ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ್ದಾರೆ ಎಂದು ಹೇಳುತ್ತಿದ್ದಾರೆ.

More from Filmibeat

English summary
Andhra Chief Minister Y S Jagan Mohan Supporting Mahesh Babu Because 2024 Election, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X